Homeಚಳವಳಿಬಹುಜನ ಚಳವಳಿಗೆ ಬರಹಗಳ ಮಾರ್ಗ ತೋರಿದ ವಿಜಯ ಮಹೇಶ್‌: ಒಡನಾಡಿಗಳ ನುಡಿನಮನ

ಬಹುಜನ ಚಳವಳಿಗೆ ಬರಹಗಳ ಮಾರ್ಗ ತೋರಿದ ವಿಜಯ ಮಹೇಶ್‌: ಒಡನಾಡಿಗಳ ನುಡಿನಮನ

- Advertisement -
- Advertisement -

ಕರ್ನಾಟಕದಲ್ಲಿ ಬಹುಜನ ಚಳವಳಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದ ಚಿಂತಕಿ, ಸಂಶೋಧಕಿ ಎಚ್.ಕೆ.ವಿಜಯರವರು ಅನಾರೋಗ್ಯದ ಕಾರಣದಿಂದ ಸೆಪ್ಟಂಬರ್ 05ರ ಭಾನುವಾರ ರಾತ್ರಿ ಕೊನೆಯುಸಿರೆಳಿದಿದ್ದಾರೆ.

ಅವರು ಸೇರಿದಂತೆ ಹಲವು ಜನರ ಶ್ರಮದಿಂದ ರೂಪಿತವಾಗಿದ್ದ ಬಹುಜನ ವಿದ್ಯಾರ್ಥಿ ಚಳವಳಿಯಿಂದಾಗಿ ಹೊಸ ತಲೆಮಾರಿನ ಬರಹಗಾರರು ಹುಟ್ಟಿಕೊಂಡರು. ಹೊಸ ರೀತಿಯ ಚಳವಳಿಯ ಹಾಡುಗಳು ಚಾಲ್ತಿಗೆ ಬಂದವು. ಅಂಬೇಡ್ಕರ್- ಗಾಂಧಿ ನಡುವಿನ ಭಿನ್ನಾಭಿಪ್ರಾಯಗಳ ಕುರಿತು ಹೊಸ ಚರ್ಚೆಗಳು ಮುನ್ನಲೆಗೆ ಬಂದವು.

ಸರ್ಕಾರಿ ಉದ್ಯೋಗವನ್ನು ಬಿಟ್ಟು, ಚಳವಳಿಗೆ ಕಾಲಿಟ್ಟಿದ್ದ ಎನ್.ಮಹೇಶ್ ಹೊಸ ಭರವಸೆಯಾಗಿ ಹೊಮ್ಮಿದ್ದರು. ಎನ್.ಮಹೇಶ್‌ ಅವರಿಗೆ ಸದಾ ಬೆನ್ನೆಲುಬಾಗಿ ನಿಂತು, ಬಹುಜನ ಚಳವಳಿ ಬಲವಾಗಲು ಕಾರಣರಾಗಿ, ದಲಿತ ವಿದ್ಯಾರ್ಥಿ ಸಮೂಹವನ್ನು ತನ್ನ ಮಕ್ಕಳಂತೆ ಪೊರೆದವರು ವಿಜಯ ಮಹೇಶ್ ಎಂದು ನೆನೆಯುತ್ತಾರೆ ಅವರ ಒಡನಾಡಿಗಳು.

ಎಚ್.ಕೆ.ವಿಜಯ ಹಾಗೂ ಎನ್.ಮಹೇಶ್‌ ಪ್ರೀತಿಸಿ ಮದುವೆಯಾದವರು. ಬೆಂಗಳೂರು ವಿವಿಯ ವಿದ್ಯಾರ್ಥಿಗಳಾಗಿದ್ದ ಈ ಇಬ್ಬರು, ಕಾಲೇಜು ದಿನಗಳಿಂದಲೂ ಪ್ರೀತಿಸುತ್ತಿದ್ದರು. ಮುಂದೆ ಎನ್.ಮಹೇಶ್‌ ಅವರು ಕೆಎಎಸ್‌ ಅಧಿಕಾರಿಯಾದರು. ವಿಜಯ ಅವರು ಅಪೆಕ್ಸ್ ಬ್ಯಾಂಕ್ ನಲ್ಲಿ ಕೆಲಸದಲ್ಲಿದ್ದರು. ಕೆಲಸವನ್ನು ಬಿಟ್ಟು ಎನ್.ಮಹೇಶ್, ಚಳವಳಿಗೆ ಕಾಲಿಡಲು ಪ್ರೋತ್ಸಾಹಿಸಿದ ವಿಜಯ ಮಹೇಶ್, ಬಹುಜನ ಚಳವಳಿಯ ಹುಡುಗರಿಗೆ “ವಿಜಯಕ್ಕ” ಎಂದೇ ಚಿರಪರಿಚಿತರಾದರು.

ಚಳವಳಿಯ ಭಾಗವಾಗಿದ್ದ “ಸಮಾಜ ಪರಿವರ್ತನಾ” ಹಾಗೂ “ಪ್ರಬುದ್ಧ ಭಾರತ” ಪತ್ರಿಕೆಗಳಲ್ಲಿ ವಿಜಯ ಅವರ ಲೇಖನಗಳು ಪ್ರಕಟವಾಗಿದ್ದವು. ಇವರು ಬರೆದ ವಿಚಾರಗಳು ‘ಮೂಲನಿವಾಸಿ ಬಹುಜನರ ಇತಿಹಾಸ’, ‘ಅಂಬೇಡ್ಕರ್ ಮತ್ತು ಚರಿತ್ರೆಯ ಮರುಶೋಧ’, ‘ಹಿಂದುತ್ವದ ಗಾಂಧಿ ಮತ್ತು ಮಾನವತೆಯ ಅಂಬೇಡ್ಕರ್’, ‘ವಿಜಯಕ್ಕನ ವಿಚಾರಲಹರಿ’, ‘ನೆಲದ ಮಾತು’, ‘ಆಧುನಿಕ ಪುಷ್ಯಮಿತ್ರ’, ‘ಅಂದದ ಮಗುವಿಗೆ ಚಂದದ ಹೆಸರು’ ಕೃತಿಗಳಾಗಿ ಪ್ರಕಟವಾಗಿವೆ.

“ಬಹುಜನ ವಿದ್ಯಾರ್ಥಿ ಸಂಘಟನೆಗೆ ವಿಜಯ ಮಹೇಶ್‌ ಅವರ ಬರಹಗಳು ಪ್ರೋತ್ಸಾಹವನ್ನು ನೀಡುತ್ತಿದ್ದವು. ಸಮಾಜ ಪರಿವರ್ತನಾ, ಪ್ರಬುದ್ಧ ಭಾರತಕ್ಕೆ ನಿರಂತರವಾಗಿ ಬರೆಯುತ್ತಿದ್ದರು. ನಾವೆಲ್ಲ ಅವರ ಬರಹಗಳಿಂದ ಸ್ಫೂರ್ತಿ ಪಡೆದೆವು. ಎಷ್ಟೇ ಜನ ಕಾರ್ಯಕರ್ತರು ಬಂದರೂ ಸ್ವತಃ ತಾಯಿಯ ಹಾಗೆ ನೋಡಿಕೊಳ್ಳುತ್ತಿದ್ದರು. ಎನ್‌.ಮಹೇಶ್ ಅವರು ಈ ವಿಚಾರದಲ್ಲಿ ಭಾಗ್ಯವಂತರು. ಎಲ್ಲರಿಗೂ ಇಂತಹ ಪತ್ನಿ ಸಿಗುವುದಿಲ್ಲ. ಮನೆಯಲ್ಲಿ ಸಂಪೂರ್ಣ ಸಹಕಾರ ಸಿಕ್ಕಿದ್ದರಿಂದಲೇ ಚಳವಳಿಗೆ ಹೋಗಲು ಸಾಧ್ಯವಾಯಿತು. ಬಹುಜನ ಚಳವಳಿಗೆ ಎನ್.ಮಹೇಶ್ ಅರ್ಧ ಶಕ್ತಿಯಾಗಿದ್ದರೆ, ವಿಜಯ ಮಹೇಶ್ ಇನ್ನರ್ಧ ಶಕ್ತಿಯಾಗಿದ್ದರು” ಎನ್ನುತ್ತಾರೆ ಬರಹಗಾರ, ಸಂಘಟಕ ಡಾ.ಶಿವಕುಮಾರ್.

“ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್‌ ರಾಮಸ್ವಾಮಿ, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆ, ಟಿಪ್ಪು ಸುಲ್ತಾನ್, ಕಾನ್ಶಿರಾಮ್, ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವರು ಬರೆಯುತ್ತಿದ್ದ ಲೇಖನಗಳು ಅಥೆಂಟಿಕ್‌ ಆಗಿರುತ್ತಿದ್ದವು. ಹೊಸ ತಲೆಮಾರಿಗೆ ಸ್ಫೂರ್ತಿಯನ್ನು ತುಂಬುತ್ತಿದ್ದರು. ನಾವೆಲ್ಲ ವಿಚಾರವಂತರಾಗಿದ್ದೇವೆ ಎಂದರೆ ಅದರ ಹಿಂದಿನ ಶಕ್ತಿ ವಿಜಯ ಮಹೇಶ್” ಎಂಬುದು ಅವರ ಅಭಿಪ್ರಾಯ.

“ನಾವು ಎಷ್ಟೋ ವಿದ್ಯಾರ್ಥಿಗಳು ವಿವಿಧ ವಿ.ವಿ.ಗಳಲ್ಲಿ ಸಂಶೋಧನೆ ಮಾಡಿದ್ದೇವೆ. ವಿಜಯ ಮಹೇಶ್ ಅವರ ಬರವಣಿಗೆಗಳೇ ಈ ಸಂಶೋಧನಾ ವಿದ್ಯಾರ್ಥಿಗಳಿಗೆ ಆಧಾರವಾಗಿದ್ದವು. ಶೋಷಿತರ ಕುರಿತು ಅತ್ಯಂತ ಖಚಿತವಾಗಿ ಬರೆಯುವ ಲೇಖಕಿ ಅವರರಾಗಿದ್ದರು. ನಾವೆಲ್ಲ ವಿಶ್ವವಿದ್ಯಾನಿಲಯಗಳಲ್ಲಿ ನೋಂದಾಯಿತ ಸಂಶೋಧಕರಾಗಿದ್ದರೆ, ವಿಜಯಕ್ಕ ನೋಂದಾಯಿತರಲ್ಲದ ಸಂಶೋಧಕರಾಗಿದ್ದರು” ಎಂದು ಅಭಿಪ್ರಾಯಪಡುತ್ತಾರೆ ಶಿವಕುಮಾರ್.

ಇದನ್ನೂ ಓದಿ: ಅವಕಾಶವಾದವನ್ನು ಸಿದ್ಧಾಂತವಾಗಿಸಿಕೊಂಡಾಗ ವಿಶ್ವಾಸ ಉಳಿಯುವ ಬಗೆ ಎಂತು?

ಕೈಬರಹದಲ್ಲಿದ್ದ ವಿಜಯ ಮಹೇಶ್ ಅವರ ಬರಹಗಳನ್ನು ಕೃತಿ ರೂಪಕ್ಕೆ ತರಲು ಶ್ರಮಿಸಿದವರಲ್ಲಿ ರಘೋತ್ತಮ ಹೊ.ಬ. ಅವರೂ ಒಬ್ಬರು. “ಸಮಾಜ ಪರಿವರ್ತನಾ ಪತ್ರಿಕೆಯ ಸಂಪಾದನೆಯನ್ನು ನೋಡಿಕೊಳ್ಳುತ್ತಿದ್ದ ಕೃಷ್ಣಮೂರ್ತಿ ಚಮರಂ ಒಂದಿಷ್ಟು ಲೇಖನಗಳನ್ನು ಸಂಗ್ರಹಿಸಿಕೊಟ್ಟಿದ್ದರು. ಮುಂದೆ ಪ್ರಬುದ್ಧ ಭಾರತ ಆರಂಭವಾದಾಗ ಅದರ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದೆ. ಹೀಗಾಗಿ ಅವರ ಹಲವು ಬರಹಗಳನ್ನು ನನ್ನ ಬಳಿ ಇದ್ದವು. ಅವುಗಳನ್ನು ಸಂಗ್ರಹಿಸಿ ಪುಸ್ತಕ ಪ್ರಕಟಿಸಿದ ಖುಷಿ ಇದೆ” ಎನ್ನುತ್ತಾರೆ ಹೊ.ಬ.

ಕಾನ್ಶಿ ಫೌಂಡೇಷನ್

“ಎನ್.ಮಹೇಶ್ ಮತ್ತು ವಿಜಯ ಅವರು ಕಾನ್ಶಿರಾಮ್ ಅವರ ಚಿಂತನೆಗಳಿಂದ ಪ್ರಭಾವಿತರಾದವರು. ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಅಧಿಕಾರ ಹಿಡಿದಿತ್ತು. ಹೋರಾಟಗಾರರಾದ ಗೋಪಿನಾಥ್, ಮೋಹನ್ ಕುಮಾರ್‌ ಅವರು 1992ರಲ್ಲಿ ಸಣ್ಣಮಟ್ಟದಲ್ಲಿ ಬಹುಜನ ಚಳವಳಿಯನ್ನು ಕಟ್ಟುತ್ತಿದ್ದರು. 1993ರಲ್ಲೇ ಭೀಮ್ ಮಾರ್ಚ್ ಹಮ್ಮಿಕೊಂಡಿದ್ದರು. ಮಹೇಶ್ ಅವರು ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದರೂ ಸರ್ಕಾರಿ ಉದ್ಯೋಗದಲ್ಲಿದ್ದರು. ಪತ್ನಿಯ ಪ್ರೋತ್ಸಾಹದಿಂದ ಕೆಲಸ ಬಿಟ್ಟರು. ಚಳವಳಿಯಲ್ಲಿ ಪೂರ್ಣ ತೊಡಗಿಸಿಕೊಂಡರು. 1998ರಲ್ಲಿ ಚುನಾವಣೆಯಲ್ಲಿ ನಿಂತರು. ಬಹುಜನ ಚಳವಳಿ ದೊಡ್ಡ ಮಟ್ಟದಲ್ಲಿ ಬೆಳೆಯಲು ವಿಜಯಾ ಅವರು ಕಾರಣ. ಅದ್ಭುತ ಓದುಗರಾಗಿದ್ದ ಅವರು, ಅಂಬೇಡ್ಕರ್ ಅವರ ಮೂಲ ಬರಹಗಳನ್ನೇ ಅಧ್ಯಯನ ಮಾಡಿ, ನಮಗೆಲ್ಲ ವಿಚಾರಗಳನ್ನು ತಿಳಿಸಿಕೊಟ್ಟರು” ಎಂದು ಸ್ಮರಿಸುತ್ತಾರೆ ರಘೋತ್ತಮ ಹೊ.ಬ.

ಕಾನ್ಶಿ ಫೌಂಡೇಷನ್‌ನಲ್ಲಿ ಅಂತ್ಯ ಸಂಸ್ಕಾರ

ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯ ಮಹೇಶ್‌ ಅವರು ಭಾನುವಾರ ನಿಧನರಾದರು. ಅವರು ಬೆಂಗಳೂರಿನ ಬಳಿ ಕನಕಪುರದಲ್ಲಿ ಸ್ಥಾಪಿಸಿದ್ದ ಕಾನ್ಶಿ ಫೌಂಡೇಷನ್‌ನಲ್ಲಿ ಸೋಮವಾರ ಅವರ ಅಂತ್ಯ ಸಂಸ್ಕಾರ ನೆರವೇರಿತು.


ಇದನ್ನೂ ಓದಿ: ಭಾರತದ ಆರ್ಥಿಕತೆ – ಸುಧಾರಣಾಪೂರ್ವ ಮತ್ತು ಸುಧಾರಣೋತ್ತರ ಕಾಲಘಟ್ಟ; ಒಂದು ಮೌಲ್ಯಮಾಪನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....