Homeಅಂಕಣಗಳುಬಹುಜನ ಭಾರತ; ಮನುವಾದ ಸುಣ್ಣವಾದರೆ ತಾಲಿಬಾನ್ ಬೆಣ್ಣೆ ಹೇಗಾದೀತು?

ಬಹುಜನ ಭಾರತ; ಮನುವಾದ ಸುಣ್ಣವಾದರೆ ತಾಲಿಬಾನ್ ಬೆಣ್ಣೆ ಹೇಗಾದೀತು?

- Advertisement -
- Advertisement -

ನಿರಂತರ ಬಾಹ್ಯ ಮತ್ತು ಆಂತರಿಕ ದಾಳಿಗಳಿಗೆ ಗುರಿಯಾಗುತ್ತಲೇ ಬಂದಿರುವ ಪುಟ್ಟ ದೇಶ ಅಫ್ಘಾನಿಸ್ತಾನ. ಯಾರೂ ಗೆಲ್ಲಲಾಗದ ನೆಲವೆಂಬ ಪ್ರತೀತಿ. ’ಸಾಮ್ರಾಜ್ಯಗಳ ಸಮಾಧಿ’ ಎಂದೇ ಇತಿಹಾಸ ಪ್ರಸಿದ್ಧ ದಾಳಿಕೋರರ, ಧರ್ಮಾಂಧರ, ಭಯೋತ್ಪಾದಕರ, ಅತೀವ ಬಡತನ, ಭ್ರಷ್ಟಾಚಾರದ ತಿರುಗಣಿಗೆ ಸಿಲುಕಿ ನಲುಗಿರುವ ನತದೃಷ್ಟ ನಾಡು.

ಮೂರೂಕಾಲು ಕೋಟಿಯ ಪೈಕಿ ಶೇ.99.7ರಷ್ಟು ಜನ ಇಸ್ಲಾಮ್ ಅನುಯಾಯಿಗಳು. ಇಸ್ಲಾಮ್ ಕಾಲಿಟ್ಟ ಹೊತ್ತಿನಲ್ಲಿ ಈ ದೇಶದ ಬಹುಸಂಖ್ಯಾತರು ಬೌದ್ಧರು ಮತ್ತು ಜರತುಷ್ಟ್ರರು.

ಎರಡನೆಯ ವಿಶ್ವಯುದ್ಧದ ನಂತರ ಸೂಪರ್ ಪವರ್‌ಗಳ ನಡುವಣ ಶೀತಲಯುದ್ಧಕ್ಕೆ ಬಲಿಯಾಯಿತು ಈ ದೇಶ. ರಷ್ಯಾ ಅಮೆರಿಕೆಯ ನಡುವಣ ಮೇಲಾಟದ ವಸಾಹತು ಆಯಿತು. ಪರಿಣಾಮವಾಗಿ ಧರ್ಮಾಂಧರು-ಭಯೋತ್ಪಾದಕರು ತಲೆಯೆತ್ತಿದರು. ಎಲ್ಲೆಡೆ ಪುರುಷಾಧಿಪತ್ಯದ ಕ್ರೌರ್ಯಕ್ಕೆ ಸಿಲುಕಿರುವ ಮಹಿಳೆಯ ಸ್ಥಿತಿ ಈ ನೆಲದಲ್ಲಿ ದುಸ್ಥಿತಿಯ ತಳಾತಳವನ್ನು ಮುಟ್ಟಿತು.

ಸೋವಿಯತ್ ಆಕ್ರಮಣದ ವಿರುದ್ಧ ಮುಜಾಹಿದೀನ್ ಧರ್ಮಾಂಧ ಶಕ್ತಿಗಳನ್ನು ಅಮೆರಿಕ ಮತ್ತು ಪಾಕಿಸ್ತಾನ ಎತ್ತಿಕಟ್ಟಿ ಬೆಳೆಸಿದವು. ಅಮೆರಿಕನ್ ಆಕ್ರಮಣದ ವಿರುದ್ಧ ಪಾಕಿಸ್ತಾನದ ಗುಪ್ತ ಕುಮ್ಮಕ್ಕಿನೊಂದಿಗೆ ತಲೆಯೆತ್ತಿದ್ದು ತಾಲಿಬಾನ್. ತಾಲಿಬಾನ್ ಎಂದರೆ ಪಶ್ತೋ ಭಾಷೆಯಲ್ಲಿ ವಿದ್ಯಾರ್ಥಿಗಳು ಎಂದರ್ಥ. 1990ರ ದಶಕದಲ್ಲಿ ಉತ್ತರ ಪಾಕಿಸ್ತಾನದಲ್ಲಿ ಹೊಮ್ಮಿದ ಧಾರ್ಮಿಕ ಆಂದೋಲನವಿದು. ಸೌದಿ ಅರೇಬಿಯಾದ ಹಣದ ನೆರವಿನಿಂದ ನಡೆದ ಸುನ್ನಿ ಇಸ್ಲಾಮ್ ಕಟ್ಟರ್‌ವಾದವನ್ನು ಬೋಧಿಸುವ ಮಠ. ತನ್ನ ಮೂಲ ಅರ್ಥವನ್ನು ಕಳೆದುಕೊಂಡ ತಾಲಿಬಾನ್ ಪದ ಕಾಲಕ್ರಮೇಣ ಗಳಿಸಿಕೊಂಡ ಕುಖ್ಯಾತ ಅರ್ಥವ್ಯಾಪ್ತಿಯೇ ಬೇರೆ.

1996-2001ರ ಅವಧಿಯತಾಲಿಬಾನ್ ಆಡಳಿತ ಮತ್ತು ಆನಂತರ ಪದಚ್ಯುತಿಯ 20 ವರ್ಷಗಳ ಕಾಲ ನಡೆಸಿದ ಬರ್ಬರ ದಾಳಿಗಳ ದುಃಸ್ವಪ್ನಗಳಿಂದ ಆಪ್ಘನ್ ಜನತೆ ಭಯಭೀತಗೊಂಡಿದೆ. ಶಿಕ್ಷಣ, ಉದ್ಯೋಗ, ರಾಜಕಾರಣ ಮುಂತಾದ ಸಾರ್ವಜನಿಕ ಬದುಕಿನಿಂದ ಅದೃಶ್ಯರಾಗಿ ನಾಲ್ಕು ಗೋಡೆಗಳ ನಡುವೆ ಬದುಕಬೇಕಿರುವ ಮಹಿಳೆಯರ ಸ್ಥಿತಿ ದಾರುಣ.

ಶರಿಯಾ ಕಾನೂನುಗಳ ಪ್ರಕಾರ ಸಾರ್ವಜನಿಕ ಮರಣದಂಡನೆ ನೀಡುವ, ಅಂಗಾಂಗಗಳನ್ನು
ಕತ್ತರಿಸುವ ಶಿಕ್ಷೆಗಳು, ಗಂಡಸರು ಗಡ್ಡ ಬೆಳೆಸಬೇಕೆಂಬ ನಿರ್ಬಂಧ ಹೇರಲಾಯಿತು. ಸಿನೆಮಾ, ಟೀವಿ, ಸಂಗೀತವನ್ನು ನಿಷೇಧಿಸಲಾಯಿತು. ಉಡುಗೆತೊಡುಗೆಗಳ ವಿಧಿ ನಿಷೇಧಗಳೂ ಜಾರಿಗೆ ಬಂದವು. ಅಡಿಯಿಂದ ಮುಡಿತನಕ ಬಲವಂತದ ಬುರ್ಖಾ ಧಾರಣೆ, ಗಂಡಸು ಜೊತೆಗಿಲ್ಲದೆ ಹೊಸ್ತಿಲು ದಾಟಕೂಡದು ಮುಂತಾದ ಹತ್ತು ಹಲವು ಅಮಾನವೀಯ ನಿರ್ಬಂಧಗಳನ್ನು ಹೆಣ್ಣುಮಕ್ಕಳ ಮೇಲೆ ವಿಧಿಸಲಾಯಿತು. ಹತ್ತು ವರ್ಷ ದಾಟಿದ ಹೆಣ್ಣುಮಕ್ಕಳು ಶಾಲೆಗೆ ಹೋಗುವುದು ನಿಷಿದ್ಧವೆಂದು ಸಾರಲಾಯಿತು. ಮಾನವೀಯ ಹಕ್ಕುಗಳನ್ನು ತುಳಿಯಲಾಯಿತು. ಸಾಂಸ್ಕೃತಿಕ ಬರ್ಬರತೆ ಮೆರೆಯಿತು. ಅಂತಾರಾಷ್ಟ್ರೀಯ ಆಕ್ರೋಶವನ್ನೂ ಲೆಕ್ಕಿಸದೆ ಬಾಮಿಯಾ ಕಣಿವೆಯಲ್ಲಿ ಕೊರೆಯಲಾಗಿದ್ದ ಆರನೆಯ ಶತಮಾನದ ಬೃಹತ್ ಬುದ್ಧ ಪ್ರತಿಮೆಗಳನ್ನು ಫಿರಂಗಿಗಳಿಂದ ಸಿಡಿಸಿ ನಾಶಮಾಡಲಾಯಿತು. ಧಾರ್ಮಿಕ ಅಲ್ಪಸಂಖ್ಯಾತರಾದ ಶಿಯಾ ಮುಸಲ್ಮಾನರು ನಿರಂತರ ಹತ್ಯೆಗೆ ಈಡಾದರು. ಧಾರ್ಮಿಕ ಅಲ್ಪಸಂಖ್ಯಾತರಾದ ಹಿಂದೂಗಳು ಮತ್ತು ಸಿಖ್ಖರ ಮೇಲಿನ ದಾಳಿಗಳು ನಿರಂತರವಾದವು. ಅವರ ಪ್ರಮಾಣ ನಶಿಸುತ್ತಲೇ ಹೋಯಿತು.

ಇದೀಗ ಪುನಃ ಆಡಳಿತ ಸೂತ್ರ ಹಿಡಿದಿರುವ ತಾಲೀಬಾನ್ ಇಸ್ಲಾಮಿಕ್ ಕಾನೂನುಗಳ ಚೌಕಟ್ಟಿನಲ್ಲೇ ಆಡಳಿತ ನಡೆಸುವುದಾಗಿ ಸಾರಿದೆ. ಆದರೆ ಹಳೆಯ ಅನುಭವಗಳ ಮೇರೆಗೆ ಮೆದು ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದಿದೆ. ವರ್ಚಸ್ಸು ಸುಧಾರಿಸಿಕೊಳ್ಳುವ ಕಸರತ್ತಿನಲ್ಲಿ ತೊಡಗಿದೆ. ಕ್ಷಮಾದಾನ, ಮೀಡಿಯಾ ಸ್ವಾತಂತ್ರ್ಯ, ಮಹಿಳೆಯರ ಹಕ್ಕುಗಳ ಬಗ್ಗೆ ಮಾತಾಡತೊಡಗಿದೆ. ಆದರೆ ಬಾಯಲ್ಲಿನ ಬೆಣ್ಣೆಗಿಂತ ಬಗಲಲ್ಲಿನ ದೊಣ್ಣೆಯೇ ಸತ್ಯವೆಂಬುದು ಹಳೆಯ ಅನುಭವ.

ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ಅಪ್ಘಾನಿಸ್ತಾನವನ್ನು ಧರ್ಮಾಂಧತೆಯ ಸಂಕೋಲೆಗಳಲ್ಲಿ ಮತ್ತಷ್ಟು ಬಿಗಿಯಾಗಿ ಬಂಧಿಸಿದ್ದು ಅಮೆರಿಕ ಮತ್ತು ಪಾಕಿಸ್ತಾನ. ವಿಶೇಷವಾಗಿ ಪಾಕಿಸ್ತಾನದ ಬೆಂಬಲವಿಲ್ಲದೆ ಹೋಗಿದ್ದರೆ ತಾಲಿಬಾನ್‌ಗಳ ಈಗಿನ ಗೆಲುವು ಇಷ್ಟು ಸಲೀಸಾಗಿರುತ್ತಿರಲಿಲ್ಲ. ಆಫ್ಘನ್‌ತಾಲಿಬಾನ್ ಮುಖವಾಡ ತೊಟ್ಟ ಪಾಕಿಸ್ತಾನಿ ಆಕ್ರಮಣವಿದು ಎಂಬ ಸತ್ಯ ದಿನದಿಂದ ದಿನಕ್ಕೆ ಹೆಚ್ಚು ನಿಚ್ಚಳವಾಗತೊಡಗಿದೆ. ತಾಲೀಬಾನನ್ನು ಅದು ಹುಟ್ಟಿದಾಗಿನಿಂದ ಸತತ ಪೊರೆಯುತ್ತ ಬಂದಿರುವ ದೇಶವಿದು.

ವಿಶ್ವದ ಶೇ.90ರಷ್ಟು ಅಫೀಮು- ಹೆರಾಯಿನ್ ಮಾದಕ ವಸ್ತುಗಳ ತವರು ಅಫ್ಘಾನಿಸ್ತಾನ. ಈ ಅಫೀಮು ದೈತ್ಯನ ಮೀರಿಸುವ ಮತ್ತೊಬ್ಬ ಮಾದಕದ್ರವ್ಯ ಎದುರಾಳಿ ಅಫ್ಘಾನಿಸ್ತಾನದಲ್ಲೇ ಮೈ ತಳೆಯುತ್ತಿದ್ದಾನೆ. ಅವನ ಹೆಸರು ಮೆಥಾಂಫೆಟಾಮೈನ್ (Methamphetamine). ನೇರವಾಗಿ ಮನುಷ್ಯ ದೇಹದ ನರಮಂಡಲ ವ್ಯವಸ್ಥೆಯ ಕೇಂದ್ರಕ್ಕೇ ಲಗ್ಗೆ ಹಾಕಿ ಮರಗಟ್ಟಿಸುವ ಮಾದಕದ್ರವ್ಯ. ಪರಮ ಅಂಟಿನ ನಂಟು. ಚಟ ಅಂಟಿದರೆ ಮರಣವೇ ಬಿಡುಗಡೆಯ ಬಾಗಿಲು. ಮೆಥ್, ಬ್ಲೂ, ಐಸ್, ಕ್ರಿಸ್ಟಲ್-ಗ್ಲ್ಯಾಸ್ ಎಂದೂ ವ್ಯಸನಲೋಕದಲ್ಲಿ ಜನಜನಿತ.
ಅಫ್ಘಾನ್ ಅಫೀಮು ಉದ್ಯಮದ ಸೊಂಟ ಮುರಿಯುವ ಅಮೆರಿಕೆಯ ಪಣ ಈಡೇರಲಿಲ್ಲ. ಬದಲಾಗಿ 2001-2018ರ ನಡುವಣ ಅವಧಿಯಲ್ಲಿ ಈ ಉದ್ಯಮ ನಾಲ್ಕು ಪಟ್ಟು ಹೆಚ್ಚಿತು. ಇದೀಗ ಭಯಾನಕ ಮೆಥ್ ಆಯಾಮವೂ ಸೇರಿಕೊಂಡಿದೆ. ಹಲವು ಪ್ರತಿಕೂಲಗಳ ಕಾರಣ ಈ ವಲಯದ ಮೆಥ್ ಉತ್ಪಾದನಾ ಕೇಂದ್ರ ಇರಾನಿನಿಂದ ಅಫ್ಘಾನ್‌ಗೆ ವರ್ಗವಾಯಿತು.

2018ರಲ್ಲಿ ವಿಪರೀತ ಉತ್ಪಾದನೆಯ ಕಾರಣ ಅಫೀಮು ದರ ಭಾರೀ ಕುಸಿತಎದುರಿಸಿತು. ಪರ್ಯಾಯ ಆದಾಯದ ದಾರಿಯಾಗಿ ತೆರೆದುಕೊಂಡದ್ದು ಮೆಥ್ ಉತ್ಪಾದನೆ. ಈ ಉತ್ಪಾದನೆಗೆ ಬೇಕಿರುವ ಮುಖ್ಯ ರಾಸಾಯನಿಕ ಎಫಿಡ್ರೈನ್. ಅಫ್ಘಾನಿಸ್ತಾನದಲ್ಲಿ ತಂತಾನೇ ಕಳೆಯಾಗಿ ಬೆಳೆಯುವ ಸಸ್ಯ ಎಫಿಡ್ರಾದಿಂದ ಹೇರಳ ಪ್ರಮಾಣದ ಎಫಿಡ್ರೈನ್ ಉತ್ಪಾದಿಸಬಹುದು. ಎಫಿಡ್ರೈನ್ ರಾಸಾಯನಿಕವನ್ನು ಆಮದು ಮಾಡಿಕೊಳ್ಳುವ ಗೊಡವೆಯೇ ಇಲ್ಲ. ಈ ಕಾರಣದಿಂದಾಗಿ ಆಫ್ಘನ್ ಮೆಥ್ ಮಾರಾಟ ದರಗಳು ಅತಿ ಅಗ್ಗವೆನಿಸಿದವು. ಶತಕೋಟಿ ಡಾಲರುಗಳ ಮೌಲ್ಯದ ಮೆಥ್ ತಯಾರಿಸುವ ಪ್ರಯೋಗಶಾಲೆಗಳು ಸಾವಿರಾರು ಸಂಖ್ಯೆಯಲ್ಲಿ ತಲೆಯೆತ್ತಿದವು. ಅಫೀಮು ಹೆರಾಯಿನ್ ಜೊತೆಗೆ ಮೆಥ್ ಎಂಬ ಈ ಘೋರ ದ್ರವ್ಯ ಅಫ್ಘಾನಿಸ್ತಾನದಿಂದ ಹೊರಬಿದ್ದು ವಿಶ್ವದ ನಾನಾ ದೇಶಗಳಿಗೆ ಕಳ್ಳಸಾಗಣೆಯಾಗುತ್ತಿದೆ. ಅಮೆರಿಕನ್ ಪಡೆಗಳ ನಿರ್ಗಮನ ಈ ’ಉದ್ಯಮ’ಕ್ಕೆ ರೆಕ್ಕೆಗಳನ್ನು ಹಚ್ಚುವುದು ನಿಶ್ಚಿತ.

ಅಫೀಮಿನ ಜೊತೆಜೊತೆಗೆ ಎಫಿಡ್ರಾ ಮತ್ತು ಮೆಥ್ ಮೇಲಿನ ತೆರಿಗೆಯ ಮೂಲಕ ತಾಲೀಬಾನ್ ಅಪಾರ ಆದಾಯವನ್ನು ಸಂಗ್ರಹಿಸುತ್ತಿದೆ. ಪೆಟ್ರೋಲಿಯಂ ಇಂಧನಗಳು, ಸರಕು ಸಾಗಾಣಿಕೆಯ ಮೇಲೆ ತೆರಿಗೆ
ಹೇರಿಕೆ ಹಾಗೂ ಅಮೂಲ್ಯ ಖನಿಜಗಳ ಗಣಿಗಾರಿಕೆ ಕೂಡತಾಲಿಬಾನ್‌ಗೆ ಭಾರೀ ಆದಾಯ ಮೂಲಗಳಾಗಿವೆ. ಇದೆಲ್ಲ ಆದಾಯದ ಗುರಿ ಶಸ್ತ್ರಾಸ್ತ್ರ ಖರೀದಿ ಮತ್ತು ಶರಿಯಾ ಆಡಳಿತ ಜಾರಿ.

ಖುರಾನಿನ ಪ್ರಕಾರ ಅಮಲು ಅಥವಾ ನಶೆಯ ಪದಾರ್ಥಗಳ ಸೇವನೆ ನಿಷಿದ್ಧ. ಆದರೆ ಶರಿಯಾ ಕಾನೂನಿನ ಮಾತಾಡುವತಾಲಿಬಾನ್‌ಗೆ ಅದರ ಪರಿವೆಯಿಲ್ಲ. ಗುರಿ ಸಾಧನೆಗಾಗಿ ಅಡ್ಡದಾರಿ ಹಿಡಿಯಲು ಹೇಸಿಗೆಯಿಲ್ಲ.

ಮಹಿಳೆಯರು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಪೀಡಿಸುವ ಮನುವಾದಿಗಳು ಮತ್ತು ಧರ್ಮಾಂಧ ತಾಲಿಬಾನಿಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ. ಅಮೆರಿಕನ್ ಸಾಮ್ರಾಜ್ಯಶಾಹಿಯ ವಿರೋಧಕ್ಕಾಗಿಯೋ, ಇಸ್ಲಾಮಿನ
ಸಮರ್ಥನೆಗಾಗಿಯೋ ಇಂತಹ ಮತಾಂಧ ಶಕ್ತಿಗಳನ್ನು ಸಮರ್ಥಿಸಿಕೊಳ್ಳುವುದು ತರವಲ್ಲ.


ಇದನ್ನೂ ಓದಿ: ಬಹುಜನ ಭಾರತ; ದಲಿತ ದ್ವೇಷವನ್ನು ಪ್ರತಿಭೆಯಿಂದ ಗೆದ್ದವರು ಪಲ್ವಂಕರ್ ಸೋದರರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರಾಖಂಡ| ದಲಿತ ಪತ್ರಕರ್ತನಿಗೆ ಕಸ್ಟಡಿ ಚಿತ್ರಹಿಂಸೆ; ಅಕ್ರಮವಾಗಿ ಕಟ್ಟಡ ಧ್ವಂಸ ಆರೋಪ

ಸ್ಥಳೀಯ ಪೊಲೀಸರು ಕಸ್ಟಡಿಯಲ್ಲಿ ನನಗೆ ಚಿತ್ರಹಿಂಸೆ ನೀಡಿ ಜಾತಿ ಆಧಾರಿತ ದೌರ್ಜನ್ಯ ನಡೆಸಿದ್ದಾರೆ. ನನ್ನ ಕಟ್ಟಡವನ್ನು ಅಕ್ರಮವಾಗಿ ಕೆಡವಿದ್ದಾರೆ ಎಂದು ಉತ್ತರಾಖಂಡ ರಾಜ್ಯದ ಉಧಮ್ ಸಿಂಗ್ ನಗರ ಜಿಲ್ಲೆಯ ಬಾಜ್‌ಪುರದ ದಲಿತ ಪತ್ರಕರ್ತರೊಬ್ಬರು...

ಲೈಂಗಿಕ ಅಪರಾಧಿ ‘ಎಪ್ಸ್ಟೀನ್’ನದ್ದು ಆತ್ಮಹತ್ಯೆಯಲ್ಲ, ಕತ್ತು ಹಿಸುಕಿದ ಪರಿಣಾಮ ಸಾವನ್ನಪ್ಪಿದ್ದಾನೆ: ವೈದ್ಯ ಮೈಕೆಲ್ ಬಾಡೆನ್ ಹೇಳಿಕೆ

ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೈಲಿನಲ್ಲಿದ್ದಾಗ 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನೆಂದು ಘೋಷಿಸಲಾಗಿತ್ತು. ಆದರೆ, ಆತನ ಸಾವಿನ ಕುರಿತಾದ ಚರ್ಚೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಆತನ ಜೈಲಿನ ಕೋಣೆಯಲ್ಲಿ ನೇಣು ಬಿಗಿದುಕೊಂಡು...

ದೆಹಲಿ ಗಾಳಿಯನ್ನು ‘ಗ್ಯಾಸ್ ಚೇಂಬರ್’ಗೆ ಹೋಲಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್

ದೆಹಲಿಯ ವಾಯು ಮಾಲಿನ್ಯವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ "ಗ್ಯಾಸ್ ಚೇಂಬರ್" ಗೆ ಹೋಲಿಸಿದ್ದಾರೆ. ರಾಜ್ಯಾದ್ಯಂತ ಅಭಿವೃದ್ಧಿ ಕಾರ್ಯಗಳು ಮುಂದುವರಿದಿದ್ದು ಉತ್ತರ ಪ್ರದೇಶದ ಜನರು ಸ್ವಚ್ಛ ವಾತಾವರಣದಲ್ಲಿ ವಾಸಿಸುವ ಅದೃಷ್ಟಶಾಲಿಗಳಾಗಿದ್ದಾರೆ...

‘ಫುಡ್ ಜಿಹಾದ್’ ಆರೋಪಿಸಿ ತೆಲುಗು ಯೂಟ್ಯೂಬ್ ಚಾನೆಲ್‌ನಿಂದ ಮುಸ್ಲಿಂ ವ್ಯಾಪಾರಿಗಳಿಗೆ ಕಿರುಕುಳ

ಬಡ ಬನ್ ವ್ಯಾಪಾರಿಯೊಬ್ಬರಿಗೆ ಯೂಟ್ಯೂಬ್ ಚಾನೆಲ್ ತಂಡದ ಹೆಸರಿನಲ್ಲಿ ಗುಂಪೊಂದು ಕಿರುಕುಳ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೆಲಂಗಾಣದ ಮುಲುಗು ಜಿಲ್ಲೆಯ ಪ್ರಮುಖ ಬುಡಕಟ್ಟು ಹಬ್ಬವಾದ ಸಮಕ್ಕ ಸಾರಲಮ್ಮ ಜಾತ್ರೆಯಲ್ಲಿ ಕೋವಾ...

‘ಫಾರ್ಮ್ 7’ ಮೂಲಕ ಮುಸ್ಲಿಂ ಮತಗಳನ್ನು ಸಾಮೂಹಿಕವಾಗಿ ತೆಗೆದುಹಾಕಲು ಬಿಜೆಪಿ-ಅಧಿಕಾರಿಗಳು ಸಂಚು ರೂಪಿಸಿದ್ದಾರೆ: ಮುಸ್ಲಿಂ ಲೀಗ್ ಆರೋಪ

ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಏಳು ವ್ಯಕ್ತಿಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಫಾರ್ಮ್ 7 ಅರ್ಜಿಗಳನ್ನು ನೀಡಿದ್ದು, "ಕಾಸರಗೋಡು ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಜೊತೆ ಸಹಕರಿಸಿದ ಅಧಿಕಾರಿಗಳು,...

ಖಲಿಸ್ತಾನಿ ಪ್ರತ್ಯೇಕತಾವಾದಿ ಪನ್ನುನ್ ಹತ್ಯೆ ಸಂಚು ಪ್ರಕರಣ : ಅಮೆರಿಕ ನ್ಯಾಯಾಲಯದಲ್ಲಿ ನಿಖಿಲ್ ಗುಪ್ತಾ ತಪ್ಪೊಪ್ಪಿಗೆ

ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆ ಸಂಚಿನ ಪ್ರಕರಣದಲ್ಲಿ ಪ್ರಮುಖ ಆರೋಪಿ ನಿಖಿಲ್ ಗುಪ್ತಾ ಅಮೆರಿಕದ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಭಾರತೀಯ ಪ್ರಜೆಯಾದ ನಿಖಿಲ್ ಗುಪ್ತಾ, ನ್ಯೂಯಾರ್ಕ್‌ನಲ್ಲಿ ಪನ್ನುನ್ ಹತ್ಯೆಗೆ ಸಂಚು...

ಚುನಾವಣಾ ಟ್ರಸ್ಟ್‌ಗಳಿಂದ ರೂ. 3,157.6 ಕೋಟಿ ಪಡೆದ ಬಿಜೆಪಿ: ಎಡಿಆರ್‌

2024–25ರ ಹಣಕಾಸು ವರ್ಷದಲ್ಲಿ ಚುನಾವಣಾ ಟ್ರಸ್ಟ್‌ಗಳು ವಿತರಿಸಿದ ರೂ. 3,826.3 ಕೋಟಿಗಳಲ್ಲಿ ಭಾರತೀಯ ಜನತಾ ಪಕ್ಷವು ಶೇ. 82 ಕ್ಕಿಂತ ಹೆಚ್ಚು ಹಣವನ್ನು ಪಡೆದುಕೊಂಡಿದೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌)...

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ : ಪಿಯೂಷ್ ಗೋಯಲ್-ರಾಹುಲ್ ಗಾಂಧಿ ನಡುವೆ ವಾಕ್ಸಮರ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಪಿಯೂಷ್ ಗೋಯಲ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವೆ ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ತೀವ್ರ ವಾಕ್ಸಮರ ನಡೆದಿದೆ. ಶುಕ್ರವಾರ...

ಮೀರತ್‌| ‘ಲವ್ ಜಿಹಾದ್’ ಆರೋಪದ ಮೇಲೆ ಮುಸ್ಲಿಂ ಜಿಮ್ ಟ್ರೈನರ್‌ನನ್ನು ಥಳಿಸಿದ ಬಜರಂಗದಳ ಕಾರ್ಯಕರ್ತರು; ಪ್ರಕರಣ ದಾಖಲು

ಪ್ರೇಮಿಗಳ ದಿನದಂದು ರೆಸ್ಟೋರೆಂಟ್‌ನಲ್ಲಿ ಹಿಂದೂ ಮಹಿಳೆಯನ್ನು ಭೇಟಿಯಾಗುವಾಗ ತನ್ನ ಧಾರ್ಮಿಕ ಗುರುತನ್ನು ಮರೆಮಾಡಿದ್ದಾರೆ ಎಂದು ಆರೋಪಿಸಿದ ಬಜರಂಗದಳ ಸದಸ್ಯರು, ಮುಸ್ಲಿಂ ಜಿಮ್ ಟ್ರೈನರ್‌ನನ್ನು ಥಳಿಸಿರುವ ಘಟನೆ ಮೀರತ್‌ನಲ್ಲಿ ನಡೆದಿದೆ. ದಾಳಿಕೋರರ ವಿರುದ್ಧ ಪ್ರಕರಣ...

ತೆಲಂಗಾಣ ಸ್ಥಳೀಯ ಸಂಸ್ಥೆ ಚುನಾವಣೆ : ಪ್ರಾಬಲ್ಯ ಮೆರೆದ ಕಾಂಗ್ರೆಸ್, ಬಲ ಕಳೆದುಕೊಂಡ ಬಿಆರ್‌ಎಸ್‌

ತೆಲಂಗಾಣದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಶುಕ್ರವಾರ (ಫೆ.13) ಪ್ರಕಟಗೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ರಾಜ್ಯದಾದ್ಯಂತ ಪ್ರಾಬಲ್ಯ ಮೆರೆದಿದೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಒಟ್ಟು 2,996 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 1,537 ವಾರ್ಡ್‌ಗಳನ್ನು ಗೆದ್ದುಕೊಂಡಿದೆ. ಈ...