Homeಮುಖಪುಟತ್ರಿಪುರಾ: VHP ರ್‍ಯಾಲಿ ವೇಳೆ ಮಸೀದಿ ಧ್ವಂಸ, ಎರಡು ಅಂಗಡಿಗಳಿಗೆ ಬೆಂಕಿ

ತ್ರಿಪುರಾ: VHP ರ್‍ಯಾಲಿ ವೇಳೆ ಮಸೀದಿ ಧ್ವಂಸ, ಎರಡು ಅಂಗಡಿಗಳಿಗೆ ಬೆಂಕಿ

- Advertisement -
- Advertisement -

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ದುರ್ಗಾಪೂಜಾ ಮಂಟಪವನ್ನು ಧ್ವಂಸಗೊಳಿಸಿದ್ದನ್ನು ವಿರೋಧಿಸಿ ಮಂಗಳವಾರ ತ್ರಿಪುರಾದ ಪಾಣಿಸಾಗರ್‌ನಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಗಳಾದ ವಿಎಚ್‌ಪಿ ಮತ್ತು ಬಜರಂಗದಳ ರ್‍ಯಾಲಿ ನಡೆಸಿದೆ. ಈ ವೇಳೆ ಚಮ್ಟಿಲ್ಲಾ ಪ್ರದೇಶದ ಮಸೀದಿ ಮತ್ತು ಕೆಲವು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದ್ದು ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ.

“ಪಾಣಿಸಾಗರದಲ್ಲಿ ವಿಎಚ್‌ಪಿ ಸುಮಾರು 3,500 ಜನರ ಪ್ರತಿಭಟನಾ ರ್‍ಯಾಲಿಯನ್ನು ಆಯೋಜಿಸಿತ್ತು. ರ್‍ಯಾಲಿಯಲ್ಲಿ ವಿಎಚ್‌ಪಿ ಕಾರ್ಯಕರ್ತರ ಒಂದು ವಿಭಾಗವು ಚಮ್ಟಿಲ್ಲಾ ಪ್ರದೇಶದಲ್ಲಿ ಮಸೀದಿಯನ್ನು ಧ್ವಂಸಗೊಳಿಸಿದೆ. ನಂತರ, ಅಲ್ಲಿಂದ ಸುಮಾರು 800 ಗಜಗಳಷ್ಟು ದೂರದಲ್ಲಿರುವ ರೋವಾ ಬಜಾರ್ ಪ್ರದೇಶದ ಮೂರು ಮನೆಗಳು ಮತ್ತು ಮೂರು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ ಮತ್ತು ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ” ಪಾಣಿಸಾಗರ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಸೌಭಿಕ್ ಡೇ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಇದನ್ನೂ ಓದಿ: ತ್ರಿಪುರಾ: ಸಂಸದ ಅಭಿಷೇಕ್ ಬ್ಯಾನರ್ಜಿ ಸೇರಿ ಹಲವು ಟಿಎಂಸಿ ನಾಯಕರ ವಿರುದ್ಧ ಎಫ್‌ಐಆರ್‌

ಧ್ವಂಸ ಮಾಡಿರುವ ಮನೆಗಳು ಮತ್ತು ಸುಟ್ಟು ಕರಕಲಾದ ಅಂಗಡಿಗಳು ಅಲ್ಪಸಂಖ್ಯಾತ ಸಮುದಾಯದವರಿಗೆ ಸೇರಿದ್ದು, ಅವರಲ್ಲಿ ಒಬ್ಬರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಮತ್ತಷ್ಟು ಹದಗೆಡುವುದನ್ನು ತಪ್ಪಿಸಲು ಸುತ್ತಮುತ್ತಲಿನ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಿಪಿಐಎಂ ರಾಜ್ಯ ನಾಯಕ ಪಬಿತ್ರಾ ಕರ್ ಮಾತನಾಡಿ, “ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಡೆದ ನಂತರ ತ್ರಿಪುರಾದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಇದನ್ನು ಬಿಜೆಪಿಯವರು ರೂಪಿಸುತ್ತಿದ್ದಾರೆ. ತ್ರಿಪುರ ಕೋಮು ಶಾಂತಿ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಇಲ್ಲಿ ಕೋಮು ಸೌಹಾರ್ದತೆ ಮತ್ತು ಶಾಂತಿ ಕಾಪಾಡುವುದನ್ನು ರಾಜ್ಯ ಸರ್ಕಾರ ಖಚಿತಪಡಿಸಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನೇಪಾಳ, ಶ್ರೀಲಂಕಾದಲ್ಲೂ ಬಿಜೆಪಿಯನ್ನು ಸಂಘಟಿಸುತ್ತೇವೆ: ಅಮಿತ್ ಶಾ ಹೇಳಿಕೆಯನ್ನು ಉಲ್ಲೇಖಿಸಿದ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇವ್ನಾನ

ಬಿಜೆಪಿ ವಕ್ತಾರ ನಬೆಂದು ಭಟ್ಟಾಚಾರ್ಯ ಅವರು ಘಟನೆಯ ಬಗ್ಗೆ ತನಗೆ ತಿಳಿದಿಲ್ಲ ಆದರೆ ಪೊಲೀಸರು ಅಗತ್ಯ ಕ್ರಮ ತೆಗೆದು ಕೊಳ್ಳುತ್ತಾರೆ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ.

“ವಿಎಚ್‌ಪಿ ಇಂದು ಪಾಣಿಸಾಗರ್ ಪ್ರದೇಶದಲ್ಲಿ ಪ್ರತಿಭಟನಾ ರ್‍ಯಾಲಿಯನ್ನು ಆಯೋಜಿಸಿತ್ತು. ನಾವು ಪಾಣಿಸಾಗರ ಮೋಟಾರು ಸ್ಟ್ಯಾಂಡ್‌ನಲ್ಲಿ ಜಮಾಯಿಸಿ, ಚಾಮಟಿಲ್ಲಾ, ರೋವಾ, ಜಲೇಬಾಷಾ ಸೇರಿದಂತೆ ವಿವಿಧ ಪ್ರದೇಶಗಳ ಮೂಲಕ ನಡೆದು ಪ್ರಾರಂಭದ ಹಂತಕ್ಕೆ ಹಿಂತಿರುಗಲು ನಿರ್ಧರಿಸಿದ್ದೇವೆ. ನಾವು ರೋವಾ ಬಳಿ ಬಂದಾಗ ಮಸೀದಿಯ ಮುಂದೆ ನಿಂತಿದ್ದ ಕೆಲವು ಯುವಕರು ನಮ್ಮನ್ನು ನಿಂದಿಸಿದ್ದಾರೆ. ಅವರು ಖಡ್ಗ ಮತ್ತು ಇತರ ಆಯುಧಗಳಿಂದ ಶಸ್ತ್ರಸಜ್ಜಿತರಾಗಿದ್ದರು. ಅವರು ಪಾಕಿಸ್ತಾನ್ ಜಿಂದಾಬಾದ್ ಮತ್ತು ಧಾರ್ಮಿಕ ಘೋಷಣೆಗಳನ್ನು ಕೂಗಿದ್ದು, ಅವರ ಪ್ರಚೋದನೆಯಿಂದಾಗಿ ಕೆಲವು ವಿರಳ ಘಟನೆಗಳು ಸಂಭವಿಸಿವೆ” ಎಂದು ರ್‍ಯಾಲಿಯಲ್ಲಿ ಭಾಗವಹಿಸಿದ್ದ ಪಾಣಿಸಾಗರದ ಬಜರಂಗದಳದ ನಾಯಕ ನಾರಾಯಣ್ ದಾಸ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ಕಳೆದ ಶುಕ್ರವಾರ, ತ್ರಿಪುರಾ ರಾಜ್ಯ ಜಮಿಯತ್ ಉಲಮಾ (ಹಿಂದ್) ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರ ಕಚೇರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದು, ಕಳೆದ ಮೂರು ದಿನಗಳಲ್ಲಿ ಮಸೀದಿಗಳು ಮತ್ತು ಅಲ್ಪಸಂಖ್ಯಾತರ ವಸತಿಗಳ ಮೇಲೆ ದಾಳಿಗಳು ನಡೆದಿವೆ ಎಂದು ಆರೋಪಿಸಿದೆ.

ಇದನ್ನೂ ಓದಿ: ತಲೆ ಬೋಳಿಸಿಕೊಂಡು ಪಶ್ಚಾತಾಪ ಪಟ್ಟು ಬಿಜೆಪಿ ತೊರೆಯಲು ಸಿದ್ದರಾದ ತ್ರಿಪುರ ಶಾಸಕ- ಟಿಎಂಸಿ ಸೇರುವ ಸಾಧ್ಯತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. *ನಾನೊಬ್ಬ ಹಿಂದುವಾಗಿ ನಾಚಿಕೆಪಡುತ್ತಿದ್ದೇನೆ..!!*

    ಒಂದಾನೊಂದು ಕಾಲದಲ್ಲಿ ಹಿಂದೂ ಮುಸ್ಲಿಂ ಐಕ್ಯತೆ ಹಾಗೂ ಸೌಹಾರ್ದತೆಯ ವಿಷಯದಲ್ಲಿ ಭಾರತ ದೇಶ ಇಡೀ ವಿಶ್ವಕ್ಕೆ ಮಾದರಿಯಾಗಿತ್ತು.

    ಆ ಕಾರಣದಿಂದಲೇ ಭಾರತವನ್ನು ಯಾರಿಗೂ ಸೋಲಿಸಲಾಗಲಿಲ್ಲ.
    ಬ್ರಿಟಿಷರು ಭಾರತ ಬಿಟ್ಟು ತೊಲಗಳು ಅದುವೇ ವಜ್ರಾಯುಧವಾಗಿತ್ತು.

    ನಮ್ಮ ಸಣ್ಣಪ್ರಾಯದಲ್ಲಿ ಮುಸ್ಲಿಮರೊಂದಿಗೆ ಎಷ್ಟು ಅನ್ಯೋನ್ಯವಾಗಿದ್ದೆವೆಂದರೆ ನಮ್ಮ ಮನೆಯಲ್ಲಿ ಯಾವುದೇ ಸ್ಪೆಶಲ್ ಅನ್ನ ಪದಾರ್ಥ ಮಾಡಿದರೂ ಅವರಿಗೆ ಹಂಚಿ ತಿನ್ನುತ್ತಿದ್ದೆವು ಅದೇ ರೀತಿ ಅವರ ಮನೆಯಲ್ಲಿ ಏನೇ ಗಮ್ಮತ್ತು ಮಾಡಿದರೂ ನಮಗೆ ತಂದು ಕೊಡುತ್ತಿದ್ದರು.

    ನಮ್ಮ ಸುಖಃ ದುಖಃ ಗಳಲ್ಲಿ ಅವರು ಭಾಗಿಯಾಗುತ್ತಿದ್ದರು ಅವರ ಸಂತೋಷ ಸಂತಾಪಗಳಲ್ಲಿ ನಾವೂ ಭಾಗಿಯಾಗುತ್ತಿದ್ದೆವು.

    ನಮಗೇನಾದರೂ ಅಪಾಯ ಎದುರಾದರೆ ಪರಿಹಾರಕ್ಕಾಗಿ ಅವರ ಮೊರೆಹೋಗುತ್ತಿದ್ದೆವು.
    ಅವರ ಎಲ್ಲ ಒತ್ತಡಗಳನ್ನು ಬದಿಗಿಟ್ಟು ನಮಗೆ ನೆರವಾಗುತ್ತಿದ್ದರು.

    ಅವರಿಗೇನಾದರೂ ತೊಂದರೆಯನುಭವಿಸಿದರೆ ನಮ್ಮ ನೆರವನ್ನೂ ಪಡೆಯುತ್ತಿದ್ದರು.

    ನಮ್ಮ ಗೆಳೆಯರಲ್ಲಿ ಬಹುತೇಕ ಮಂದಿಯೂ ಮುಸಲ್ಮಾನರಾಗಿದ್ದರು.
    ಅಂದು ಬೇದಬಾವ ಎಂಬ ಮಾತೇ ಅಪ್ರಸ್ತುತವಾಗಿತ್ತು.

    ಇಂದು ಅದೆಲ್ಲ ಕನಸಿನಮಾತೇ ಆಗಿಬಿಟ್ಟಿದೆ.
    ನಮ್ಮೆಡೆಯಲ್ಲಿ ಆರೆಸ್ಸೆಸ್, ಶ್ರೀರಾಮಸೇನೆ, ಭಜರಂಗದಳ, ಮುಂತಾದ ಸಂಘಟನೆ ಹುಟ್ಟುಹಾಕಿ ವಿನಾಕಾರಣ ಮುಸ್ಲಿಮರ ವಿರುದ್ದ ಸಮರ ಸಾರಿದಾಗ…
    ಅವರ ಸಮುದಾಯದೊಳಗೂ ಬಿಸಿ ರಕ್ತ ಸಂಚರಿಸುವ ಯುವಕರು ಸೇರಿಕೊಂಡು ಕೆ.ಎಫ್.ಡಿ, ಪಿ.ಎಫ್.ಐ, ಎಸ್.ಡಿ.ಪಿ.ಐ ಹೆಸರಿನಲ್ಲಿ ಪರ್ಯಾಯ ಸಂಘಟನೆ ಹುಟ್ಟುಹಾಕಿ ನಮ್ಮ ಮೂಲಭೂತವಾದಿಗಳಿಗೆ ಸಡ್ಡುಹೊಡೆದು ನಿಲ್ಲಲು ಅವಕಾಶವನ್ನು ಮಾಡಿಕೊಟ್ಟೆವು.

    ನಮ್ಮ ಕೋಮು ಪ್ರಚೋದನಕಾರಿ ಭಾಷಣ, ಕ್ರಿಯೆಗಳಿಂದ ಅವರಿಗೆ ಅನಿವಾರ್ಯವಾಗಿ ಅಂತಹ ಸಂಘಟನೆ ಪ್ರಾರಂಭಿಸುವುದು ಅನಿವಾರ್ಯವಾಗಿಬಿಟ್ಟಿದೆ.

    ಅವರ ಸಂಘಟನೆಗೆ ಅವರದೇ ಧರ್ಮದಲ್ಲಿ ಬಹುತೇಕಮಂದಿಯ ವಿರೋಧವಿದ್ದರೂ ನಮ್ಮಲ್ಲಿರುವ ಕೋಮುವಾದಿಗಳನ್ನು ಮಟ್ಟಹಾಕಲು ತೊಡೆತಟ್ಟಿ ನಿಂತಿರುವುದು ಅವರ ಧೈರ್ಯವನ್ನು ಎತ್ತಿ ತೋರಿಸುತ್ತಿದೆ.
    ವಿಪರ್ಯಾಸವೆಂದರೆ ನಮ್ಮ ತೀವ್ರವಾದಿ ಸಂಘಟನೆಯ ಕಾರ್ಯಕರ್ತರು ಬಹುತೇಕ ಮುಸಲ್ಮಾನರನ್ನು ಕೊಂದಿದ್ದರೂ ಮುಸಲ್ಮಾನರಲ್ಲಿ ದಾರಿಹೋಕರಾದ ಶ್ರೀ ಸಾಮಾನ್ಯ ವ್ಯಕ್ತಿಗಳನ್ನಷ್ಟೇ ಕೊಂದಿರಬಹುದು ಆದರೆ ಅವರು ಹಾಗಲ್ಲ…
    ಸಿಕ್ಕ ಸಿಕ್ಕ ಹಿಂದುಗಳನ್ನು ಹಿಡಿದು ಹತ್ಯೆಗೈಯ್ಯುವುದು ಸಾಧ್ಯವಾದರೂ ಅದವರು ಈ ತನಕ ಮಾಡಿಲ್ಲ.
    ಹೊರತು ಕೋಮುವಾದಿ ಹಿಂದುಗಳ ನಾಯಕರೇ ಅವರ ಗುರಿ…
    ಅದನ್ನು ಅವರು ಮಾಡಿಯೂ ತೋರಿಸಿದ್ದಾರೆ.

    ಮುಸಲ್ಮಾನರನ್ನು ದೇಶದಿಂದ ಹೊರದಟ್ಟುವುದು ಸುಲಭದ ಮಾತಲ್ಲ.
    ಪವಿತ್ರ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾರ್ಪಡಿಸುವುದೂ ಹೇಳಿದಂತೆ ಅಷ್ಟು ಸುಲಭದ ಕಾರ್ಯವೂ ಅಲ್ಲ.

    ಹಿಂದುಗಳಲ್ಲಿ ಬಹುತೇಕಮಂದಿಯೂ ಮುಸಲ್ಮಾನರೊಂದಿಗೆ ಮಮತೆಯಿಂದಿರಲು ಬಯಸುವಂತೆ ಮುಸಲ್ಮಾನರಲ್ಲೂ ದೊಡ್ಡ ಒಂದು ಗುಂಪು ಹಿಂದುಗಳೊಂದಿಗೆ ಸೌಹಾರ್ದಯುತವಾಗಿ ಬಾಳುವುದನ್ನೇ ಇಷ್ಟಪಡುತ್ತಾರೆ.

    ಭೂಲೋಕದಲ್ಲಿ ಇರುವ ತಾತ್ಕಾಲಿಕ ಜೀವನ ಅದು ಶಾಂತಿ ಸೌಹಾರ್ದತೆಯೊಂದಿಗೆ ಹಿಂದೂ ಮುಸಲ್ಮಾನರು ಅನ್ಯೋನ್ಯತೆ ಸಹಬಾಳ್ವೆಯಾಗಿ ನಡೆಸುವುದಲ್ಲವೇ ಬುದ್ದಿವಂತಿಕೆ.
    ನಮ್ಮಲ್ಲೂ ಅವರಲ್ಲೂ ಪ್ರಚೋಧನಕಾರಿ ಭಾಷಣ ಬಿಗಿದು ನಮ್ಮೆಡೆಯಲ್ಲಿ ಕಂದಕ ಸೃಷ್ಟಿಸಿ ಕೋಮುಬಾವನೆ ಮೂಡಿಸಿ ಕಚ್ಚಾಡುವಂತೆ ಮಾಡಿದ ಅದೆಷ್ಟೋ ನಾಯಕರು ಇದೀಗ ಮಣ್ಣಾಗಿಹೋಗಿದ್ದಾರೆ.
    ನಾವೂ ಕೂಡಾ ಅದೇ ದಾರಿ ತುಳಿಯುವವರೇ ಆಗಿದ್ದೇವೆ.
    ಅದೆರೆಡೆಯಲ್ಲಿ ಭಾರತ ಹಿಂದೂ ರಾಷ್ಟ್ರವಾಗಿ ನಮಗೇನು ಲಾಭವಿದೆ.

    ಶಾಂತಿ ಸೌಹಾರ್ದತೆಯೊಂದಿಗೆ ಬಾಳಿ ಬದುಕಿ ಬೇರೆಯವರಿಗೆ ಉಪಕಾರಮಾಡಲಾಗದಿದ್ದರೂ ನಮ್ಮಿಂದಾಗಿ ಯಾರೂ ತೊಂದರೆ ಅನುಭವಿಸಬಾರದೆಂಬ ವಿಶಾಲಹೃದಯದ ಸನ್ಮನಸ್ಸಿನಿಂದ ಜೀವನ ಸಾಗಿಸಿ ಸಂತೋಷದೊಂದಿಗೆ ಕಣ್ಣುಮುಚ್ಚುವುದಾದರೆ ಅದಲ್ಲವೇ ಒಳಿತು.
    ಚಿಂತಿಸುವವರಿಗೆ ಇದರಲ್ಲಿ ಪಾಠವಿದೆ.

    *ಸುನಿಲ್ ಬೋಂದೆಲ್, ಮಂಗಳೂರು*

  2. Musalmaanara antarangavannu bahirangavaagi tili padisiruva sunil ravarige dhanyavaadagalu,
    Nimmantaha bahuteka hindu sahodararu namma deshaddalli iruvatanaka e alpa budhiya alpa dushtarinda hedaruva avashyakate illa ,aadare ivarannu naavella seri vaggatagi tadeyaddidare desha ashaanti haagu aunnati kadege saagabahudu, dushtarinda bhaaratavannu rakshisalendu prarthisona,
    “Mera bharath mahaan”

LEAVE A REPLY

Please enter your comment!
Please enter your name here

- Advertisment -

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...