ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ದುರ್ಗಾಪೂಜಾ ಮಂಟಪವನ್ನು ಧ್ವಂಸಗೊಳಿಸಿದ್ದನ್ನು ವಿರೋಧಿಸಿ ಮಂಗಳವಾರ ತ್ರಿಪುರಾದ ಪಾಣಿಸಾಗರ್‌ನಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಗಳಾದ ವಿಎಚ್‌ಪಿ ಮತ್ತು ಬಜರಂಗದಳ ರ್‍ಯಾಲಿ ನಡೆಸಿದೆ. ಈ ವೇಳೆ ಚಮ್ಟಿಲ್ಲಾ ಪ್ರದೇಶದ ಮಸೀದಿ ಮತ್ತು ಕೆಲವು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದ್ದು ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ.
“ಪಾಣಿಸಾಗರದಲ್ಲಿ ವಿಎಚ್‌ಪಿ ಸುಮಾರು 3,500 ಜನರ ಪ್ರತಿಭಟನಾ ರ್‍ಯಾಲಿಯನ್ನು ಆಯೋಜಿಸಿತ್ತು. ರ್‍ಯಾಲಿಯಲ್ಲಿ ವಿಎಚ್‌ಪಿ ಕಾರ್ಯಕರ್ತರ ಒಂದು ವಿಭಾಗವು ಚಮ್ಟಿಲ್ಲಾ ಪ್ರದೇಶದಲ್ಲಿ ಮಸೀದಿಯನ್ನು ಧ್ವಂಸಗೊಳಿಸಿದೆ. ನಂತರ, ಅಲ್ಲಿಂದ ಸುಮಾರು 800 ಗಜಗಳಷ್ಟು ದೂರದಲ್ಲಿರುವ ರೋವಾ ಬಜಾರ್ ಪ್ರದೇಶದ ಮೂರು ಮನೆಗಳು ಮತ್ತು ಮೂರು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ ಮತ್ತು ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ” ಪಾಣಿಸಾಗರ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಸೌಭಿಕ್ ಡೇ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ತ್ರಿಪುರಾ: ಸಂಸದ ಅಭಿಷೇಕ್ ಬ್ಯಾನರ್ಜಿ ಸೇರಿ ಹಲವು ಟಿಎಂಸಿ ನಾಯಕರ ವಿರುದ್ಧ ಎಫ್‌ಐಆರ್
ಧ್ವಂಸ ಮಾಡಿರುವ ಮನೆಗಳು ಮತ್ತು ಸುಟ್ಟು ಕರಕಲಾದ ಅಂಗಡಿಗಳು ಅಲ್ಪಸಂಖ್ಯಾತ ಸಮುದಾಯದವರಿಗೆ ಸೇರಿದ್ದು, ಅವರಲ್ಲಿ ಒಬ್ಬರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಮತ್ತಷ್ಟು ಹದಗೆಡುವುದನ್ನು ತಪ್ಪಿಸಲು ಸುತ್ತಮುತ್ತಲಿನ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ದುರ್ಗಾಪೂಜಾ ಮಂಟಪವನ್ನು ಧ್ವಂಸಗೊಳಿಸಿದ್ದನ್ನು ವಿರೋಧಿಸಿ ಮಂಗಳವಾರ ತ್ರಿಪುರಾದ ಪಾಣಿಸಾಗರ್‌ನಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಗಳಾದ ವಿಎಚ್‌ಪಿ ಮತ್ತು ಬಜರಂಗದಳ ರ್‍ಯಾಲಿ ನಡೆಸಿದೆ. ಈ ವೇಳೆ ಚಮ್ಟಿಲ್ಲಾ ಪ್ರದೇಶದ ಮಸೀದಿಯನ್ನು ಧ್ವಂಸಗೊಳಿಸಲಾಗಿದೆ.#NaanuGauri #TripuraMuslimsUnderAttack #Tripura pic.twitter.com/CELmK9FQ6P
— Naanu Gauri (@naanugauri) October 27, 2021
ಸಿಪಿಐಎಂ ರಾಜ್ಯ ನಾಯಕ ಪಬಿತ್ರಾ ಕರ್ ಮಾತನಾಡಿ, “ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಡೆದ ನಂತರ ತ್ರಿಪುರಾದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಇದನ್ನು ಬಿಜೆಪಿಯವರು ರೂಪಿಸುತ್ತಿದ್ದಾರೆ. ತ್ರಿಪುರ ಕೋಮು ಶಾಂತಿ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಇಲ್ಲಿ ಕೋಮು ಸೌಹಾರ್ದತೆ ಮತ್ತು ಶಾಂತಿ ಕಾಪಾಡುವುದನ್ನು ರಾಜ್ಯ ಸರ್ಕಾರ ಖಚಿತಪಡಿಸಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.
ಬಿಜೆಪಿ ವಕ್ತಾರ ನಬೆಂದು ಭಟ್ಟಾಚಾರ್ಯ ಅವರು ಘಟನೆಯ ಬಗ್ಗೆ ತನಗೆ ತಿಳಿದಿಲ್ಲ ಆದರೆ ಪೊಲೀಸರು ಅಗತ್ಯ ಕ್ರಮ ತೆಗೆದು ಕೊಳ್ಳುತ್ತಾರೆ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ.
Again violence in Tripura,, muslim shops are https://t.co/t0t5cU9I0p Sloganerring on Hunkar rally in Panisagar Organised by ,goons:- O Muhammad your father Name:*Hare Krishna Hare Ram.* Muslims are trying to protect their mosque.@sioindia @MuslimSpaces @ansari_masi pic.twitter.com/sJ7fwBtdVf
— Tania khanam (@Taniakhanam1) October 26, 2021
“ವಿಎಚ್‌ಪಿ ಇಂದು ಪಾಣಿಸಾಗರ್ ಪ್ರದೇಶದಲ್ಲಿ ಪ್ರತಿಭಟನಾ ರ್‍ಯಾಲಿಯನ್ನು ಆಯೋಜಿಸಿತ್ತು. ನಾವು ಪಾಣಿಸಾಗರ ಮೋಟಾರು ಸ್ಟ್ಯಾಂಡ್‌ನಲ್ಲಿ ಜಮಾಯಿಸಿ, ಚಾಮಟಿಲ್ಲಾ, ರೋವಾ, ಜಲೇಬಾಷಾ ಸೇರಿದಂತೆ ವಿವಿಧ ಪ್ರದೇಶಗಳ ಮೂಲಕ ನಡೆದು ಪ್ರಾರಂಭದ ಹಂತಕ್ಕೆ ಹಿಂತಿರುಗಲು ನಿರ್ಧರಿಸಿದ್ದೇವೆ. ನಾವು ರೋವಾ ಬಳಿ ಬಂದಾಗ ಮಸೀದಿಯ ಮುಂದೆ ನಿಂತಿದ್ದ ಕೆಲವು ಯುವಕರು ನಮ್ಮನ್ನು ನಿಂದಿಸಿದ್ದಾರೆ. ಅವರು ಖಡ್ಗ ಮತ್ತು ಇತರ ಆಯುಧಗಳಿಂದ ಶಸ್ತ್ರಸಜ್ಜಿತರಾಗಿದ್ದರು. ಅವರು ಪಾಕಿಸ್ತಾನ್ ಜಿಂದಾಬಾದ್ ಮತ್ತು ಧಾರ್ಮಿಕ ಘೋಷಣೆಗಳನ್ನು ಕೂಗಿದ್ದು, ಅವರ ಪ್ರಚೋದನೆಯಿಂದಾಗಿ ಕೆಲವು ವಿರಳ ಘಟನೆಗಳು ಸಂಭವಿಸಿವೆ” ಎಂದು ರ್‍ಯಾಲಿಯಲ್ಲಿ ಭಾಗವಹಿಸಿದ್ದ ಪಾಣಿಸಾಗರದ ಬಜರಂಗದಳದ ನಾಯಕ ನಾರಾಯಣ್ ದಾಸ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
Tripura Me Ajka video North Tripura district #tripuragovtwhatareyoudoin
Tripura CM What are you doing #TripuraMuslimsUnderAttack #TripuraViolence @asadowaisi @RahulGandhi pic.twitter.com/R7LzFsGSec— Najim Uddin (@najim_official1) October 26, 2021
ಕಳೆದ ಶುಕ್ರವಾರ, ತ್ರಿಪುರಾ ರಾಜ್ಯ ಜಮಿಯತ್ ಉಲಮಾ (ಹಿಂದ್) ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರ ಕಚೇರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದು, ಕಳೆದ ಮೂರು ದಿನಗಳಲ್ಲಿ ಮಸೀದಿಗಳು ಮತ್ತು ಅಲ್ಪಸಂಖ್ಯಾತರ ವಸತಿಗಳ ಮೇಲೆ ದಾಳಿಗಳು ನಡೆದಿವೆ ಎಂದು ಆರೋಪಿಸಿದೆ.
Situation in Tripura right now is very terrible since today he has set shops and mosques on fire @asadowaisi @HusneQuran #westandwithtripuramuslim #TripuraMuslimsUnderAttack pic.twitter.com/HHa0OrxfMu
— Najim Uddin (@najim_official1) October 26, 2021
ಇದನ್ನೂ ಓದಿ: ತಲೆ ಬೋಳಿಸಿಕೊಂಡು ಪಶ್ಚಾತಾಪ ಪಟ್ಟು ಬಿಜೆಪಿ ತೊರೆಯಲು ಸಿದ್ದರಾದ ತ್ರಿಪುರ ಶಾಸಕ- ಟಿಎಂಸಿ ಸೇರುವ ಸಾಧ್ಯತೆ
*ನಾನೊಬ್ಬ ಹಿಂದುವಾಗಿ ನಾಚಿಕೆಪಡುತ್ತಿದ್ದೇನೆ..!!*
ಒಂದಾನೊಂದು ಕಾಲದಲ್ಲಿ ಹಿಂದೂ ಮುಸ್ಲಿಂ ಐಕ್ಯತೆ ಹಾಗೂ ಸೌಹಾರ್ದತೆಯ ವಿಷಯದಲ್ಲಿ ಭಾರತ ದೇಶ ಇಡೀ ವಿಶ್ವಕ್ಕೆ ಮಾದರಿಯಾಗಿತ್ತು.
ಆ ಕಾರಣದಿಂದಲೇ ಭಾರತವನ್ನು ಯಾರಿಗೂ ಸೋಲಿಸಲಾಗಲಿಲ್ಲ.
ಬ್ರಿಟಿಷರು ಭಾರತ ಬಿಟ್ಟು ತೊಲಗಳು ಅದುವೇ ವಜ್ರಾಯುಧವಾಗಿತ್ತು.
ನಮ್ಮ ಸಣ್ಣಪ್ರಾಯದಲ್ಲಿ ಮುಸ್ಲಿಮರೊಂದಿಗೆ ಎಷ್ಟು ಅನ್ಯೋನ್ಯವಾಗಿದ್ದೆವೆಂದರೆ ನಮ್ಮ ಮನೆಯಲ್ಲಿ ಯಾವುದೇ ಸ್ಪೆಶಲ್ ಅನ್ನ ಪದಾರ್ಥ ಮಾಡಿದರೂ ಅವರಿಗೆ ಹಂಚಿ ತಿನ್ನುತ್ತಿದ್ದೆವು ಅದೇ ರೀತಿ ಅವರ ಮನೆಯಲ್ಲಿ ಏನೇ ಗಮ್ಮತ್ತು ಮಾಡಿದರೂ ನಮಗೆ ತಂದು ಕೊಡುತ್ತಿದ್ದರು.
ನಮ್ಮ ಸುಖಃ ದುಖಃ ಗಳಲ್ಲಿ ಅವರು ಭಾಗಿಯಾಗುತ್ತಿದ್ದರು ಅವರ ಸಂತೋಷ ಸಂತಾಪಗಳಲ್ಲಿ ನಾವೂ ಭಾಗಿಯಾಗುತ್ತಿದ್ದೆವು.
ನಮಗೇನಾದರೂ ಅಪಾಯ ಎದುರಾದರೆ ಪರಿಹಾರಕ್ಕಾಗಿ ಅವರ ಮೊರೆಹೋಗುತ್ತಿದ್ದೆವು.
ಅವರ ಎಲ್ಲ ಒತ್ತಡಗಳನ್ನು ಬದಿಗಿಟ್ಟು ನಮಗೆ ನೆರವಾಗುತ್ತಿದ್ದರು.
ಅವರಿಗೇನಾದರೂ ತೊಂದರೆಯನುಭವಿಸಿದರೆ ನಮ್ಮ ನೆರವನ್ನೂ ಪಡೆಯುತ್ತಿದ್ದರು.
ನಮ್ಮ ಗೆಳೆಯರಲ್ಲಿ ಬಹುತೇಕ ಮಂದಿಯೂ ಮುಸಲ್ಮಾನರಾಗಿದ್ದರು.
ಅಂದು ಬೇದಬಾವ ಎಂಬ ಮಾತೇ ಅಪ್ರಸ್ತುತವಾಗಿತ್ತು.
ಇಂದು ಅದೆಲ್ಲ ಕನಸಿನಮಾತೇ ಆಗಿಬಿಟ್ಟಿದೆ.
ನಮ್ಮೆಡೆಯಲ್ಲಿ ಆರೆಸ್ಸೆಸ್, ಶ್ರೀರಾಮಸೇನೆ, ಭಜರಂಗದಳ, ಮುಂತಾದ ಸಂಘಟನೆ ಹುಟ್ಟುಹಾಕಿ ವಿನಾಕಾರಣ ಮುಸ್ಲಿಮರ ವಿರುದ್ದ ಸಮರ ಸಾರಿದಾಗ…
ಅವರ ಸಮುದಾಯದೊಳಗೂ ಬಿಸಿ ರಕ್ತ ಸಂಚರಿಸುವ ಯುವಕರು ಸೇರಿಕೊಂಡು ಕೆ.ಎಫ್.ಡಿ, ಪಿ.ಎಫ್.ಐ, ಎಸ್.ಡಿ.ಪಿ.ಐ ಹೆಸರಿನಲ್ಲಿ ಪರ್ಯಾಯ ಸಂಘಟನೆ ಹುಟ್ಟುಹಾಕಿ ನಮ್ಮ ಮೂಲಭೂತವಾದಿಗಳಿಗೆ ಸಡ್ಡುಹೊಡೆದು ನಿಲ್ಲಲು ಅವಕಾಶವನ್ನು ಮಾಡಿಕೊಟ್ಟೆವು.
ನಮ್ಮ ಕೋಮು ಪ್ರಚೋದನಕಾರಿ ಭಾಷಣ, ಕ್ರಿಯೆಗಳಿಂದ ಅವರಿಗೆ ಅನಿವಾರ್ಯವಾಗಿ ಅಂತಹ ಸಂಘಟನೆ ಪ್ರಾರಂಭಿಸುವುದು ಅನಿವಾರ್ಯವಾಗಿಬಿಟ್ಟಿದೆ.
ಅವರ ಸಂಘಟನೆಗೆ ಅವರದೇ ಧರ್ಮದಲ್ಲಿ ಬಹುತೇಕಮಂದಿಯ ವಿರೋಧವಿದ್ದರೂ ನಮ್ಮಲ್ಲಿರುವ ಕೋಮುವಾದಿಗಳನ್ನು ಮಟ್ಟಹಾಕಲು ತೊಡೆತಟ್ಟಿ ನಿಂತಿರುವುದು ಅವರ ಧೈರ್ಯವನ್ನು ಎತ್ತಿ ತೋರಿಸುತ್ತಿದೆ.
ವಿಪರ್ಯಾಸವೆಂದರೆ ನಮ್ಮ ತೀವ್ರವಾದಿ ಸಂಘಟನೆಯ ಕಾರ್ಯಕರ್ತರು ಬಹುತೇಕ ಮುಸಲ್ಮಾನರನ್ನು ಕೊಂದಿದ್ದರೂ ಮುಸಲ್ಮಾನರಲ್ಲಿ ದಾರಿಹೋಕರಾದ ಶ್ರೀ ಸಾಮಾನ್ಯ ವ್ಯಕ್ತಿಗಳನ್ನಷ್ಟೇ ಕೊಂದಿರಬಹುದು ಆದರೆ ಅವರು ಹಾಗಲ್ಲ…
ಸಿಕ್ಕ ಸಿಕ್ಕ ಹಿಂದುಗಳನ್ನು ಹಿಡಿದು ಹತ್ಯೆಗೈಯ್ಯುವುದು ಸಾಧ್ಯವಾದರೂ ಅದವರು ಈ ತನಕ ಮಾಡಿಲ್ಲ.
ಹೊರತು ಕೋಮುವಾದಿ ಹಿಂದುಗಳ ನಾಯಕರೇ ಅವರ ಗುರಿ…
ಅದನ್ನು ಅವರು ಮಾಡಿಯೂ ತೋರಿಸಿದ್ದಾರೆ.
ಮುಸಲ್ಮಾನರನ್ನು ದೇಶದಿಂದ ಹೊರದಟ್ಟುವುದು ಸುಲಭದ ಮಾತಲ್ಲ.
ಪವಿತ್ರ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾರ್ಪಡಿಸುವುದೂ ಹೇಳಿದಂತೆ ಅಷ್ಟು ಸುಲಭದ ಕಾರ್ಯವೂ ಅಲ್ಲ.
ಹಿಂದುಗಳಲ್ಲಿ ಬಹುತೇಕಮಂದಿಯೂ ಮುಸಲ್ಮಾನರೊಂದಿಗೆ ಮಮತೆಯಿಂದಿರಲು ಬಯಸುವಂತೆ ಮುಸಲ್ಮಾನರಲ್ಲೂ ದೊಡ್ಡ ಒಂದು ಗುಂಪು ಹಿಂದುಗಳೊಂದಿಗೆ ಸೌಹಾರ್ದಯುತವಾಗಿ ಬಾಳುವುದನ್ನೇ ಇಷ್ಟಪಡುತ್ತಾರೆ.
ಭೂಲೋಕದಲ್ಲಿ ಇರುವ ತಾತ್ಕಾಲಿಕ ಜೀವನ ಅದು ಶಾಂತಿ ಸೌಹಾರ್ದತೆಯೊಂದಿಗೆ ಹಿಂದೂ ಮುಸಲ್ಮಾನರು ಅನ್ಯೋನ್ಯತೆ ಸಹಬಾಳ್ವೆಯಾಗಿ ನಡೆಸುವುದಲ್ಲವೇ ಬುದ್ದಿವಂತಿಕೆ.
ನಮ್ಮಲ್ಲೂ ಅವರಲ್ಲೂ ಪ್ರಚೋಧನಕಾರಿ ಭಾಷಣ ಬಿಗಿದು ನಮ್ಮೆಡೆಯಲ್ಲಿ ಕಂದಕ ಸೃಷ್ಟಿಸಿ ಕೋಮುಬಾವನೆ ಮೂಡಿಸಿ ಕಚ್ಚಾಡುವಂತೆ ಮಾಡಿದ ಅದೆಷ್ಟೋ ನಾಯಕರು ಇದೀಗ ಮಣ್ಣಾಗಿಹೋಗಿದ್ದಾರೆ.
ನಾವೂ ಕೂಡಾ ಅದೇ ದಾರಿ ತುಳಿಯುವವರೇ ಆಗಿದ್ದೇವೆ.
ಅದೆರೆಡೆಯಲ್ಲಿ ಭಾರತ ಹಿಂದೂ ರಾಷ್ಟ್ರವಾಗಿ ನಮಗೇನು ಲಾಭವಿದೆ.
ಶಾಂತಿ ಸೌಹಾರ್ದತೆಯೊಂದಿಗೆ ಬಾಳಿ ಬದುಕಿ ಬೇರೆಯವರಿಗೆ ಉಪಕಾರಮಾಡಲಾಗದಿದ್ದರೂ ನಮ್ಮಿಂದಾಗಿ ಯಾರೂ ತೊಂದರೆ ಅನುಭವಿಸಬಾರದೆಂಬ ವಿಶಾಲಹೃದಯದ ಸನ್ಮನಸ್ಸಿನಿಂದ ಜೀವನ ಸಾಗಿಸಿ ಸಂತೋಷದೊಂದಿಗೆ ಕಣ್ಣುಮುಚ್ಚುವುದಾದರೆ ಅದಲ್ಲವೇ ಒಳಿತು.
ಚಿಂತಿಸುವವರಿಗೆ ಇದರಲ್ಲಿ ಪಾಠವಿದೆ.
*ಸುನಿಲ್ ಬೋಂದೆಲ್, ಮಂಗಳೂರು*
Musalmaanara antarangavannu bahirangavaagi tili padisiruva sunil ravarige dhanyavaadagalu,
Nimmantaha bahuteka hindu sahodararu namma deshaddalli iruvatanaka e alpa budhiya alpa dushtarinda hedaruva avashyakate illa ,aadare ivarannu naavella seri vaggatagi tadeyaddidare desha ashaanti haagu aunnati kadege saagabahudu, dushtarinda bhaaratavannu rakshisalendu prarthisona,
“Mera bharath mahaan”