Homeಮುಖಪುಟಹೆರಿಗೆಗೆ 15000 ರೂ. ಲಂಚದ ಬೇಡಿಕೆ ಆರೋಪ: ಗರ್ಭಿಣಿಯನ್ನು ಆಚೆಗೆ ತಳ್ಳಿದ ಸಿಬ್ಬಂದಿ, ಆಸ್ಪತ್ರೆ ಗೇಟ್‌...

ಹೆರಿಗೆಗೆ 15000 ರೂ. ಲಂಚದ ಬೇಡಿಕೆ ಆರೋಪ: ಗರ್ಭಿಣಿಯನ್ನು ಆಚೆಗೆ ತಳ್ಳಿದ ಸಿಬ್ಬಂದಿ, ಆಸ್ಪತ್ರೆ ಗೇಟ್‌ ಬಳಿಯೇ ಮಗುವಿಗೆ ಜನ್ಮ ನೀಡಿದ ತಾಯಿ

- Advertisement -
- Advertisement -

ಉತ್ತರ ಪ್ರದೇಶದ ರಾಯ್‌ಬರೇಲಿಯ ಜಿಲ್ಲಾ ಮಹಿಳಾ ಆಸ್ಪತ್ರೆಯ ಗೇಟ್ ಬಳಿಯೇ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಅತ್ಯಂತ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ (ಅಕ್ಟೋಬರ್ 3) ತಡರಾತ್ರಿ ಈ ಘಟನೆ ಸಂಭವಿಸಿದ್ದು, ಹೆರಿಗೆ ಮಾಡಿಸಲು ಆಸ್ಪತ್ರೆ ಸಿಬ್ಬಂದಿ ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು ಹಾಗೂ ಹಣ ನೀಡಲು ಸಾಧ್ಯವಾಗದಿದ್ದಾಗ ಗರ್ಭಿಣಿಯನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸಿದರು ಎಂದು ಸಂತ್ರಸ್ತೆ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಆಸ್ಪತ್ರೆಯ ಮುಖ್ಯ ಗೇಟ್ ಬಳಿ ಗರ್ಭಿಣಿ ರಸ್ತೆಯಲ್ಲೇ ಹೆರಿಗೆ ನೋವಿನಿಂದ ನರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬೆನ್ನಲ್ಲೇ ಈ ಘಟನೆ ತೀವ್ರ ಸಂಚಲನ ಮೂಡಿಸಿದೆ.

ವರದಿಗಳ ಪ್ರಕಾರ, ರಾಯ್‌ಬರೇಲಿ ಜಿಲ್ಲೆಯ ಸಲೋನ್ ನಿವಾಸಿ ಪ್ರತಿಭಾ ಎಂಬ ಗರ್ಭಿಣಿಯನ್ನು ಆಕೆಯ ವಿಕಲಚೇತನ ಪತಿ ಶನಿವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಹೆರಿಗೆಗಾಗಿ ಜಿಲ್ಲಾ ಮಹಿಳಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿ ಹೆರಿಗೆ ಮಾಡಿಸಲು ಆರಂಭದಲ್ಲಿ 10,000 ರೂಪಾಯಿ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು, ನಂತರ ಈ ಮೊತ್ತವನ್ನು 15,000 ರೂಪಾಯಿಗೆ ಹೆಚ್ಚಿಸಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ತೀವ್ರ ಬಡತನದಲ್ಲಿದ್ದ ಕುಟುಂಬವು ಇಷ್ಟೊಂದು ದೊಡ್ಡ ಮೊತ್ತವನ್ನು ನೀಡಲು ಅಸಮರ್ಥತೆ ವ್ಯಕ್ತಪಡಿಸಿದಾಗ, ಸಿಬ್ಬಂದಿ ಚಿಕಿತ್ಸೆ ನೀಡದೆ ನಿರ್ಲಕ್ಷಿಸಿ ಆಕೆಯನ್ನು ಆಸ್ಪತ್ರೆಯ ಹೊರಗೆ ನಡೆಯುವಂತೆ ಸೂಚಿಸಿದರು ಎನ್ನಲಾಗಿದೆ. ಇದರಿಂದಾಗಿ ಹೆರಿಗೆ ನೋವು ಹೆಚ್ಚಾಗಿ ತಡರಾತ್ರಿ 11 ಗಂಟೆಯ ಸುಮಾರಿಗೆ ಆಸ್ಪತ್ರೆಯ ಮುಖ್ಯ ಗೇಟ್ ಬಳಿಯೇ ಪ್ರತಿಭಾ ಮಗುವಿಗೆ ಜನ್ಮ ನೀಡುವಂತಾಯಿತು. ಈ ಕುರಿತು ಎಲ್ಲಿಯೂ ದೂರು ನೀಡದಂತೆ ಸಿಬ್ಬಂದಿ ಬೆದರಿಕೆ ಹಾಕಿದ್ದರು ಎಂದೂ ಸಂಬಂಧಿಕರು ಆರೋಪಿಸಿದ್ದಾರೆ.

ಮತ್ತೊಂದೆಡೆ, ಈ ಎಲ್ಲಾ ಗಂಭೀರ ಆರೋಪಗಳನ್ನು ಆಸ್ಪತ್ರೆಯ ಆಡಳಿತ ಮಂಡಳಿಯು ನಿರಾಕರಿಸಿದೆ. ಘಟನೆಯ ಕುರಿತು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ (CMS) ಡಾ. ನಿರ್ಮಲಾ ಸಾಹು ಅವರು, ಪ್ರತಿಭಾ ಅವರನ್ನು ಆಕೆಯ ಪತಿ ಆಸ್ಪತ್ರೆಗೆ ಸೇರಿಸಿದ್ದು ನಿಜ. ಆದರೆ ಆಕೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದು, ಸಿಬ್ಬಂದಿಗೆ ಮಾಹಿತಿ ನೀಡದೆ ಸ್ವತಃ ತಾನೇ ಹಾಸಿಗೆಯಿಂದ ಎದ್ದು ಆಸ್ಪತ್ರೆಯ ಹೊರಗೆ ಹೋಗಿದ್ದಳು ಎಂದು ಸಮರ್ಥಿಸಿಕೊಂಡಿದ್ದಾರೆ. ಗೇಟ್ ಬಳಿ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆಕೆಯನ್ನು ಮತ್ತು ಮಗುವನ್ನು ತಕ್ಷಣವೇ ಒಳಗೆ ಕರೆತಂದು ತುರ್ತು ಚಿಕಿತ್ಸೆ ನೀಡಿದ್ದಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಪ್ರತಿಪಾದಿಸಿದೆ.

ಪ್ರಸ್ತುತ ತಾಯಿ ಮತ್ತು ನವಜಾತ ಶಿಶು ಇಬ್ಬರನ್ನೂ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ನವಜಾತ ಶಿಶುವನ್ನು ತೀವ್ರ ನಿಗಾ ಘಟಕಕ್ಕೆ (ICU) ಸ್ಥಳಾಂತರಿಸಲಾಗಿದೆ. ಬಡ ಕುಟುಂಬದ ಲಂಚದ ಆರೋಪ ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯ ಸ್ಪಷ್ಟನೆಗಳ ನಡುವೆ ವಿರೋಧಾತ್ಮಕ ಹೇಳಿಕೆಗಳು ವ್ಯಕ್ತವಾಗಿದ್ದು, ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯ ಕೇಳಿಬರುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕ್ಯಾಂಪಸ್ ಹಿಂಸಾಚಾರದ ಬೆನ್ನಲ್ಲೇ SRFTI ಬಳಿ ರ್ಯಾಲಿ: ವಿದ್ಯಾರ್ಥಿಗಳಿಂದ ಕೇಂದ್ರ ಸಚಿವರಿಗೆ ತುರ್ತು ರಕ್ಷಣೆಯ ಮನವಿ

ಕೋಲ್ಕತ್ತಾದ ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (SRFTI)ಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ಬೆನ್ನಲ್ಲೇ, ಸಂಸ್ಥೆಯ ಸಮೀಪ ಹಿಂದೂ ಜಾಗರಣ್ ಮಂಚ್ ರ್ಯಾಲಿ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು...

ಮಲ್ಲೇಶ್ವರಂ ಕ್ಷೇತ್ರದಲ್ಲಿ ಫಾರಂ-7 ಅಕ್ರಮ: ಬಿಜೆಪಿಯ ಬೂತ್ ಏಜೆಂಟ್ ವಿರುದ್ಧ FIR

ರಾಜ್ಯಾದ್ಯಂತ ತೀವ್ರ ರಾಜಕೀಯ ವಿವಾದ ಹಾಗೂ ಸಂಚಲನ ಮೂಡಿಸಿರುವ ಮತದಾರರ ಪಟ್ಟಿ ಪರಿಷ್ಕರಣೆಯ (SIR) ಅಕ್ರಮಗಳ ಸರಣಿಗೆ ಇದೀಗ ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರವೂ ಸೇರ್ಪಡೆಯಾಗಿದೆ. ಫಾರಂ-7 ಅನ್ನು ಅಸ್ತ್ರವಾಗಿಸಿಕೊಂಡು ಜೀವಂತವಾಗಿರುವ ಹಾಗೂ...

ಎಸ್‌ಐಆರ್ ವಿರುದ್ಧ ಮುಂಬೈ ‘ಗರ್ಜನ ಮೋರ್ಚಾ’ದಲ್ಲಿ ರಾಜ್ ಠಾಕ್ರೆ ಗುಡುಗು: EVM ಬದಲು ಬ್ಯಾಲೆಟ್ ಪೇಪರ್‌ಗೆ ಮರಳಲು ಆಗ್ರಹ

ಮುಂಬೈ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಕುರಿತು ದೇಶಾದ್ಯಂತ ಹೆಚ್ಚುತ್ತಿರುವ ಆಕ್ರೋಶದ ನಡುವೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ...

ಉತ್ತರ ಪ್ರದೇಶ: ಯೋಧನ ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಟ್ರಕ್‌ಗೆ ಡಿಕ್ಕಿ, ಆತನ ಕುಟುಂಬದ 3 ಮಂದಿ ಮತ್ತು ಚಾಲಕ ಸಾವು 

ಸುಲ್ತಾನ್‌ಪುರ: ಸೇನೆಯ ಸುಬೇದಾರ್ ಮೇಜರ್ ಒಬ್ಬರ ಮೃತದೇಹವನ್ನು ಹುಟ್ಟೂರಿಗೆ ಕೊಂಡೊಯ್ಯುತ್ತಿದ್ದ ಸೇನಾ ಆಂಬ್ಯುಲೆನ್ಸ್ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಮೃತ ಯೋಧನ ಕುಟುಂಬದ ಮೂವರು ಸದಸ್ಯರು ಸೇರಿದಂತೆ ನಾಲ್ವರು...

ಕೊಪ್ಪದಲ್ಲಿ ಫಾರಂ-7 ಮೂಲಕ ಅರ್ಹ 243 ಮತದಾರರ ಹೆಸರು ತೆಗೆಯಲು ಯತ್ನ: ಸಿಕ್ಕಿಬಿದ್ದ ಮೇಲೆ ಆಕ್ಷೇಪಣೆ ಹಿಂಪಡೆದ ಬಿಜೆಪಿಗರು

ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ, ನಿಯಮಗಳನ್ನು ದುರುಪಯೋಗಪಡಿಸಿಕೊಂಡು ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ನಡೆಯುತ್ತಿರುವ ಪ್ರಯತ್ನಗಳು ರಾಜ್ಯದ ನಾನಾ ಭಾಗಗಳಲ್ಲಿ ಬೆಳಕಿಗೆ ಬರುತ್ತಿವೆ....

ಗಾಂಧಿ ಜಯಂತಿ ಕಾರ್ಯಕ್ರಮದ ಮೇಲೆ ಬಿಜೆಪಿ ದಾಳಿ ಆರೋಪ: ಗಾಂಧಿ ಭಾವಚಿತ್ರ ಹರಿದುಹಾಕಿ ಬೆದರಿಕೆ; ಎಸ್‌ಎಫ್‌ಐ ನಾಯಕ ಸೇರಿ ಮೂವರ ಬಂಧನ

ಕೋಲ್ಕತ್ತಾ: ಮಹಾತ್ಮ ಗಾಂಧಿಯವರ ಜನ್ಮದಿನದ ಅಂಗವಾಗಿ ಎಡಪಕ್ಷಗಳು ಆಯೋಜಿಸಿದ್ದ ಕಾರ್ಯಕ್ರಮದ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಬಿರಾಟಿಯಲ್ಲಿ ಕೇಳಿಬಂದಿದೆ. ಕಾರ್ಯಕ್ರಮದ ವೇದಿಕೆ ಮತ್ತು...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕಠೋರ ಮತ್ತು ಅಸಭ್ಯ ನಡವಳಿಕೆ ಒಪ್ಪಲಾಗದು : ಜಂತರ್ ಮಂತರ್‌ನಲ್ಲಿ ಪತ್ರಕರ್ತರ ಮೇಲಿನ ದೌರ್ಜನ್ಯಕ್ಕೆ ಪ್ರೆಸ್ ಕ್ಲಬ್ ಆಫ್ ಇಂಡಿಯಾ ತೀವ್ರ ಖಂಡನೆ

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ದೆಹಲಿ ಪೊಲೀಸರು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ನಡೆದುಕೊಂಡ ರೀತಿ ಮತ್ತು ಅವರ ಮೇಲಿನ ದೌರ್ಜನ್ಯವನ್ನು ಖಂಡಿಸಿ 'ಪ್ರೆಸ್ ಕ್ಲಬ್...

SIR ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಕೇರಳದಲ್ಲಿ ಗ್ಯಾನೇಶ್ ಕುಮಾರ್ ವಿರುದ್ಧ ಹಳೆಯ ಪ್ರಕರಣ ಮರುತನಿಖೆಗೆ ಆದೇಶ 

ತಿರುವನಂತಪುರಂ: ದೇಶದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ವಿರುದ್ಧ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ, ಅವರ ಅಧಿಕಾರಾವಧಿಗೆ ಸಂಬಂಧಿಸಿದ...

2006 ಎಂಜಿನಿಯರ್ ಆತ್ಮಹತ್ಯೆ ಪ್ರಕರಣ : ಗ್ಯಾನೇಶ್ ಕುಮಾರ್ ವಿರುದ್ಧ ಮರುತನಿಖೆಗೆ ಕೇರಳಂ ಸರ್ಕಾರ ಆದೇಶ

ಪ್ರಸ್ತುತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅಕ್ರಮಗಳ ಆರೋಪ ಎದುರಿಸುತ್ತಿರುವ ದೇಶದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರಿಗೆ 2006ರ ಹಳೆಯ ಭ್ರಷ್ಟಾಚಾರ ಪ್ರಕರಣವೊಂದು ಮತ್ತೆ ಕಂಠಕವಾಗಿ ಪರಿಣಮಿಸಿದೆ....

ಜಂತರ್ ಮಂತರ್ ಪ್ರತಿಭಟನೆ ವೇಳೆ ಮಹಿಳಾ ಪತ್ರಕರ್ತೆಗೆ ಪೊಲೀಸ್ ಅಧಿಕಾರಿಯಿಂದ ಲೈಂಗಿಕ ಕಿರುಕುಳ: ರಾಹುಲ್ ಗಾಂಧಿ, ಸಿಜೆಪಿ ಆರೋಪ

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿ, ಬಿಜೆಪಿಗೆ ಅನುಕೂಲವಾಗುವಂತೆ ಕೋಟ್ಯಂತರ ಮತಗಳನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್...