Homeಕರ್ನಾಟಕಬಸ್‌ಗೆ ನಮಸ್ಕರಿಸಿ ಸರ್ಕಾರಕ್ಕೆ ಧನ್ಯವಾದ ಹೇಳಿದ ಮಹಿಳೆಯ ಫೋಟೊ ವೈರಲ್; 'ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರ'...

ಬಸ್‌ಗೆ ನಮಸ್ಕರಿಸಿ ಸರ್ಕಾರಕ್ಕೆ ಧನ್ಯವಾದ ಹೇಳಿದ ಮಹಿಳೆಯ ಫೋಟೊ ವೈರಲ್; ‘ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರ’ ಎಂದ ಸಿಎಂ ಸಿದ್ದು

- Advertisement -
- Advertisement -

ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ‘ಗ್ಯಾರಂಟಿ’ಗಳಲ್ಲಿ ಒಂದಾದ, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಒದಗಿಸುವ ‘ಶಕ್ತಿ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಚಾಲನೆ ನೀಡಿದ್ದಾರೆ. ರಾಜ್ಯಾದ್ಯಂತ ಈ ಯೋಜನೆಗೆ ಚಾಲನೆ ದೊರೆತಿದ್ದು, ಎಲ್ಲ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.

ಈ ಯೋಜನೆಯಿಂದ ರಾಜ್ಯದ ಬಹುತೇಕ ಎಲ್ಲಾ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲ ಬಡ ಹೆಣ್ಣುಮಕ್ಕಳು ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಅದೇ ರೀತಿ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ, ಶಕ್ತಿ ಯೋಜನೆಗೆ ಚಾಲನೆ ಕೊಟ್ಟಬಳಿಕ ಬಸ್ ಏರಲು ಮುಂದಾದ ಮಹಿಳೆಯೊಬ್ಬರು ಬಸ್‌ಗೆ ನಮಸ್ಕರಿಸಿದ್ದಾರೆ. ಈ ಚಿತ್ರ ಸೋಷಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಪ್ರಜಾವಾಣಿ ಪತ್ರಿಕೆಯ ಛಾಯಾಗ್ರಾಹಕ ಬಿ.ಎಂ.ಕೇದಾರನಾಥ ಅವರು ತೆಗೆದ ಈ ಮಹಿಳೆಯ ಚಿತ್ರವನ್ನು ಸಿಎಂ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ”ನಾವು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೆ ಸಮಾಜದ ಎಲ್ಲಾ ವಿಧದ ಸೌಲಭ್ಯಗಳನ್ನು ಕೂತಲ್ಲಿಯೇ ಅನುಭವಿಸುತ್ತಿರುವ ಜನರಿಂದ ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾದವು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇಂದು ಶಕ್ತಿ ಯೋಜನೆಯನ್ನು ಜಾರಿಗೆ ಕೊಟ್ಟೆವು. ನಮ್ಮ ಯೋಜನೆ ಜಾರಿಗೊಂಡ ನಂತರ ತಾಯಿಯೊಬ್ಬರು ಧಾರವಾಡ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ನಮಸ್ಕರಿಸಿ ಅತ್ಯಂತ ಸಂತೋಷದಿಂದ ಉಚಿತ ಪ್ರಯಾಣ ಬೆಳೆಸಿದರು” ಎಂದು ಚಿತ್ರವನ್ನು ಹಂಚಿಕೊಂಡಿದ್ದಾರೆ.

”ನಾವು ಎಷ್ಟು ಅನುದಾನ ಖರ್ಚು ಮಾಡುತ್ತೇವೆ ಎನ್ನುವುದಕ್ಕಿಂತ ಯಾರಿಗಾಗಿ ಆ ಹಣ ವಿನಿಯೋಗಿಸುತ್ತಿದ್ದೇವೆ ಎಂಬುದು ಮುಖ್ಯ. ಈ ಕ್ಷಣ ಇನ್ನೂ ನೂರು ವಿಧದಲ್ಲಿ ಟೀಕೆಗಳು ಎದುರಾದರೂ ಅದ್ಯಾವುದಕ್ಕೂ ಕುಗ್ಗದಂತೆ ನನ್ನನ್ನು ಗುರಿಯೆಡೆಗೆ ಮತ್ತಷ್ಟು ದೃಢವಾಗಿಸಿದೆ” ಎಂದು ಹೇಳಿದ್ದಾರೆ.

”ಯೋಜನೆ ಜಾರಿಗೆ ಕೊಟ್ಟ ನನಗೆ ಸಂತೃಪ್ತಿ ನೀಡಿದ ಜೊತೆಗೆ ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವಿದು” ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯ ಫೋಟೋ ಭಾರೀ ವೈರಲ್

ಮಹಿಳೆಯ ಚಿತ್ರವನ್ನು ಹಂಚಿಕೊಂಡಿರುವ ಲೇಖಕ ಅರಣ್ ಜೋಳದಕೂಡ್ಲಿಗಿ ಅವರು, ”ಸ್ತ್ರೀಶಕ್ತಿಗೆ ಅಜ್ಜಿಯ ಗೌರವಾರ್ಪಣೆ.. ಹೃದಯ ಸ್ಪರ್ಶಿಸಿದ ಚಿತ್ರ, ಶಕ್ತಿ ಯೋಜನೆ ಯಾರಿಗೆ ಎಷ್ಟು ಉಪಯೋಗ ಆಗುತ್ತೋ ಗೊತ್ತಿಲ್ಲ. ಆದ್ರೆ ಉತ್ತರ ಕರ್ನಾಟಕದ ಕೆಲ ಹಳ್ಳಿ ಜನ್ರಿಗಂತೂ ತುಂಬಾ ಅನುಕೂಲವಾಗಿದೆ. ಹೇಳಿಕೊಳ್ಳದಂತಹ ಸಂಭ್ರಮವಿದೆ. ವಯಸ್ಸು 60 ದಾಟಿದ್ರೂ, ಹೊಲದಲ್ಲಿ 44 ಡಿಗ್ರಿ‌ ಸೆಲ್ಸಿಯಸ್ ಬಿಸಿಲಿನಲ್ಲಿ ದೇಹ ದಂಡಿಸಿ ಕೆಲಸ ಮಾಡಿದ್ರೆ 1 ದಿನಕ್ಕೆ 200 ಕೂಲಿ ಕೊಡ್ತಾರೆ. ಅದರಲ್ಲಿ ಆಸ್ಪತ್ರೆಗೆ ಹೋಗ್ಬೇಕು, ಮಗಳು- ಸಂಬಂಧಿಕರ ಊರಿಗೆ ಹೋಗ್ಬೇಕು ಅಂತ ಬಸ್ ಹತ್ತಿದ್ರೆ ಅಲ್ಲೇ ದುಡ್ಡು ಖಾಲಿಯಾಗೋದು. ಆದ್ರೆ ಇನ್ಮುಂದೆ ದುಡ್ಡು ಉಳಿತು. ಕೊಡೋ ಕೂಲಿಯಲ್ಲಿ ಮೂರೊತ್ತು ನೆಮ್ಮದಿಯಾಗಿ ಊಟ ಮಾಡಬಹುದು ಅನ್ನೋ ಭಾವುಕತೆ, ಖುಷಿ ಈ ಫೋಟೋದಲ್ಲಿ ಕಾಣಿಸ್ತಿದೆ. ಈ ಅಜ್ಜಿಯನ್ನ ನೋಡಿದಾಗ ಅದು ಸತ್ಯ ಅನ್ನಿಸ್ತಾ ಇದೆ” ಎಂದು ಬರೆದಿದ್ದಾರೆ.

ಬಾಲರಾಜ ತಾಳಕೇರಿ ಎನ್ನುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಫೋಟೋ ಶೇರ್ ಮಾಡಿದ್ದು, “ಶಕ್ತಿ” ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಡ .ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ವರದಾನ ವಾಯಿತು. ಇವತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದ ರಾಜ್ಯ ಸರ್ಕಾರ ಅಜ್ಜಿಯೊಬ್ಬಳ ಬಸ್ ಗೆ ನಮಸ್ಕರಿಸಿ ಬಸ್ ಹತ್ತಿ ಪ್ರಯಾಣಿಸುವ ದೃಶ್ಯ ಕಂಡುಬಂದಿತ್ತು. ಸೋ ಬಡ ,ಮದ್ಯಮ ವರ್ಗದ ಹೆಣ್ಣು ಮಕ್ಕಳಿಗೆ ತಮ್ಮ ಕೆಲಸ ಸ್ಥಳಗಳಿಗೆ. ಕಂಪನಿಗಳಿಗೆ, ಗಾಮೆ೯ಂಟ್ಸ್ ಗಳಿಗೆ,ಹೋಗಲು ತುಂಬಾ ಪ್ರಯೋಜನಕಾರಿಯಾಗಿದೆ. ದುಡಿದ ಸಂಬಳದಲ್ಲಿ ಸ್ವಲ್ಪ ಹಣ ಉಳಿತಾಯ ಮಾಡಿದಂತೆ ಆಯಿತು… ನಿಜವಾದ ಬಡ, ಮದ್ಯಮ ವರ್ಗದ ಮಹಿಳೆಯರಿಗೆ ನೆರವಾಗುವುದಂತು ಕಟು ಸತ್ಯ… ಸ್ತ್ರೀ ಸಬಲೀಕರಣ. ಸ್ವಾವಲಂಬನೆ” ಎಂದು ಬರೆದಿದ್ದಾರೆ.

ಪ್ರಕಾಶ್ ಎನ್ನುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಹಿಳೆಯ ಫೋಟೋ ಶೇರ್ ಮಾಡಿದ್ದು, ಹೃದಯ ಸ್ಪರ್ಶಿಸಿದ ಚಿತ್ರ ಎಂದಿದ್ದಾರೆ. ”ಶಕ್ತಿ ಯೋಜನೆ ಯಾರಿಗೆ ಎಷ್ಟು ಉಪಯೋಗ ಆಗುತ್ತೋ ಗೊತ್ತಿಲ್ಲ. ಆದ್ರೆ ಉತ್ತರ ಕರ್ನಾಟಕದ ಕೆಲ ಹಳ್ಳಿ ಜನ್ರಿಗಂತೂ ತುಂಬಾ ಅನುಕೂಲವಾಗಿದೆ. ಹೇಳಿಕೊಳ್ಳದಂತಹ ಸಂಭ್ರಮವಿದೆ.
ವಯಸ್ಸು 60 ದಾಟಿದ್ರೂ, ಹೊಲದಲ್ಲಿ 44 ಡಿಗ್ರಿ‌ ಸೆಲ್ಸಿಯಸ್ ಬಿಸಿಲಿನಲ್ಲಿ ದೇಹ ದಂಡಿಸಿ ಕೆಲಸ ಮಾಡಿದ್ರೆ 1 ದಿನಕ್ಕೆ 200 ಕೂಲಿ ಕೊಡ್ತಾರೆ. ಅದರಲ್ಲಿ ಆಸ್ಪತ್ರೆಗೆ ಹೋಗ್ಬೇಕು, ಮಗಳು- ಸಂಬಂಧಿಕರ ಊರಿಗೆ ಹೋಗ್ಬೇಕು ಅಂತ ಬಸ್ ಹತ್ತಿದ್ರೆ ಅಲ್ಲೇ ದುಡ್ಡು ಖಾಲಿಯಾಗೋದು. ಆದ್ರೆ ಇನ್ಮುಂದೆ ದುಡ್ಡು ಉಳಿತು. ಕೊಡೋ ಕೂಲಿಯಲ್ಲಿ ಮೂರೋತ್ತು ನೆಮ್ಮದಿಯಾಗಿ ಊಟ ಮಾಡಬಹುದು ಅನ್ನೋ ಭಾವುಕತೆ, ಖುಷಿ ಈ ಫೋಟೋದಲ್ಲಿ ಕಾಣಿಸ್ತಿದೆ. ಈ ಅಜ್ಜಿಯನ್ನ ನೋಡಿದಾಗ ನನ್ನ ಅವ್ವ ( ತಾಯಿ ) ನನೆಪಾದ್ಳು. ಗೊತ್ತಿಲ್ದೇ ಕಣ್ಣಲ್ಲಿ ನೀರು ಜಿನುಗಿತು)” ಎಂದು ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...