Homeಕರ್ನಾಟಕಭಟ್ಕಳದಲ್ಲಿ ಫೆ.28ರಂದು ಅಂಬೇಡ್ಕರ್‌ ದೀಕ್ಷೆ ಸಮಾವೇಶ; ವಿವಿಧ ಸಂಘಟನೆಗಳು ಭಾಗಿ

ಭಟ್ಕಳದಲ್ಲಿ ಫೆ.28ರಂದು ಅಂಬೇಡ್ಕರ್‌ ದೀಕ್ಷೆ ಸಮಾವೇಶ; ವಿವಿಧ ಸಂಘಟನೆಗಳು ಭಾಗಿ

ಸುಮಾರು ಹದಿನಾಲ್ಕು ಸಂಘಟನೆಗಳು ಸೇರಿ ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿವೆ

- Advertisement -
- Advertisement -

“ಸಮಾನತಾವಾದಿ ದರ್ಶನವನ್ನು ರಾಜಕೀಯ ಮತ್ತು ಸಾಮಾಜಿಕ ತತ್ವಗಳನ್ನಾಗಿಸಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಈ ಕಾರಣಕ್ಕಾಗಿ ನಮಗೆ ಇಂದು ಅಂಬೇಡ್ಕರ್ ವೈಚಾರಿಕತೆಯ ದೀಕ್ಷೆ ಬೇಕಿದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ದೀಕ್ಷೆ ಸಮಾವೇಶವನ್ನು ಭಟ್ಕಳದಲ್ಲಿ ಇದೇ ಫೆಬ್ರುವರಿ 28ರಂದು ಹಮ್ಮಿಕೊಳ್ಳಲಾಗಿದೆ” ಎಂದು ವಿವಿಧ ಸಂಘಟನೆಗಳ ಪ್ರಕಟಣೆ ತಿಳಿಸಿದೆ.

ಭಟ್ಕಳದ ಲಕ್ಷ್ಮಿ ಸರಸ್ವತಿ ಮೊಗೇರ ವಿದ್ಯಾವರ್ಧಕ ಸಂಘ, ಜೈಭೀಮ್ ಸಂಘಟನೆ, ಜಿಲ್ಲಾ ಮೊಗೇರ ಸಮಾಜ, ಗೊಂಡ ಸಮಾಜ ಕಾರ್ಯಕ್ರಮವನ್ನು ಆಯೋಜಿಸಿವೆ. ಖಾರ್ವಿ ಸಮಾಜ, ಗೊಂಡ ಸಮಾಜ, ವಿಶ್ವಕರ್ಮ ಸಮಾಜ, ಮರಾಠಿ ಸಮಾಜ, ಕಾರಾವಾರ ಮೀನು ಮಾರಾಟ ಫೆಡರೇಷನ್‌, ದೇವಾಡಿಗ ಸಮಾಜ ಶಿರಾಲಿ, ಹರಿಕಾಂತ ಜಿಲ್ಲಾ ನಾಡದೋಣಿ ಸಂಘ ಮತ್ತು ಸಾಂಪ್ರದಾಯ ಮೀನುಗಾರರ ಒಕ್ಕೂಟ ಕುಮುಟ, ಮೀನುಗಾರ ಪರ್ಶೀಯನ್ ಬೋಟ್ ಯುನಿಯನ್ ಅಂಕೋಲಾ, ಹೊನ್ನಾವರ ಕೊಕ್ಕೆಶ್ವರ ದೇವಸ್ಥಾನ ಮತ್ತು ರಾಮಕ್ಷತ್ರಿಯ ಸಮಾಜದ ಮುಖಂಡರು, ಬೆಳ್ನಿ ಹರಿಕಾಂತ ಸಮಾಜ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

“ಸಮಾನತಾವಾದಿ ಅಖಂಡ ಭಾರತಕ್ಕಾಗಿ ಅಂಬೇಡ್ಕರ್‌ವಾದಿ ಅಭಿಯಾನ” ಎಂದು ಈ ಸಮಾವೇಶವನ್ನು ಸಂಘಟನೆಗಳು ಕರೆದಿವೆ.

ಇದನ್ನೂ ಓದಿರಿ: ಜಾತಿ ತಾರತಮ್ಯ ನಿಷೇಧಿಸಿ ಅಮೆರಿಕದ ಸಿಯಾಟಲ್‌ ಸಿಟಿ ಕೌನ್ಸಿಲ್‌ನಿಂದ ಮಹತ್ವದ ಸುಗ್ರೀವಾಜ್ಞೆ

“ನಾವುಗಳು ನಿಜ ಮನುಷ್ಯರಾಗಲು ಅಂಬೇಡ್ಕರ್ ಅವರ ದೀಕ್ಷೆ ಬೇಕು. ಈಗ ನಾವು ಒಂದು ಜಾತಿಯ ಕೂಪ ಮಂಡೂಕಗಳಾಗಿದ್ದೇವೆ. ಒಂದು ಧರ್ಮವನ್ನು ಕುರುಡಾಗಿ ಅನುಸರಿಸಿ ಧರ್ಮಾಂಧರಾಗಿದ್ದೇವೆ. ಒಂದು ಕೋಮಿನ ಪಾರಂಪರಿಕ ಅಹಮ್ಮನ್ನು ಮೈಗಂಟಿಸಿಕೊಂಡು ಕೋಮುವಾದಿಗಳಾಗಿದ್ದೇವೆ. ಅಸಹಾಯಕರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ, ಅತ್ಯಾಚಾರ ಮಾಡಿ ರಾಕ್ಷಸರಾಗುತ್ತಿದ್ದೇವೆ. ಸುಳ್ಳುಗಳನ್ನು ಆರಾಧಿಸುತ್ತ, ಭ್ರಾಮಕ ಪ್ರತಿಮೆಗಳನ್ನು ಆರಾಧಿಸುತ್ತಾ, ಧರ್ಮದ ಅಫೀಮು ತಿಂದು ಚಿಂತನಾ ಶಕ್ತಿಯನ್ನೇ ಕಳೆದುಕೊಂಡಿದ್ದೇವೆ” ಎಂದು ಸಂಘಟನೆಗಳು ವಿಷಾದಿಸಿವೆ.

ಸಮಾವೇಶದ ಕುರಿತ ಸಂಘಟನೆಗಳು ನೀಡಿರುವ ಪತ್ರಿಕಾ ಪ್ರಕಟಣೆ

ವರ್ತಮಾನದ ಭಾರತವು ಇಂದು ಜಾತಿ ಅಸಹನೆ, ಧಾರ್ಮಿಕ ಅಸಹಿಷ್ಣತೆ, ಕೋಮು ದ್ವೇಷ, ದಲಿತರ ಮೇಲಿನ ದೌರ್ಜನ್ಯ, ಸ್ತ್ರೀಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮುಂತಾದ ಅಮಾನವೀಯ ಚಟುವಟಿಕೆಗಳ ಕೇಂದ್ರವಾಗುತ್ತಿದೆ. ಇಲ್ಲಿನ ಸರಕಾರಗಳು ದೇಶದ ಆಳುವ ವರ್ಗದ, ಸಾಮ್ರಾಜ್ಯಶಾಹಿಗಳ ಮತ್ತು ಧಾರ್ಮಿಕ ಮೂಲಭೂತವಾದಿಗಳ ಹಿತಕಾಯುವ ನಿಟ್ಟಿನಲ್ಲಿ ಸಮಾಜದ ಸಾಮರಸ್ಯವನ್ನು ನಾಶ ಮಾಡುತ್ತಿವೆ.

ನಮ್ಮ ರಕ್ಷಣೆಯ ಹೊಣೆ ಹೊತ್ತಿರುವ ಸರಕಾರಗಳು ಇಲ್ಲಿನ ಜನಸಾಮಾನ್ಯನ ಹಿತವನ್ನು ಕಾಯುತ್ತಿಲ್ಲ, ಬದಲಿಗೆ ದುಡಿವ ಜನರ ಬದುಕನ್ನು ಬಲಿಕೊಟ್ಟಾದರೂ ಪುರೋಹಿತಶಾಹಿ ಮತ್ತು ಬಂಡವಾಳಶಾಹಿಗಳನ್ನು ಕಾಪಾಡುವ ಹೊಣೆ ಹೊತ್ತುಕೊಂಡಿವೆ. ದಲಿತ, ಆದಿವಾಸಿ, ಅಲೆಮಾರಿ ಮತ್ತು ರೈತರನ್ನೂ ಒಳಗೊಂಡಂತೆ ದುಡಿವ ಸಮುದಾಯಗಳ ಬದುಕುಗಳು ಇನ್ನಿಲ್ಲದ ಆತಂಕಗಳಿಗೆ ದೂಡಲ್ಪಟ್ಟಿವೆ. ಕೋಮು ಮತ್ತು ಧಾರ್ಮಿಕ ದ್ವೇಷಗಳು ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡಿವೆ.

ಖಾಸಗೀಕರಣ, ಜಾಗತೀಕಕರಣ ಮತ್ತು ನವಉದಾರವಾದಿ ಆರ್ಥಿಕ ನೀತಿಗಳು ದೇಶದ ಬಹುಸಂಖ್ಯಾತ ಶ್ರಮಿಕರ ದುಡಿವ ಕೈಗಳನ್ನೇ ಕತ್ತರಿಸಿ ಹಾಕುತ್ತಿವೆ. ಒಂದು ದೇಶ, ಒಂದು ಭಾಷೆ, ಒಂದು ಸಮವಸ್ತ್ರ, ಒಂದು ಸರಕಾರ, ಒಂದೇ ಧರ್ಮ ಎಂಬ ಫ್ಯಾಸಿಸ್ಟ್ ರಾಜಕಾರಣವು ದೇಶದ ಬಹುತ್ವವನ್ನು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ನಾಶ ಮಾಡುತ್ತಿದೆ. ದಲಿತ, ಆದಿವಾಸಿ, ಮಹಿಳೆಯ, ಅಲೆಮಾರಿ, ರೈತ ಮತ್ತು ಹಿಂದುಳಿದ ಸಮುದಾಯಗಳ ಮೇಲೆ ನಿರಂತರವಾಗಿ ಕೊಲೆ, ಅತ್ಯಾಚಾರ ಮತ್ತು ದಬ್ಬಾಳಿಕೆಗಳು ನಡೆಯುತ್ತಿವೆ. ಈ ಬಹುಸಂಖ್ಯಾತ ದುಡಿವ ಸಮುದಾಯಗಳ ಪರವಾಗಿ ನಮ್ಮ ದೇಶದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ನಿಲ್ಲುತ್ತಿಲ್ಲ. ಈ ಸಮುದಾಯಗಳ ಹಿತ ಕಾಪಾಡಬೇಕಾದ ಮಾಧ್ಯಮಗಳೂ ಸಹ ಕಾರ್ಪೋರೇಟ್ ವರ್ಗದ ಹಿತಕಾಯಲು ನಿಂತಿವೆ.

ಹಿಂದೆ ರಾಜಪ್ರಭುತ್ವಗಳು ಜನವಿರೋಧಿಗಳಾಗಿದ್ದಾಗ ಅವರನ್ನು ಸರಿದಾರಿಗೆ ತರುವ ಹೊಣೆಯನ್ನು ನಮ್ಮ ದೇಶದ ಸಂತರು, ಸನ್ಯಾಸಿಗಳು, ಆಧ್ಯಾತ್ಮಿಕ ಕ್ಷೇತ್ರದ ಅನುಭಾವಿಗಳು ಹೊತ್ತುಕೊಳ್ಳುತ್ತಿದ್ದರು. ಆದರೆ ಇಂದು ದೇಶದ ಸಾಧುಸಂತರು ಧಾರ್ಮಿಕ ಉನ್ಮಾದದಿಂದ ಹೂಂಕರಿಸುತ್ತಿದ್ದಾರೆ. ಅನ್ಯಕೋಮಿನವರನ್ನು, ದುರ್ಬಲರನ್ನು ಕೊಲ್ಲುವ, ಕಡಿಯುವ, ಗಲಭೆ ಎಬ್ಬಿಸುವುದಕ್ಕೆ ಪೂರಕವಾದ ಭಾಷಣಗಳನ್ನು ಮಾಡುತ್ತಿದ್ದಾರೆ. ತಮ್ಮ ವಿರುದ್ಧ ತರಲಾದ ಅಪಾಯಕಾರಿ ಕೃಷಿಕಾಯ್ದೆಗಳನ್ನು ಪ್ರತಿಭಟಿಸಿ ಧರಣಿ ಕೂತ ರೈತರಲ್ಲಿ ಅನೇಕರು ಪ್ರತಿಭಟನಾ ಸ್ಥಳದಲ್ಲಿಯೇ ಸತ್ತರು. ಆಗ ನಮ್ಮ ದೇಶವನ್ನು ಮುನ್ನಡೆಸಬೇಕಾದ ವ್ಯಕ್ತಿಯೇ `ರೈತರೇನು ನನಗಾಗಿ ಸತ್ತರೇ?’ ಎಂಬ ಹೇಳಿಕೆಗಳನ್ನು ಕೊಡುತ್ತಾನೆ.

ದೇಶದ ಅತ್ಮವನ್ನೇ ನಡುಗಿಸುತ್ತಿರುವ ಇಂತಹ ಸಂದರ್ಭದಲ್ಲಿ ನಾಗರಿಕ ಸಮಾಜ ಮಾತ್ರ ಸದ್ದೇ ಮಾಡದೆ ತಣ್ಣಗೆ ಕೂತಂತಿದೆ. ಮಾಧ್ಯಮಗಳು ಯಥಾವತ್ತು ಪ್ರಭುತ್ವದ ಭಜನೆಯಲ್ಲಿ ತೊಡಗಿಕೊಂಡಿವೆ. ದಲಿತರನ್ನು, ಮುಸ್ಲಿಮರನ್ನು ಕೊಲ್ಲುವ ಮತ್ತು ರೈತರ ಸಾವುಗಳನ್ನು ನಗಣ್ಯವಾಗಿಸುವ, ಮಹಿಳೆಯರ ಮೇಲೆ ನಿತ್ಯ ನಡೆವ ಅತ್ಯಾಚಾರ ಮತ್ತು ಕೊಲೆಗಳು ಸರಕಾರಗಳ ಕಣ್ಗಾವಲಲ್ಲೇ ನಡೆಯುತ್ತಿವೆ. ಸಾವುಗಳನ್ನು, ಹಲ್ಲೆಗಳನ್ನು, ಅತ್ಯಾಚಾರಗಳನ್ನು ಮತ್ತು ಕೊಲೆಗಳನ್ನು ಸರ್ವೇಸಾಧರಣ ಸಂಗತಿಯಾಗಿಸಿಬಿಡುವ ವಾತಾವರಣದಲ್ಲಿ ಹಿಂಸೆಯು ಹೇಗೆ ಅಂತರ್ಗತವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಆದರೆ ನಾಗರಿಕ ಭಾರತವು ಪ್ರಭುತ್ವ ಹಂಚಿದ ಮಾರಕ ಅಫೀಮಿನಲ್ಲಿ ಓಲಾಡುತ್ತಿದೆ. ನಮ್ಮನ್ನಾವರಿಸಿರುವ ಹಿಂಸೆಯಿಂದ ಬದಿಗೆ ಸರಿಯುತ್ತಿರುವ ಮಾನವೀಯ ಮೌಲ್ಯಗಳ ಕುರಿತು ಯೋಚಿಸುವುದೇ ಅಪರಾಧ ಎಂದು ಪರಿಗಣಿಸಲಾಗುತ್ತಿದೆ. ದಮನಿತರ ಮೇಲೆ ನಡೆಯುವ ಕೊಲೆ ಅತ್ಯಾಚಾರಗಳನ್ನೂ ಸಾರ್ವಜನಿಕವಾಗಿ ಸಮರ್ಥಿಸಿಕೊಳ್ಳುವ ಹಂತಕ್ಕೆ ಹೋಗಿರುವ ಸಮಾಜದಲ್ಲಿ ಅಂತಃಸಾಕ್ಷಿ ಇರಲು ಸಾಧ್ಯವೇ?

ನಮ್ಮ ಸಮಾಜಕ್ಕೆ ಈಗ ಬೇಕಿರುವುದು ಸಹನೆ, ಸಾಮರಸ್ಯ ಮತ್ತು ಸಮಾನತಾವಾದಿ ಆಶಯಗಳು. ಬುದ್ಧನ ಚಿಂತನಗಳಲ್ಲಿ, ಬಸವಣ್ಣನ ವೈಚಾರಕತೆಯಲ್ಲಿ, ಸಂತರು ಕಟ್ಟಿದ ಚಳುವಳಿಗಳಲ್ಲಿ, ಪುರೋಗಾಮಿ ಹೋರಾಟಗಳಲ್ಲಿ ಮಾನವೀಯ ಮೌಲ್ಯಗಳಿವೆ. ಈ ಮಾನವೀಯ ಮೌಲ್ಯಗಳ ಸಾರವನ್ನು ಹೀರಿ ದೇಶದ ವೈಚಾರಿಕತೆಯನ್ನು ಕಟ್ಟಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಅಂಬೇಡ್ಕರ್ ಅವರು ಆಧುನಿಕ ಭಾರತದ ನಿಜ ಸಂತ, ರಾಜನೀತಿಜ್ಞ ಮತ್ತು ದಾರ್ಶನಿಕ. ಭಾರತದ ಪ್ರಗತಿಪರ ವೈಚಾರಿಕ ಧಾರೆಗಳನ್ನು ಮತ್ತು ಜಗತ್ತಿನ ಹಲವು ರಾಜಕೀಯ ಚಿಂತನೆಗಳನ್ನು ಬಾಬಾ ಸಾಹೇಬರು ಅನುಸಂಧಾನ ಮಾಡಿದ್ದಾರೆ. ಅವರು ರಚಿಸಿ ನಮ್ಮ ಕೈಗಿಟ್ಟಿರುವ ಸಂವಿಧಾನವು ಈ ಎರಡೂ ವೈಚಾರಿಕ ಧಾರೆಗಳ ಸಮ್ಮಿಲನವೇ ಆಗಿದೆ. ಸಂವಿಧಾನ ಆಧುನಿಕ ಭಾರತವನ್ನು, ಸಮಾಜವಾದಿ ಆಶಯಗಳ ಭಾರತವನ್ನು ಮತ್ತು ಸಮಸಮಾಜವನ್ನು ಕಟ್ಟಲು ನಮಗಿರುವ ದಾರಿ ಯಾವುದೆಂದರೆ; ಅದು ಸಂವಿಧಾನ ನಮಗೆ ಹಾಕಿಕೊಟ್ಟಿರುವ ದಾರಿ. ಈ ದಾರಿಯಲ್ಲಿ ಮಾತ್ರ ಮಾನವೀಯ ಭಾರತವನ್ನು ಕಟ್ಟಲು ಸಾಧ್ಯ. ಈ ಕಾರಣದಿಂದ ಹಲವು ದಾಳಿಗಳಿಗೆ ಒಳಗಾಗಿರುವ ವರ್ತಮಾನದ ಭಾರತವನ್ನು ಸಾಮರಸ್ಯದ ದೇಶವನ್ನಾಗಿ ಕಟ್ಟಲು ಅಂಬೇಡ್ಕರ್ ಅವರ ವೈಚಾರಿಕತೆ ಎಲ್ಲರ ಮೈಗೂಡುವ ಅಗತ್ಯವಿದೆ. ಅಗತ್ಯ. ಈ ಕಾರಣಕ್ಕಾಗಿಯೇ ನಾವು ಇಂದು ಅಂಬೇಡ್ಕರ್ ದೀಕ್ಷೆಯನ್ನು ಪಡೆಯುವ ಅಗತ್ಯವಿದೆ.

ಅಂಬೇಡ್ಕರ್ ದೀಕ್ಷೆ ಯಾಕೆ?

ಅಂಬೇಡ್ಕರ್ ದೀಕ್ಷೆ ಯಾಕೆ? ಅಕ್ಟೋಬರ್ 14, 1956ರಂದು ಬಾಬಾಸಾಹೇಬರು ಸಾವಿರಾರು ವರ್ಷಗಳಿಂದ ನಮ್ಮನ್ನು ಸುತ್ತುವರೆದಿದ್ದ ಸಂಕೋಲೆಗಳನ್ನು ಕಿತ್ತು ಹಾಕಿ ಧಮ್ಮ ದೀಕ್ಷೆಯನ್ನು ಪಡೆದರು. `ನಾನು ನನ್ನ ಮೂಲ ಅಧ್ಯಾತ್ಮಕಕ್ಕೆ ಹಿಂದಿರುಗುತ್ತಿದ್ದೇನೆ’ ಎಂದು ಬೌದ್ಧರಾದರು. ಮಾನವೀಯತೆ, ಪ್ರಚ್ಛನ್ನ ವೈಚಾರಿಕ ಎಚ್ಚರ ಮತ್ತು ಸಮಾನತೆಯನ್ನು ಬೋಧಿಸುವ ಬೌದ್ಧ ತತ್ವಗಳಲ್ಲಿ ಅಪಾರ ಮಾನವ ಪ್ರೇಮವಿದೆ ಎಂಬುದು ಬಾಬಾಸಾಹೇಬರ ಅಭಿಮತವಾಗಿತ್ತು. ಅಂಬೇಡ್ಕರ್ ತಮ್ಮ ಜೀವಿತಾವಧಿಯ ಕೊನೆಯಲ್ಲಿ ತೆಗೆದುಕೊಂಡ ಈ ನಿರ್ಧಾರವು ದಲಿತರ ಅಧ್ಯಾತ್ಮಿಕ ವಿಮೋಚನೆಗೆ ದಾರಿ ಮಾಡಿಕೊಟ್ಟಿತು. ಇಂದು ನಮಗೆ ಈ ತರಹ ವಿಮೋಚನೆಯ ಅಗತ್ಯವಿದೆ. ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ನಮಗೆ ಕೇವಲ ಅಧ್ಯಾತ್ಮಿಕ ಪರಿಹಾರಗಳು ಮಾತ್ರವಲ್ಲ, ಸಾಮಾಜಿಕ ಮತ್ತು ರಾಜಕೀಯ ವಿಮೋಚನೆಗೆ ಬೇಕಾದ ತತ್ವಗಳಿವೆ. ಈ ಕಾರಣಕ್ಕಾಗಿ ನಮಗೆ ಅಂಬೇಡ್ಕರ್ ದೀಕ್ಷೆಯ ಅಗತ್ಯವಿದೆ.

ನಾವುಗಳು ನಿಜ ಮನುಷ್ಯರಾಗಲು ಅಂಬೇಡ್ಕರ್ ಅವರ ದೀಕ್ಷೆ ಬೇಕು. ಈಗ ನಾವು ಒಂದು ಜಾತಿಯ ಕೂಪ ಮಂಡೂಕಗಳಾಗಿದ್ದೇವೆ. ಒಂದು ಧರ್ಮವನ್ನು ಕುರುಡಾಗಿ ಅನುಸರಿಸಿ ಧರ್ಮಾಂಧರಾಗಿದ್ದೇವೆ. ಒಂದು ಕೋಮಿನ ಪಾರಂಪರಿಕ ಅಹಮ್ಮನ್ನು ಮೈಗಂಟಿಸಿಕೊಂಡು ಕೋಮುವಾದಿಗಳಾಗಿದ್ದೇವೆ. ಅಸಹಾಯಕರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ, ಅತ್ಯಾಚಾರ ಮಾಡಿ ರಾಕ್ಷಸರಾಗುತ್ತಿದ್ದೇವೆ. ಸುಳ್ಳುಗಳನ್ನು ಆರಾಧಿಸುತ್ತ, ಭ್ರಾಮಕ ಪ್ರತಿಮೆಗಳನ್ನು ಆರಾಧಿಸುತ್ತಾ, ಧರ್ಮದ ಅಫೀಮು ತಿಂದು ಚಿಂತನಾ ಶಕ್ತಿಯನ್ನೇ ಕಳೆದುಕೊಂಡಿದ್ದೇವೆ. ಪೊಳ್ಳು ವಿಗ್ರಹದ ಹೊರಮೈಯ ಚಂದವನ್ನು ಅಖಂಡವಾಗಿ ಪೂಜಿಸುವ ಭಕ್ತರಾಗಿದ್ದೇವೆ. ಈ ಎಲ್ಲ ಸಂಗತಿಗಳ ನಡುವೆ ಭಾರತದ ನಿಜ ಮನುಷ್ಯನ ಅವಸಾನವಾಗಿದೆ.

ಭಾರತದ ಸಮಾಜವನ್ನು ಮಾನವೀಯತೆಯ ಗಟ್ಟಿ ನೆಲೆಗಟ್ಟಿನ ಮೇಲೆ ಕಟ್ಟಬೇಕಿದೆ. ಅದಕ್ಕಾಗಿ ಈ ದೇಶದಲ್ಲಿ ಹೊಸ ಮನುಷ್ಯರನ್ನು ಸೃಷ್ಟಿಸಬೇಕಿದೆ. ಈ ಸೃಷ್ಟಿಯ ಕೆಲಸವು ಕೇವಲ ಸಮಾನತಾವಾದಿ ವೈಚಾರಿಕತೆಯಿಂದ ಮಾತ್ರ ಸಾಧ್ಯ. ಈ ಸಮಾನತಾವಾದಿ ದರ್ಶನವನ್ನು ರಾಜಕೀಯ ಮತ್ತು ಸಾಮಾಜಿಕ ತತ್ವಗಳನ್ನಾಗಿಸಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಈ ಕಾರಣಕ್ಕಾಗಿ ನಮಗೆ ಇಂದು ಅಂಬೇಡ್ಕರ್ ವೈಚಾರಿಕತೆಯ ದೀಕ್ಷೆ ಬೇಕಿದೆ. ಕೇವಲ ರಾಜಕೀಯ ಕ್ಷೇತ್ರವನ್ನು ಮಾತ್ರವಲ್ಲ, ನಮ್ಮ ಸಾಮಾಜಿಕ ನೋಟಕ್ರಮವನ್ನೇ ಬದಲಿಸುವ ಸಲುವಾಗಿ ನಾವಿಂದು ಈ `ಅಂಬೇಡ್ಕರ್ ದೀಕ್ಷೆ’ಯನ್ನು ಪಡೆಯುವ ಅಗತ್ಯವಿದೆ. ಈ ಕಾರಣಕ್ಕಾಗಿ ನಾವಿಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

  • `ಅಂಬೇಡ್ಕರ್ ದೀಕ್ಷೆ’ ಎಂದರೆ, ಅಂಬೇಡ್ಕರ್ ಅವರನ್ನು ಕುರಿತು ಭಜನೆ ಮಾಡುವುದಲ್ಲ. ಅವರ ಪ್ರತಿಮೆಯನ್ನು ಆರಾಧಿಸುವುದಲ್ಲ.
  • `ಅಂಬೇಡ್ಕರ್ ದೀಕ್ಷೆ’ ಎಂದರೆ, ಅಂಬೇಡ್ಕರ್ ಅವರ ಸಾಮಾಜಿಕ, ರಾಜಕೀಯ ಮತ್ತು ಅಧ್ಯಾತ್ಮಿಕ ತತ್ವಗಳನ್ನು ನಾವು ವೈಯಕ್ತಿಕವಾಗಿ ಪಾಲಿಸುವುದು. ಮತ್ತು ಸಮಾಜದ ಇತರರೂ ಈ ತತ್ವಗಳನ್ನು ಆಚರಣೆಗೆ ತರಲು ಪ್ರೇರಣೆ ನೀಡುವುದು.
  • ಸಮಾಜವು ಇಂದು ಅನೇಕ ಕೇಡುಗಳ ವಿರುದ್ಧ ಹೋರಾಡಬೇಕಿದೆ. ಅಸಮಾನತೆ, ಧಾರ್ಮಿಕ ಮೂಲಭೂತವಾದ, ವ್ಯಕ್ತಿಪೂಜೆ, ಕೋಮುವಾದ, ಜಾತಿ ಅಸಹನೆ, ಅತ್ಯಾಚಾರಗಳಂತಹ ಭಯಾನಕ ಆಧುನಿಕ ಕೇಡುಗಳ ವಿರುದ್ಧ ಹೋರಾಡಲು ಮುಂದಾಗಬೇಕಿದೆ.
  • ಈ ಕೇಡುಗಳ ವಿರುದ್ಧ ಹೋರಾಡಲು ನಾವು ಸಂಘಟಿತರಾಗುವ ಅಗತ್ಯವಿದೆ. ಸಂಘಟಿತರಾಗುವುದೆಂದರೆ, ಒಂದು ವೈಚಾರಿಕ ನೆಲೆಗಟ್ಟಿನಲ್ಲಿ ಒಗ್ಗೂಡುವುದು.
  • ಈ ಒಗ್ಗೂಡುವಿಕೆ ಅಖಂಡವಾಗಿರಬೇಕು. ಈ ಅಖಂಡತೆಯನ್ನು ಸಾಧಿಸಲು ನಾವು ಶಿಕ್ಷಣ ಪಡೆಯುವುದು ಅಗತ್ಯ. ಶಿಕ್ಷಣ ಪಡೆಯುವುದೆಂದರೆ, ನಮ್ಮ ವರ್ತಮಾನವನ್ನು ಛಿದ್ರಗೊಳಿಸುತ್ತಿರುವ ಕೇಡು ಮತ್ತು ಹಿಂಸೆಗಳನ್ನು ಅರ್ಥ ಮಾಡಿಕೊಳ್ಳುವುದು.
  • ಈ ಕೇಡು ಹಿಂಸೆಗಳನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ, ಅವುಗಳ ವಿರುದ್ಧ ನಾವು ಪ್ರಬಲ ಹೋರಾಟಗಳನ್ನು ಕಟ್ಟುವ ಅಗತ್ಯವಿದೆ. ಈ ಹೋರಾಟವು ಸಮಾಜದ ಎಲ್ಲ ವರ್ಗಗಳ ದಮನಿತರ ದನಿಗಳನ್ನು ಒಳಗೊಳ್ಳಬೇಕು.
  • ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂಲತತ್ವಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ನಾವು ಈಗ ಅಂಬೇಡ್ಕರ್ ದೀಕ್ಷೆಯನ್ನು ಯಶಸ್ವಿಗೊಳಿಸುವ ಅಗತ್ಯವಿದೆ.

ಇದನ್ನೂ ಓದಿರಿ: ದಲಿತ ಕುಟುಂಬಕ್ಕೆ ಬೆದರಿಕೆ; ಸ್ವಘೋಷಿತ ದೇವಮಾನವನ ಸಹೋದರನ ವಿರುದ್ಧ ಎಫ್‌ಐಆರ್‌

ಈ ಕಾರಣಕ್ಕಾಗಿ 28/02/2023ರಂದು ಭಟ್ಕಳದ ಅಂಬೇಡ್ಕರ್ ದೀಕ್ಷಾ ಸಮಾವೇಶದಲ್ಲಿ ನಾವೆಲ್ಲ ಭಾಗಿಗಳಾಗೋಣ. ಅಂದಿನ ಈ ಸಮಾವೇಶವನ್ನು ಕಾಗ್ರೆಸ್‌ ಯುವ ನಾಯಕರಾದ ಪ್ರಿಯಾಂಕ್ ಖರ್ಗೆಯವರು ಉದ್ಘಾಟಿಸಲಿದ್ದಾರೆ. ದಲಿತ ಹೋರಾಟಗಾರರಾದ ಮಾವಳ್ಳಿ ಶಂಕರ್, ಎನ್. ವೆಂಕಟೇಶ್, ಪತ್ರಕರ್ತರಾದ ಡಿ. ಉಮಾಪತಿ, ಆದಿವಾಸಿ ಹಕ್ಕುಗಳ ಪರ ಹೋರಾಟಗಾರ ಸಿರಿಗಂಧ ಶ್ರೀನಿವಾಸಮೂರ್ತಿ ಅಂಬೇಡ್ಕರ್ ದೀಕ್ಷೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಲಿದ್ದಾರೆ. ಕರಾವಳಿಯ ದುಡಿವ ವರ್ಗಕ್ಕೆ ಸೇರಿದ ನಾಡವ, ನಾಮಧಾರಿ, ಮೊಗೇರ, ಗೊಂಡ, ಖಾರ್ವಿ, ಹರಿಕಾಂತ, ವಿಶ್ವಕರ್ಮ, ಮರಾಠಿ, ರಾಮಕ್ಷತ್ರಿಯ ಸಮಾಜ, ದೇವಾಡಿಗ ಸಮುದಾಯ, ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಪಾಲ್ಗೊಳ್ಳುತ್ತಿವೆ.

ಕಾರ್ಯಕ್ರಮ ಭಾಗವಹಿಸುವ ಸಂಘಟನೆಗಳು

ಲಕ್ಷ್ಮಿ ಸರಸ್ವತಿ ಮೊಗೇರ ವಿದ್ಯಾವರ್ಧಕ ಸಂಘ (ರಿ), ಭಟ್ಕಳ
ಜೈಭೀಮ್ ಸಂಘಟನೆ, ಭಟ್ಕಳ
ಮೀನು ಮಾರಾಟ ಫೇಡರೇಶನ್, ಕಾರವಾರ.
ಜಿಲ್ಲಾ ಮೊಗೇರ ಸಮಾಜ, ಭಟ್ಕಳ
ಖಾರ್ವಿ ಸಮಾಜ ಭಟ್ಕಳ.
ದೇವಾಡಿಗ ಸಮಾಜ ಶಿರಾಲಿ.
ಹರಿಕಾಂತ, ಜಿಲ್ಲಾ ನಾಡದೋಣಿ ಸಂಘ ಮತ್ತು ಸಾಂಪ್ರದಾಯ ಮೀನುಗಾರರ ಒಕ್ಕೂಟ, ಕುಮುಟ
ಮೀನುಗಾರ ಪರ್ಶೀಯನ್ ಬೋಟ್, ಯುನಿಯನ್ ಅಂಕೋಲಾ.
ಸೇವಾ ಸಮಿತಿ, ಕೊಕ್ಕೆಶ್ವರ ದೇವಸ್ಥಾನ ಮತ್ತು ರಾಮಕ್ಷತ್ರಿಯ ಸಮಾಜದ ಮುಖಂಡರು, ಮಂಕಿ, ಹೊನ್ನಾವರ.
ಹರಿಕಾಂತ ಸಮಾಜ ಬೆಳ್ನಿ.
ಗೊಂಡ ಸಮಾಜ, ಭಟ್ಕಳ.
ವಿಶ್ವಕರ್ಮ ಸಮಾಜ ಭಟ್ಕಳ
ಮರಾಠಿ ಸಮಾಜ ಭಟ್ಕಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...