Homeಅಂಕಣಗಳುಗೌರಿ ಕಾರ್ನರ್: ಮರೆಮಾಚಿದ ಇತಿಹಾಸದ ಬಗ್ಗೆ....

ಗೌರಿ ಕಾರ್ನರ್: ಮರೆಮಾಚಿದ ಇತಿಹಾಸದ ಬಗ್ಗೆ….

"ಇತಿಹಾಸವು ನಡೆದಾಡುವ ವಿರೋಧಾಭಾಸವಿದ್ದಂತೆ ಮತ್ತು ಅಸಮಂಜಸತೆ ಅದರ ಕಾಲುಗಳನ್ನು ನಿಯಂತ್ರಿಸುತ್ತಿರುತ್ತದೆ. ಆ ಕಾರಣದಿಂದಾಗಿಯೇ ಇತಿಹಾಸದ ಮೌನದಲ್ಲೇ ಹಲವಾರು ಸತ್ಯಗಳು ಅಡಗಿರುತ್ತವೆ ಮತ್ತು ಕೆಲವೊಮ್ಮೆ ಸುಳ್ಳು ಹೇಳುವ ಮೂಲಕವೂ ಸತ್ಯವನ್ನು ತೆರೆದಿಡಲಾಗುತ್ತದೆ" ಎಂದು ಹೇಳಿರುವ ಗಲಿಯಾನೋ ಅಂತಹ ಹಲವು ಸತ್ಯಗಳನ್ನು ತಮ್ಮ ಪುಸ್ತಕದಲ್ಲಿ ಪಟ್ಟಿ ಮಾಡಿದ್ದಾರೆ.

- Advertisement -
- Advertisement -

ಪರ್ವತಾರೋಹಿ ಎಡ್ಮಂಡ್ ಹಿಲೇರಿ ತೀರಿಹೋಗಿದ್ದರ ಬಗ್ಗೆ ವರದಿ ಮಾಡಿದ ಎಲ್ಲಾ ಮಾಧ್ಯಮಗಳು ಮೌಂಟ್ ಎವರೆಸ್ಟ್ ಬಗ್ಗೆಯೂ ಬರೆದಿದ್ದವು. ಆದರೆ ಬಹಳಷ್ಟು ಜನಕ್ಕೆ ಗೊತ್ತಿಲ್ಲದಿರುವುದೇನೆಂದರೆ ಯಾವುದನ್ನು ನಾವೆಲ್ಲ ಇವತ್ತು ಮೌಂಟ್ ಎವರೆಸ್ಟ್ ಎಂದು ಕರೆಯುತ್ತೇವೆಯೋ ಆ ಶಿಖರವನ್ನು ನೇಪಾಳದ ಜನ ಸಾಗರಮಾತಾ ಎಂದೂ, ಟಿಬೆಟ್‌ನ ಜನ ಚಿಮೋಲುಂಗ್ಮಾ ಎಂದೂ, ಭಾರತದ ಜನ ಗೌರಿಶಂಕರ ಎಂದೂ ಕರೆಯುತ್ತಿದ್ದರು.

ಆದರೆ ಯಾವಾಗ 1865ರಲ್ಲಿ ಅಂದಿನ ಬ್ರಿಟಿಷ್ ಸಾಮ್ರಾಜ್ಯದ ಸರ್ವೇಯರ್ ಜನರಲ್ ಆಫ್ ಇಂಡಿಯಾ ಸರ್ ಜಾರ್ಜ್ ಎವರೆಸ್ಟ್ ಎಂಬ ಅಧಿಕಾರಿ ಆ ಶಿಖರವನ್ನು ಅಳತೆ ಮಾಡಿದನೋ, ಆನಂತರ ಅದಕ್ಕೆ ಆತನ ಹೆಸರನ್ನೇ ಬ್ರಿಟಿಷರು ಇಟ್ಟರು. ಈಗ ಅದರ ಸುತ್ತಮುತ್ತಲಿನ ಜನ ಇಟ್ಟಿದ್ದ ಹೆಸರು ಮಾಯವಾಗಿ ಎಲ್ಲರಿಗೂ ಅದು ಮೌಂಟ್ ಎವರೆಸ್ಟ್ ಎಂದೇ ಪರಿಚಿತವಾಗಿದೆ. ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ ಇತ್ತೀಚೆಗೆ ಎಡ್ವಾರ್ಡೋ ಗಲಿಯಾನೊ ಎಂಬ ಉರುಗ್ವೆ ದೇಶದ ಖ್ಯಾತ ಪತ್ರಕರ್ತ ಮತ್ತು ಬರಹಗಾರ ಜನರ ಇತಿಹಾಸವನ್ನು ಹೇಗೆ ಪಟ್ಟಭದ್ರ ಹಿತಾಸಕ್ತಿಗಳು ಮರೆಮಾಚುತ್ತವೆ ಎಂಬುದನ್ನು ಕುರಿತು ಒಂದು ಪುಸ್ತಕ ಬರೆದಿದ್ದಾರೆ.

“ಇತಿಹಾಸವು ನಡೆದಾಡುವ ವಿರೋಧಾಭಾಸವಿದ್ದಂತೆ ಮತ್ತು ಅಸಮಂಜಸತೆ ಅದರ ಕಾಲುಗಳನ್ನು ನಿಯಂತ್ರಿಸುತ್ತಿರುತ್ತದೆ. ಆ ಕಾರಣದಿಂದಾಗಿಯೇ ಇತಿಹಾಸದ ಮೌನದಲ್ಲೇ ಹಲವಾರು ಸತ್ಯಗಳು ಅಡಗಿರುತ್ತವೆ ಮತ್ತು ಕೆಲವೊಮ್ಮೆ ಸುಳ್ಳು ಹೇಳುವ ಮೂಲಕವೂ ಸತ್ಯವನ್ನು ತೆರೆದಿಡಲಾಗುತ್ತದೆ” ಎಂದು ಹೇಳಿರುವ ಗಲಿಯಾನೋ ಅಂತಹ ಹಲವು ಸತ್ಯಗಳನ್ನು ತಮ್ಮ ಪುಸ್ತಕದಲ್ಲಿ ಪಟ್ಟಿ ಮಾಡಿದ್ದಾರೆ. ಅವುಗಳಲ್ಲಿ ಒಂದು ಉದಾಹರಣೆ ಮೌಂಟ್ ಎವರೆಸ್ಟ್ ವೃತ್ತಾಂತವನ್ನೇ ಹೋಲುತ್ತದೆ. ಅದು ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿರುವ ಎಲ್ಜಿನ್ ಅಮೃತಶಿಲೆಗಳಿಗೆ ಸಂಬಂಧಪಟ್ಟಿದ್ದು. ಗ್ರೀಕ್ ದೇಶದಲ್ಲಿನ ಪ್ರಾರ್ಥೆನಾನ್ ಮೂಲದ ಈ ಶಿಲೆಗಳಿಗೆ ಇದ್ದ ಸ್ಥಳೀಯ ಹೆಸರು ಫಿಡಿಯಾಸ್. ಆದರೆ ಅವುಗಳನ್ನು ಎಲ್ಜಿನ್ ಎಂಬ ಬ್ರಿಟಿಷ್ ವ್ಯಕ್ತಿ ವಸ್ತುಸಂಗ್ರಹಾಲಯಕ್ಕೆ ಮಾರಿದ್ದರಿಂದ ಆತನ ಹೆಸರನ್ನೇ ಆದಕ್ಕೆ ನೀಡಲಾಗಿದೆ. ಆ ಮೂಲಕ ಅವುಗಳ ಸ್ಥಳೀಯ ಇತಿಹಾಸವನ್ನು ಮರೆಮಾಚಲಾಗಿದೆ.

ಗಲಿಯಾನೋ ಇಂತಹದ್ದೇ ಹಲವಾರು ಇತರೆ ಉದಾಹರಣೆಗಳನ್ನು ನೀಡಿದ್ದಾರೆ. ವಿಶ್ವ ಇತಿಹಾಸವನ್ನರಿಯಲು ಅವು ನೆರವಾಗಬಹುದೆಂಬ ಕಾರಣಕ್ಕೆ ಇಲ್ಲಿ ಹಲವನ್ನು ನೀಡಿದ್ದೇನೆ.

  • ಯೂರೋಪಿನ ಪುನರುಜ್ಜೀವನಕ್ಕಾಗಿ ನೆರವಾದದ್ದು ಗನ್ ಪೌಡರ್, ದಿಕ್ಸೂಚಿ ಮತ್ತು ಮುದ್ರಣ ಯಂತ್ರ ಎಂಬ ಸಂಶೋಧನೆಗಳು. ಆದರೆ ವಾಸ್ತವವಾಗಿ ಈ ಮೂರು ವಸ್ತುಗಳನ್ನು ಚೀನಾ ದೇಶದವರು ಅದಕ್ಕೂ ಮುನ್ನವೇ ಸಂಶೋಧಿಸಿದ್ದರು ಮಾತ್ರವಲ್ಲ, ಚೀನಿಯರ ಇತರೆ ಸಂಶೋಧನೆಗಳನ್ನು ಯೂರೋಪಿಯನ್ನರು ’ಮರು ಸಂಶೋಧಿಸುತ್ತಾ’ ಅವುಗಳು ತಮ್ಮ ಕೊಡುಗೆಗಳು ಎಂದು ಹೇಳಿದರು.
  • ಅರ್ಜೆಂಟೈನಾದಲ್ಲಿರುವ ಅತಿ ಎತ್ತರದ ಸ್ಮಾರಕಕ್ಕೆ ಜನರಲ್ ರೋಕಾನ ಹೆಸರಿಡಲಾಗಿದೆ. ಈ ಪ್ರದೇಶಕ್ಕೆ ರೋಕಾನ ಕೊಡುಗೆ ಏನೆಂದರೆ ಪಟಗೊನಿಯಾದಲ್ಲಿದ್ದ ಬುಡಕಟ್ಟು ಜನರನ್ನು 19ನೇ ಶತಮಾನದಲ್ಲಿ ನಿರ್ನಾಮ ಮಾಡಿದ್ದು.
  • ಗುಲಾಮರನ್ನು ಸಾಗಿಸಲು ಬಳಸುತ್ತಿದ್ದ ಹಲವು ಹಡಗುಗಳ ಹೆಸರುಗಳು ವೋಲ್ಟೇರ್, ಜೀಸಸ್, ವಿಶ್ವಾಸ, ಸಮಾನತೆ ಮತ್ತು ಸ್ನೇಹ ಎಂಬುದಾಗಿತ್ತು.
  • ಆಮೆರಿಕವನ್ನು ಸ್ಥಾಪಿಸಿದ ಇಬ್ಬರು ಹಿರಿಯರ ಹೆಸರುಗಳು ಅಧಿಕೃತ ಇತಿಹಾಸದಿಂದಲೇ ಮರೆಯಾಗಿವೆ. ಯಾಕೆಂದರೆ ಅವರಲ್ಲಿ ರಾಬರ್ಟ್ ಕಾರ್ಟರ್ ಎಂಬಾತ ತನಗಾಗಿ ದುಡಿಯುತ್ತಿದ್ದ ಕರಿಯರಿಗೂ ಸ್ವಾತಂತ್ರ್ಯ ನೀಡಿದ್ದ ಮತ್ತು ಗವರ್ನರ್ ಮೋರಿಸ್ ಎಂಬಾತ ಕರಿಯ ಗುಲಾಮರು ಇತರರಿಗಿಂತ ಕೀಳು ಎಂಬ ಅಂಶವನ್ನು ಸಂವಿಧಾನದಲ್ಲಿ ಸೇರಿಸುವುದನ್ನು ವಿರೋಧಿಸಿದ್ದ. ಅವರ ಈ ನಿಲುವಿನಿಂದಾಗಿ ಅವರಿಬ್ಬರನ್ನು ಈಗ ಸಾಮೂಹಿಕ ನೆನಪಿನಿಂದಲೇ ಗಡಿಪಾರು ಮಾಡಲಾಗಿದೆ.
  • 1234ರಿಂದ ಏಳು ಶತಮಾನಗಳ ಕಾಲ ಚರ್ಚ್‌ಗಳಲ್ಲಿ ಮಹಿಳೆಯರು ಹಾಡುವುದನ್ನು ನಿಷೇಧಿಸಲಾಗಿತ್ತು. ಕಾರಣ ಅವರ ದನಿಗಳು ಅಪವಿತ್ರವೆಂದು ಭಾವಿಸಲಾಗಿತ್ತು.
  • 1793ರ ಫ್ರೆಂಚ್ ಕ್ರಾಂತಿಯ ನಂತರ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮೂರು ಸೂತ್ರಗಳನ್ನು ಘೋಷಿಸಿದಾಗ ‘ಪುರುಷರ ಹಕ್ಕುಗಳು’ ಎಂಬ ಕಾನೂನನ್ನು ಪ್ರಕಟಗೊಳಿಸಲಾಗಿತ್ತು. ಆಗ ಕ್ರಾಂತಿಕಾರಿ ತೀವ್ರವಾದಿ ಓಲಿಂಪಿಯಾ ದೆ ಗೂಬ್ ಎಂಬಾಕೆ ’ಮಹಿಳೆಯರ ಹಕ್ಕುಗಳು’ ಎಂಬ ಕಾನೂನನ್ನೂ ಪ್ರಕಟಿಸಬೇಕು ಎಂದು ಒತ್ತಾಯಿಸಿದ್ದಳು. ಹಾಗೆ ಕೇಳಿದ್ದಕ್ಕೆ ಅವಳ ಶಿರಚ್ಛೇದನ ಮಾಡಲಾಯಿತು.
  • ರಾಣಿ ಥಿಯೋಡೋರಾಳನ್ನು ಯಾರೂ ಕ್ರಾಂತಿಕಾರಿ ಮಹಿಳಾವಾದಿ ಎಂದು ನೆನಪಿಸಿಕೊಳ್ಳುವುದಿಲ್ಲ. ಆದರೆ 1500 ವರ್ಷಗಳ ಹಿಂದೆ ಆಳಿದ್ದ ಈಕೆ ಮಹಿಳೆಯರಿಗೆ ಗರ್ಭಪಾತ ಮತ್ತು ವಿಚ್ಛೇದನಾ ಹಕ್ಕುಗಳನ್ನು ನೀಡಿದ್ದ ಪ್ರಥಮ ಮಹಿಳಾವಾದಿಯಾಗಿದ್ದಳು.
  • ಚೀನಾದ ಪೀಕಿಂಗ್‌ನಿಂದ ಯೂರೋಪಿಗೆ ತಂದ ಪ್ರಥಮ ಪೀಕಿನೀಸ್ ನಾಯಿಗೆ ಇಂಗ್ಲಿಷರು ’ಲೂಟಿ’ ಎಂದು ಹೆಸರಿಟ್ಟರು. ಬ್ರಿಟಿಷರು ಚೀನಾ ದೇಶವನ್ನು ಲೂಟಿ ಹೊಡೆದಿದ್ದರ ಸಂಕೇತವಾಗಿ ಆ ಹೆಸರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
  • ಕುಖ್ಯಾತ ಚಿತ್ರಹಿಂಸೆಯ ಯಾತನಾ ಶಿಬಿರಗಳನ್ನು ಮೊದಲ ಬಾರಿ ಆಫ್ರಿಕಾದಲ್ಲಿ ಪ್ರಾರಂಭಿಸಿದವರು ಬ್ರಿಟಿಷರು. ಆನಂತರ 2ನೇ ವಿಶ್ವ ಮಹಾಯುದ್ಧದಲ್ಲಿ ಯಹೂದಿಯರನ್ನು ಕೊಲ್ಲಲು ಅದನ್ನು ಉಪಯೋಗಿಸಿದವರು ಜರ್ಮನ್ನರು.
  • 1936ರ ಒಲಂಪಿಕ್ಸ್‌ಅನ್ನು ಆಯೋಜಿಸಿದ್ದು ಹಿಟ್ಲರ್. ಅಂದು ಫುಟ್‌ಬಾಲ್‌ನಲ್ಲಿ ಆಸ್ಟ್ರಿಯಾ ದೇಶವನ್ನು ಪೆರು ದೇಶ ಸೋಲಿಸಿತ್ತು. ಹಿಟ್ಲರ್‌ನ ಜನ್ಮಭೂಮಿ ಆಸ್ಟ್ರಿಯಾ ಆಗಿದ್ದರಿಂದ ಆ ಮ್ಯಾಚ್‌ಅನ್ನೇ ಒಲಂಪಿಕ್ಸ್ ಸಮಿತಿ ರದ್ದುಗೊಳಿಸಿತ್ತು.
  • ಕೊಲೆಗಡುಕ ಹಿಟ್ಲರ್ ಕಾರ್ಪೊರೆಟ್ ಕಂಪನಿಗಳ ಮಿತ್ರನಾಗಿದ್ದ. ಎರಡನೇ ಮಹಾಯುದ್ಧ ನಡೆಯುತ್ತಿದ್ದಾಗಲೇ ಜರ್ಮನ್ ಮಾರುಕಟ್ಟೆಗೆಂದು ಕೋಕಾಕೋಲಾ ಕಂಪನಿ ಫಾಂಟಾ ಎಂಬ ಪಾನೀಯವನ್ನು ತಯಾರಿಸಿತ್ತು. ಹಾಗೆಯೇ ಐಬಿಎಂ ಕೂಡ ಯಹೂದಿಯರನ್ನು ಗುರುತಿಸುವ ಮತ್ತು ವರ್ಗೀಕರಿಸುವ ತಂತ್ರಜ್ಞಾನವನ್ನು ನೀಡಿತ್ತು.
  • 1953ರಲ್ಲಿ ಕಮ್ಯುನಿಸ್ಟ್ ಜರ್ಮನಿಯಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸಿ ಬೀದಿಗಿಳಿದರು. ಆಗ ರಷ್ಯಾದ ಮಿಲಿಟರಿ ಟ್ಯಾಂಕ್‌ಗಳು ಅವರ ಬಾಯನ್ನು ಬಂದ್ ಮಾಡಿದವು. ಇದನ್ನು ನೋಡಿ ಬರ್ಟೋಲ್ಟ್ ಬ್ರೆಕ್ಟ್ ಎಂಬ ಖ್ಯಾತ ನಾಟಕಕಾರ ಒಂದು ಸಲಹೆಯನ್ನು ನೀಡಿದ್ದ: “ಸರ್ಕಾರವೇ ತನ್ನ ಪ್ರಜೆಗಳನ್ನು ನಿರ್ನಾಮ ಮಾಡಿ ತನಗೆ ಸೂಕ್ತವಾದ ಜನರನ್ನು ಆಯ್ಕೆಮಾಡಿಕೊಳ್ಳುವುದು ಸುಲಭವಲ್ಲವೆ?”
  • 1964ರಲ್ಲಿ ಟಾನ್ಕಿನ್ ಬೇ ಎಂಬಲ್ಲಿ ವಿಯೆಟ್ನಾಂ ಸೈನ್ಯವು ಆಮೆರಿಕದ ಎರಡು ಹಡಗುಗಳ ಮೇಲೆ ಯುದ್ಧ ದಾಳಿ ನಡೆಸಿದೆ ಎಂದು ಆರೋಪಿಸಿ, ಅಮೆರಿಕ ವಿಯೆಟ್ನಾಂ ಮೇಲೆ ಯುದ್ಧ ಸಾರಿತು. ಸಾವಿರಾರು ವಿಯೆಟ್ನಾಂ ಜನರನ್ನು ಹತ್ಯೆ ಮಾಡಿದ ನಂತರ ಅಮೆರಿಕದ ರಕ್ಷಣಾ ಸಚಿವ ಟಾನ್ಕಿನ್ ಬೇ ಮೇಲೆ ಯಾವುದೇ ದಾಳಿ ನಡೆದಿರಲಿಲ್ಲ ಎಂದು ಒಪ್ಪಿಕೊಂಡ.

ನಲವತ್ತು ವರ್ಷಗಳ ನಂತರ ಇರಾಕ್ ಮೇಲೂ ಇಂತಹದ್ದೇ ಕುತಂತ್ರವನ್ನು ಅಮೆರಿಕ ನಡೆಸಿತು.
ಇರಾಕಿನಲ್ಲಿ ’ನಾಗರಿಕತೆ’ಯನ್ನು ಸ್ಥಾಪಿಸಲೆಂದು ಅಮೆರಿಕ ದಾಳಿ ಮಾಡುವ ಸಾವಿರ ವರ್ಷಗಳ ಹಿಂದೆಯೇ ಈ ’ಹಿಂದುಳಿ’ದ ಪ್ರದೇಶದಲ್ಲಿ ಜಗತ್ತಿನ ಪ್ರಪ್ರಥಮ ಪ್ರೇಮ ಕವನವನ್ನು ರಚಿಸಲಾಗಿತ್ತು. ಸುಮೇರಿಯಾ ಭಾಷೆಯಲ್ಲಿರುವ ಈ ಕವನವನ್ನು ಮಣ್ಣಿನ ಮೇಲೆ ಬರೆಯಲಾಗಿತ್ತಲ್ಲದೆ ಅದು ದೇವತೆ ಮತ್ತು ಕುರುಬನೊಬ್ಬನ ಪ್ರೇಮ ಪ್ರಸಂಗ ಕುರಿತದ್ದಾಗಿತ್ತು.

ಪಟ್ಟಭದ್ರರ ದೃಷ್ಟಿಕೋನದಿಂದ ಬರೆದ ಇತಿಹಾಸದಲ್ಲಿ ಈ ಯಾವುದಕ್ಕೂ ಪ್ರಾಮುಖ್ಯತೆ ಇರುವುದಿಲ್ಲ.

(ಜನವರಿ 30, 2008ರಂದು ಬರೆದ ಗೌರಿಯವರ ಕಂಡಹಾಗೆ ಅಂಕಣದ ಆಯ್ದ ಭಾಗ ಇದು)


ಇದನ್ನೂ ಓದಿ: ಅಂದು ಟ್ಯಾಗೋರ್ ದ್ವೇಷ, ಇಂದು ಅವರನ್ನೇ ಅಪ್ರಾಪ್ರಿಯೇಟ್ ಮಾಡಿಕೊಳ್ಳಲು ಯತ್ನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...