Homeಮುಖಪುಟಕೊರೊನಾವನ್ನು ನೈಸರ್ಗಿಕ ವಿಪತ್ತು ಎಂದು ಘೋಷಿಸಿ, SDRF ಹಣ ಬಳಸಲು ಬಿಡಿ- ಉದ್ಧವ್ ಠಾಕ್ರೆ

ಕೊರೊನಾವನ್ನು ನೈಸರ್ಗಿಕ ವಿಪತ್ತು ಎಂದು ಘೋಷಿಸಿ, SDRF ಹಣ ಬಳಸಲು ಬಿಡಿ- ಉದ್ಧವ್ ಠಾಕ್ರೆ

- Advertisement -
- Advertisement -

ಮಹಾರಾಷ್ಟ್ರದಲ್ಲಿ ಕೊರೊನಾ ಸಾಂಕ್ರಾಮಿಕ ಉಲ್ಬಣಗೊಂಡಿದ್ದು, ಕೊರೊನಾವನ್ನು “ನೈಸರ್ಗಿಕ ವಿಪತ್ತು” ಎಂದು ಘೋಷಿಸಿ, ಎಸ್‌ಡಿಆರ್‌ಎಫ್ ಹಣವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ತಮ್ಮ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಪರಿಣಾಮ ಹೆಚ್ಚು ಕೆಟ್ಟದಾಗಿದೆ. ಆರ್ಥಿಕ ಪರಿಹಾರ ನೀಡಲು ಕೊರೊನಾವನ್ನು ನೈಸರ್ಗಿಕ ವಿಪತ್ತು ಎಂದು ಘೋಷಿಸಿ, ಎಸ್‌ಡಿಆರ್‌ಎಫ್ (state disaster response fund) ಬಿಡುಗಡೆ ಮಾಡಬೇಕು ಎಂದು ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಮಹಾರಾಷ್ಟ್ರ ರಾಜ್ಯವು ಈಗ ಆರು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಕೊರೊನಾ ರೋಗಿಗಳ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಭಾರಿ ಏರಿಕೆ ಕಾಣುತ್ತಿದೆ. ಜನರಿಗೆ ಆರ್ಥಿಕ ಸಹಾಯದ ಅವಶ್ಯಕತೆಯಿದೆ. ಜೊತೆಗೆ “ಮಿನಿ-ಲಾಕ್‌ಡೌನ್ ಅವಶ್ಯಕತೆಯಾಗಿದೆ ಈಗ ಇದೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ‘ಬಿಜೆಪಿಯು ಟಿಎಂಸಿ ಮುಕ್ತ ಭಾರತಕ್ಕೆ ಕರೆ ನೀಡುವುದಿಲ್ಲ ಏಕೆ’: ರಾಹುಲ್ ಗಾಂಧಿ ಪ್ರಶ್ನೆ

“ಕೊರೊನಾ ಸಾಂಕ್ರಾಮಿಕದ ದೃಷ್ಟಿಯಿಂದ ಮಿನಿ-ಲಾಕ್‌ಡೌನ್ ಅವಶ್ಯಕತೆಯಾಗಿದೆ. ಸಾಂಕ್ರಾಮಿಕವನ್ನು ಎಸ್‌ಡಿಆರ್‌ಎಫ್ ಅಡಿಯಲ್ಲಿ ನೈಸರ್ಗಿಕ ವಿಪತ್ತು ಎಂದು ಘೋಷಿಸಬಹುದು. ಅದರಂತೆ ಎಲ್ಲಾ ಅಂತ್ಯೊದಯ ಅನ್ನಾ ಯೋಜನೆ (AYY) ಮತ್ತು PHH ಪಡಿತರ ಚೀಟಿ ಹೊಂದಿರುವವರಿಗೆ ಲಾಕ್‌ಡೌನ್ ಸಮಯದಲ್ಲಿ ದಿನಕ್ಕೆ ವಯಸ್ಕರಿಗೆ 100 ರೂಪಾಯಿ ಮತ್ತು ಮಕ್ಕಳಿಗೆ ದಿನಕ್ಕೆ 60 ರೂಪಾಯಿಯಂತೆ ಗ್ರಾಚ್ಯುಟೀಸ್ ರಿಲೀಫ್ ನೀಡಲು ರಾಜ್ಯಕ್ಕೆ ಅನುಮತಿ ನೀಡಬಹುದು. ಲಾಕ್‌ಡೌನ್ ಅವರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ” ಎಂದು ಉದ್ಧವ್ ಠಾಕ್ರೆ ಬರೆದಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಅಧಿಕ ಲಸಿಕೆ ಬೇಕಾಗಿದೆ: ಆದರೆ ಮಾಡೆರ್ನಾಕ್ಕೆ ಆಸಕ್ತಿಯಿಲ್ಲ, ಫಿಜರ್ ಷರತ್ತು ವಿಧಿಸುತ್ತಿದೆ!

ಕೊರೊನಾ ಸಾಂಕ್ರಾಮಿಕ ರೋಗದಿಂದ ದೇಶದಲ್ಲೇ ಹೆಚ್ಚು ಹಾನಿಗೊಳಗಾದ ರಾಜ್ಯ ಮಹಾರಾಷ್ಟ್ರವಾಗಿದೆ.  ಬುಧವಾರ ಸುಮಾರು 60,000 ಹೊಸ ಪ್ರಕರಣಗಳು ಮತ್ತು ಕಳೆದ ವಾರದಿಂದ ದಿನಕ್ಕೆ 50,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ.

ಕೊರೊನಾ ಸೋಂಕಿತ ರೋಗಿಗಳಿಗೆ ಆಸ್ಪತ್ರೆಯಲ್ಲಿ ಹಾಸಿಗೆಗಳು, ಆಕ್ಸಿಜನ್ ಸಿಲಿಂಡರ್‌, ವೈದ್ಯಕೀಯ ಉಪಕರಣಗಳು, ಕೊರೊನಾ ಲಸಿಕೆ ಎಲ್ಲವೂ ರಾಜ್ಯಾದ್ಯಂತ ಕೊರತೆಯಿವೆ.

ಪೂರ್ಣ ಲಾಕ್‌ಡೌನ್‌ಗೆ ಆದೇಶ ನೀಡುವುದರಿಂದ ದೂರ ಸರಿದಿರುವ ಉದ್ಧವ್ ಠಾಕ್ರೆ ಕರ್ಫ್ಯೂ ತರಹದ ನಿರ್ಬಂಧಗಳನ್ನು ಘೋಷಿಸಿದ್ದಾರೆ. ಆದರೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮತ್ತು ಲಸಿಕೆಗಳು ಕಡಿಮೆ ಪೂರೈಕೆಯಾಗುತ್ತಿರುವುದರಿಂದ ಮಿನಿ ಲಾಕ್‌ಡೌನ್‌ ಹೇರಲು ಬಯಸುತ್ತಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: ಮಸ್ಕಿಯಲ್ಲಿ ಮಟಮಟ ಮಧ್ಯಾಹ್ನವೇ ಕಾಂಚಾಣ ಝಣಝಣ: ಬಿಜೆಪಿ ಪರ ಪ್ರಚಾರಕ್ಕಿಳಿದ ಗಾಯಕಿ ಮಂಗ್ಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೇವಾಲಯ ಪ್ರವೇಶಿಸಿದ ದಲಿತ ಯುವಕನಿಗೆ ಡಿಎಂಕೆ ಮುಖಂಡನಿಂದ ಬೆದರಿಕೆ; ವಿಡಿಯೊ ವೈರಲ್‌

0
ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನಿರ್ವಹಿಸುತ್ತಿರುವ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಡಿಎಂಕೆ ಒಕ್ಕೂಟದ ಕಾರ್ಯದರ್ಶಿಯೊಬ್ಬರು ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ತಮಿಳುನಾಡಿನ ತಿರುಮಲೈಗಿರಿ (ಸೇಲಂ ಜಿಲ್ಲೆ)ಯಲ್ಲಿರುವ...