ಕೊರೊನಾ ಎಫೆಕ್ಟ್: 1,100 ಉದ್ಯೋಗಿಗಳನ್ನು ವಜಾಗೊಳಿಸಲಿರುವ ಸ್ವಿಗ್ಗಿ

ಕೆಲವೇ ದಿನದ ಹಿಂದೆ ಜೊಮ್ಯಾಟೋ ಕೂಡಾ ತನ್ನ ಉದ್ಯೋಗಿಗಳ ಶೇಕಡಾ 13 ರಷ್ಟು ಜನರನ್ನು ವಜಾಗೊಳಿಸಿತ್ತು.

ಸ್ವಿಗ್ಗಿ, swiggy, ತನ್ನ 1,100 ಉದ್ಯೋಗಿಗಳನ್ನು ವಜಾಗೊಳಿಸಲಿರುವ ಆಹಾರ ವಿತರಣಾ ಕೆಂಪೆನಿ

ಕೊರೊನಾ ವೈರಸ್ ಸಾಂಕ್ರಾಮಿಕದಿಂದ ನಷ್ಟಕ್ಕೆ ತುತ್ತಾಗಿರುವುದರಿಂದ ಮುಂದಿನ ದಿನಗಳಲ್ಲಿ 1,100 ಉದ್ಯೋಗಿಗಳನ್ನು ವಜಾಗೊಳಿಸಲಾಗುವುದು ಎಂದು ಆಹಾರ ವಿತರಣಾ ಕಂಪನಿ ಸ್ವಿಗ್ಗಿ ತಿಳಿಸಿದೆ.

ಕೊರೊನಾ ವೈರಸ್ ಸಾಂಕ್ರಾಮಿಕ ಹರಡುವುದನ್ನು ತಡೆಯಲು ಲಾಕ್‌ಡೌನ್‌ನ ನಾಲ್ಕನೇ ಹಂತಕ್ಕೆ ದೇಶ ಪ್ರವೇಶಿಸುತ್ತಿದ್ದಂತೆ ಸ್ವಿಗ್ಗಿಯಲ್ಲಿ ಉದ್ಯೋಗಿಗಳ ವಜಾಗೊಳಿಸುವ ಸುದ್ದಿ ಬರುತ್ತಿವೆ. “ದುರದೃಷ್ಟಕರವಾಗಿ ಉದ್ಯೋಗಿಗಳನ್ನು ಕಡಿಮೆಗೊಳಿಸುವ ಒತ್ತಡ ಎದುರಿಸಬೇಕಾಗಿರುವುದರಿಂದ ಇಂದು ಸ್ವಿಗ್ಗಿಗೆ ಅತ್ಯಂತ ದುಃಖದ ದಿನವಾಗಿದೆ” ಎಂದು ಸ್ವಿಗ್ಗಿ ಸಹ-ಸಂಸ್ಥಾಪಕ ಮತ್ತು ಸಿಇಒ ಶ್ರೀಹರ್ಷ ಮಜೆಟಿ ಅವರು ಮೇ 18 ರಂದು ಕಂಪನಿಯ ಉದ್ಯೋಗಿಗಳಿಗೆ ಇಮೇಲ್‌ನಲ್ಲಿ ಬರೆದಿದ್ದಾರೆ ಎಂದು ಕಂಪನಿಯ ಬ್ಲಾಗ್ ವರದಿ ಮಾಡಿದೆ.

ಕೊರೊನಾ ಪ್ರಾರಂಭವಾದಾಗಿನಿಂದ ಕಂಪನಿಯು ತನ್ನ ಅಡುಗೆ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಮುಚ್ಚಲು ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ವಜಾಗೊಳ್ಳುತ್ತಿರುವ ಸಂಖ್ಯೆಯೂ ಸ್ವಿಗ್ಗಿ ಕಂಪೆನಿಯ 14% ಸಿಬ್ಬಂದಿಗಳಷ್ಟಿದೆ.

ಕೆಲವೇ ದಿನದ ಹಿಂದೆ ಮತ್ತೊಂದು ರೆಸ್ಟೋರೆಂಟ್ ಅಗ್ರಿಗೇಟ್ ಕಂಪೆನಿ ಜೊಮ್ಯಾಟೋ ತನ್ನ ಉದ್ಯೋಗಿಗಳಲ್ಲಿ ಶೇಕಡಾ 13 ರಷ್ಟು ಜನರನ್ನು ವಜಾಗೊಳಿಸಿತ್ತು.

ಮುಂದಿನ ಕೆಲವು ದಿನಗಳಲ್ಲಿ ಕಂಪನಿಯ ಎಚ್‌ಆರ್‌ ತಂಡವು ಉದ್ಯೋಗ ಕಳೆದುಕೊಳ್ಳುವ ನೌಕರರನ್ನು ಸಂಪರ್ಕಿಸುತ್ತದೆ ಎಂದಿರುವ ಅವರು, ಉದ್ಯೋಗ ಕಳೆದುಕೊಳ್ಳುತ್ತಿರುವ ಸಿಬ್ಬಂದಿಗೆ ಸ್ವಿಗ್ಗಿ “ಉತ್ತಮ ಆರ್ಥಿಕ, ಭಾವನಾತ್ಮಕ ಮತ್ತು ವೃತ್ತಿ-ಸಂಬಂಧಿತ ಬೆಂಬಲವನ್ನು ಒದಗಿಸಲು ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ಅವರು ಹೇಳಿದ್ದಾರೆ.

ಈ ಉದ್ಯೋಗಿಗಳಿಗೆ ಸ್ವಿಗ್ಗಿ ಕನಿಷ್ಠ ಮೂರು ತಿಂಗಳ ಸಂಬಳವನ್ನು ನೀಡುತ್ತದೆ. ಇದರ ಜೊತೆಗೆ, ಇಷ್ಟು ವರ್ಷ ಕೆಲಸ ಮಾಡಿದವರಿಗೆ ವರ್ಷಕ್ಕೆ ಒಂದು ತಿಂಗಳಿನಂತೆ ಸಂಬಳ ನೀಡಲಾಗುವುದು. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ.

ಈ ಉದ್ಯೋಗಿಗಳ ಕುಟುಂಬಗಳಿಗೆ ಅಸ್ತಿತ್ವದಲ್ಲಿರುವ ವೈದ್ಯಕೀಯ ವಿಮಾ ರಕ್ಷಣೆಯನ್ನು ಡಿಸೆಂಬರ್ 31, 2020 ರವರೆಗೆ ವಿಸ್ತರಿಸಿದೆ ಎಂದು ಕಂಪನಿ ತಿಳಿಸಿದೆ.


ಓದಿ: ಕಾರ್ಮಿಕ ಕಾಯ್ದೆಗಳಿಗೆ ಅವಸರದ ತಿದ್ದುಪಡಿ ಹಿಂದೆ ದುರುದ್ದೇಶದ ವಾಸನೆಯಿದೆ


ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಲು ಇಲ್ಲಿ ಕ್ಲಿಕ್ ಮಾಡಿ


Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here