Homeಮುಖಪುಟಬಂಗಾಳ: ಬಿಜೆಪಿಯ ಮುಕುಲ್‍ ರಾಯ್‍ ತವರುಮನೆ ಮಮತಾ ಪಕ್ಷದತ್ತ?

ಬಂಗಾಳ: ಬಿಜೆಪಿಯ ಮುಕುಲ್‍ ರಾಯ್‍ ತವರುಮನೆ ಮಮತಾ ಪಕ್ಷದತ್ತ?

ಈಗ ತೃಣಮೂಲ ಕಾಂಗ್ರೆಸ್ ಮೂಲಗಳು ಹೇಳುವಂತೆ, ಪಕ್ಷ ಬಿಟ್ಟ ಕನಿಷ್ಠ 35 ಮುಖಂಡರು ಟಿಎಂಸಿಗೆ ವಾಪಸ್ ಬರಲು ಬಯಸುತ್ತಿದ್ದಾರೆ.

- Advertisement -
- Advertisement -

ಕೋಲ್ಕತ್ತಾದಲ್ಲಿ ನಡೆದ ಬಿಜೆಪಿ ಪಕ್ಷದ ಸಭೆಗೆ ಮುಕುಲ್‍ ರಾಯ್‍ ಗೈರುಹಾಜರಾಗಿದ್ದು, ಈ ಬಗ್ಗೆ ಪ್ರಶ್ನಿಸಿದಾಗ, ಆ ಸಭೆಯ ಬಗ್ಗೆ ನನಗೆ ಮಾಹಿತಿಯನ್ನೇ ನೀಡಿಲ್ಲ. ಅದರ ಬಗ್ಗೆ ನನಗೆ ಆಸಕ್ತಿಯೇ ಇಲ್ಲ ಎಂದಿದ್ದಾರೆ. ಹಿಂದೊಮ್ಮೆ ಮಮತಾ ಬ್ಯಾನರ್ಜಿಯವರ ಬಲಗೈ ಬಂಟನಂತಿದ್ದು ಬಿಜೆಪಿಗೆ ಹಾರಿದ ಅವರು ಈಗ ಮರಳಿ ಟಿಎಂಸಿ ಕಡೆ ಹೊರಟಿದ್ದಾರೆಯೇ ಎಂಬ ಊಹಾಪೋಹಗಳಿಗೆ ಕಾರಣರಾಗಿದ್ದಾರೆ. ಅದು ಬಂಗಾಳ ರಾಜಕೀಯದಲ್ಲಿ ಮಹಾ ಪಲ್ಲಟ ಉಂಟು ಮಾಡಬಹುದಾದ, ಬಿಜೆಪಿಗೆ ಕಂಟಕ ಆಗಬಹುದಾದ ಸೂಚನೆಯೂ ಆಗಿದೆ.

ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಎರಡೂ ಈ ವಿಷಯದ ಬಗ್ಗೆ ಮೌನ ವಹಿಸಿವೆ. ಮುಕುಲ್‍ ರಾಯ್‍ ಕೂಡ ಸುಳಿವು ಬಿಟ್ಟು ಕೊಡುತ್ತಿಲ್ಲ. ಆದರೆ ಬುಧವಾರ ಸಂಜೆ ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್ ಅವರು ಈ ಕುರಿತು ಸ್ಪಷ್ಟವಾದ ಸುಳಿವನ್ನು ಕೊಟ್ಟಿದ್ದಾರೆ.

“ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ (ಮಮತಾ ಅವರ ಸೋದರಳಿಯ) ಅವರೊಂದಿಗೆ ಸಂಪರ್ಕದಲ್ಲಿರುವ ಅನೇಕ ಬಿಜೆಪಿಗರು ಮರಳಿ ಟಿಎಂಸಿಗೆ ಬರಲು ಬಯಸುತ್ತಿದ್ದಾರೆ. ಆದರೆ ಅಗತ್ಯವಿರುವ ಸಮಯದಲ್ಲಿ ಅವರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ಸೌಗತ ರಾಯ್ ಎನ್‍ಡಿಟಿವಿಗೆ ತಿಳಿಸಿದ್ದಾರೆ.

“ಅಂತಿಮ ನಿರ್ಧಾರವನ್ನು ಮಮತಾ ದೀದಿ ತೆಗೆದುಕೊಳ್ಳುತ್ತಾರೆ. ಆದರೆ ಈ ಪಕ್ಷಾಂತರಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಬೇಕಾಗಿದೆ – ಸಾಫ್ಟ್‌ಲೈನರ್‌ಗಳು ಮತ್ತು ಹಾರ್ಡ್‍ಲೈನರ್‌ಗಳು…” ಎಂದು ಅವರು ಹೇಳಿದ್ದಾರೆ.

‘ಸಾಫ್ಟ್ಲೈನರ್‌ಗಳು, ಪಕ್ಷವನ್ನು ತೊರೆದವರು, ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಅವಮಾನಿಸದವರು ಎಂದು ಅವರು ವಿವರಿಸಿದರು. ಹಾರ್ಡ್‍ಲೈನರ್‌ಗಳು ಮಮತಾರನ್ನು ಸಾರ್ವಜನಿಕವಾಗಿ ಅವಮಾನಿಸಿದವರು’ ಎಂದು ಸೌಗಾತ ಹೇಳಿದ್ದಾರೆ.

“ಪಕ್ಷಾಂತರದ ನಂತರ  ಸುವೆಂದು ಅಧಿಕಾರಿ ಮಮತಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ಮುಕುಲ್ ರಾಯ್ ಎಂದೂ ಮಮತಾರನ್ನು ಬಹಿರಂಗವಾಗಿ ನಿಂದಿಸಲಿಲ್ಲ” ಎಂದು ಸೌಗತ ರಾಯ್ ಎನ್‍ಡಿಟಿವಿಗೆ ತಿಳಿಸಿದ್ದಾರೆ.

ಈ ಹೇಳಿಕೆಯು ಮುಕುಲ್ ರಾಯ್ ಅವರಿಗೆ ಟಿಎಂಸಿಯಲ್ಲಿ ಸ್ವಾಗತವಿದೆ ಎಂಬುದನ್ನು ಸೂಚಿಸುತ್ತಿದೆ.

ಹಿಂದೊಮ್ಮೆ ಮಮತಾ ಅವರಿಗೆ ಆಪ್ತರಾಗಿದ್ದ  ಮುಕುಲ್‍ ರಾಯ್ ಅವರು 2017ರಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ ಉನ್ನತ ನಾಯಕರಾಗಿದ್ದರು. ನಂತರದ ವರ್ಷಗಳಲ್ಲಿ, ತೃಣಮೂಲ ಶಾಸಕರು ಮತ್ತು ನಾಯಕರ ನಿಷ್ಠೆಯನ್ನು ಬದಲಾಯಿಸಲು ಮನವೊಲಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ಈಗ ತೃಣಮೂಲ ಕಾಂಗ್ರೆಸ್ ಮೂಲಗಳು ಹೇಳುವಂತೆ, ಈ ನಾಯಕರಲ್ಲಿ ಕನಿಷ್ಠ 35 ಜನರು ಟಿಎಂಸಿಗೆ ವಾಪಸ್ ಬರಲು ಬಯಸುತ್ತಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಸುಬ್ರಂಗು ರಾಯ್ ಅವರ ತಾಯಿಯನ್ನು (ಮುಕುಲ್‍ ರಾಯ್‍ ಪತ್ನಿ) ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಅವರನ್ನು ಜೂನ್ 3ರಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಭೇಟಿ ಮಾಡಿದರು. ಅಭಿಷೇಕ್ ಭೇಟಿಯ ನಂತರ ನೀಡಿದ ಸಂದರ್ಶನದಲ್ಲಿ ಸುಬ್ರಂಗು ರಾಯ್‍ ಅವರು, ‘ಅಭಿಷೇಕ್‍ ಅವರ ಸೌಜನ್ಯದ ಭೇಟಿ ನನ್ನ ಮನವನ್ನು ಕಲಕಿದೆ. ಫಲಿತಾಂಶದ ನಂತರ ಅಭಿಷೇಕ್‍ ರಾಷ್ಟ್ರೀಯ ನಾಯಕರಾಗಿದ್ದಾರೆ. ನನ್ನ ನಿಜವಾದ ಮಿತ್ರ ಯಾರೆಂದು ನನಗೀಗ ಅರ್ಥವಾಗಿದೆ. ನಾನು ಮಾಡಿದ ತಪ್ಪಿನಿಂದಾಗಿ ಈಗ ನನ್ನ ತಾಯಿ ಅನಾರೋಗ್ಯಕ್ಕೆ ಈಡಾಗಿದ್ದಾರೆ’ ಎಂದು ಪಶ್ಚಾತಾಪ ಪಟ್ಟಿದ್ದಾರೆ.

ಅಭಿಷೇಕ್‍ ಭೇಟಿಯ ನಂತರ ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಸುಬ್ರಂಗು ರಾಯ್ ಅವರ ತಾಯಿಯನ್ನು ನೋಡಲು ಅವಸರದಿಂದ ಹೋದರು. ಮರುದಿನ ಬೆಳಿಗ್ಗೆ ಪಿಎಂ ಮೋದಿ ವೈಯಕ್ತಿಕವಾಗಿ ಮುಕುಲ್ ರಾಯ್ ಅವರಿಗೆ ಫೋನ್‍ ಮಾಡಿ ಅವರ ಪತ್ನಿಯ ಆರೋಗ್ಯ ವಿಚಾರಿಸಿದರು.

ಮಂಗಳವಾರ ಸುವೆಂದು ಅಧಿಕಾರಿ ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದರು. ಅದರ ನಂತರ ಪ್ರಧಾನಿ ಮೋದಿ ಅವರೊಂದಿಗೆ ಸಭೆ ನಡೆಸಲಾಯಿತು. ಪ್ರತಿ ಸಭೆಯ ನಂತರ, ಸುವೆಂದು ಅಧಿಕಾರಿಯು ಈ ಭೇಟಿಯು ಬಂಗಾಳದಲ್ಲಿ ಮತದಾನದ ನಂತರದ ಹಿಂಸಾಚಾರಕ್ಕೆ ಸಂಬಂಧಿಸಿದ ವಿಷಯದ ಚರ್ಚೆಗಷ್ಟೇ ಸಂಬಂಧಿಸಿದ್ದು ಎಂದಿದ್ದಾರೆ.

ಬಂಗಾಳ ಚುನಾವಣೆ ಫಲಿತಾಂಶದ ವಿಚಾರ ಚರ್ಚಿಸಲು ನಡೆದ ಬಂಗಾಳದ ಬಿಜೆಪಿ ಸಭೆಯಲ್ಲಿ ರಾಯ್ ಅವರ ಅನುಪಸ್ಥಿತಿಯು ಎದ್ದು ಕಂಡಿದೆ. ಹಾಗೆಯೇ ಅವರ ಮತ್ತು ಸುವೆಂದು ಅಧಿಕಾರಿಯ ನಡುವಿನ ಬಿರುಕುಗಳನ್ನೂ ಸೂಚಿಸುತ್ತಿದೆ.

ನಂದಿಗ್ರಾಮದಲ್ಲಿ ಮಮತಾರನ್ನು ಸೋಲಿಸಿದ ಸುವೆಂದು ಅವರಿಗೆ ಪಕ್ಷದಲ್ಲಿ ಪ್ರಾಮುಖ್ಯತೆಯನ್ನು ಬಂದಿದೆ. ಪ್ರತಿಪಕ್ಷದ ನಾಯಕನ ಸ್ಥಾನದ ಬಹುಮಾನ ದೊರಕಿದ್ದು ಮಾತ್ರವಲ್ಲ, ಚಂಡಮಾರುತ ಪರಿಹಾರ ಕುರಿತು ಪ್ರಧಾನಮಂತ್ರಿ ನಡೆಸಿದ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲು ಅವರನ್ನು ಆಹ್ವಾನಿಸಲಾಗಿತ್ತು.

ಸುವೆಂದು ಮುನ್ನೆಲೆಗೆ ಬಂದ ನಂತರ ಮುಕುಲ್‍ ರಾಯ್‍ ಟಿಎಂಸಿ ಕಡೆ ಒಲವು ತೋರಿಸುತ್ತಿದ್ದಾರೆ. ಟಿಎಂಸಿ ಕೂಡ ಧನಾತ್ಮಕ ಸಿಗ್ನಲ್‍ಗಳನ್ನು ನೀಡುತ್ತಿದೆ. ಇದು ಸಂಭವಿಸಿದರೆ ಬಿಜೆಪಿಗೆ ಅಲ್ಲಿ ದೊಡ್ಡ ಹೊಡೆತ ಬೀಳಬಹುದು. ಸಂಸದ ಅಭಿಷೇಕ್‍ ಬ್ಯಾನರ್ಜಿ ಹೇಳಿದಂತೆ, ಕೆಲವು ಬಿಜೆಪಿ ಶಾಸಕರು ಟಿಎಂಸಿ ಸೇರಬಹುದು. ಈ ಪ್ರಕ್ರಿಯೆ ಈಗಾಗಲೇ ತಳಮಟ್ಟದಲ್ಲಿ ಆರಂಭವಾಗಿದೆ.


ಇದನ್ನೂ ಓದಿ: ಬಂಗಾಳದಲ್ಲಿ ಟಿಎಂಸಿ ಕಡೆಗೆ ಬಿಜೆಪಿ ಕಾರ್ಯಕರ್ತರ ಮಹಾ ವಲಸೆ: ತಬ್ಬಿಬ್ಬಾದ ಬಿಜೆಪಿ ಹಿರಿಯ ಮುಖಂಡರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....