Homeಮುಖಪುಟಮಣಿಕರ್ಣಿಕಾ ವಿವಾದ: ಕಂಗನಾ ಕಾರಣಕ್ಕೆ ನಾನು ಜಗತ್ತಿಗೆ ಅಪರಿಚಿತನಾಗಿರಬಹುದು- ನಿರ್ದೇಶಕ

ಮಣಿಕರ್ಣಿಕಾ ವಿವಾದ: ಕಂಗನಾ ಕಾರಣಕ್ಕೆ ನಾನು ಜಗತ್ತಿಗೆ ಅಪರಿಚಿತನಾಗಿರಬಹುದು- ನಿರ್ದೇಶಕ

ಮಣಿಕರ್ಣಿಕಾ ಚಿತ್ರದ 70 ಪ್ರತಿಶತವನ್ನು ತಾವೇ ನಿರ್ದೇಶಿಸಿದೆ ಎಂದು ಕಂಗನಾ ಹೇಳಿಕೊಂಡಿದ್ದರು. ಇದಕ್ಕೆ ಆಕೆಯ ಸಹೋದರಿ ರಂಗೋಲಿ ಬೆಂಬಲವಾಗಿ ನಿಂತಿದ್ದರು.

- Advertisement -
- Advertisement -

’ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝೂನ್ಸಿ’ ಚಿತ್ರದ ನಿರ್ದೇಶನದ ಬಗ್ಗೆ ನಟಿ ಕಂಗನಾ ರಣಾವತ್ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ ನಿರ್ದೇಶಕ ಕ್ರಿಶ್ ಜಗಾರ್ಲಮುಡಿ, ವಿವಾದದ ಬಗ್ಗೆ ಮಾತನಾಡಿದ ಕ್ರಿಶ್, ಕಂಗನಾರಿಂದ ತಾನು ಜಗತ್ತಿಗೆ ಅಪರಿಚಿತನಾಗಿರಬಹುದೆಂಬ ಭಯವಿದೆ ಎಂದು ಹೇಳಿದ್ದಾರೆ.

ನಟಿ ಸಮಂತಾ ಅವರ ಟಾಕ್ ಶೋ ಸ್ಯಾಮ್ ಜಾಮ್‌ನಲ್ಲಿ ಕೊನೆಯ ಬಾರಿಗೆ ವಿವಾದದ ಬಗ್ಗೆ ಮಾತನಾಡುತ್ತೇನೆ ಎಂದು ಹೇಳುತ್ತಾ ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ನಟಿ ರಾಕುಲ್ ಪ್ರೀತ್ ಸಿಂಗ್ ಜೊತೆಗೆ ಟಾಕ್ ಶೋ ಸ್ಯಾಮ್ ಜಾಮ್‌ನಲ್ಲಿ ಕಾಣಿಸಿಕೊಂಡರು.

ಡಿಸೆಂಬರ್ 18 ರಂದು ಒಟಿಟಿ ಪ್ಲಾಟ್‌ಫಾರ್ಮ್ ಆಹಾ ನಲ್ಲಿ  ಪ್ರಸಾರವಾಗಲಿರುವ, ನಟಿ ಸಮಂತಾ ಅವರ ಟಾಕ್ ಶೋ ಸ್ಯಾಮ್ ಜಾಮ್‌ನಲ್ಲಿ ರಾಕುಲ್ ಪ್ರೀತ್ ಸಿಂಗ್ ಮತ್ತು ಕ್ರಿಶ್ ಜಗಾರ್ಲಮುಡಿ ಅವರು ಅತಿಥಿಗಳಾಗಿದ್ದಾರೆ. ಇತ್ತೀಚೆಗೆ, ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಇಬ್ಬರು ಕಲಾವಿದರು ತಮ್ಮ ಸುತ್ತಲು ಹರಡಿದ್ದ, ಕಾಡಿದ ವಿವಾದಗಳ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ನಟಿ ಕಂಗನಾ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್

ಮಣಿಕರ್ಣಿಕಾ ಮತ್ತು ಕಂಗನಾ ರಣಾವತ್ ಅವರೊಂದಿಗೆ ಏನಾಯಿತು ಎಂದು ನಟಿ ಸಮಂತಾ ಕೇಳಿದಾಗ, “ನಾನು ಕೊನೆಯ ಬಾರಿಗೆ ಮಾತನಾಡಲು ಬಯಸುತ್ತೇನೆ. ಕಂಗನಾ ಮತ್ತು ಅವಳ ತಂಡವು ಚಿತ್ರವನ್ನು ವೀಕ್ಷಿಸಿತ್ತು. ಆದಾಗಿ ಎರಡು ದಿನಗಳ ನಂತರ ನನಗೆ ಕರೆ ಬಂತು ಎಂದಿದ್ದಾರೆ. ನನ್ನ ಏಕೈಕ ಭಯವೆಂದರೆ ಕಂಗನಾ ಕಾರಣಕ್ಕೆ ನಾನು ಜಗತ್ತಿಗೆ ಅಪರಿಚಿತನಾಗಿರಬಹುದು. ಕಲಾವಿದರಾದ ನಾವು ಉತ್ತಮ ಅವಕಾಶಗಳನ್ನು ಪಡೆದಾಗ ಮಾತ್ರ ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಬಹುದು” ಎಂದು ಕ್ರಿಶ್ ಹೇಳಿದ್ದಾರೆ.

ಮಣಿಕರ್ಣಿಕಾ ಚಿತ್ರ ವಿವಾದವೇನು…?

2019 ರಲ್ಲಿ ನಟಿ ಕಂಗನಾ ರಣಾವತ್ ಮಣಿಕರ್ಣಿಕಾ: ರಾಣಿ ಆಫ್ ಝಾನ್ಸಿ ಚಿತ್ರವನ್ನು ವಹಿಸಿಕೊಂಡು, ಚಿತ್ರದ ಬಹಳಷ್ಟು ಭಾಗಗಳನ್ನು ಮತ್ತೆ ಚಿತ್ರೀಕರಿಸಿದರು. ನಿರ್ದೇಶಕ ಕ್ರಿಶ್ ಜಗಾರ್ಲಮುಡಿ ಅವರೊಂದಿಗೆ ಸಹ-ನಿರ್ದೇಶಕರ ಕ್ರೆಡಿಟ್ ಕೂಡ ಹಂಚಿಕೊಂಡಿದ್ದರು. ನಂತರ ಚಿತ್ರದ 70 ಪ್ರತಿಶತವನ್ನು ತಾವೇ ನಿರ್ದೇಶಿಸಿದೆ ಎಂದು ಕಂಗನಾ ಹೇಳಿಕೊಂಡಿದ್ದರು. ಇದಕ್ಕೆ ಆಕೆಯ ಸಹೋದರಿ ರಂಗೋಲಿ ಬೆಂಬಲವಾಗಿ ನಿಂತಿದ್ದರು.

ಇದನ್ನೂ ಓದಿ: ’ಶಾಹೀನ್ ಬಾಗ್‌ ದಾದಿ’ಯ ಕುರಿತು ಆಕ್ಷೇಪಾರ್ಹ ಹೇಳಿಕೆ- ನಟಿ ಕಂಗನಾಗೆ ಕಾನೂನು ನೋಟಿಸ್

ಈ ಬಗ್ಗೆ ನಿರ್ದೇಶಕ ಕ್ರಿಶ್ ಜಗಾರ್ಲಮುಡಿ ಹಲವಾರು ಸಂದರ್ಶನಗಳಲ್ಲಿ, ಕಂಗನಾ ಅವರಿಂದ ಚಿತ್ರವನ್ನು ಸ್ವಾಧೀನಪಡಿಸಿಕೊಂಡ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಜೊತೆಗೆ ಚಿತ್ರದಲ್ಲಿ ಹಲವರ ಪಾತ್ರಗಳನ್ನು ಕಡಿತಗೊಳಿಸಿ, ಸಣ್ಣ ಪುಟ್ಟ ಬದಲಾವಣೆ ಮಾಡಬೇಕು ಎಂದು ಏನೇನೋ ಬದಲಾವಣೆ ಮಾಡಿದರು’ ಎಂದು ಆರೋಪಿಸಿದ್ದರು.

ವಿವಾದದಿಂದ ಬೇಸತ್ತ ಕ್ರಿಶ್, “ಕಂಗನಾ ಮತ್ತು ನಾನು ಇಬ್ಬರೂ ಈ ಉದ್ಯಮದಿಂದ ಬೇಗ ದೂರ  ಸರಿಯುವುದಿಲ್ಲ. ಭವಿಷ್ಯದಲ್ಲಿ ನಾನು ಇನ್ನೂ ಅನೇಕ ಚಿತ್ರಗಳನ್ನು ನಿರ್ದೇಶಿಸುತ್ತೇನೆ ಮತ್ತು ಅವರು ಕೂಡ ಚಿತ್ರರಂಗದಲ್ಲಿರುತ್ತಾರೆ. ಯಾರು ಎಲ್ಲಿ ನಿಲ್ಲುತ್ತಾರೆ ಎಂದು ಜನರಿಗೆ ತಿಳಿಯುತ್ತದೆ. ನಾನು ಕಂಗನಾ ಮತ್ತು ಇಡೀ ವಿವಾದದಿಂದ ದಣಿದಿದ್ದೇನೆ” ಎಂದು ಹೇಳಿದ್ದರು.

ಈಗ ಈ ಟಾಕ್ ಶೋನಿಂದ ಮತ್ತೊಮ್ಮೆ ಮಣಿಕರ್ಣಿಕಾ ಚಿತ್ರ ವಿವಾದ ಜನರ ನೆನಪಿಗೆ ಬಂದಿದೆ. ಬರೀ ಪ್ರೋಮೋ ಇಷ್ಟೊಂದು ವೈರಲ್ ಆಗಿದೆ. ಡಿಸೆಂಬರ್‌ 18 ರಂದು ಪೂರ್ತಿ ಕಾರ್ಯಕ್ರಮ ಪ್ರಸಾರವಾಗಲಿದ್ದು, ಕ್ರಿಶ್ ವಿವಾದದ ಬಗ್ಗೆ ಏನೇನು ಹೇಳಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಹೊರಬರಲಿದೆ.

ನಟಿ ಕಂಗನಾ ರಣಾವತ್ ಇತ್ತಿಚೆಗೆ ಹೆಚ್ಚು ಹೆಚ್ಚು ಟ್ರೋಲ್ ಮತ್ತು ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ. ಈ ಸಂದರ್ಭದಲ್ಲೇ ಮತ್ತೆ ಮಣಿಕರ್ಣಿಕಾ ವಿವಾದ ಹೊರ ಬಿದ್ದಿದೆ.


ಇದನ್ನೂ ಓದಿ: ರೈತರ ಬಗ್ಗೆ ಅವಹೇಳನಕಾರಿ ಟ್ವೀಟ್: ನಟಿ ಕಂಗನಾಗೆ ಮತ್ತೊಂದು ಲೀಗಲ್ ನೋಟಿಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...