Homeಮುಖಪುಟನಾಸ್ತಿಕತೆಯೇ ನನ್ನ ಆಯುಧ, ಮಾನವೀಯತೆ ನನ್ನ ಸಿದ್ಧಾಂತ: ಕಮಲ್ ಹಾಸನ್ ಹೇಳಿಕೆ ವೈರಲ್

ನಾಸ್ತಿಕತೆಯೇ ನನ್ನ ಆಯುಧ, ಮಾನವೀಯತೆ ನನ್ನ ಸಿದ್ಧಾಂತ: ಕಮಲ್ ಹಾಸನ್ ಹೇಳಿಕೆ ವೈರಲ್

ಬಹುಭಾಷಾ ನಟ, ಮಕ್ಕಳ್‌ ನೀದಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್‌ರವರ 67 ನೇ ಜನ್ಮದಿನ ಇಂದು. ಅವರ ಹೇಳಿಕೆಗಳ ಸಂಗ್ರಹ ಇಲ್ಲಿದೆ.

- Advertisement -
- Advertisement -

ಬಹುಭಾಷಾ ನಟ, ಮಕ್ಕಳ್‌ ನೀದಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್‌ ಇಂದು ತಮ್ಮ 67 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ಸಂದರ್ಭದಲ್ಲಿ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅವುಗಳ ಸಂಗ್ರಹ ಇಲ್ಲಿದೆ.

”ಮಕ್ಕಳ್ ನೀದಿ ಮಯ್ಯಂ” ಎಂಬ ರಾಜಕೀಯ ಪಕ್ಷ ಕಟ್ಟಿರುವ ಕಮಲ್ ಹಾಸನ್, ಆಳುವ ಸರ್ಕಾರಗಳನ್ನು, ನೀತಿಗಳನ್ನು ಪ್ರಶ್ನಿಸುತ್ತಾ ಬಂದಿದ್ದಾರೆ. ಅದರಲ್ಲಿಯೂ ಭಾವನಾತ್ಮಕ ವಿಚಾರಗಳನ್ನಿಟ್ಟು ರಾಜಕೀಯ ಮಾಡುವುದನ್ನು ಕಮಲ್ ಖಂಡತುಂಡವಾಗಿ ವಿರೋಧಿಸಿದ್ದಾರೆ. ಹಾಗಾಗಿಯೇ ದೇವರು, ಧರ್ಮದ ಹೆಸರಿನಲ್ಲಿ ಓಟು ಕೇಳುವುದಕ್ಕೆ ಅವರ ವಿರೋಧವಿದೆ. ಹೌದು ನಾನು ಗೋಮಾಂಸ ತಿಂದಿದ್ದೇನೆ, ಏನೀಗ? ಏನು ತಿನ್ನಬೇಕೆನ್ನುವುದು ಜನರ ಆಯ್ಕೆ. ಅದನ್ನು ಕೇಳಲು ನೀವ್ಯಾರು ಎಂದು ಕಮಲ್ ಹಾಸನ್ ಈ ಹಿಂದೆ ಪ್ರಶ್ನಿಸಿದ್ದರು.

“ನಾಸ್ತಿಕತೆ ನಿಮ್ಮ ಸಿದ್ಧಾಂತ ಎಂದು ಕೇಳುತ್ತಾರೆ ಅಲ್ಲ ನಾಸ್ತಿಕತೆಯೇ ನನ್ನ ಆಯುಧ, ಮಾನವೀಯತೆ ನನ್ನ ಸಿದ್ಧಾಂತ ಎಂದು ಹೇಳುತ್ತೇನೆ. ಈಗ ನನ್ನ ಮುಂದೆ ದೇವರು ಪ್ರತ್ಯಕ್ಷನಾದರೂ ಸಹ ನಾನು ಪೂಜಿಸುವುದಿಲ್ಲ” ಎಂದು 2015ರಲ್ಲಿ ಅವರು ಹೇಳಿಕೆ ನೀಡಿದ್ದರು. ಅವರ ಇನ್ನಿತರ ಪ್ರಸಿದ್ದ ಹೇಳಿಕೆಗಳು ಕೆಳಗಿನಂತಿವೆ.

“ಒಂದು ರಾಷ್ಟ್ರ, ಒಂದು ಕಾನೂನು, ಒಂದು ಧರ್ಮ, ಒಂದು ಆಯ್ಕೆ, ಹಿಂದಿ ಒಂದೇ ಭಾಷೆ, ಒಂದು ಆಹಾರ, ಒಬ್ಬ ಪ್ರಧಾನಿ ಹೀಗೆ ಎಲ್ಲವೂ ಒಂದೇ ಆಗುವುದಾದರೇ, ಆ ‘ಒಂದು’ ಯಾವಾಗಲೂ ಸರ್ವಾಧಿಕಾರ ಮತ್ತು ದಬ್ಬಾಳಿಕೆಗೆ ಕಾರಣವಾಗಿದೆ ಎಂದು ಇತಿಹಾಸವು ತೋರಿಸಿದೆ’’.

“ಸಮಾನ ನ್ಯಾಯವಿಲ್ಲದ ಮತ್ತು ಸಾಮಾಜಿಕ ನ್ಯಾಯವಿಲ್ಲದ ಅಸಮಾನ ಸಮಾಜದಲ್ಲಿ, ‘ಒಂದು ಮಾತ್ರ’ ಎಂದು ಹೇಳುವುದು ದೊಡ್ಡ ಅನ್ಯಾಯವಾಗಿದೆ”.

“ನಾನು 21 ನೇ ಶತಮಾನದ ಮನುಷ್ಯ. ನಾನು ವೈಭವವನ್ನು ನಂಬುವುದಿಲ್ಲ. ಶ್ರಮ, ಕಣ್ಣೀರು, ಜೀವನ ಮತ್ತು ಮರಣವನ್ನು ಮಾತ್ರ ಸತ್ಯವೆಂದು ನಂಬುತ್ತೇನೆ”.

‘ಸಾಕ್ರಟೀಸ್‌ನ ಮಗನಾದ ನನಗೆ ಒಂದು ಕಪ್ ವಿಷವನ್ನು ಕೊಟ್ಟರೂ ಸಂತೋಷದಿಂದ ಕುಡಿಯುತ್ತೇನೆ. ಆದರೆ ನಾನು ಸಾಯುವವರೆಗೂ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತೇನೆ’ ಎನ್ನುವ ಮೂಲಕ ಕಮಲ್ ಗಮನಸೆಳೆದಿದ್ದರು.

“ನನ್ನ ಮೇಲೆ ಬುದ್ಧನ ಪ್ರಭಾವ ಇದೆ, ವಿಶ್ವದ ಅತಿದೊಡ್ಡ ವೈಚಾರಿಕ ವ್ಯಕ್ತಿ ಬುದ್ಧನನ್ನೂ ಸಹ ಜನರು ದೇವರನ್ನಾಗಿ ಮಾಡಿದ್ದಾರೆ” ಎಂದು ಕಮಲ್ ಈ ಹಿಂದೆ ಬೇಸರ ವ್ಯಕ್ತಪಡಿಸಿದ್ದರು.

“ನಾನು, ನನಗಿಂತ ಮೊದಲು ಇದ್ದವರಿಗಿಂತಲೂ ಹೆಚ್ಚಿನದನ್ನು ಯೋಚಿಸಲು ಸಾಧ್ಯವಾದರೆ ಮಾತ್ರ ಭವಿಷ್ಯದ ಪೀಳಿಗೆಗಳು ನನಗಿಂತ ಹೆಚ್ಚಿನದನ್ನು ಯೋಚಿಸಲು ಪ್ರಯತ್ನಿಸುತ್ತಾರೆ” ಎಂದು ಕಮಲ್ ಹಾಸನ್ ಹೇಳಿದ್ದರು.

“ಭಾರತದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿರುವಾಗ, ಕೊರೊನಾ ವೈರಸ್‌ನಿಂದಾಗಿ ಜೀವನೋಪಾಯವನ್ನು ಕಳೆದುಕೊಂಡಿರುವಾಗ 1,000 ಕೋಟಿ ವೆಚ್ಚದ ಹೊಸ ಸಂಸತ್ತು ಏಕೆ..?” ಎಂದು ಕೇಂದ್ರ ಹೊಸ ಸೆಂಟ್ರಲ್ ವಿಸ್ತಾ ಯೋಜನೆಯನ್ನು ವಿರೋಧಿಸಿದ್ದರು.

ಇದನ್ನೂ ಓದಿ: ನಿಮ್ಮ ವಿಚಾರ ಪಾಲಿಸಿದ್ದೀವಿ. ನಮ್ಮ ಮಾತು ನಿಮಗೆ ಕೇಳುತ್ತಿದೆಯೇ? – ಪ್ರಧಾನಿ ಮೋದಿಗೆ ಕಮಲ್‌ ಹಾಸನ್‌ ಬಹಿರಂಗ ಪತ್ರ

ಪೆರಿಯಾರ್‌ ಹಾಗೂ ಗಾಂಧಿ ಅನುಯಾಯಿಯಾಗಿ ನಾನು ಅವರನ್ನು ಚೆನ್ನಾಗಿ ಅರಿತಿದ್ದೇನೆ. ಅವರಷ್ಟು ಬುದ್ಧಿವಂತರು ಯಾರೂ ಇರಲಾರರು. ಅವರು ಈ ಸಮಾಜಕ್ಕೆ ನೀತಿ, ಸಮಾನತೆ ಮತ್ತು ಸಮೃದ್ಧಿಯನ್ನು ತೋರಿಸಿಕೊಟ್ಟವರು.

“ಕೆಳಸ್ತರವನ್ನು ನಾಶಗೊಳಿಸಲು ಹೊರಟರೆ, ಅದು ಮೇಲುಸ್ತರದ ವಿನಾಶಕ್ಕೂ ಕಾರಣವಾಗುತ್ತದೆ ಎಂಬುದನ್ನು ಇತಿಹಾಸ ತಿಳಿಸಿಕೊಟ್ಟಿದೆ. ಇದನ್ನು ವಿಜ್ಞಾನ ಕೂಡಾ ಒಪ್ಪುತ್ತದೆ!” ಎಂದು ಮೋದಿಯವರ ನೋಟು ಅಮಾನ್ಯೀಕರಣ ಮತ್ತು ಲಾಕ್‌ಡೌನ್‌ ಘೋಷಣೆಯನ್ನು ಕಮಲ್ ವಿರೋಧಿಸಿದ್ದರು.


ಇದನ್ನೂ ಓದಿ: ಜನರನ್ನು ಭಾವನಾತ್ಮಕವಾಗಿ ಮರಳು ಮಾಡುವುದನ್ನು ನಿಲ್ಲಿಸಿ : ಕಮಲ್ ಹಾಸನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...