ದೆಹಲಿಯ ಹಳೆಯ ನಂಗಲ್ ಸ್ಮಶಾನದಲ್ಲಿ ದಲಿತ ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ ಮತ್ತು ಪೋಷಕರ ಒಪ್ಪಿಗೆಯಿಲ್ಲದೆ ಅಂತ್ಯಸಂಸ್ಕಾರ ಮಾಡಿದ ಪ್ರಕರಣವನ್ನು ತ್ವರಿತ ತನಿಖೆಗಾಗಿ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ. ದೆಹಲಿಯ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ಪ್ರಕರಣದ ವರ್ಗಾವಣೆಗೆ ಆದೇಶ ನೀಡಿದ್ದಾರೆ.
ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೃತ ಅಪ್ರಾಪ್ತ ಬಾಲಕಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಪ್ರಕರಣವನ್ನು ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿ, ಹತ್ತು ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದರು.
“ನಮ್ಮ ಮೃತ ಬಾಲಕಿ ಮರಳಿ ಬರಲಾರಳು. ಕುಟುಂಬಕ್ಕೆ ಆಗಿರುವ ಅನ್ಯಾಯ ದುರದೃಷ್ಟಕರ. ಕುಟುಂಬಕ್ಕೆ ಆಗಿರುವ ಹಾನಿಯನ್ನು ಸರಿದೂಗಿಸಲು ಸಾಧ್ಯವಿಲ್ಲ, ಆದರೆ ಸರ್ಕಾರವು ಅವರಿಗೆ 10 ಲಕ್ಷ ರೂಪಾಯಿಗಳನ್ನು ಪರಿಹಾರ ನೀಡುತ್ತಿದೆ. ಜೊತೆಗೆ ಈ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸುತ್ತಿದೆ” ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದರು.
ಇದನ್ನೂ ಓದಿ: ದಲಿತರ ಮಗಳು ಕೂಡ ದೇಶದ ಮಗಳು: ದೆಹಲಿ ಅತ್ಯಾಚಾರ ಕೊಲೆಗೆ ರಾಹುಲ್ ಗಾಂಧಿ ಆಕ್ರೋಶ
“ಸರ್ಕಾರವು ಪ್ರಕರಣವನ್ನು ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಆದೇಶಿಸುತ್ತದೆ. ಉನ್ನತ ವಕೀಲರನ್ನು ನೇಮಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತದೆ” ಎಂದು ಮುಖ್ಯಮಂತ್ರಿ ಹೇಳಿದ್ದರು.
ಘಟನೆಯ ಹಿನ್ನೆಲೆ: ದೆಹಲಿಯ ಮೋಹನ್ ಲಾಲ್ ಮತ್ತು ಸುನೀತಾ ದೇವಿ ಎಂಬ ದಂಪತಿಗಳು ದಂಪತಿಗಳು 9 ವರ್ಷದ ಮಗಳೊಂದಿಗೆ ಹಳೆಯ ನಂಗಲ್ ಗ್ರಾಮದಲ್ಲಿ ಶ್ಮಶಾನದ ಮುಂಭಾಗದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಭಾನುವಾರ ಸಂಜೆ 5.30ರ ಸಮಯಕ್ಕೆ ಶ್ಮಶಾನದಲ್ಲಿನ ಕೂಲರ್‌ನಲ್ಲಿ ನೀರು ತರಲು ಅಪ್ರಾಪ್ತ ಬಾಲಕಿ ಹೋಗಿದ್ದಳು. ಆದರೆ ಸಂಜೆ 6 ಗಂಟೆಯಾದರೂ ವಾಪಸ್ ಬಂದಿರಲಿಲ್ಲ. ಅದೇ ಸಮಯಕ್ಕೆ ಶ್ಮಶಾನದಲ್ಲಿನ ಪೂಜಾರಿ ಮತ್ತು ಇತರರು ಸುನೀತಾ ದೇವಿಯವರನ್ನು ಕರೆದು ಅವರ ಮಗಳ ಮೃತದೇಹ ತೋರಿಸಿ ನೀರು ತರುವಾಗ ಕರೆಂಟ್ ಷಾಕ್ ತಗಲಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ.
ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದರೆ ಅವರು ಪೋಸ್ಟ್ ಮಾರ್ಟಂ ಮಾಡುತ್ತಾರೆ, ನಿಮ್ಮ ಮಗಳ ದೇಹವನ್ನು ಛಿದ್ರ ಛಿದ್ರ ಮಾಡುತ್ತಾರೆ. ಹಾಗಾಗಿ ಬೇಗನೇ ಶವಸಂಸ್ಕಾರ ಮಾಡೋಣ ಎಂದು ತಾಯಿ ಬಳಿ ಹೆದರಿಸಿದರು. ಕಾನೂನಿನಿಂದ ತಪ್ಪಿಸಿಕೊಳ್ಳಲು ನಮ್ಮ ಒಪ್ಪಿಗೆ ಪಡೆಯದೇ ಬಲವಂತವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಸಂತ್ರಸ್ತ ಪೋಷಕರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಂತರ ಈ ಪ್ರಕರಣದ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಸ್ಥಳ ತಲುಪುವ ವೇಳೆಗೆ ಮೃತ ಬಾಲಕಿಯ ಸುಟ್ಟ ಕಾಲುಗಳು ಮಾತ್ರ ಸಿಕ್ಕಿವೆ. ಸ್ಥಳೀಯರಿಂದ ಪ್ರತಿಭಟನೆ ನಡೆದ ನಂತರ ಪೊಲೀಸರು FSL ತಂಡವನ್ನು ಕರೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಪೂಜಾರಿ ಸೇರಿದಂತೆ ಇತರ ಮೂವರ ಮೆಲೆ FIR ದಾಖಲಿಸಿ, ಬಂಧಿಸಿದ್ದಾರೆ. ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕರು ದಲಿತ ಬಾಲಕಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ದೆಹಲಿ: ದಲಿತ ಅಪ್ರಾಪ್ತೆ ಅತ್ಯಾಚಾರ, ಕೊಲೆ ಪ್ರಕರಣ, ಮ್ಯಾಜಿಸ್ಟೀರಿಯಲ್ ತನಿಖೆಗೆ ಕೇಜ್ರಿವಾಲ್ ಆದೇಶ



Dear editor Nanu Gauri..
Hope u keep good sence before editing..may be u received same explanation from Delhi authorities..still reporters should find deep in sensitive matters instead mentioning wrong victims..as POOJARI of smashan,instead write their name.
The poojari name is SALEEM AHEMAD AND SIX OTHERS GANG RAPED..u could have mentioned MULLA instead POOJARI..
Kindly be honest atleast to urself..