Homeಮುಖಪುಟದೆಹಲಿ: ನಿರಾಶ್ರಿತರ ಕಾರ್ಡ್‌ಗಾಗಿ ಒತ್ತಾಯಿಸಿ ಅಫ್ಘಾನಿಸ್ತಾನಿಯರ ಪ್ರತಿಭಟನೆ

ದೆಹಲಿ: ನಿರಾಶ್ರಿತರ ಕಾರ್ಡ್‌ಗಾಗಿ ಒತ್ತಾಯಿಸಿ ಅಫ್ಘಾನಿಸ್ತಾನಿಯರ ಪ್ರತಿಭಟನೆ

- Advertisement -
- Advertisement -

ಅಫ್ಘಾನ್‌ನಿಂದ ಭಾರತಕ್ಕೆ ಬಂದಿರುವ ನೂರಾರು ಅಫ್ಘಾನಿಸ್ತಾನದ ಪ್ರಜೆಗಳು ನಿರಾಶ್ರಿತರ ಕಾರ್ಡ್‌ಗಾಗಿ ಒತ್ತಾಯಿಸಿ ಬುಧವಾರ ನವದೆಹಲಿಯಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (UNHRC) ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

ನಿರಾಶ್ರಿತರ ಕಾರ್ಡ್‌ಗಾಗಿ ಅಫ್ಘಾನ್ ನಿರಾಶ್ರಿತರು ಕಳೆದ ಮೂರು ದಿನಗಳಿಂದ ಯುಎನ್‌ಎಚ್‌ಆರ್‌ಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ನಿರಾಶ್ರಿತರ ಕಾರ್ಡುಗಳು ಸಿಗದ ಹಿನ್ನೆಲೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇನ್ನು ಮೌನವಾಗಿರಲು ಸಾಧ್ಯವಿಲ್ಲ, ನಮಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಉತ್ತರ ನೀಡಬೇಕು, “ನಮಗೆ ನ್ಯಾಯ ಬೇಕು. ನಮಗೆ ಭವಿಷ್ಯ ಬೇಕು” ಎಂದು ಪ್ರತಿಭಟನಾ ನಿರತರು ಘೋಷಣೆ ಕೂಗಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: 2014 ರ ಬೀದಿ ನಾಟಕದ ದೃಶ್ಯ ‘ತಾಲಿಬಾನ್ ಮಹಿಳೆಯನ್ನು ಮಾರುತ್ತಿದೆ’ ಎಂದು ವೈರಲ್‌!

“ನಾವು ಅಫ್ಘಾನಿಸ್ತಾನದ ನಾಗರಿಕರಿಗೆ ನಿರಾಶ್ರಿತರ ಕಾರ್ಡುಗಳನ್ನು ನೀಡಬೇಕು ಎಂದು ಒತ್ತಾಯಿಸುತ್ತೇವೆ. ನಾವು ಅಫ್ಘಾನಿಸ್ತಾನಕ್ಕೆ ಹಿಂತಿರುಗುತ್ತೇವೆ ಎಂದು ಭಾವಿಸಿದ್ದೆವು. ಆದರೆ, ಅಲ್ಲಿನ ಪರಿಸ್ಥಿತಿ ಪೂರ್ತಿ ಹದಗೆಟ್ಟಿದೆ. ತಾಲಿಬಾನ್ ಪೂರ್ತಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ” ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.

“ವಿಶ್ವಸಂಸ್ಥೆಯು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಕಳೆದ ಮೂರು ದಿನಗಳಿಂದ ನಾವು ಪ್ರತಿಭಟನೆ ಮಾಡುತ್ತಿದ್ದೇವೆ, ಆದರೆ ಅಧಿಕಾರಿಗಳು ಕಚೇರಿಯ ಗೇಟ್‌ಗಳಿಗೂ ಕೂಡ ಬಂದಿಲ್ಲ. ಏನನ್ನೂ ಉತ್ತರಿಸಿಲ್ಲ” ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

“ನಮ್ಮ ಭವಿಷ್ಯವು ಈಗ ಮಂಕಾಗಿದೆ, ನಮ್ಮ ಮಕ್ಕಳು ಕೂಡ ಓದಲು ಸಾಧ್ಯವಿಲ್ಲ, ಯುವಕರಿಗೆ ಉದ್ಯೋಗ ಕೂಡ ಸಿಗುವುದಿಲ್ಲ” ಎಂದು ಪ್ರತಿಭಟನಾಕಾರರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ತಾಲಿಬಾನ್ ಕಳೆದ ವಾರ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಿತು. ಅಂದಿನಿಂದ ಅಫ್ಘಾನ್ ಪ್ರಜೆಗಳ  ದಂಡೇ ಉತ್ತಮ ಭವಿಷ್ಯದ ಭರವಸೆಯಲ್ಲಿ ದೇಶವನ್ನು ತೊರೆಯುತ್ತಿದೆ.

ಭಾರತಕ್ಕೆ ಬರುವ ಪ್ರತಿಯೊಬ್ಬ ಅಫ್ಘಾನ್ ಪ್ರಜೆಯೂ ಇ-ವಿಸಾ ಹೊಂದಿರಬೇಕು ಎಂದು ಒಕ್ಕೂಟ ಸರ್ಕಾರದ ಗೃಹ ಸಚಿವಾಲಯ ಬುಧವಾರ ಸೂಚನೆ ಹೊರಡಿಸಿದೆ. ಇ-ವಿಸಾ ಆರು ತಿಂಗಳ ಅವಧಿ ಹೊಂದಿರುತ್ತದೆ. ಯಾವುದೇ ಧರ್ಮದವರು ಇ-ವಿಸಾಗೆ ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ: ಅಫ್ಘಾನ್: ಕಾಬೂಲ್​ನಿಂದ ಉಕ್ರೇನ್​ ವಿಮಾನ ಅಪಹರಣ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...