Homeಮುಖಪುಟರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ: ಅಡ್ವಾಣಿ ನೇತೃತ್ವದಲ್ಲಿ ಸಂಗ್ರಹವಾಗಿದ್ದ ಕೋಟ್ಯಂತರ ರೂ ಏನಾಯ್ತು?

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ: ಅಡ್ವಾಣಿ ನೇತೃತ್ವದಲ್ಲಿ ಸಂಗ್ರಹವಾಗಿದ್ದ ಕೋಟ್ಯಂತರ ರೂ ಏನಾಯ್ತು?

- Advertisement -
- Advertisement -

ಎರಡು ದಶಕದ ರಾಮ ಮಂದಿರ-ಬಾಬ್ರಿ ಮಸೀದಿ ವಿವಾದಕ್ಕೆ ಕಳೆದ ವರ್ಷ ತೆರೆ ಬಿದ್ದು ಈಗ ರಾಮ ಮಂದಿರ ನಿರ್ಮಾಣ ಕಾರ್ಯ ಹುರುಪು ಪಡೆದುಕೊಂಡಿದೆ. ಕೆಲಸಗಳು ಭರದಿಂದ ಸಾಗಿವೆ. ರಾಮ ಮಂದಿರ ನಿರ್ಮಾಣಕ್ಕೆಂದೇ ದೇಶದಾದ್ಯಂತ ದೇಣಿಗೆ ಸಂಗ್ರಹ ನಡೆಯುತ್ತಿದ್ದು, ಬಹತೇಕರು ಹಣ ನೀಡುತ್ತಿದ್ದಾರೆ. ಆದರೆ ಇನ್ನು ಕೆಲವರು ಮತ್ತೆ ಕೋಟ್ಯಾಂತರ ಹಣ ಸಂಗ್ರಹಿಸುವುದಾದರೆ ಅಡ್ವಾಣಿ ನೇತೃತ್ವದಲ್ಲಿ ಸಂಗ್ರಹವಾಗಿದ್ದ ಕೋಟ್ಯಂತರ ರೂ.ಗಳು ಏನಾಯ್ತು? ಎಂದು ಪ್ರಸ್ತಾಪಿಸಿ ಚರ್ಚೆ ಹುಟ್ಟುಹಾಕಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಸಂಗ್ರಹ ಮೆರವಣಿಗೆಯಲ್ಲಿ ಘರ್ಷಣೆ: ಗುಜರಾತಿನಲ್ಲಿ 40 ಜನರ ಬಂಧನ

ಬಿಜೆಪಿ ಹಿರಿಯ ಮುಖಂಡ ಎಲ್‌ ಕೆ ಅಡ್ವಾಣಿ 1990 ರ ದಶಕದಲ್ಲಿ ದೇಶದಾದ್ಯಂತ ರಥಯಾತ್ರೆ ಆರಂಭಿಸಿ ಪ್ರತಿ ಮನೆಯಿಂದಲೂ ಇಟ್ಟಿಗೆ ಮತ್ತು ಹಣ ಸಂಗ್ರಹ ಮಾಡಿದ್ದರು. ಆದರೆ ಈ ರಾಮ ಜನ್ಮಭೂಮಿ ವಿವಾದ ಅಂದಿನಿಂದಲೂ ಇತ್ಯರ್ಥವಾಗಲೇ ಇಲ್ಲ. ಕೊನೆಗೆ 2014 ರಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ‘ರಾಮ ಮಂದಿರ ನಿರ್ಮಾಣ’ವನ್ನು ಒಂದು ಆದ್ಯತೆಯ ಅಂಶವಾಗಿ ಸೇರಿಸಿತ್ತು. ಜೊತೆಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಆದರೆ 2014-2019 ರವರೆಗಿನ ಬಿಜೆಪಿ ಆಡಳಿತದಲ್ಲಿ ರಾಮ ಜನ್ಮಭೂಮಿ ವಿವಾದ ತಾರ್ಕಿಕ ಅಂತ್ಯ ಕಾಣಲಿಲ್ಲ. ಹಾಗಾಗಿ 2019 ರಲ್ಲಿಯೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರಾಮ ಮಂದಿರ ನಿರ್ಮಾಣದ ಅಂಶವನ್ನು ಪ್ರಸ್ತಾಪಿಸಿತ್ತು. ಕೊನೆಗೂ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ 2020 ರಲ್ಲಿ ಇದಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪನ್ನು ಹೊರಹಾಕಿತ್ತು. ಅದು ವಿವಾದಿತ ಜಾಗದಲ್ಲಿ ಮಂದಿರ ಕಟ್ಟಬೇಕೆಂದು ಹೇಳಿತು.

ಈಗ ಮುಖ್ಯ ಪ್ರಶ್ನೆಯಿರುವುದು 20 ವರ್ಷಗಳ ಹಿಂದೆ ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹ ಮಾಡಿದ ಹಣದ ಲೆಕ್ಕ ಏನಾಯ್ತು? ಎನ್ನುವುದಾಗಿದೆ.

ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ 500 ಕೋಟಿ ರೂ ದೇಣಿಗೆ ಕೊಟ್ಟರೆ ಮುಖೇಶ್‌ ಅಂಬಾನಿ? ಸತ್ಯ ಇಲ್ಲಿದೆ…

ರಾಮ ಜನ್ಮಭೂಮಿಯ ವಿವಾದವನ್ನು ಮೊಟ್ಟ ಮೊದಲು ಆರಂಭಿಸಿದ್ದ ನಿರ್ಮೋಹಿ ಅಖಾಡ “ಬಿಜೆಪಿಯು ರಾಮ ಮಂದಿರದ ಹೆಸರಲ್ಲಿ ಸಂಗ್ರಹಿಸಿರುವ ಸುಮಾರು 1,400 ಕೋಟಿ ಹಣವನ್ನು ಗುಳುಂ ಮಾಡಿದೆ. ತನ್ನ ಸ್ವಂತ ಹಿತಾಸಕ್ತಿಗೆ ಬಳಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಸಾಕ್ಷ್ಯವೂ ಇದೆ. ಅಯೋಧ್ಯೆ ಆಂದೋಲನದಲ್ಲಿ ಭಾಗಿಯಾಗಿದ್ದವರ ಅನೇಕ ಕೊಲೆಗಳೂ ನಿಗೂಢವಾಗಿ ನಡೆದಿವೆ. ಹಾಗಾಗಿ ಇದರ ತನಿಖೆಯಾಗಬೇಕು. ಯಾಕೆಂದರೆ ನಾವು ಬಿಜೆಪಿಯಂತೆ ಹಣಕ್ಕಾಗಿ ರಾಮನನ್ನು ಪ್ರೀತಿಸಲಿಲ್ಲ” ಎಂದು ಪ್ರಬಲವಾದ ಆರೋಪವೊಂದನ್ನು ಮಾಡಿದ್ದರು. ಆದರೆ ನಂತರ ದಿನಗಳಲ್ಲಿ ಈ ವಿಷಯ ಏನಾಯಿತು ಎಂಬುದೂ ನಿಗೂಢ! ಅದರ ವಿಡಿಯೋ ಈ ಕೆಳಗಿನ ಟ್ವೀಟ್ ನಲ್ಲಿದೆ.

ಇತ್ತೀಚೆಗೆ ರಾಮ ಜನ್ಮಭೂಮಿ ಟ್ರಸ್ಟ್‌ನಲ್ಲಿ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಟ್ರಸ್ಟ್‌ನ 4 ಜನರನ್ನು ಬಂಧಿಸಲಾಗಿತ್ತು.

ಇರಲಿ, ಈಗ ಪ್ರಸ್ತುತ ವಿಷಯಕ್ಕೆ ಬರೋಣ. ಈಗ ರಾಮ ಮಂದಿರ ನಿರ್ಮಾಣಕ್ಕೆಂದು ಬಿಜೆಪಿ ಮತ್ತು ಸಂಘಪರಿವಾರದಿಂದ ಮತ್ತೆ ದೇಣಿಗೆ ಸಂಗ್ರಹ ಕಾರ್ಯ ಆರಂಭವಾಗಿದೆ. ಇದು ಫೆಬ್ರವರಿ 17 ರವರೆಗೂ ನಡೆಯಲಿದೆ. ಹಾಗಾಗಿ ದೇಶದಾದ್ಯಂತ ಈ ಕಾರ್ಯ ನಡೆಯುತ್ತಿದೆ. ಆದರೆ ಈ ಮೇಲೆ ಹೇಳಿದಂತೆ ಕೆಲವರು ಮಾತ್ರ ಈ ಹಿಂದೆ ರಾಮ ಮಂದಿರಕ್ಕೆಂದು ಸಂಗ್ರಹವಾಗಿದ್ದ ಹಣದ ಬಗ್ಗೆ ಈಗ ಲೆಕ್ಕ ಕೇಳುತ್ತಿದ್ದಾರೆ.

ಇದನ್ನೂ ಓದಿ: ರಾಮಮಂದಿರ ನಿರ್ಮಾಣದ ಜವಾಬ್ದಾರಿಯನ್ನು ನಮಗೆ ಕೊಡಿ: ಮೂರು ಟ್ರಸ್ಟ್‌ಗಳ ನಡುವೆ ಪೈಪೋಟಿ

ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಕಾಂತಿಲಾಲ್ ಭೂರಿಯಾ ಎಂಬುವವರು ಜನವರಿ 1 ರಂದು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಅದರಂತೆ, “ಬಿಜೆಪಿ ನಾಯಕರು ರಾಮ ಮಂದಿರ ನಿರ್ಮಾಣಕ್ಕೆಂದು ಇಷ್ಟು ವರ್ಷಗಳಲ್ಲಿ ಸಂಗ್ರಹಿಸಿದ ಹಣ ಎಲ್ಲಿ ಹೋಯಿತು. ಹಗಲಿನಲ್ಲಿ ಹಣ ಸಂಗ್ರಹ ಮಾಡಿ, ರಾತ್ರಿಯಲ್ಲಿ ಮದ್ಯಪಾನ ಮಾಡುತ್ತಾರೆ” ಎಂದು ಆರೋಪಿಸಿದ್ದರು. ಇದು ವ್ಯಾಪಕ ಚರ್ಚೆಗೆ ಗುರಿಯಾಗಿತ್ತು.

ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಸಿ ಎಸ್ ದ್ವಾರಕಾನಾಥ್ ಅವರು ಕೂಡ ದೇಣಿಗೆ ಸಂಗ್ರಹಕ್ಕೆ ಬಂದ ಹಿಂದೂ ಕಾರ್ಯಕರ್ತರನ್ನು, ರಾಮ ಮಂದಿರಕ್ಕೆಂದು ಈ ಹಿಂದೆ ಸಂಗ್ರಹಿಸಿದ್ದ ಹಣದ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಪಾಪ ಅವರ ಬಳಿಯೂ ಲೆಕ್ಕ ಮತ್ತು ಉತ್ತರ ಎರಡೂ ಇರಲಿಲ್ಲ. ಇದು ಇವರ ಪ್ರಶ್ನೆ ಮಾತ್ರವಲ್ಲ, ಹಲವಾರು ಪ್ರಜ್ಞಾವಂತರ ಪ್ರಶ್ನೆಯೂ ಆಗಿದೆ.

ಜನವರಿ 17 ರವರೆಗೆ ರಾಮಮಂದಿರಕ್ಕಾಗಿ ಸುಮಾರು 100 ಕೋಟಿ ಸಂಗ್ರಹವಾಗಿದೆ ಎಂದು ರಾಮ ಜನ್ಮಭೂಮಿ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.

ಇನ್ನು ಕೆಲವರು ರಾಮ ಮಂದಿರಕ್ಕೆಂದು ದೇಣಿಗೆ ಸಂಗ್ರಹ ಮಾಡುವುದಕ್ಕೆ ಬರುವವರು ರಶೀದಿಯನ್ನೂ ಸಹ ಕೊಡುವುದಿಲ್ಲ ಎಂದು ಆರೋಪಿಸಿದ್ದಾರೆ. ಅಷ್ಟೆ ಅಲ್ಲದೇ ದೇಣಿಗೆ ಸಂಗ್ರಹ ಆರಂಭವಾದ ಕೆಲವೇ ದಿನದಲ್ಲಿ ಲಕ್ಷಗಟ್ಟಲೆ ಹಣ ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ: ಮೌನ ಮುರಿಯುವ ಹೊತ್ತಿದು; ಮಂದಿರದ ಹೆಸರಿನಲ್ಲಿ ಮನುಷ್ಯ ಸಂಬಂಧಗಳನ್ನು ಹದಗೆಡಿಸಲು ಬಿಡದಿರೋಣ

ಇನ್ನು ದೇಣಿಗೆ ಸಂಗ್ರಹಕ್ಕಾಗಿ ಮನೆಯ ಬಳಿ ಬಂದಾಗ ಒತ್ತಾಯಪೂರ್ವಕವಾಗಿ ಹಣಕ್ಕೆ ಬೇಡಿಕೆಯಿಟ್ಟಿರುವ ಹಲವು ಉದಾಹರಣೆಗಳು ಕಂಡು ಬಂದಿವೆ. ಹಣ ನೀಡದಿದ್ದರೆ ರಸ್ತೆಯಲ್ಲಿ ನಿಂತು, ‘ನೀವು ದೇಶದ್ರೋಹಿಗಳು’ ಎಂದು ಕೂಗಾಡುತ್ತಾ ಹೋಗುತ್ತಾರೆ. ಇನ್ನು ಮನೆಯ ಬಳಿ ಬಂದವರನ್ನು ಹಾಗೇ ಕಳುಹಿಸಬಾರದೆಂದು ಹಲವರು ಪೇಚಾಟಕ್ಕೆ ಸಿಲುಕಿ ಹಣ ನೀಡಿರುವ ಸಂಭವವೂ ಇದೆ. ಹಾಗೆಯೇ ಸ್ಥಳೀಯ ಯುವಕರನ್ನು ಜೊತೆಯಾಗಿಸಿಕೊಂಡು ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸುವ ನೆಪದಲ್ಲಿ ಬಿಜೆಪಿ ಪರ ಪ್ರಚಾರವನ್ನೂ ಮಾಡಲಾಗುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.

ಇನ್ನು ಕೆಲವರು ನಮ್ಮೂರಿನ ಶಾಲೆ-ಆಸ್ಪತ್ರೆ ಕಟ್ಟಲು ದೇಣಿಗೆ ಸಂಗ್ರಹಿಸೋಣ. ಅಯೋಧ್ಯೆಯ ರಾಮ ದೇವಾಲಯವೊಂದಕ್ಕೆ ಸಾವಿರಾರು ಕೋಟಿ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ


ಇದನ್ನೂ ಓದಿ: ಬಿಜೆಪಿಯ ರಾಮನ ಹೆಸರಿನಲ್ಲಿ ನಡೆಸುವ ರಾಜಕೀಯವನ್ನು ಕೊನೆಗೊಳಿಸುವ ಸಮಯ: ಶಿವಸೇನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...