Homeಮುಖಪುಟ’ತೆಗೆದುಕೊಳ್ಳಿ ನಿಮ್ಮ ಸ್ವಾತಂತ್ರ್ಯ’ ಎಂದು ದೆಹಲಿಯ ಜಾಮಿಯಾ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿ

’ತೆಗೆದುಕೊಳ್ಳಿ ನಿಮ್ಮ ಸ್ವಾತಂತ್ರ್ಯ’ ಎಂದು ದೆಹಲಿಯ ಜಾಮಿಯಾ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿ

- Advertisement -
- Advertisement -

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದ ಜನರ ಮೇಲೆ ಇಂದು ಮಧ್ಯಾಹ್ನ ಅಪರಿಚಿತ ವ್ಯಕ್ತಿ ಗುಂಡು ಹಾರಿಸಿದ್ದು, ಈ ಪ್ರದೇಶದಲ್ಲಿ ಗೊಂದಲ ಮತ್ತು ಭೀತಿ ಉಂಟಾಗಿದೆ. ಗುಂಡಿನ ದಾಳಿಗೆ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ.

ದೆಹಲಿಯ ಜಾಮಿಯಾ ಬಳಿ ಕಪ್ಪು ಜಾಕೆಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ ದುಷ್ಕರ್ಮಿಯೊಬ್ಬನು ಪ್ರತಿಭಟನಾಕಾರರ ಮೇಲೆ “ಯೆ ಲೋ ಆಜಾದಿ (ತೆಗೆದುಕೊಳ್ಳಿ ನಿಮ್ಮ ಸ್ವಾತಂತ್ರ್ಯ) ಎಂದು ಕೂಗಿ ಗುಂಡು ಹಾರಿಸಿದರುವ ಘಟನೆ ಜರುಗಿದೆ.

ಜಾಮಿಯಾ ಸಮನ್ವಯ ಸಮಿತಿ (ಜೆಸಿಸಿ) ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಜಾಮಿಯಾ ಪ್ರದೇಶದಿಂದ ರಾಜ್ ಘಾಟ್‌ಗೆ ಮೆರವಣಿಗೆ ಆಯೋಜಿಸಿದ ದಿನ ಇದು ಸಂಭವಿಸಿದೆ.

ದೆಹಲಿಯ ಜಾಮಿಯಾ ಬಳಿ ಸಿಎಎ, ಎನ್.ಆರ್‌.ಸಿ ವಿರೋಧಿ ಹೋರಾಟಗಾರರ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿ.. ವಿಡಿಯೋ ನೋಡಿ

Posted by Naanu Gauri on Thursday, January 30, 2020

ಆ ದುಷ್ಕರ್ಮಿ ವ್ಯಕ್ತಿಯನ್ನು ಬಲಪ್ರಯೋಗದ ಮೂಲಕ ಪೊಲೀಸರು ಬಂಧಿಸಿದ್ದಾರೆ. ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪ್ರದೇಶದ ಸಮೀಪವಿರುವ ಎಲ್ಲಾ ರಸ್ತೆಗಳಲ್ಲಿ ಸಂಚಾರವನ್ನು ತಿರುಗಿಸಲಾಗಿದೆ.

ನಮ್ಮಲ್ಲಿ ಯಾರೂ ಗುರುತಿಸದ ಈ ಹೊರಗಿನವನು ಮೆರವಣಿಗೆಯ ಶಾಂತಿಯನ್ನು ಭಂಗಗೊಳಿಸಲು ಪ್ರಯತ್ನಿಸಿದಾಗ ನಾವು ಬ್ಯಾರಿಕೇಡ್‌ಗಳ ಬಳಿ ನಿಂತಿದ್ದೆವು. ಕೈಯಲ್ಲಿ ರಿವಾಲ್ವರ್‌ನೊಂದಿಗೆ ಆತ ನಮ್ಮ ಮುಂದೆ ಸಾಗುತ್ತಿದ್ದನು. ನಾವೆಲ್ಲರೂ ಅವನನ್ನು ತಡೆಯಲು ಮತ್ತು ಅವನನ್ನು ಶಾಂತಗೊಳಿಸಲು ಪ್ರಯತ್ನಿಸಿದೆವು. ಪೊಲೀಸರು ಅಲ್ಲಿ ನಿಂತಿದ್ದರು. ಆ ವ್ಯಕ್ತಿಯನ್ನು ತಡೆಯಲು ನಾವು ಪೊಲೀಸರನ್ನು ಕೇಳಿದೆವು. ಆದರೆ ಅವರು ಸುಮ್ಮನೆ ಅಲ್ಲಿಯೇ ನಿಂತಿದ್ದರು. ನಾವು ಅವನ ಕೈಯಿಂದ ರಿವಾಲ್ವರ್ ತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಅವನು ಗುಂಡು ಹಾರಿಸಿಬಿಟ್ಟ” ಎಂದು ಭಯಾನಕ ಘಟನೆಗೆ ಸಾಕ್ಷಿಯಾದ ಜಾಮಿಯಾ ವಿದ್ಯಾರ್ಥಿನಿ ಆಮ್ನಾ ಆಸಿಫ್ ಎನ್‌ಟಿವಿಗೆ ತಿಳಿಸಿದ್ದಾರೆ. ಮತ್ತು ಅವನು ಖಂಡಿತವಾಗಿಯೂ ನಮ್ಮಲ್ಲಿ ಒಬ್ಬನಲ್ಲ, ಅವನು ಹೊರಗಿನವನು” ಎಂದು ಅವರು ಹೇಳಿದ್ದಾರೆ.

ಈ ಕುರಿತು “ಏನಾಗುತ್ತಿದೆ? ದೆಹಲಿ ಪೊಲೀಸರು ಹಿಂಸಾಚಾರವನ್ನು ಬಹಿರಂಗವಾಗಿ ಆಹ್ವಾನಿಸುತ್ತಿದ್ದಾರೆಯೇ?
ದೆಹಲಿ ಚುನಾವಣೆಯಲ್ಲಿ ಗೆಲ್ಲುವ ಗಲಭೆಯ ತಂತ್ರದ ಭಾಗವಾಗಿರಬೇಡಿ. ಜೆಪಿಯನ್ನು ನೆನಪಿಡಿ: ಯಾವುದೇ ದಾಳಿ ಮಾಡಿದರೂ ನಮ್ಮ ಕೈಗಳು ಮೇಲೇರುವುದಿಲ್ಲ!” ಎಂದು ಸ್ವರಾಜ್‌ ಇಂಡಿಯಾದ ಯೋಗೇಂದ್ರ ಯಾದವ್‌ ಟ್ವೀಟ್‌ ಮಾಡಿದ್ದಾರೆ.

ಕಳೆದ ತಿಂಗಳು ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪೌರತ್ವ ಕಾನೂನನ್ನು ವಿರೋಧಿಸಿ ಹಿಂಸಾಚಾರ ನಡೆದಿತ್ತು; ವಿದ್ಯಾರ್ಥಿಗಳ ಮೇಲೆ ಪೊಲೀಸರು ಮಿತಿಮೀರಿದ ಬಲವನ್ನು ಬಳಸಿದ್ದರು. ಈ ತಿಂಗಳ ಆರಂಭದಲ್ಲಿ, ಮುಖವಾಡದ ಗೂಂಡಾಗಳು ಜೆಎನ್‌ಯುನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿ ರಾಷ್ಟ್ರವ್ಯಾಪಿ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸ್ನೇಹಿತರ’ ಮೇಲಿನ ದಾಳಿಯು ಮೋದಿಯ ಕುರ್ಚಿ ಅಲುಗಾಡುತ್ತಿರುವುದನ್ನು ತೋರಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

0
ತೆಲಂಗಾಣದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಚುನಾವಣೆ ಘೋಷಣೆಯಾದ ಬಳಿಕ ರಾಹುಲ್ ಗಾಂಧಿಯೇಕೆ ಅದಾನಿ–ಅಂಬಾನಿ ಬಗ್ಗೆ ಮಾತನಾಡುತ್ತಿಲ್ಲ. ಏನಾದರೂ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರಾ? ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಎಐಸಿಸಿ...