Homeಅಂಕಣಗಳುಶೇ.10ರಷ್ಟು ಮೀಸಲಾತಿಗೆ ಉದ್ಯೋಗಗಳೆಲ್ಲಿವೆ?

ಶೇ.10ರಷ್ಟು ಮೀಸಲಾತಿಗೆ ಉದ್ಯೋಗಗಳೆಲ್ಲಿವೆ?

- Advertisement -
- Advertisement -

ಅನು: ಶಿವಸುಂದರ್
ಕೃಪೆ: Economic and Political
Weekly, Jan 12, 2019. Vol. 54. No.2 |

ಕೇಂದ್ರ ಸರ್ಕಾರವು ಇತ್ತೀಚೆಗೆ ಘೋಷಿಸಿರುವ ಶೇ.10 ಮೀಸಲಾತಿಯೂ ಒಳಗೊಂಡಂತೆ ಕೈಗೊಂಡಿರುವ ಇತರ ಉದ್ಯೋಗ ರಕ್ಷಣಾ ಕ್ರಮಗಳು 19ನೇ ಶತಮಾನದ ಬಂಗಾಳಿ ದ್ವಿಪದಿಯೊಂದರಲ್ಲಿರುವ ಕಾಲ್ನಡಿಗೆ ಸಾಧನವೊಂದನ್ನು ನೆನಪಿಸುತ್ತದೆ. ಅ ಸಾಧನವು ತನ್ನನ್ನು ತೊಟ್ಟಿರುವ ಹೆಗಲಿಗೆ ಬೆಸೆದುಕೊಂಡು ಮುಂದೆ ಒಂದು ಕ್ಯಾರಟ್ಟನ್ನು ಇಳಿಬಿಟ್ಟಿರುತ್ತದೆ. ಇದರಿಂದಾಗಿ ಅದನ್ನು ಹೊತ್ತುಕೊಂಡಿರುವವರು ಕ್ಯಾರೆಟ್ಟನ್ನು ಪಡೆದುಕೊಳ್ಳುವ ಸಲುವಾಗಿ ಮೈಲುಗಟ್ಟಲೇ ದೂರವನ್ನು ನಿಮಿಷಗಳಲ್ಲಿ ಕ್ರಮಿಸುವಂತೆ ಮಾಡುತ್ತದೆ. ಆದರೆ ಎಷ್ಟೇ ವೇಗವಾಗಿ ನಡೆದರೂ ಆ ಕ್ಯಾರೆಟ್ಟು ಮಾತ್ರ ಆ ಸಾಧನವನ್ನು ಹೊತ್ತುಕೊಂಡವನಿಂದ ಸಮಾನ ದೂರದಲ್ಲೆ ಇರುತ್ತದೆಯೇ ವಿನಃ ಬಾಯಿಗೆಟುಕುವುದಿಲ್ಲ. ಉದಾಹರಣೆಗೆ ಉದ್ಯೋಗಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ಜಾತಿಗಳಿಗೆ ನೀಡಲಾದ ಶೇ.10 ಮೀಸಲಾತಿ ನೀತಿಯನ್ನೇ ಗಮನಿಸಿ. ಅದು ಹುಟ್ಟುಹಾಕಿರುವ ರಾಜಕೀಯ ಕೋಲಾಹಲವನ್ನು ಗಮನಿಸಿದಲ್ಲಿ ಒಂದು ರಾಜಕೀಯ ತಂತ್ರೋಪಾಯವಾಗಿ ಅದರ ಪರಿಣಾಮಕತೆಯನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸಲಾಗದ ಅದರ ಪೆÇಳ್ಳುತನವನ್ನೂ ಸಹ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಯಾವ ರೀತಿಯಲ್ಲಿ ಬಂಗಾಳಿ ದ್ವಿಪದಿಯಲ್ಲಿನ ಬಡಪಾಯಿಯು ಎದುರಿಗಿರುವ ಕ್ಯಾರೆಟ್ಟನ್ನು ಪಡೆದು ತನ್ನ ಹಸಿವನ್ನು ನೀಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅದೇ ರೀತಿಯಲ್ಲಿ ಇತ್ತೀಚಿನ ಈ ಶೇ.10 ಕೋಟಾ ಸಹ ಉದ್ಯೋಗವನ್ನು ಒದಗಿಸಲಾರದು.
ಉದ್ಯೋಗಾವಕಾಶಗಳು ಎಲ್ಲಿವೆ? ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ ಭಾರತದ ಉದ್ಯೋಗ ಮಾರುಕಟ್ಟೆಯ ಪರಿಸ್ಥಿತಿ ನಿರಾಶಾದಾಯಕವಾಗಿದೆ; ಮೊದಲನೆಯದಾಗಿ 2018ರ ಡಿಸೆಂಬರ್ ವೇಳೆಗೆ ಭಾರತದ ನಿರುದ್ಯೋಗ ದರವು ಶೇ.7.4ಕ್ಕೇರಿದ್ದು ಕಳೆದ 15 ತಿಂಗಳಲ್ಲೇ ಅತಿ ಹೆಚ್ಚಿನ ಮಟ್ಟವನ್ನು ಮುಟ್ಟಿದೆ; ಎರಡನೆಯದಾಗಿ 2017 ಮತ್ತು 2018ರಲ್ಲಿ ಕೆಲಸ ಕಳೆದುಕೊಂಡ ಸುಮಾರು 1.1 ಕೋಟಿಯಷ್ಟು ಜನರು ಈ ನಿರುದ್ಯೋಗಿ ಪಡೆಯಲ್ಲಿ ಸೇರಿಕೊಂಡಿದ್ದಾರೆ; ಮತ್ತು ಮೂರನೆಯದಾಗಿ ನಿರುದ್ಯೋಗದ ಪ್ರಮಾಣವು ಆರ್ಥಿಕವಾಗಿ ತ್ರಾಣ ರಹಿತವಾಗುತ್ತಿರುವ ಕ್ಷೇತ್ರ ಮತ್ತಿದು ಸಮುದಾಯಗಳಲ್ಲಿ ಹೆಚ್ಚಾಗಿದೆ. ಉದಾಹರಣೆಗೆ ಈಗಾಗಲೇ ಕೃಷಿ ಬಿಕ್ಕಟ್ಟನ್ನು ಎದುರಿಸುತ್ತಿರುವ ಗ್ರಾಮೀಣ ಕ್ಷೇತ್ರದಲ್ಲಿ ಶೇ.82ರಷ್ಟು ಉದ್ಯೋಗಗಳು ನಷ್ಟವಾಗಿದ್ದು, ನಿರುದ್ಯೋಗದ ಶೇ.80ರಷ್ಟು ಹೊರೆ ಮಹಿಳೆಯರ ಮೇಲಿದೆ. ವಿಪರ್ಯಾಸವೆಂದರೆ ಭಾರತೀಯ ಜನತಾ ಪಕ್ಷದ ಹೊಸ “ಅತಂತ್ರರ” ರಾಜಕಾರಣದ ಮುಖ್ಯ ಗಮನವೂ ಇದೇ ಕ್ಷೇತ್ರ ಸಮುದಾಯಗಳ ಮೇಲಿದೆ.
ಸಿಎಂಐಇ ಸಂಸ್ಥೆಯು ತನ್ನ ಈ ಅಂಕಿಅಂಶಗಳು ತಾತ್ಕಾಲಿಕವಾದದ್ದೆಂದು ಹೇಳಿದ್ದರೂ ಅಂತಿಮ ವರದಿಯಲ್ಲು ದೇಶದ ಒಟ್ಟಾರೆ ಪರಿಸ್ಥಿತಿ ಇದಕ್ಕಿಂತ ಹೆಚ್ಚು ಭಿನ್ನವಾಗಿಲ್ಲ. ಸರ್ಕಾರಿ ಕ್ಷೇತ್ರದಲ್ಲಿನ ನೇಮಕಾತಿ ಆಮೆಗತಿಯಲ್ಲಿದೆ; ಅಷ್ಟಲ್ಲದೆ ಭರ್ತಿಯಾಗದೆ ಉಳಿದುಕೊಂಡಿರುವ ಬ್ಯಾಕ್‍ಲಾಗ್ ಹುದ್ದೆಗಳ ಮೂರನೇ ಒಂದು ಭಾಗದಷ್ಟು ಹುದ್ದೆಗಳು “ಮೀಸಲು”ವರ್ಗಕ್ಕೆ ಸೇರಿವೆ; ಅದೇ ಸಮಯದಲ್ಲಿ ಉದ್ಯೋಗಾವಕಾಶಗಳ ಪ್ರಮುಖ ಮೂಲವಾಗಿದ್ದ ಅಸಂಘಟಿತ ಮತ್ತು ಅನೌಪಚಾರಿಕ ಕ್ಷೇತ್ರಗಳು ನೋಟು ರದ್ಧತಿ ಮತ್ತು ಜಿಎಸ್‍ಟಿಯೆಂಬ ಅವಳಿ ಸರ್ಜಿಕಲ್ ದಾಳಿಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇಂಥಾ ಸಂದರ್ಭದಲ್ಲಿ ಮೀಸಲಾತಿಯು ಶೇ. 50ರ ಮಿತಿ ಮೀರಬಾರದೆಂಬ ಸುಪ್ರೀಂ ಕೋರ್ಟಿನ ನಿರ್ದೇಶನಗಳನ್ನು ಉಲ್ಲಂಘಿಸಿ ಕೇಂದ್ರ ಸರ್ಕಾರವು ಘೋಷಿಸಿರುವ ಶೇ.10ರ ಮೀಸಲಾತಿಯು ಬಿಜೆಪಿಗೆ ತನ್ನ ಚುನಾವಣಾ ಮಿತ್ರರನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗಬಹುದು. ಹಾಗೆಯೇ ಹಿಂದಿ ಹೃದಯಭಾಗದಲ್ಲಿ ನಡೆದ 2018ರ ಶಾಸನಾಸಭಾ ಚುನಾವಣೆಗಳಲ್ಲಿ ತಾನು ಕಳೆದುಕೊಂಡ “ದುರ್ಬಲ” ಮತದಾರರ ನಡುವೆ ತನ್ನ ಬಗ್ಗೆ ಒಂದಷ್ಟು ಸದಭಿಪ್ರಾಯವನ್ನು ಗಳಿಸಿಕೊಳ್ಳಬಹುದು. ಆದರೆ ವಾಸ್ತವದಲ್ಲಿ ಅದು ಅತಂತ್ರ ಮತ್ತು ನಿತ್ರಾಣ ಮತದಾರರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಮೀಸಲಾತಿಯಿಂದ ಹೊರಗುಳಿದ ಅರ್ಧಕ್ಕಿಂತ ಕಡಿಮೆ ಉದ್ಯೋಗಗಳಿಗಾಗಿ ಎಷ್ಟೋ ಪಟ್ಟು ಅಧಿಕ ಉದ್ಯೋಗಾಕಾಂಕ್ಷಿಗಳು ಸ್ಪರ್ಧಿಸುತ್ತಿದ್ದು ಮೀಸಲಾತಿಯ ಫಲಾನುಭವಿಗಳಿಗೆ ಅದರಿಂದ ಯಾವ ಲಾಭವೂ ಸಿಗುವುದಿಲ್ಲ.
ಇಂದಿನ ರಾಜಕೀಯ ಪರಿಭಾಷೆಗಳಲ್ಲಿ ಹೆಚ್ಚು ಬಳಕೆಯಾಗುವ “ಯುವಕರ ಆಶೋತ್ತರಗಳು” ಎಂಬ ಶಬ್ಧದ ಬಗೆಗೆ ರಾಜಕಾರಣಿಗಳಲ್ಲಿ ಅರೆಮನಸ್ಸಿನ ತಿಳವಳಿಕೆಯಿದೆ. ಮತ್ತದು ಉದ್ಯೋಗಾವಕಾಶಗಳ ಹೆಸರಲ್ಲಿ ಒಂದಷ್ಟು ಪಕೋಡಾಗಳನ್ನು ಎಸೆದರೆ, ಅಥವಾ ಒಂದಷ್ಟು ಹೀನಾಯ ಉದ್ಯೋಗವನ್ನು ನೀಡಿದರೆ ಯುವಜನರ ಬೆಂಬಲ ಪಡೆಯಬಹುದೆಂಬ ಸಂವೇದನಾ ರಹಿತ ಗ್ರಹಿಕೆಗಳಿವೆ. ಉದ್ಯೋಗ ಮಾರುಕಟ್ಟೆಯಲ್ಲಿ ಯುವಜನರ ಸಕ್ರಿಯ ಮತ್ತು ಸ್ವಕೀಯ ಪಾತ್ರವನ್ನು ಉದ್ದೇಶಪೂರ್ವಕವಾಗಿ ನಿರಾಕರಿಸುವ ಮೂಲಕ ವಾಸ್ತವದಲ್ಲಿರುವ ಅರೆಉದ್ಯೋಗದ ಸಮಸ್ಯೆಯ ಬಗ್ಗೆ ಕುರುಡು ಪ್ರದರ್ಶಿಸುತ್ತಿದೆ.
ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‍ಒ)ಯು 2018ರಲ್ಲಿ ಹೊರತಂದಿರುವ “ವರ್ಲ್ಡ್ ಎಂಪ್ಲಾಯ್‍ಮೆಂಟ್ ಅಂಡ್ ಸೋಷಿಯಲ್ ಔಟ್‍ಲುಕ್” (ಜಾಗತಿಕ ಉದ್ಯೋಗ ಮತ್ತು ಸಾಮಾಜಿಕ ದರ್ಶನ) ವರದಿಯು ಭಾರತದ ಶೇ.80ರಷ್ಟು ಉದ್ಯೋಗಗಳನ್ನು ಅಭದ್ರವೆಂದು ಪರಿಗಣಿಸಿದೆ. ಅದರಲ್ಲಿ ಕೇವಲ ಶೇ.20 ಭಾಗದಷ್ಟು ಉದ್ಯೋಗಿಗಳು ಮಾತ್ರ ನಿಯಮಿತವಾಗಿ ಸಂಬಳ ಪಡೆಯುವ ಉದ್ಯೋಗಿಗಳಾಗಿದ್ದು ಇನ್ನುಳಿದ ಶೇ.40ರಷ್ಟು ಉದ್ಯೋಗಿಗಳು ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದೇವೆಂಬ ಅಭಿಪ್ರಾಯವನ್ನೇ ಹೊಂದಿದ್ದಾರೆ. 2018ರಲ್ಲಿ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು ಹೊರತಂದಿರುವ “ಸ್ಟೇಟ್ ಆಫ್ ವರ್ಕಿಂಗ್ ಇನ್ ಇಂಡಿಯಾ” (ಭಾರತದ ಕೆಲಸ ಮಾಡುವ ಪರಿಸ್ಥಿತಿ) ವರದಿಯು ಸೌಲಭ್ಯರಹಿತ ಕೆಲಸಗಾರರ ತುಲನಾತ್ಮಕ ವರದಿಯನ್ನು ನೀಡಿದ್ದು ಅಸಂಘಟಿತ ಕ್ಷೇತ್ರದಲ್ಲಿನ ಕಡಿಮೆ ವೇತನದ ಸಮಸ್ಯೆ ಹೇಳತೀರದಾಗಿದ್ದರೂ ಸಂಘಟಿತ ಕ್ಷೇತ್ರದಲ್ಲೂ ಸಹ ಆ ಸಮಸ್ಯೆ ಮುಂದುವರೆದಿದೆ ಎಂಬ ಸಂಗತಿಯನ್ನು ಹೊರಹಾಕಿದೆ. ಶೇ.3ರಷ್ಟು ಹಣದುಬ್ಬರದ ಏರಿಕೆಯ ಲೆಕ್ಕಾಚಾರಕ್ಕೆ ತಕ್ಕಂತೆ ಕೂಲಿ ದರವನ್ನು ಹೊಂದಾಣಿಕೆ ಮಾಡಿ ನೋಡಿದಾಗಲೂ, 2015ರಲ್ಲಿ ವಿಶೇಷವಾಗಿ ಸರ್ಕಾರೇತರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಶೇ.82ರಷ್ಟು ಪುರುಷರೂ ಮತ್ತು ಶೇ.92ರಷ್ಟು ಮಹಿಳೆಯರು ಏಳನೇ ವೇತನ ಅಯೋಗ ನಿಗದಿಗೊಳಿಸಿದ ಕನಿಷ್ಟ ವೇತನಕ್ಕಿಂತ ಶೇ.40ರಷ್ಟು ಕಡಿಮೆ ವೇತನವನ್ನು ಪಡೆಯುತ್ತಿದ್ದರು. ಅದೆರ ಜೊತೆಜೊತೆಗೆ ಕಾರ್ಮಿಕ ಉತ್ಪಾದಕತೆಗೂ ಮತ್ತು ವೇತನಕ್ಕೂ ಇರುವ ಅಂತರ ಹೆಚ್ಚಾಗುತ್ತಲೇ ಇದೆ. ಉದಾಹರಣೆಗೆ ಕಳೆದ ಮೂರು ದಶಕಗಳಲ್ಲಿ ಸಂಘಟಿತ ಉತ್ಪಾದಕ ಕ್ಷೇತ್ರದಲ್ಲಿನ ಕಾರ್ಮಿಕ ಉತ್ಪಾದಕತೆಯು ಆರು ಪಟ್ಟು ಹೆಚ್ಚಾಗಿದ್ದರೆ ಕೂಲಿ ದರವು ಮಾತ್ರ ಕೇವಲ ಒಂದೂವರೆ ಪಟ್ಟು ಮಾತ್ರ ಹೆಚ್ಚಾಗಿದೆ.
ಈ ಎಲ್ಲಾ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಭಾರತದಲ್ಲಿನ ಹಾಲಿ ನಿರುದ್ಯೋಗವು ಅದರಲ್ಲೂ ಯುವಜನರ ನಿರುದ್ಯೋಗದ ಪ್ರಮಾಣವು “ಭಾವಿ” ಪ್ರಮಾಣವೇ ಹೊರತು “ಹಾಲಿ”ಯಲ್ಲವೆಂದು ಕೆಲವರು ವಾದಿಸಬಹುದು. ಅಂದರೆ, ಈಗ ಹಾಲಿ ಇರುವ ಉದ್ಯೋಗಾವಕಾಶಗಳು ತಮ್ಮ ಆಶೋತ್ತರಗಳಿಗೆ ಪೂರಕವಾದ ವೇತನ ಮತ್ತು ಸೌಲಭ್ಯಗಳನ್ನು ನೀಡುವುದಿಲ್ಲ ಎಂದು ಭಾವಿಸುತ್ತಿರುವುದರಿಂದ ಯುವಜನರು ಉದ್ಯೋಗ ಅರಸುತ್ತಿಲ್ಲ ಎಂಬುದು ಆ ವಾದದ ಸಾರಾಂಶ. ಹೀಗೆ, ನಿಗದಿತ ವೇತನವಿರುವ ಅದರಲ್ಲೂ ಸರ್ಕಾರಿ ಉದ್ಯೋಗಗಳಿಗಾಗಿ ಯುವಜನರು ತೋರುವ ಆದ್ಯತೆಯೇ ನಿರುದ್ಯೋಗಕ್ಕೆ ಕಾರಣವೆಂದು ಹೇಳುತ್ತಾ ನಿರುದ್ಯೋಗದ ಹೊಣೆಗಾರಿಕೆಯನ್ನು ನಿರುದ್ಯೋಗಿಗಳ ಹೆಗಲಿಗೇ ವರ್ಗಾಯಿಸಿಬಿಡಬಹುದು. ಆದರೆ ಈ ವಾದದಿಂದ ವಾಸ್ತವದಲ್ಲಿರುವ ನಿರುದ್ಯೋಗ, ಅರೆ ಉದ್ಯೋಗ ಅಥವಾ ಭಾವಿ ನಿರುದ್ಯೋಗಗಳಿಗೂ ಮತ್ತು ಉದ್ಯೋಗ ಸೃಷ್ಟಿಯಾಗದಿರುವುದಕ್ಕೂ ಇರುವ ಬಲವಾದ ಸಂಬಂಧಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಅಲ್ಲದೆ ಆರ್ಥಿಕ ಅಭಿವೃದ್ಧಿಗೂ ಮತ್ತು ಉದ್ಯೋಗ ಸೃಷ್ಟಿಗೂ ಇರುವ ಸಂಬಂಧಗಳನ್ನು ದುರ್ಬಲಗೊಳಿಸುತ್ತಿರುವ ರಾಚನಿಕ ಕಾರಣಗಳನ್ನು ಗುರುತಿಸುವ ಮತ್ತು ಅದನ್ನು ನಿವಾರಿಸುವ ಹೊಣೆಗಾರಿಕೆ ಸರ್ಕಾರದ್ದೇ ಆಗಿದೆ. ಅದರ ಜೊತೆಜೊತೆಗೆ ಈಗಾಗಲೇ ನಿತ್ರಾಣಗೊಂಡು ಜರ್ಝರಿತವಾಗಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಮೀಸಲಾತಿಯನ್ನು, ಅಂದರೆ ಅತ್ಯಂತ ಅತಂತ್ರತೆಯ ಅಂಚಿನಲ್ಲಿರುವ ವ್ಯಕ್ತಿಯನ್ನು ರಕ್ಷಿಸುವ ಕ್ರಮವನ್ನು, ಹೆಚ್ಚಿಸುತ್ತಿರುವ ಕ್ರಮದ ಹಿಂದಿರುವ ಸರ್ಕಾರದ ಸೋಗಲಾಡಿತನವನ್ನೂ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ್ಲ.
ಹೆಚ್ಚೆಚ್ಚು ವಿದ್ಯಾಭ್ಯಾಸವನ್ನು ಪಡೆದವರ ನಡುವೆ ಇರುವ ಅತಿ ಹೆಚ್ಚು ನಿರುದ್ಯೋಗ ದರಕ್ಕೆ ಅವರÀ ಆಯ್ಕೆ ಮತ್ತು ಆದ್ಯತೆಗಳೇ ಕಾರಣ ಎಂದು ಸರ್ಕಾರವು ವಿವರಿಸಿ ಕೈತೊಳೆದುಕೊಳ್ಳುವ ಪ್ರಯತ್ನ ಮಾಡುತ್ತದೆ. ಅದೇನೇ ಇದ್ದರೂ ಅವರ ಆಯ್ಕೆಗಳು ನಿರ್ದಿಷ್ಟ ಪಥವನ್ನೇ ಅವಲಂಬಿಸುವಂತೆ ಮಾಡಿರುವ ಹೊಣೆಗಾರಿಕೆಯಿಂದ ಸರ್ಕಾರವು ನುಣುಚಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರವು ಮತದಾರರಿಗೆ ನೀಡುª ಮೀಸಲಾತಿಯಂಥ ಹುಸಿ ರಕ್ಷಣಾ ಕ್ರಮಗಳು ಭ್ರಮ ನಿರಸನಗಳನ್ನು ಹುಟ್ಟುಹಾಕುತ್ತದೆ. ಆದರೆ ಅದು ವ್ಯಗ್ರವಾಗದಂತೆ ನೋಡಿಕೊಳ್ಳಲು ಕೂಡಲೇ ದೊಡ್ಡ ದೊಡ್ಡ ಭರವಸೆಗಳನ್ನು ಘೋಷಿಸಲಾಗುತ್ತದೆ ಆದರೆ ಅದರೊಟ್ಟಿಗೆ ಜನರ ಅಭದ್ರತೆಯನ್ನು ಹೆಚ್ಚಿಸುವ ನೀತಿಗಳ ಬೆದರಿಕೆಯನ್ನೂ ಒಡ್ಡಲಾಗುತ್ತದೆ. ಇದು ಮತ್ತಷ್ಟು ಹುಸಿ ಭರವಸೆಗಳ ಘೋಷಣೆಗೆ ಜನರನ್ನು ಬಲಿ ಮಾಡುವ ರಾಜಕೀಯ ವಿಷಚಕ್ರಕ್ಕೆ ದೂಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...