Homeಮುಖಪುಟನಮಾಜು, ತಬ್ಲಿಗಿ, ಕುಂಭಮೇಳ ಕುರಿತು ಕೋರ್ಟು ಮತ್ತು ಮಾಧ್ಯಮಗಳ ವರ್ತನೆ

ನಮಾಜು, ತಬ್ಲಿಗಿ, ಕುಂಭಮೇಳ ಕುರಿತು ಕೋರ್ಟು ಮತ್ತು ಮಾಧ್ಯಮಗಳ ವರ್ತನೆ

- Advertisement -
- Advertisement -

ಕೋವಿಡ್ ಹೊಸ ಅಲೆ ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ ಈ ವಾರ ನಡೆದ ಕೆಲವು ಸನ್ನಿವೇಶಗಳನ್ನು ಗಮನಿಸೋಣ. ಇಲ್ಲಿ ಎರಡು ಹೈಕೋರ್ಟ್‌ಗಳ ಆದೇಶಗಳು ತದ್ವಿರುದ್ಧವಾಗಿವೆ. ಮುಖ್ಯವಾಹಿನಿ ಮೀಡಿಯಾಗಳು ಪಕ್ಷಪಾತ ಮಾಡುತ್ತಿದೆ. ಈ ಎಲ್ಲದರ ಮಧ್ಯೆ ಕೋವಿಡ್ ದಿನಕ್ಕೆ 2 ಲಕ್ಷ ಜನರನ್ನು ಸೋಂಕಿಸುತ್ತಿದೆ.

ದೆಹಲಿ ಹೈಕೋರ್ಟ್
ಸೋಮವಾರ ಏಪ್ರಿಲ್ 12
ದೆಹಲಿ ವಕ್ಫ್ ಮಂಡಳಿ: ನಿಜಾಮುದ್ದೀನ್ ಮರ್ಕಾಜ್‌ನಲ್ಲಿ ದಿನಕ್ಕೆ 5 ಸಲ ನಮಾಜ್ ಮಾಡಲು ಅವಕಾಶ ನೀಡಿ. ಪ್ರತಿ ಸಲಕ್ಕೆ 50 ಜನರಿಗೆ ಮಾತ್ರ ಅವಕಾಶ ಕೊಡಿ.

ಕೇಂದ್ರ ಸರ್ಕಾರ: ನಮಾಜಿಗೆ ಅನುಮತಿಸಬಹುದು.

ಮಂಗಳವಾರ ಏಪ್ರಿಲ್ 13
ಕೇಂದ್ರ ಸರ್ಕಾರ: ದೆಹಲಿ ವಿಪತ್ತು ನಿರ್ವಹಣಾ ಕಾಯ್ದೆ ಜಾರಿಯಲ್ಲಿ ಇರುವ ಕಾರಣ ನಮಾಜಿಗೆ ಅನುಮತಿ ನೀಡಲಾಗದು. ಹೆಚ್ಚೆಂದರೆ 20 ಜನರು ಪ್ರಾರ್ಥನೆ ಮಾಡಬಹುದು.

ಹೈಕೋರ್ಟ್: ಹರಿದ್ವಾರದಲ್ಲಿೆಲ್ಲ ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ಕುಂಭಮೇಳ ನಡೆಯುತ್ತಿದೆ. ಇಲ್ಲಿ ನೀವು ಧಾರ್ಮಿಕ ಸಭೆಯೊಂದಕ್ಕೆ 20 ಜನರಿಗಷ್ಟೇ ಅವಕಾಶ ಎನ್ನುತ್ತೀದ್ದೀರಾ? ಎಲ್ಲ ಧಾರ್ಮಿಕ ಸ್ಥಳ, ಸಭೆಗಳಿಗೂ ನೀವು ವಿಧಿಸಿರುವ ನಿರ್ಬಂಧಗಳ ಅಫಿಡವಿಟ್ ಸಲ್ಲಿಸಿ.

ಕೇಂದ್ರ ಸರ್ಕಾರದ ಪಕ್ಷಪಾತಿ ನಿಲುವುಗಳನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ. ನಿಜಾಮುದ್ದೀನ್ ಮರ್ಕಾಜ್ ಮಸೀದಿಯಲ್ಲಿ ದಿನಕ್ಕೆ 5 ಬಾರಿ ನಮಾಜ್ ಮಾಡಲು, ಪ್ರತಿ ಸಲ 50 ಜನ ನಮಾಜ್ ಮಾಡಲು ಅನುಮತಿ ನೀಡಿದೆ.

ಬಾಂಬೆ ಹೈಕೋರ್ಟ್
ದೆಹಲಿ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲೇ ಬಾಂಬೆ ಹೈಕೋರ್ಟಿನಲ್ಲಿ ಇದೇ ವಿಷಯವಾಗಿ ಒಂದು ವಿಚಾರಣೆ ನಡೆದು ವ್ಯತಿರಿಕ್ತ ತೀರ್ಪು ಹೊರ ಬಂದಿದೆ. ಮುಂಬೈನ ಜುಮ್ಮಾ ಮಸೀದಿ ಟ್ರಸ್ಟ್‌ನವರು, 50 ಜನರಿಗಾದರೂ ನಮಾಜ್ ಮಾಡಲು ಅವಕಾಶ ಕೊಡಿ, ದಿನಕ್ಕೆ ಹೀಗೆ ನಾಲ್ಕೈದು ಬಾರಿ ನಮಾಜ್ ಏರ್ಪಡಿಸುತ್ತೇವೆ. ನಮ್ಮ ಮಸೀದಿ ಆವರಣ ಒಂದು ಎಕರೆಯಷ್ಟು ವಿಶಾಲವಾಗಿದ್ದು 50 ಜನ ಅಲ್ಲಿ ಸೇರಿದರೆ ತೊಂದರೆಯಾಗುವುದಿಲ್ಲ ಎಂದು ಅರ್ಜಿ ಸಲ್ಲಿಸಿತ್ತು.

ಜನರ ಆರೋಗ್ಯ ಮುಖ್ಯ ಎಂದ ಬಾಂಬೆ ಹೈಕೋರ್ಟ್ ನಮಾಜಿಗೆ ಅನುಮತಿ ನಿರಾಕರಿಸಿತು. ಆ ಹೊತ್ತಿನಲ್ಲಿ ಕುಂಭಮೇಳದಲ್ಲಿ ಲಕ್ಷಾಂತರ ಜನ ನೀರಿನಲ್ಲಿ ಮುಳುಗಿ ಏಳುತ್ತಿದ್ದರು!

ಮೀಡಿಯಾ ಪಕ್ಷಪಾತ

ಕಳೆದ ವರ್ಷ ಆಗಿನ್ನೂ ಕೊವಿಡ್ ಹರಡಲು ಶುರುವಾದ ಸಮಯದಲ್ಲಿ ದೆಹಲಿಯ ನಿಜಾಮುದೀನ್ ಮರ್ಕಾಜ್ ಮಸೀದಿಯಲ್ಲಿ ನಡೆದ ತಬ್ಲಿಗಿ ಸಮಾವೇಶದಲ್ಲಿನ ಹಲವರಿಗೆ ಕೊವಿಡ್ ಕಾಣಿಸಿಕೊಂಡಿತ್ತು. ಸಮಾವೇಶದಲ್ಲಿ ಪಾಲ್ಗೊಂಡವರು ದೇಶದ ಬೇರೆ ಬೇರೆ ಭಾಗಗಳಿಗೆ ತೆರಳಿದ ನಂತರ ಅಲ್ಲಿ ಕೆಲವರಿಗೆ ಕೊವಿಡ್ ತಗುಲಿತ್ತು. ಆಗ ಮೀಡಿಯಾ ಪಾಲಿಗೆ ಕೊರೋನಾ ವೈರಸ್ ತಬ್ಲಿಗಿ ಆಗಿತ್ತು.

ಈಗ ಅದೇ ಮುಖ್ಯವಾಹಿನಿ ಮಾಧ್ಯಮಗಳಿಗೆ ಕುಂಭಮೇಳ ಮಾತ್ರ ಭಕ್ತಿಭಾವದ ಪ್ರತೀಕ. ಆಗ ದಿನಕ್ಕೆ ಸಾವಿರ ಲೆಕ್ಕದಲ್ಲಿ ಕೇಸುಗಳಿದ್ದವು, ಈಗ ದಿನಕ್ಕೆ ಲಕ್ಷಗಳ ಲೆಕ್ಕದಲ್ಲಿ ಕೇಸುಗಳಿವೆ. ಆದರೆ ಯಾರನ್ನು ಓಲೈಸಲು ಈ ಮೀಡಿಯಾಗಳು ಕುಂಭಮೇಳದ ವರದಿಯನ್ನು ಭಕ್ತಿಭಾವದಿಂದ ವರದಿ ಮಾಡುತ್ತಿವೆ.?

ಆಳುವ ಪಕ್ಷ

ಇಲ್ಲಿ ನೆನಪಿಡಬೇಕಾದದ್ದು, ಈಗ ಆಳುತ್ತಿರುವ ಸರ್ಕಾರದ ಮೂಲ ತಳಹದಿಯೇ ವೈದಿಕ ಪುನರುತ್ಥಾನ. ಈ ದೇಶದ ಬಹುಸಂಖ್ಯಾತರಾದ ದಲಿತರು, ಹಿಂದುಳಿದವರ ಸಣ್ಣಪುಟ್ಟ ಜಾತ್ರೆಗಳಿಗೂ ನಿಷೇಧ ಹೇರಲಾಗಿದೆ. (ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದೇ ಎಂಬುದು ಬೇರೆ ಚರ್ಚೆಯ ವಿಷಯ)…. ಮುಸ್ಲಿಮರು 50 ಜನ ಸೇರಿ ರಂಜಾನ್ ಪ್ರಾರ್ಥನೆ ಮಾಡುವುದನ್ನು ವಿರೋಧಿಸುವ ಸರ್ಕಾರ, ವೈದಿಕರು, ಕ್ಷತ್ರಿಯರು ಮತ್ತು ವೈಶ್ಯರೇ ಹೆಚ್ಚಾಗಿ ಪಾಲ್ಗೊಳ್ಳುವ ಕುಂಭಮೇಳಕ್ಕೆ ಅನುಮತಿ ನೀಡಿದೆ. ಈ ಮೇಲ್‌ಸ್ಥರದ ಹಿಂದೂಗಳು ಸತ್ರೂ ಪರವಾಗಿಲ್ಲ, ತನಗೆ ರಾಜಕೀಯ ಲಾಭ (ಮುಖ್ಯವಾಗಿ ಬಂಗಾಳದಲ್ಲಿ) ಆಗಬೇಕು ಎಂಬುದೇ ಸರ್ಕಾರದ ಉದ್ದೇಶವೇ?

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಕುಂಭಮೇಳದ 30 ಸಾಧುಗಳಿಗೆ ಕೊರೊನಾ ಪಾಸಿಟಿವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಿಜ ಸ್ವಾಮಿ…….
    ಹಿಂದೂಗಳು ಅಂಧ ಭಕ್ತರು ಅವರು ಮೂರ್ತಿ ಪೂಜೆ ನಂಬುತ್ತಾರೆ ನದಿ ಯಲ್ಲಿ ಮಿಂದೇಳುವ ಕಾರ್ಯಕ್ಕೆ ಪುಣ್ಯ ಎಂದು ಭಾವಿಸುತ್ತಾರೆ ಅದಕ್ಕೆ ಮಂದಿರ, ದೇವಸ್ಥಾನಗಳು ಇರುವ ಕಡೆ ಸಾವಿರಾರು ಜನ ಸೇರುತ್ತಾರೆ …..
    ಆದರೆ ತೀರ ಬುದ್ದಿವಂತರಾದ ಇಸ್ಲಾಂ ಭಾಂದವರು ಅವರ ಖುರಾನ್ ನಲ್ಲಿ ಹೇಳಿರುವ ಪ್ರಕಾರ ದಿನದಲ್ಲಿ ಐದು ಬಾರಿ ನಮಾಜ್ ಮಾಡಲು ಯಾವುದೇ ಕಟ್ಟಡದ ಮೂರ್ತಿ ಯ ಅವಶ್ಯಕತೆ ಇಲ್ಲ ಅಲ್ಲವೇ ಮನೆಯಲ್ಲೇ ಕೂತು ಐವತ್ತು ಬಾರಿ ನಮಾಜ್ ಮಾಡಲು ಆಕ್ಷೇಪ ಇಲ್ಲಾ ಅಲ್ಲವೇ……
    ನವಿಲನ್ನು ನೋಡಿ ಪುಕ್ಕ ಕಿತ್ತುಕೊಳ್ಳುವ ಅವಶ್ಯಕತೆ ಏನಿದೆ….
    ನಾನು ಸಾಮಾನ್ಯ ಪ್ರಜೆ …….ನನ್ನ ಬರಹ ಸರಿ ಅನಿಸಿದರೆ ದಯವಿಟ್ಟು ಒಂದಷ್ಟು ದುಡ್ಡು ಕಳಿಸಿ ……

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...