Homeಮುಖಪುಟಅಜಿತ್ ಪವಾರ್ ಬಣ ನಿಜವಾದ ಎನ್‌ಸಿಪಿ, ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ: ಮಹಾರಾಷ್ಟ್ರ ಸ್ಪೀಕರ್

ಅಜಿತ್ ಪವಾರ್ ಬಣ ನಿಜವಾದ ಎನ್‌ಸಿಪಿ, ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ: ಮಹಾರಾಷ್ಟ್ರ ಸ್ಪೀಕರ್

- Advertisement -
- Advertisement -

ಕಳೆದ ವರ್ಷ ಜೂನ್‌ನಲ್ಲಿ ಶರದ್ ಪವಾರ್ ವಿರುದ್ಧ ಬಂಡಾಯವೆದ್ದಿದ್ದ 41 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ತಿರಸ್ಕರಿಸಿರುವ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್, ಅಜಿತ್ ಪವಾರ್ ಬಣವನ್ನು ‘ನೈಜ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ’ ಎಂದು ಹೇಳಿದೆ.

ಅಜಿತ್ ಪವಾರ್ ಅವರ ಚಿಕ್ಕಪ್ಪನ ವಿರುದ್ಧ ಬಂಡಾಯವೆದ್ದಿರುವ ಮತ್ತು ಬಿಜೆಪಿ-ಶಿವಸೇನೆಯ ಇದೇ ರೀತಿಯ ಒಡೆದುಹೋದ ಬಣದೊಂದಿಗೆ ಮೈತ್ರಿ ಮಾಡಿಕೊಂಡು ಹೊಸ ರಾಜ್ಯ ಸರ್ಕಾರ ರಚಿಸಲು ಅಜಿತ್ ಪವಾರ್ ಜೊತೆಗೂಡಿದದ್ದರು. ‘ಶಾಸಕರು ಪಕ್ಷದ ಇಚ್ಛೆಯಂತೆ ತೀರ್ಮಾನ ತಗೆದುಕೊಂಡಿರುವ ಕಾರಣ ಅವರನ್ನು ಅನರ್ಹಗೊಳಿಸಲಾಗುವುದಿಲ್ಲ’ ಎಂದು ನಾರ್ವೇಕರ್ ಹೇಳಿದರು.

‘ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಿಜವಾದ ರಾಜಕೀಯ ಪಕ್ಷ ಎಂದು ನಾನು ಭಾವಿಸುತ್ತೇನೆ. ಅಜಿತ್ ಪವಾರ್ 41 ಶಾಸಕರೊಂದಿಗೆ ಶಾಸಕಾಂಗ ಬಹುಮತವನ್ನು ಹೊಂದಿದ್ದಾರೆ. ಇದು ನಿರ್ವಿವಾದವಾಗಿದೆ’ ಎಂದು ಸ್ಪೀಕರ್ ಇಂದು ಸಂಜೆ ಹೇಳಿದರು.

53 ಶಾಸಕರನ್ನು ಹೊಂದಿದ್ದ ಎನ್‌ಸಿಪಿ:

53 ಶಾಸಕರನ್ನು ಹೊಂದಿದ್ದ ಎನ್‌ಸಿಪಿಯ 41 ಮಂದಿ ಅಜಿತ್ ಪವಾರ್ ಪರವಾಗಿ ನಿಂತರು, ಶರದ್ ಪವಾರ್ ಅವರು 1999 ರಲ್ಲಿ ಸ್ಥಾಪಿಸಿದ ಪಕ್ಷದ ಮೇಲೆ ಮತ್ತೆ ಹಿಡಿತ ಸಾಧಿಸಲು ಪ್ರಯತ್ನಿಸಿದಾಗ ಕೇವಲ 12 ಮಂದಿಯನ್ನು ಬಿಟ್ಟು, ಉಳಿದವರು ಅಜಿತ್ ಬೆಂಬಲಿಸಿದರು.

ಕಳೆದ ವಾರ ಚುನಾವಣಾ ಆಯೋಗವು ಅಜಿತ್ ಪವಾರ್ ಬಣವನ್ನು ‘ನಿಜವಾದ ಎನ್‌ಸಿಪಿ’ ಎಂದು ಗುರುತಿಸಲಾಗುವುದು, ಆ ಮೂಲಕ ಲೋಕಸಭೆ ಚುನಾವಣೆ ಮತ್ತು ರಾಜ್ಯಸಭೆ ಚುನಾವಣೆಗೆ ವಾರಗಳ ಮೊದಲು ಪಕ್ಷದ ಹೆಸರು ಮತ್ತು ಚಿಹ್ನೆ (ಗಡಿಯಾರ) ಮೇಲೆ ನಿಯಂತ್ರಣವನ್ನು ನೀಡುತ್ತದೆ.

ಚುನಾವಣಾ ಸಮಿತಿಯು ಶರದ್ ಪವಾರ್‌ಗೆ ಹೊಸ ಹೆಸರನ್ನು ನಿರ್ಧರಿಸಲು ಕೆಲವೇ ಗಂಟೆಗಳನ್ನು ನೀಡಿತು. ಅವರ ಬಣವನ್ನು ಅಂತಿಮವಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಶರದ್‌ಚಂದ್ರ ಪವಾರ್ ಎಂದು ಮರುನಾಮಕರಣ ಮಾಡಲಾಯಿತು.

ಚುನಾವಣಾ ಆಯೋಗದ ಕ್ರಮಗಳನ್ನು ಎನ್‌ಸಿಪಿಯು  “ಪ್ರಜಾಪ್ರಭುತ್ವದ ಕೊಲೆ” ಎಂದು ಕರೆದಿದೆ. ‘ಎನ್‌ಸಿಪಿಯನ್ನು ಸ್ಥಾಪಿಸಿದವರು ಯಾರು ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಹಾಗಾಗಿ ಚುನಾವಣಾ ಆಯೋಗ ಏನು ಮಾಡಿದೆ? ಪ್ರಜಾಪ್ರಭುತ್ವದ ಕೊಲೆಯಾಗಿದೆ…’ ಎಂದು ಮಾಜಿ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ.

ಇಸಿ ಆದೇಶದ ವಿರುದ್ಧ ಶರದ್ ಪವಾರ್ ಪಾಳಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಚುನಾವಣಾ ಆಯೋಗದ ನಿರ್ಧಾರವು ಶಿವಸೇನೆ ವಿರುದ್ಧ ಶಿವಸೇನೆ ಹೋರಾಟದಂತೆಯೇ ಹೋಲುತ್ತಿದೆ. ಇದರಲ್ಲಿ ಏಕನಾಥ್ ಶಿಂಧೆ ನೇತೃತ್ವದ ಬಣ (ಬಿಜೆಪಿಯೊಂದಿಗೆ ಬಂಡಾಯವೆದ್ದು ಮತ್ತು ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾದರು) ಮಾಜಿ ಮುಖ್ಯಮಂತ್ರಿ ಉದ್ಧವ್ ಅವರನ್ನು ಬಿಟ್ಟು ‘ನಿಜವಾದ ಸೇನೆ’ ಎಂದು ಗುರುತಿಸಲಾಯಿತು. ತನ್ನ ತಂದೆ ಸ್ಥಾಪಿಸಿದ ಪಕ್ಷಕ್ಕೆ ಹೊಸ ಗುರುತನ್ನು ಹುಡುಕಲು ಚುನಾವಣೆಗೆ ವಾರಗಳ ಮೊದಲು ಠಾಕ್ರೆ ಅರಸಾಹಸ ಪಟ್ಟರು.

ಇದನ್ನೂ ಓದಿ; ‘ನಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಡೆಹಿಡಿಯಲಾಗಿದೆ..’; ಕೇಂದ್ರದ ಜತೆಗಿನ ಸಭೆ ಬಹಿಷ್ಕರಿಸಲು ರೈತರ ನಿರ್ಧಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...