Homeಅಂಕಣಗಳುನನ್ನ ಪ್ರೀತಿಯ ಬಡ ಬಂಧುವೇ. ಹೌದು.. ನಿನಗೂ ಉದ್ಯೋಗ ಸಿಗಬೇಕು

ನನ್ನ ಪ್ರೀತಿಯ ಬಡ ಬಂಧುವೇ. ಹೌದು.. ನಿನಗೂ ಉದ್ಯೋಗ ಸಿಗಬೇಕು

- Advertisement -
- Advertisement -

ಯೋಗೇಂದ್ರ ಯಾದವ್

ಅನುವಾದ: ರಾಜಶೇಖರ ಅಕ್ಕಿ|

‘ತಡವಾದರೆ ಏನಾಯ್ತು, ಅಂತೂ ಹೋಗ್ತಾ ಹೋಗ್ತಾ ಮೋದಿಯವರು ಒಂದು ಸರ್ಜಿಕಲ್ ಸ್ಟ್ರೈಕ್ ಮಾಡೇಬಿಟ್ರು’. ಒಬ್ಬ ನಿರುದ್ಯೋಗ ಯುವಕ ದಿನಪತ್ರಿಕೆಯ ಸುದ್ದಿ ಓದಿ ಪ್ರತಿಕ್ರಿಯೆ ನೀಡಿದ್ದು ಹೀಗೆ. ಮುಖಪುಟದಲ್ಲಿ ಬಡವರಿಗೆ 10% ಮೀಸಲಾತಿಯ ಘೋಷಣೆಯ ಸುದ್ದಿಯಿತ್ತು ಹಾಗೂ ಅದನ್ನು ಒಂದು ಸರ್ಜಿಕಲ್ ಸ್ಟ್ರೈಕ್ ಎಂದು ಕರೆಯಲಾಗಿತ್ತು. ನನಗೆ ತಡೆಯಲಾಗಲಿಲ್ಲ, “ಅಣ್ಣಾ, ಇದು ಸರ್ಜಿಕಲ್ ಸ್ಟ್ರೈಕ್ ಅಲ್ಲ, ಒಂದು ಖಾಲಿ ಗುಂಡನ್ನು ಹಾರಿಸಿದ್ದಾರಷ್ಟೆ, ಕೇವಲ ತಡವಾಗಿ ಹಾರಿಸಿದ್ದಷ್ಟೇ ಅಲ್ಲ, ಗುರಿಯೂ ತಪ್ಪಿದೆ. ಇದನ್ನು ಅನುಷ್ಠಾನ ಮಾಡಲಾಗುವುದಿಲ್ಲ ಎಂದು ಎಲ್ಲರಿಗೂ ಗೊತ್ತು ಹಾಗೂ ಅನುಷ್ಠಾನ ಗೊಳಿಸಿದರೂ ಒಬ್ಬನೇ ಒಬ್ಬ ಸವರ್ಣೀಯ ಬಡವನಿಗೆ ಇದರಿಂದ ನೌಕರಿ ಸಿಗೂದಿಲ್ಲ”.
ನನ್ನ ಮಾತು ಕೇಳಿ ಅವನು ಚಕಿತನಾದ, ‘ಅಂಕಲ್ ಅವೆಲ್ಲಾ ಮಾತುಗಳು ಆಮೇಲೆ, ಸವರ್ಣೀಯರಲ್ಲೂ ಬಡವರು ಇದಾರೋ ಇಲ್ಲೋ ಅದನ್ನು ಮೊದಲು ಹೇಳಿ, ಅಥವಾ, ಶಿಕ್ಷಣದಲ್ಲಿ ಮತ್ತು ಉದ್ಯೋಗಗಳಲ್ಲಿ ಎಲ್ಲಾ ಅವಕಾಶಗಳು ಬರೀ ಎಸ್.ಸಿ., ಎಸ್.ಟಿ. ಮತ್ತು ಒ.ಬಿ.ಸಿ. ಗಳಿಗೆ ಮಾತ್ರ ಇರಬೇಕೆ?’
ಆಗ ನನ್ನ ಸರದಿ: ‘ಕೂಸೆ, ದೇಶದ ಅಧಿಕಾಂಶ ಸವರ್ಣೀಯ ಜಾತಿಯ ಅಧಿಕಾಂಶ ಕುಟುಂಬಗಳು ಬಡತನದಲ್ಲಿ ಇವೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ದಿಲ್ಲಿಯಲ್ಲಿ ರಿಕ್ಷಾ ಓಡಿಸಲು ಇತರೆ ದೈಹಿಕ ಕೆಲಸ ಮಾಡಲು ಬಿಹಾರದಿಂದ ಬರುವ ಜನರಲ್ಲಿ ಹೆಚ್ಚಿನವರು ಸವರ್ಣೀಯರೇ ಆಗಿರುತ್ತಾರೆ, ಅವರಿಗೆ ತಮ್ಮ ಊರುಗಳಲ್ಲಿ ಸಣ್ಣ ಕೆಲಸಗಳನ್ನು ಮಾಡಲು ಆಗುವುದಿಲ್ಲ. ದೇಶದೆಲ್ಲೆಡೆ ನಿರುದ್ಯೋಗದ ಸಮಸ್ಯೆಯಿದೆ, ಸವರ್ಣೀಯರಿಗೂ ನಿರುದ್ಯೋಗದ ಸಮಸ್ಯೆಯಿದೆ. ಇದಕ್ಕೆ ಮೀಸಲಾತಿ ಬೇಕೋ ಬೇಡವೋ ಎನ್ನುವ ಚರ್ಚೆ ಆಮೇಲೆ ಮಾಡುವ. ಆದರೆ, ಅವರಿಗೆ ಕೆಲಸ ಬೇಕು, ಉದ್ಯೋಗ ಬೇಕು, ನೌಕರಿ ಬೇಕು ಹಾಗೂ ಅವೆಲ್ಲಾ ಈಗಲೇ ಬೇಕಿದೆ. ಹಾಗಾಗಿ ಸರಕಾರ ಅವರಿಗಾಗಿ ಏನು ಮಾಡಿದರೂ ಅದನ್ನು ಸ್ವಾಗತಿಸಬೇಕು”.
ಅವನಿಗೆ ಧೈರ್ಯ ಬಂತು, “ಹಂಗಾದರೆ ನೀವು ಸರಕಾರದ ಘೋಷಣೆಯನ್ನು ಸ್ವಾಗತಿಸಬೇಕು. ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಮೇಲ್ಜಾತಿಯ ಬಡವರ ನೆನಪಾದರೂ ಆಗಿದೆ”. ಆಗ ನಾನು ಅವನಿಗೆ ನೆನಪಿಸಿದ್ದು, ಈ ಘೋಷಣೆ ಕೇವಲ ಸವರ್ಣೀಯರಿಗೆ ಮಾತ್ರ ಇಲ್ಲ, ಮೀಸಲಾತಿಯ ಅಡಿಯಲ್ಲಿ ಬರದ ಮುಸಲ್ಮಾನರ, ಕ್ರೈಸ್ತರು ಹಾಗೂ ಸಿಕ್ಖರ ಮತ್ತು ಇತರ ಸಾಮಾನ್ಯ ವರ್ಗದ ಎಲ್ಲಾ ಬಡವರು ಇದರ ಅಡಿಯಲ್ಲಿ ಬರುತ್ತಾರೆ. ಹಾಗೂ ಇದೇನು ಮೊದಲನೇ ಸಲ ಆಗಿಲ್ಲ. ಇಂದಿಗೆ 27 ವರ್ಷಗಳ ಹಿಂದೆ 1991 ಸೆಪ್ಟೆಂಬರ್‍ನಲ್ಲಿ ನರಸಿಂಹರಾವ್ ಅವರ ಕಾಂಗ್ರೆಸ್ ಸರಕಾರವೂ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ 10% ಮೀಸಲಾತಿ ನೀಡಬೇಕೆಂದು ಆದೇಶ ಜಾರಿ ಮಾಡಿತ್ತು. ಆ ಆದೇಶವೂ ಈ ಆದೇಶಕ್ಕಾಗುವ ಗತಿಯನ್ನೇ ಕಂಡಿತ್ತು.
ಆ ಸರಕಾರಿ ಆದೇಶದ ವಿರುದ್ಧ ಸುಪ್ರೀಮ್ ಕೋರ್ಟಿನಲ್ಲಿ ಸವಾಲೊಡ್ಡಲಾಗಿತ್ತು. 1992ರಲ್ಲಿ ತನ್ನ ಐತಿಹಾಸಿಕ ತೀರ್ಪೊಂದರಲ್ಲಿ ಸುಪ್ರೀಮ್ ಕೋರ್ಟಿನ 9 ಜಡ್ಜುಗಳ ಸಂವಿಧಾನಿಕ ಬೆಂಚು, ಸಾಮಾನ್ಯ್ಯ ವರ್ಗಗಳಲ್ಲಿರುವ ಬಡವರಿಗಾಗಿ ಮಾಡಿರುವ ಈ ಮೀಸಲಾತಿಯನ್ನು ಎರಡು ಅಂಶಗಳ ಆಧಾರದ ಮೇಲೆ ಅಸಂವಿಧಾನಾತ್ಮಕ ಮತ್ತು ಕಾನೂನುವಿರೋಧಿ ಎಂದು ಘೋಷಿಸಿತ್ತು. ಮೊದಲ ಕಾರಣ, ನಮ್ಮ ಸಂವಿಧಾನದಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಮೀಸಲಾತಿಯ ವ್ಯವಸ್ಥೆ ಇದೆ. ಕೇವಲ ಆರ್ಥಿಕ ಆಧಾರದ ಮೇಲೆ ಮೀಸಲಾತಿಯನ್ನು ಕಲ್ಪಿಸುವುದು ನಮ್ಮ ಸಂವಿಧಾನದ ಆಶಯ ಹಾಗೂ ಮೀಸಲಾತಿಯ ಭಾವನೆಗಳ ವಿರುದ್ಧವಾಗಿದೆ. ಎರಡನೆಯದಾಗಿ, ಆರ್ಥಿಕ ಆಧಾರದಲ್ಲಿ 10% ಮೀಸಲಾತಿ ನೀಡುವುದರಿಂದ ಒಟ್ಟು ಮೀಸಲಾತಿ 59% ಆಗುವುದು, ಹಾಗೂ ಇದು ಸುಪ್ರೀಮ್ ಕೋರ್ಟು ನಿರ್ಧರಿಸಿರುವ 50%ನ ಗಡಿಗಿಂತ ಹೆಚ್ಚಾಗಿದೆ. ಆಗ ಯಾವ ಆಕ್ಷೇಪಣೆಗಳಿದ್ದವೋ, ಅವೆಲ್ಲವು ಈಗಲೂ ಇವೆ.
“ಆದರೆ ಈ ಬಾರಿ ಸರಕಾರವು ಸಂವಿಧಾನದಲ್ಲಿ ತಿದ್ದುಪಡಿ ಮಾಡಲಿದೆ. ಆಗ ಸುಪ್ರೀಮ್ ಕೋರ್ಟು ಒಪ್ಪಲೇಬೇಕು” ಅವನು ಆಸೆ ವ್ಯಕ್ತಪಡಿಸಿದ. ಸಂವಿಧಾನದ ತಿದ್ದುಪಡಿ ತುಂಬಾ ಕ್ಲಿಷ್ಟ ಮತ್ತು ಉದ್ದದ ಪ್ರಕ್ರಿಯೆ ಎಂದು ನಾನು ತಿಳಿಸಿ ಹೇಳಿದೆ. ಮೊದಲು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತವಿರಬೇಕು, ನಂತರ ರಾಜ್ಯಗಳ ವಿಧಾನಸಭೆಯಲ್ಲಿ ಪಾಸ್ ಆಗಬೇಕು. ಹಾಗೂ ತಿದ್ದುಪಡಿ ಆದ ನಂತರವೂ ಸುಪ್ರೀಮ್ ಕೋರ್ಟು ಅದನ್ನು ತಿರಸ್ಕರಿಸುವ ಅಧಿಕಾರ ಹೊಂದಿದೆ. ಬಹುಶಃ ತಿರಸ್ಕರಿಸುತ್ತೆ.
ಆದರೆ ಅಸಲಿ ಸಮಸ್ಯೆ ಇದಲ್ಲ. ತಿದ್ದುಪಡಿ ಆಯ್ತು ಅಂದುಕೊಳ್ಳುವ, ಸುಪ್ರೀಮ್ ಕೋರ್ಟು ಕೂಡ ಅದನ್ನು ಸ್ವೀಕರಿಸಿತು ಅಂದುಕೊಳ್ಳುವ, ಹಾಗಾದರೂ ಸಾಮಾನ್ಯ್ಯ ವರ್ಗಗಳ ನಿಜವಾಗಿಯೂ ಬಡವರಾಗಿರುವವರಿಗೆ ಈ ಮೀಸಲಾತಿಯ ಲಾಭ ಸಿಗುವುದಿಲ್ಲ. ಈ ಮೀಸಲಾತಿಗಾಗಿ ಸರಕಾರವು ನೀಡಿದ ಬಡವನ ಪರಿಭಾಷೆ ವಿಚಿತ್ರವಾಗಿದೆ. ಯಾರು ಆದಾಯ ತೆರಿಗೆಯಲ್ಲಿ 8 ಲಕ್ಷದವರೆಗೆ ತಮ್ಮ ಆದಾಯವನ್ನು ತೋರಿಸುತ್ತಾರೋ ಅಥವಾ ಯಾರ ಹೆಸರಿಗೆ 5 ಎಕರೆವರೆಗೆ ಜಮೀನಿದೆಯೋ ಅಥವಾ ದೊಡ್ಡ ಮನೆಯಿಲ್ಲದ ಎಲ್ಲರನ್ನು ಬಡವರೆಂದು ಪರಿಗಣಿಸಲಾಗುವುದು. ಅಂದರೆ, ತಿಂಗಳಿಗೆ ಒಂದು ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆಯುವವರನ್ನು ಅಥವಾ ಅತಿದೊಡ್ಡ ರೈತರು ಹಾಗೂ ವ್ಯಾಪಾರಿಗಳನ್ನು ಹೊರತುಪಡಿಸಿ ಸಾಮಾನ್ಯ್ಯ ವರ್ಗದ ಬಹುತೇಕ ಎಲ್ಲರೂ ಈ ಮೀಸಲಾತಿಯ ಹಕ್ಕುದಾರರಾಗಿರುತ್ತಾರೆ. ಒಬ್ಬ ಕಾರ್ಮಿಕ ಅಥವಾ ರಿಕ್ಷಾ ಓಡಿಸುವವನ ಮಕ್ಕಳಿಗೆ ಒಬ್ಬ ವಕೀಲ ಮತ್ತು ಅಧ್ಯಾಪಕನ ಮಕ್ಕಳೊಂದಿಗೆ ಈ 10% ಮೀಸಲಾತಿಗಾಗಿ ಸ್ಪರ್ಧೆ ಮಾಡಬೇಕಾಗುತ್ತದೆ. ಒಂದು ವೇಳೆ ಇವರು ಬಡವರಾಗಿದ್ದರೂ ಸಾಮಾನ್ಯ ವರ್ಗದವರಿಗೆ 51% ಸೀಟುಗಳು ಇವರಿಗೆ ತೆರೆದಿವೆ. ಇದರಲ್ಲಿ ಒಂದು ದೊಡ್ಡ ಭಾಗ ಈ ‘ಬಡ ಸಾಮಾನ್ಯ ವರ್ಗ’ದವರಿಗೇ ಸಿಗುತ್ತಿದೆ. ಯಾರಿಗೆ ಮೀಸಲಾತಿಯಿಲ್ಲದೇ ಇಂದೂ ಕೂಡ 20 ಅಥವಾ 30% ಉದ್ಯೋಗಗಳು ಸಿಗುತ್ತಿರುವಾಗ ಅವರಿಗೆ 10% ಮೀಸಲಾತಿ ನೀಡುವುದರಿಂದ ಏನು ಸಿಗುವುದು? ಪೇಪರ್ ಮೇಲಷ್ಟೇ ಈ ಮೀಸಲಾತಿ ಇರುತ್ತದೆ ಹಾಗೂ ಒಬ್ಬ ವ್ಯಕ್ತಿಗೂ ನೌಕರಿ ನೀಡುವ ಅವಶ್ಯಕತೆ ಇರುವುದಿಲ್ಲ.
ಆಗ ಅವನ ಮುಖದ ಮೇಲೆ ನಿರಾಸೆ ಮೂಡಿತು. “ಇವೆಲ್ಲಾ ಸರಕಾರಕ್ಕೂ ಗೊತ್ತೇ ಇರಬೇಕಲ್ವಾ? ಹಾಗಾದರೆ ಸರಕಾರ ಈ ಘೋಷಣೆ ಏಕೆ ಮಾಡುತ್ತಿದೆ?” ಉತ್ತರ ಅವನಿಗೂ ಚೆನ್ನಾಗಿ ಗೊತ್ತಿತ್ತು, ನನಗೂ ಗೊತ್ತಿತ್ತು. 5 ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಸರಕಾರವು ಜಾಟರ ಮೀಸಲಾತಿಯ ವಿಷಯದಲ್ಲಿ ಯಾವ ಆಟ ಆಡಿತ್ತೋ ಅದೇ ಕಸರತ್ತನ್ನು ಇಂದು ಮೋದಿ ಸರಕಾರ ಮಾಡುತ್ತಿದೆ. ಆಗ ಅವರಿಗೆ ಗೊತ್ತಿತ್ತು, ಕಾನೂನುರೀತ್ಯ ಜಾಟರಿಗೆ ಮೀಸಲಾತಿ ನೀಡುವುದು ಅಸಾಧ್ಯ ಎಂದು. ಆದರೂ ಚುನಾವಣೆಗೆ ಕೆಲ ತಿಂಗಳು ಇರುವಾಗ ಮೀಸಲಾತಿಯ ಘೋಷಣೆ ಮಾಡಿತ್ತು. ಬಿಜೆಪಿ ಆಗ ಅದನ್ನು ಸಮರ್ಥಿಸಿತ್ತು. ಸುಪ್ರೀಮ್ ಕೋರ್ಟು ಇದನ್ನು ತಿರಸ್ಕರಿಸುತ್ತೆ ಎಂದು ಇಬ್ಬರಿಗೂ ಚೆನ್ನಾಗಿ ಗೊತ್ತಿತ್ತು ಆದರೆ ಅದನ್ನು ಚುನಾವಣೆಗಳ ನಂತರ ನೋಡುವ ಎನ್ನುವ ಲೆಕ್ಕಾಚಾರ ಅವರದಾಗಿತ್ತು. ಆದೇ ಆಯಿತು ಕೂಡ. ಚುನಾವಣೆಗಳ ನಂತರ ಸುಪ್ರೀಮ್ ಕೋರ್ಟು ಜಾಟ್ ಮೀಸಲಾತಿಯನ್ನು ತಿರಸ್ಕರಿಸಿತು ಹಾಗೂ ಜನತೆ ಕಾಂಗ್ರೆಸ್ ಅನ್ನು ತಿರಸ್ಕರಿಸಿತು. ಈ ಸಲ ಕೂಡ ಅದೇ ಆಟ ಆಡಲಾಗುತ್ತಿದೆ. ಬಿಜೆಪಿಗೆ ಚುನಾವಣೆಗಳಲ್ಲಿ ಸೋಲು ನಿಚ್ಚಳವಾಗಿ ಕಾಣುತ್ತಿದೆ. ಈಗ ಗೊತ್ತೂಗೊತ್ತಿದ್ದೂ ಇಂತಹ ಪ್ರಸ್ತಾವನೆಗಳನ್ನು ತರುತ್ತಿದೆ, ಇದರಿಂದ ಯಾರಿಗೂ ಏನೂ ಸಿಗುವುದಿಲ್ಲ. ಆದರೆ ಚುನಾವಣೆಯ ಸಮಯದಲ್ಲಿ ಜನತೆಯ ಲಕ್ಷ ಬೇರೆಡೆಗೆ ಹೊಗುತ್ತೆ. ಇದನ್ನು ವಿರೋಧಿಸಿ ಕೆಟ್ಟವರ್ಯಾಕೆ ಆಗಬೇಕೆಂದು ಕಾಂಗ್ರೆಸ್ ಕೂಡ ಆಟವಾಡುತ್ತಿದೆ, ಹಾಗಾಗಿ ಇದರ ಸಮರ್ಥನೆ ಮಾಡುತ್ತಿದೆ.
“ಹಂಗಾದ್ರೆ ಸರಕಾರ ನಮಗೆ ಕೇವಲ ಲಾಲಿಪಾಪ್ ಕೊಡ್ತಾ ಇದೆಯಾ?” ‘ಇಲ್ಲ’ ಎಂದು ನಾನು ಹೇಳಿದೆ. ಸರಕಾರ ಲಾಲಿಪಾಪ್ ಕೂಡ ಕೊಡ್ತಿಲ್ಲ, ಅದು ನಮ್ಮದೇ ಜೇಬಿನಲ್ಲಿಯ ಎರಡು ಲಾಲಿಪಾಪ್‍ಗಳಲ್ಲಿಯ ಒಂದನ್ನು ತೆಗೆದು ನಮ್ಮ ಕೈಯಲ್ಲಿ ಇಡ್ತಾ ಇದೆ ಹಾಗೂ ಈಗ ಎಲ್ರೂ ಚಪ್ಪಾಳೆ ತಟ್ಟಿ ಎನ್ನುತ್ತಿದೆ.
“ಹಂಗಾದ್ರೆ ಏನ್ ಮಾಡಬೇಕು ಅಂಕಲ್?” ಈಗ ಅವನ ನಿರಾಸೆ ದುಃಖದಲ್ಲಿ ಪರಿವರ್ತನೆಯಾಗಿತ್ತು. ನಾನು ಮಾತನ್ನು ಮುಕ್ತಾಯಗೊಳಿಸುತ್ತ, “ಸಮಸ್ಯೆ ಮೀಸಲಾತಿಯದ್ದಲ್ಲ, ನಿರುದ್ಯೋಗದ್ದು. ಉದ್ಯೋಗಗಳೇ ಇಲ್ಲದಿದ್ದಾಗ ಮೀಸಲಾತಿ ನೀಡಿದರೆಷ್ಟು, ಬಿಟ್ಟರೆಷ್ಟು, ಯಾವ ವ್ಯತ್ಯಾಸ ಆಗೋದಿದೆ? ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವುದೇ ನಿಜವಾದ ಪರಿಹಾರ. ಇಂದು ಕೇಂದ್ರ ಸರಕಾರದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ರಾಜ್ಯ ಸರಕಾರಗಳಲ್ಲಿ 20 ಲಕ್ಷ ಖಾಲಿ ಇವೆ. ದುಡ್ಡು ಉಳಿಸುವ ಭರದಲ್ಲಿ ಸರಕಾರವು ಈ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಖಾಸಗೀ ಕ್ಷೇತ್ರದಲ್ಲಿ ಉದ್ಯೋಗಗಳು ಕಡಿಮೆಯಾಗಿವೆ, ಕಳೆದ ವರ್ಷದಲ್ಲಿ ಒಂದು ಕೋಟಿಗೂ ಹೆಚ್ಚು ಉದ್ಯೋಗಗಳು ಕಡಿಮೆಯಾಗಿವೆ. ಬಿಜೆಪಿ ಒಂದು ವೇಳೆ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಗಂಭೀರವಾಗಿದ್ದರೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಆದೇಶ ಏಕೆ ಹೊರಡಿಸುತ್ತಿಲ್ಲ? ಕಾಂಗ್ರೆಸ್ ಗಂಭೀರವಾಗಿದ್ದಲ್ಲಿ ತನ್ನ ರಾಜ್ಯಗಳಲ್ಲಿ ಉದ್ಯೋಗ ಏಕೆ ನೀಡುತ್ತಿಲ್ಲ?”
ಇಬ್ಬರ ಬಾಯಿಂದ ಏಕಕಾಲಕ್ಕೆ ಹೊರಬಿದ್ದದ್ದು “ಅಂದರೆ, ಜುಮ್ಲಾ ಬೇಡ, ಜಾಬ್ ಬೇಕು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...