Homeಸಿನಿಮಾಕ್ರೀಡೆಸೋಲಿನ ನಡುವೆಯೂ ದಾಖಲೆಯ ಶಿಖರವೇರಿದ ಮಿಥಾಲಿ ರಾಜ್

ಸೋಲಿನ ನಡುವೆಯೂ ದಾಖಲೆಯ ಶಿಖರವೇರಿದ ಮಿಥಾಲಿ ರಾಜ್

- Advertisement -
- Advertisement -

ಭಾರತದ ಮಟ್ಟಿಗೆ ಪುರುಷರ ಕ್ರಿಕೆಟ್ ಧರ್ಮವಾದರೆ, ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರು ಎಂದೇ ಕರೆಯಲಾಗುತ್ತದೆ. ಅದರಲ್ಲಿ ಎಷ್ಟೇ ಉತ್ಪ್ರೇಕ್ಷೆಯಿದ್ದರೂ, ಜನಪ್ರಿಯ ಮಾಧ್ಯಮಗಳಲ್ಲಿ ಹಲವು ದಶಕಗಳಿಂದ ಹಾಗೆ ಬಿಂಬಿಸಿಕೊಂಡು ಬರಲಾಗುತ್ತಿದೆ. ಶತಕಗಳ ಶತಕ ಸಿಡಿಸಿದ ಸಚಿನ್ ಅವರಿಗೆ ನಿವೃತ್ತಿಯ ನಂತರದ ದಿನಗಳಲ್ಲಿ ರಾಜ್ಯಸಭಾ ಸ್ಥಾನದ ಜೊತೆಗೆ ಭಾರತ ರತ್ನ ಪ್ರಶಸ್ತಿಯನ್ನೂ ನೀಡಿ ಗೌರವಿಸಿದ್ದು ಇಂದು ಇತಿಹಾಸ. ಆದರೆ, ಪುರುಷರ ಕ್ರಿಕೆಟ್‌ಅನ್ನು ಮಾತ್ರ ಆರಾಧಿಸುವ, ಅದಕ್ಕೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವ ಭಾರತದಲ್ಲಿ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಒಂದು ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಸಚಿನ್ ಸಾಧನೆಗೆ ಸಮನಾದ ಮೈಲುಗಲ್ಲನ್ನು ದಾಟಿದ್ದಾರೆ. ಆದರೆ, ಮಹಿಳಾ ಕ್ರಿಕೆಟ್ ಲೆಜೆಂಡ್ ಎಂದೇ ಕ್ರೀಡಾಕ್ಷೇತ್ರದಲ್ಲಿ ಪರಿಚಿತರಾದ ಮಿಥಾಲಿ ರಾಜ್ ಅವರಿಗೆ ಸಚಿನ್ ತೆಂಡೂಲ್ಕರ್ ಅವರಿಗೆ ಸಿಕ್ಕ ಯಾವ ಮನ್ನಣೆಯೂ ಸಿಗದೆ ಹೋಗುತ್ತಿರುವುದು ದುರಂತ!

ಇಷ್ಟಕ್ಕೂ ಕಳೆದ ವಾರ ಪುರುಷರ ತಂಡ ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಶಿಪ್‌ನಲ್ಲಿ ಹೀನಾಯ ಸೋಲನುಭವಿಸಿತ್ತು. ಅದೇ ಹೊತ್ತಿಗೆ ಮಹಿಳಾ ಕ್ರಿಕೆಟ್ ತಂಡ ಸಹ ಇಂಗ್ಲೆಂಡ್ ತಂಡದ ವಿರುದ್ಧ ಮೂರು ಏಕದಿನ ಮತ್ತು ಟಿ-20 ಸರಣಿಗಾಗಿ ಇಂಗ್ಲೆಂಡ್‌ಗೆ ಬಂದಿಳಿದಿತ್ತು. ಮೂರು ಏಕದಿನ ಪಂದ್ಯಗಳ ಪೈಕಿ ಮೊದಲ ಎರಡು ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲನುಭವಿಸುವ ಮೂಲಕ ಸರಣಿಯನ್ನು ಕೈಚೆಲ್ಲಿತ್ತು.

ಆದರೆ, ಕೊನೆಯ ಪಂದ್ಯದಲ್ಲಿ ರನ್ ಬೆನ್ನಟ್ಟುವ ವೇಳೆ ಅರ್ಧಶತಕ ಸಿಡಿಸಿ ಒಬ್ಬಂಟಿಯಾಗಿ ಸೋಲಿನ ಅಂಚಿನಲ್ಲಿದ್ದ ತಂಡವನ್ನು ನಾಯಕಿ ಮಿಥಾಲಿ ರಾಜ್ ಗೆಲುವಿನತ್ತ ಕೊಂಡೊಯ್ದಿದ್ದರು. ಅಪರೂಪದ ಗೆಲುವೊಂದನ್ನು ತಂಡಕ್ಕೆ ದಕ್ಕಿಸಿದ್ದರು. ಅವರ ಆಟವನ್ನು ಇಡೀ ವಿಶ್ವದ ಮಾಧ್ಯಮಗಳು ಕೊಂಡಾಡಿದ್ದವು. ಇದರ ಜೊತೆಗೆ ಈ ಪಂದ್ಯದ ಮೂಲಕ ಮಹಿಳಾ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಶ್ರೇಯಕ್ಕೂ ಮಿಥಾಲಿ ಪಾತ್ರರಾಗಿದ್ದರು.

PC : Times of India

ಈ ಪಂದ್ಯದಲ್ಲಿ ಭಾರತವೇನೋ ಗೆಲುವು ಸಾಧಿಸಿತ್ತು ನಿಜ. ಆದರೆ, ಮಿಥಾಲಿ ರಾಜ್ ನಾಯಕತ್ವದಲ್ಲಿ ತಂಡದ ಇತರೆ ಅಟಗಾರರ ಕಳಪೆ ಆಟ, ತಂಡದ ಸತತ ಸೋಲು ಇದೀಗ ಚರ್ಚೆಗೆ ಗ್ರಾಸವಾಗಿದೆ. ನಾಯಕತ್ವಕ್ಕಾಗಿ ತಂಡದ ಒಳಗೆ ಶೀತಲ ಸಮರ ನಡೆಯುತ್ತಿದೆಯೇ ಎಂಬ ಸಂಶಯವನ್ನು ಮೂಡಿಸಿದೆ. ಅಲ್ಲದೆ, ಮಹಿಳಾ ಕ್ರಿಕೆಟ್ ಬಗೆಗೆ ಇದು ಚಿಂತೆಗೀಡು ಮಾಡಿದೆ.

ಮಿಥಾಲಿ ರಾಜ್ ಸಾಧನೆ ಮತ್ತು ಭಾರತದ ಕಳಪೆ ಆಟ

ಜೂನ್ 26, 1999ರಲ್ಲಿ ಐರ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡುವ ಮೂಲಕ ಕ್ರಿಕೆಟ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ 38 ವರ್ಷದ ಕ್ರಿಕೆಟರ್ ಮಿಥಾಲಿ ರಾಜ್ ಇಷ್ಟು ದೊಡ್ಡ ಸಾಧನೆ ಮಾಡುತ್ತಾರೆ ಎಂದು ಭಾಗಶಃ ಯಾರೂ ಊಹಿಸಿರಲಿಲ್ಲ.

ಕಳೆದ 22 ವರ್ಷದಲ್ಲಿ ಮಿಥಾಲಿ ರಾಜ್ ಹತ್ತಾರು ಮೈಲುಗಲ್ಲುಗಳನ್ನು ನೆಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ ಪುರುಷರ ಕ್ರಿಕೆಟ್‌ನಲ್ಲಿ ರನ್‌ಗಳ ಶಿಖರವನ್ನು ನಿರ್ಮಿಸಿದ್ದರೆ, ಮಹಿಳಾ ಕ್ರಿಕೆಟ್‌ನಲ್ಲಿ ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯದಿಂದಾಗಿ ಮಿಥಾಲಿ ರಾಜ್ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ.
ಕಳೆದ 22 ವರ್ಷಗಳ ಸುದೀರ್ಘ ಕ್ರಿಕೆಟ್ ಪಯಣದಲ್ಲಿ ಮಿಥಾಲಿ ರಾಜ್ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 10,337 ರನ್‌ಗಳನ್ನು ಗಳಿಸಿದ್ದಾರೆ. ಈ ಮೂಲಕ 10273 ರನ್‌ಗಳನ್ನು ಗಳಿಸಿ ಈವರೆಗೆ ಮೊದಲ ಸ್ಥಾನದಲ್ಲಿದ್ದ ಇಂಗ್ಲೆಂಡ್‌ನ ಶಾರ್ಲೆಟ್ ಎಡ್ವರ್ಡ್ ಅವರ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ, ಏಕದಿನ ಕ್ರಿಕೆಟ್ 6000 ರನ್ ಪೂರೈಸಿದ ಮೊದಲ ಆಟಗಾರ್ತಿ ಎಂಬ ದಾಖಲೆಯೂ ಮಿಥಾಲಿ ರಾಜ್ ಅವರ ಹೆಸರಿನಲ್ಲಿದೆ. ಇದರ ಹೊರತಾಗಿಯೂ ಏಕದಿನ ಕ್ರಿಕೆಟ್‌ನಲ್ಲಿ ಸತತ 7 ಅರ್ಧ ಶತಕ ಬಾರಿಸಿ ಅಪರೂಪದ ದಾಖಲೆಯೂ ಮಿಥಾಲಿ ರಾಜ್ ಹೆಸರಲ್ಲಿದೆ.

ಪುರುಷರ ಕ್ರಿಕೆಟ್‌ನಲ್ಲೇ ಈವರೆಗೆ ಸತತ 7 ಅರ್ಥ ಶತಕ ಬಾರಿಸಿದ ಆಟಗಾರರು ಇಲ್ಲ. ಇಂತಹ ಅಪರೂಪದ ಸಾಧನೆ ಮೂಲಕ ಮಿಥಾಲಿ ಮಹಿಳಾ ಕ್ರಿಕೆಟ್‌ನ ಗೋಡೆ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ಅವರ ಈ ಅಮೋಘ ಸಾಧನೆಯ ನಡುವೆಯೂ ಭಾರತ ಮಾತ್ರ ಸತತ ಸೋಲುಗಳನ್ನು ಕಾಣುತ್ತಿರುವುದು ವಿಪರ್ಯಾಸ.

ನಿರಂತರ ಸೋಲಿನಿಂದ ಸೊರಗಿದ ಭಾರತ ತಂಡ

ಭಾರತದ ಮಹಿಳಾ ತಂಡ ಇತರೆ ಯಾವುದೇ ತಂಡಗಳಿಗೆ ಕಡಿಮೆ ಏನಲ್ಲ. ಅತ್ಯುತ್ತಮ ಆಟಗಾರರನ್ನು ಹೊಂದಿದೆ ಮತ್ತು ಈ ಹಿಂದೆ ಅನೇಕ ಟೂರ್ನಿಗಳಲ್ಲಿ ಗೆಲುವು ಸಾಧಿಸಿದೆ.

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 2005 ಮತ್ತು 2013ರಲ್ಲಿ ಫೈನಲ್‌ಗೆ ಏರಿದ್ದ ಭಾರತ ತಂಡ ಕ್ರಮವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಸೋಲನ್ನಪ್ಪಿತ್ತು. ಇನ್ನೂ 2020ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಫೈನಲ್‌ಗೆ ಏರಿದ್ದ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋಲನ್ನನುಭವಿಸಿತ್ತು. ಇದು ಭಾರತದ ಮಹಿಳಾ ತಂಡದ ಈ ಸಾಧನೆ ಮತ್ತು ಅವರ ಆಟಕ್ಕೊಂದು ನಿದರ್ಶನವಷ್ಟೆ.

ತಂಡದಲ್ಲಿ ಆರಂಭಿಕ ಆಟಗಾರ್ತಿಯರಾಗಿ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮ ತಮ್ಮ ಹೊಡಿಬಡಿ ಆಟದಿಂದಲೇ ಹೆಸರಾದರೆ, ಮಧ್ಯಮ ಕ್ರಮಾಂಕದಲ್ಲಿ ಜಮಿಯ್ಯಾ ರೋಡಿಗ್ರಸ್, ಮಿಥಾಲಿ ರಾಜ್ ಮತ್ತು ಹರ್ಮನ್ ಪ್ರೀತ್ ಕೌರ್ ತಂಡದ ಆಧಾರಸ್ತಂಭ. ಅದರಲ್ಲೂ ಬಿರುಬೀಸಿನ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ ಮಹಿಳಾ ಟಿ20 ತಂಡದ ನಾಯಕಿಯೂ ಹೌದು.

ಬೌಲಿಂಗ್ ವಿಭಾಗದಲ್ಲಿ ಅನುಭವಿ ವೇಗದ ಬೌಲರ್ ಜುಲಾನ್ ಗೋಸ್ವಾಮಿ ತಂಡದ ಬೌಲಿಂಗ್ ಸಾರಥ್ಯ ವಹಿಸಿದರೆ, ಪೂನಂ ಯಾದವ್, ಶಿಖಾ ಪಾಂಡೆ ತಂಡದ ಉಳಿದ ಸ್ಟಾರ್ ಬೌಲರ್‌ಗಳು. ಹೀಗಾಗಿ ಭಾರತದ ಮಹಿಳಾ ತಂಡ ಕಾಗದದ ಮೇಲೆ ಅತ್ಯಂತ ಬಲಿಷ್ಟ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ,
ಕಳೆದ ಒಂದು ವರ್ಷದಲ್ಲಿ ಟಿ20 ವಿಶ್ವಕಪ್ ನಂತರ ಭಾರತ ತಂಡ ಸತತ ಸೋಲುಗಳನ್ನು ಅನುಭವಿಸುತ್ತಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.

ಕಳೆದ ಮಾರ್ಚ್ ತಿಂಗಳಲ್ಲಿ, ಮೂರು ಟಿ20 ಮತ್ತು ಐದು ಏಕದಿನ ಪಂದ್ಯಗಳ ಸರಣಿಗಾಗಿ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಭಾರತಕ್ಕೆ ಆಗಮಿಸಿತ್ತು. ತವರು ನೆಲದಲ್ಲಿ ಭಾರತ ತಂಡವನ್ನು ಮಣಿಸುವುದು ಅಷ್ಟು ಸುಲಭದ ಕೆಲಸವಲ್ಲ. ದಕ್ಷಿಣ ಆಫ್ರಿಕಾ ತಂಡವೂ ಈವರೆಗೆ ಭಾರತದಲ್ಲಿ ಸೀಮಿತ ಓವರ್‌ಗಳ ಸರಣಿ ಜಯಿಸಿದ ಉದಾಹರಣೆಗಳು ಇಲ್ಲ.

ಆದರೆ, ಮಾರ್ಚ್‌ನಲ್ಲಿ ಭಾರತ ಹೀನಾಯವಾಗಿ ಸೋಲನುಭವಿಸಿತ್ತು. 2-1 ಅಂತರದಲ್ಲಿ ಟಿ20 ಮತ್ತು 4-1 ಅಂತರದಲ್ಲಿ ಏಕದಿನ ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡ ಜಯಿಸಿತ್ತು. ಆಗಲೇ ಭಾರತದ ಮಹಿಳಾ ತಂಡದ ಮೇಲೆ ವ್ಯಾಪಕ ಟೀಕೆಗಳು ಎದುರಾದವು. ಇದೀಗ ಇಂಗ್ಲೆಂಡ್‌ನಲ್ಲೂ ಸಹ ಏಕದಿನ ಸರಣಿಯನ್ನು ಭಾರತ ತಂಡ ಕೈಚೆಲ್ಲಿದೆ. ಆದರೆ, ಈ ಎರಡೂ ಸರಣಿಯಲ್ಲಿ ಮಿಥಾಲಿ ರಾಜ್ ಉತ್ತಮ ಪ್ರದರ್ಶನ ನೀಡಿದ್ದಾರೆ. ತಂಡದ ಇತರೆ ಪ್ರಮುಖ ಆಟಗಾರರ ವೈಫಲ್ಯವೇ ತಂಡದ ಸೋಲಿಗೆ ಕಾರಣ ಎಂಬುದು ಉಲ್ಲೇಖಾರ್ಹ.

ಸೋಲಿಗೆ ಕಾರಣವಾಯ್ತೆ ನಾಯಕತ್ವಕ್ಕಾಗಿನ ಜಗಳ?

ಭಾರತದ ಸೀಮಿತ ಓವರ್‌ಗಳ ತಂಡಕ್ಕೆ ಮಿಥಾಲಿ ರಾಜ್ ಅವರೇ ನಾಯಕಿ. ಕಳೆದ ಒಂದು ದಶಕದಿಂದ ಅವರು ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಆದರೆ, ಯುವಕರಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಟಿ20ರ ವಿಶ್ವಕಪ್ ತಂಡದಲ್ಲಿ ಮಿಥಾಲಿ ರಾಜ್ ಇದ್ದರೂ ಸಹ ಅವರನ್ನು ಆಡುವ 11ರ ಬಳಗದಲ್ಲಿ ಆಡಿಸಿರಲಾಗಿಲ್ಲ. ಅಲ್ಲದೆ, ನಾಯಕತ್ವವನ್ನು ಹರ್ಮನ್ ಪ್ರೀತ್ ಕೌರ್‌ಗೆ ನೀಡಲಾಗಿತ್ತು.

ಕೊನೆಗೆ ಟಿ20 ಮಾದರಿಗೆ ಮಿಥಾಲಿ ರಾಜ್ ಒತ್ತಾಯಪೂರ್ವಕವಾಗಿ ನಿವೃತ್ತಿ ಘೋಷಿಸುವಂತೆ ಮಾಡಲಾಗಿತ್ತು. ಇದು ಹಿರಿಯ ಆಟಗಾರ್ತಿಗೆ ಆದ ಅವಮಾನ ಎಂದೇ ಮಾಧ್ಯಮಗಳು ಕಿಡಿಕಾರಿದ್ದವು. ಇದೀಗ ಏಕದಿನ ತಂಡದ ನಾಯಕತ್ವದಿಂದಲೂ ಮಿಥಾಲಿ ರಾಜ್ ಅವರನ್ನು ಹೊರಹಾಕುವ ಹುನ್ನಾರ ನಡೆಯುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ. ಈ ಚರ್ಚೆ ಮತ್ತು ತಂಡದ ಒಳ ಜಗಳ ಉಳಿದ ಆಟಗಾರ್ತಿಯರ ಪ್ರದರ್ಶನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆಯೇ ಎಂಬ ಸಂಶಯ ಇದೀಗ ಕ್ರೀಡಾಸಕ್ತರಲ್ಲಿ ಮನೆಮಾಡಿದೆ.

ಜುಲೈ 9ರಿಂದ ಆರಂಭವಾಗುವ ಟಿ20 ಸರಣಿಯ ಮೇಲೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ. ಏಕದಿನ ಸೋಲಿನ ಸೇಡನ್ನು ಭಾರತ ಮಹಿಳಾ ತಂಡ ಟಿ20ನಲ್ಲಿ ತೀರಿಸಿಕೊಳ್ಳಲಿದೆಯೇ ಎಂಬ ಮಾತುಗಳೂ ಕೇಳಿಬರುತ್ತಿವೆ. ಒಟ್ಟಾರೆ ಭಾರತ ಈ ಸರಣಿಯಲ್ಲಾದರೂ ಗೆಲುವು ಸಾಧಿಸಲಿ ಎಂಬುದೇ ಎಲ್ಲರ ಆಶಯ.


ಇದನ್ನೂ ಓದಿ: ವಿಂಬಲ್ಡನ್ ಟೆನಿಸ್ ಟೂರ್ನಿ ಆರಂಭ; ಇಲ್ಲ ಭಾರತದ ಪ್ರಾತಿನಿಧ್ಯ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...