Homeಕರೋನಾ ತಲ್ಲಣಕೊರೊನಾ ಚಿಕಿತ್ಸೆಗೆ ಬಳಸುವ 265 ರೆಮ್‌ಡಿಸಿವಿರ್‌ ಬಾಟಲ್‌ಗಳೊಂದಿಗೆ ಮೂವರ ಬಂಧನ!

ಕೊರೊನಾ ಚಿಕಿತ್ಸೆಗೆ ಬಳಸುವ 265 ರೆಮ್‌ಡಿಸಿವಿರ್‌ ಬಾಟಲ್‌ಗಳೊಂದಿಗೆ ಮೂವರ ಬಂಧನ!

- Advertisement -
- Advertisement -

ಮಿಲಿಟರಿ ಗುಪ್ತಚರ ಘಟಕದ ಮಾಹಿತಿಯ ಮೇರೆಗೆ ಉತ್ತರ ಪ್ರದೇಶದ ಬಾಬು ಪೂರ್ವಾ ಪ್ರದೇಶದಲ್ಲಿ 265 ರೆಮ್‌ಡಿಸಿವಿರ್‌ ಬಾಟಲ್‌ಗಳೊಂದಿಗೆ ಇದ್ದ ಮೂವರನ್ನು ಕಾನ್ಪುರ್ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈಗಾಗಲೇ ದೇಶದ ಹಲವು ರಾಜ್ಯಗಳು ರೆಮ್ಡೆಸಿವಿರ್ ಕೊರತೆಯನ್ನು ಎದುರಿಸುತ್ತಿದೆ.

ಮೂವರ ಬಂಧನವನ್ನು ದಕ್ಷಿಣ ಕಾನ್ಪುರ ನಗರ ಪೊಲೀಸ್ (ಡಿಸಿಪಿ) ಉಪ ಆಯುಕ್ತೆ ರವಿನಾ ತ್ಯಾಗಿ ದೃಡಪಡಿಸಿದ್ದಾರೆ.

ರೆಮ್‌ಡಿಸಿವಿರ್‌ ಎಂಬುದು ಆಂಟಿ ವೈರಲ್ ಔಷಧವಾಗಿದ್ದು, ಇದನ್ನು ಕೊರೊನಾ ವೈರಸ್ ಕಾಯಿಲೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. “ರೆಮ್‌ಡಿಸಿವಿರ್‌ ಚುಚ್ಚುಮದ್ದಿನ 265 ಬಾಟಲುಗಳನ್ನು ವಶಪಡಿಸಿಕೊಳ್ಳಲಾಗಿದೆ, ಅವುಗಳ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ರವಿನಾ ತ್ಯಾಗಿ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಚಿಕಿತ್ಸೆಗೆ ರೆಮ್‌ಡಿಸಿವಿರ್‌‌ ಕೊರತೆ: ಖಾಸಗಿ ಆಸ್ಪತ್ರೆಗಳ ಒಕ್ಕೂಟ ‘ಫಾನಾ’

“ನೌಬಸ್ತಾದ ಪಶುಪತಿ ನಗರದ ಪ್ರಶಾಂತ್ ಶುಕ್ಲಾ ಮತ್ತು ಬಕ್ತೌರಿ ಪೂರ್ವಾ ನಿವಾಸಿ ಮೋಹನ್ ಸೋನಿ ಅವರನ್ನು ಸೀರೆ ಪ್ಯಾಕೆಟ್‌ನಲ್ಲಿ ಸುತ್ತಿಡಲಾದ ಬಾಟಲುಗಳೊಂದಿಗೆ ಬಂಧಿಸಲಾಗಿದೆ. ಈ ಇಬ್ಬರು ನೀಡಿದ ಮಾಹಿತಿಯ ಮೇರೆಗೆ ಎಸ್‌ಟಿಎಫ್ ಸಿಬ್ಬಂದಿಗಳು ಹರಿಯಾಣದ ಯಮುನಾ ನಗರ ನಿವಾಸಿ ಸಚಿನ್ ಕುಮಾರ್ ಅವರನ್ನು ಬಂಧಿಸಿದ್ದಾರೆ” ರವಿನಾ ತ್ಯಾಗಿ ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಗಳು ಈ ಲಸಿಕೆಯನ್ನು ಪಶ್ಚಿಮ ಬಂಗಾಳದಿಂದ ಪಡೆದಿದ್ದಾಗಿ ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ಪ್ರಶಾಂತ್ ಮತ್ತು ಮೋಹನ್ ಅವರು ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರಿಂದ ಸಾಲ ಪಡೆದಿದ್ದು, ಅದನ್ನು ಮರು ಪಾವತಿಸುವ ಬದಲು, 265 ರೆಮ್‌ಡಿಸಿವಿರ್‌ ಬಾಟಲುಗಳನ್ನು ತೆಗೆದುಕೊಂಡು ಹರಿಯಾಣದ ಯಮುನಾ ನಗರದಲ್ಲಿರುವ ಸಚಿನ್‌ಗೆ ತಲುಪಿಸಲು ಕೇಳಿಕೊಂಡಿದ್ದಾರೆ” ಎಂದು ಆರೋಪಿಗಳು ಹೇಳಿದ್ದಾಗಿ ರವೀನಾ ತ್ಯಾಗಿ ಹೇಳಿದ್ದಾರೆ.

ಬಾಟಲುಗಳಲ್ಲಿ ಬ್ಯಾಚ್ ಸಂಖ್ಯೆ ಕಾಣೆಯಾಗಿದ್ದು, ಬಂಧಿತ ವ್ಯಕ್ತಿಗಳ ಬಳಿ ಬಾಟಲುಗಳ ಬಿಲ್‌ಗಳು ಕೂಡಾ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾವನ್ನು ನೈಸರ್ಗಿಕ ವಿಪತ್ತು ಎಂದು ಘೋಷಿಸಿ, SDRF ಹಣ ಬಳಸಲು ಬಿಡಿ- ಉದ್ಧವ್ ಠಾಕ್ರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...