Homeಮುಖಪುಟನೆರೆ ನೀರಿನಲ್ಲಿ ಫೋಟೋ ಶೂಟ್‌ ನಡೆಸಿ ನಟನೆ ಮಾಡಿದ ಅಣ್ಣಾಮಲೈ - ‘ಕೋಡಂಗಿ’ ಎಂದ ತಮಿಳರು

ನೆರೆ ನೀರಿನಲ್ಲಿ ಫೋಟೋ ಶೂಟ್‌ ನಡೆಸಿ ನಟನೆ ಮಾಡಿದ ಅಣ್ಣಾಮಲೈ – ‘ಕೋಡಂಗಿ’ ಎಂದ ತಮಿಳರು

- Advertisement -
- Advertisement -

ತಮಿಳುನಾಡಿನಲ್ಲಿ ಸುರಿದ ಭಾರಿ ಮಳೆಯಿಂದಾದ ಅವಘಡಗಳಿಂದ 4 ಜನರು ಮೃತಪಟ್ಟಿದ್ದಾರೆ. ಚೆನ್ನೈ, ಚೆಂಗಲ್‌ಪೇಟ್‌, ಕಾಂಚೀಪುರಂ, ತಿರುವಳ್ಳೂರು ಮತ್ತು ವೆಲ್ಲೂರು ಜಿಲ್ಲೆಯಲ್ಲಿ ಸೋಮವಾರದಂದೂ ಮಳೆಯಾಗಿದ್ದವು. ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭೇಟಿ ನೀಡಿ ಪರಿಶೀಲಿಸಿದ್ದರು. ಈ ನಡುವೆ ಪರಿಹಾರ ಕಾರ್ಯಕೂಡಾ ಭರದಿಂದ ಸಾಗಿತ್ತು. ಜೊತೆಗೆ ಹವಾಮಾನ ಇಲಾಖೆಯು ಬುಧವಾರ ಮತ್ತು ಗುರುವಾರ ಕೂಡಾ ಭಾರಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಸರ್ಕಾರದ ಜೊತೆಗೆ ಕೈಜೋಡಿಸಿರುವ ಹಲವಾರು ಸಂಘ ಸಂಸ್ಥೆಗಳು ಪರಿಹಾರ ಕಾರ್ಯದಲ್ಲಿ ನೆರವಾಗುತ್ತಿದೆ. ಈ ಮಧ್ಯೆ ಪರಿಹಾರ ಕಾರ್ಯದಲ್ಲಿ ನಾಟಕೀಯ ದೃಶ್ಯ ಸೃಷ್ಟಿಸಲು ಹೋಗಿ ಮಾಜಿ ಐಪಿಎಸ್‌ ಅಧಿಕಾರಿ, ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ನಗೆಪಾಟಲಿಗೀಡಾಗಿದ್ದಾರೆ.

ಇದನ್ನೂ ಓದಿ: ಮುಂದಿನ 6 ತಿಂಗಳಲ್ಲಿ ಮಾಧ್ಯಮದ ಮೇಲೆ ನಿಯಂತ್ರಣ: ಅಣ್ಣಾಮಲೈ ವಿವಾದಿತ ಹೇಳಿಕೆ

ಅಣ್ಣಾಮಲೈ ಅವರು ಮೊಣಕಾಲುದ್ದ ನೀರಿರುವ ಸ್ಥಳದಲ್ಲಿ ರಕ್ಷಣಾ ದೋಣಿಯನ್ನು ನಿಲ್ಲಿಸಿ ಫೋಟೊಗೆ ಪೋಸ್‌ ನೀಡಿದ್ದಾರೆ. ಆದರೆ ಈ ವಿಡಿಯೊ ವೈರಲ್‌ ಆಗಿದ್ದು, ತಮಿಳುನಾಡಿನ ಜನತೆ ಈ ವಿಡಿಯೊವನ್ನು ಇಟ್ಟು, ಕೋಡಂಗಿ ಅಣ್ಣಾಮಲೈ(ಕೋಮಾಲಿ ಅಣ್ಣಾಮಲೈ) ಎಂದು ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.

ಹಲವು ರೀತಿಯ ವಿಡಿಯೊ ವೈರಲ್ ಆಗಿದ್ದು, ಅಣ್ಣಾಮಲೈ ಅವರು ಮೊಣಕಾಲುದ್ದ ನೀರಿರುವ ಸ್ಥಳದಲ್ಲಿ ರಕ್ಷಣೆಗೆ ಬಳಸುವ ದೋಣಿಯಲ್ಲಿ ಕೂತು ಫೋಟೋಗೆ ಪೋಸ್‌ ಕೊಟ್ಟಿದ್ದಾರೆ.

ವೈರಲ್ ಆಗಿರುವ ಒಂದು ವಿಡಿಯೊದಲ್ಲಿ ಮೊಣಕಾಲಿನಷ್ಟು ಕೂಡಾ ನೀರಿಲ್ಲದ ಜಾಗದಲ್ಲಿ ದೋಣಿಯೊಳಗಡೆ ಕೂತಿರುವ ಅಣ್ಣಾಮಲೈ ಫೋಟೋ ಶೂಟ್‌ಗೆ ತಯಾರಾಗುತ್ತಿರುವುದು ಕಾಣುತ್ತದೆ. ನಂತರ ಯಾರೋ ಹಿನ್ನಲೆಯಲ್ಲಿ ಶುರುಮಾಡಿ ಎಂದು ಹೇಳುತ್ತಾರೆ. ಆಗ, ಅಣ್ಣಾಮಲೈ ಅವರು ಮುಂದಕ್ಕೆ ಕೈ ಮುಗಿದು ಯಾರೊಂದಿಗೋ ಮಾತನಾಡುವ ಶೈಲಿಯಲ್ಲಿ ‘ಇಲ್ಲೆ ಇರುವವರಾ ಬ್ರದರ್‌ ನೀವು’ ಎಂದು ಕೇಳುತ್ತಾರೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ವಿರೋಧಿಸಿದ ಅಣ್ಣಾಮಲೈಗೆ ಸಿ.ಟಿ ರವಿ ಬೆಂಬಲ!

ಮತ್ತೊಂದು ವಿಡಿಯೊದಲ್ಲಿ, ಅಣ್ಣಾಮಲೈ ಸೇರಿದಂತೆ ಕೆಲವರನ್ನು ದೋಣಿಯಲ್ಲಿ ಕೂರಿಸಿ ಎಳೆದುಕೊಂಡು ಹೋಗುತ್ತಿದ್ದಾರೆ. ಅವರ ಹಿಂದೆ ಬಿಜೆಪಿಯ ಧ್ವಜ ಹಿಡಿದು ಹಲವು ಕಾರ್ಯಕರ್ತರು ಕೂಡಾ ಇರುತ್ತಾರೆ. ಈ ವೇಳೆ ಕೂಡಾ ಅಣ್ಣಾಮಲೈ ಸುಖಾಸುಮ್ಮನೆ ಮುಂದೆ ಯಾರೋ ಇದ್ದಾರೆ ಎಂಬ ರೀತಿಯಲ್ಲಿ ನಮಸ್ಕರಿಸಿದ್ದಾರೆ. ಇದೇ ರೀತಿಯ ದೃಶ್ಯವನ್ನು ಉತ್ತರ ಕರ್ನಾಟಕದಲ್ಲಿ ಮಳೆ ಬಂದಾಗ ಬಿಜೆಪಿಯ ಶಾಸಕ ರೇಣುಕಾಚಾರ್ಯ ಅವರು ಕೂಡಾ ಮಾಡಿದ್ದರು. ಈ ಸಂದಂರ್ಭದಲ್ಲೂ ಜನ ಅವರನ್ನು ಟ್ರೋಲ್ ಮಾಡಿದ್ದರು.

ಇನ್ನೊಂದು ವಿಡಿಯೊದಲ್ಲಿ ಮೊಣಕಾಲುದ್ದ ನೀರಿರುವ ಜಾಗದಲ್ಲಿ ಇರುವ ದೋಣಿಯಲ್ಲಿ ಅಣ್ಣಾಮಲೈ ಕೂತಿದ್ದಾರೆ. ಈ ವೇಳೆ ಕ್ಯಾಮೆರಾ ಮ್ಯಾನ್, ‘ಎಲ್ಲರೂ ಈ ಕಡೆ ಬನ್ನಿ, ಒಂದು ಖಾಲಿಯಾಗಿರುವ ಫೋಟೋ ಕ್ಲಿಕ್ ಮಾಡುತ್ತೇನೆ’ ಎಂದು ಹೇಳುತ್ತಾರೆ. ಆಗ ಅಣ್ಣಾ ಮಲೈ ಕೂಡಾ ಅವರನ್ನು ಕಳುಹಿಸುತ್ತಾರೆ. ಜೊತೆಗೆ ಅಲ್ಲೇ ಇದ್ದ ಮಹಿಳೆಯೊಂದಿಗೆ ಕೂಡಾ ಅಣ್ಣಾ ಮಲೈ ಮಾತನಾಡುತ್ತಾರೆ. ಆಗ, ಆ ಅಕ್ಕ ಜೊತೆ ಮಾತಾಡ್ತಾ ಇರೋ ಥರ ಒಂದು ಶಾಟ್ ತಗೋ ಎಂಬ ಧ್ವನಿಯು ಕೇಳುತ್ತದೆ. ಈ ನಡುವೆ ಅಣ್ಣಾಮಲೈ ಮತ್ತೆ ಯಾರಿಗೋ ನಮಸ್ಕಾರ ಮಾಡುವ ರೀತಿಯಲ್ಲಿ ನಟಿಸುತ್ತಾರೆ.

ಇದನ್ನೂ ಓದಿ: ಅಣ್ಣಾ ಮಲೈ ಮಧುಕರ ಶೆಟ್ಟಿಯಲ್ಲಾ! – ಪ್ರಜ್ಞಾವಂತ ಪ್ರಜೆಯೊಬ್ಬರ ಅಭಿಪ್ರಾಯ

ಮಗದೊಂದು ವಿಡಿಯೊದಲ್ಲಿ, ನೀರಿನಿಂದ ರಕ್ಷಣೆಗಾಗಿ ಬದಿಯಲ್ಲಿ ನಿಂತಿದ್ದ ವೃದ್ದೆಯನ್ನು ಮಾತನಾಡಿಸಲು ಅಣ್ಣಾ ಮಲೈ ತೆರಳುತ್ತಾರೆ. ಅವರನ್ನು ಮಾತನಾಡಿಸಿದ ಅವರು, “ಪ್ರತಿಬಾರಿಯ ಮಳೆಗೂ ಹೀಗಾದರೆ ಹೇಗಮ್ಮ? 2015 ರಲ್ಲೂ ಹೀಗೆ, 2021 ರಲ್ಲೂ ಹೀಗೆ” ಎಂದು ಕೇಳುತ್ತಾರೆ. ಈ ವೇಳೆ ಮಹಿಳೆ, “ನೀವು ಬಂದು ಏನು ಮಾಡುತ್ತೀರಿ” ಎಂದು ಪ್ರಶ್ನಿಸುತ್ತಾರೆ.

ಮಾನವೀಯ ನೆರವು ನೀಡಬೇಕಾದ ಸಮಯದಲ್ಲೂ ನಾಟಕ ಮಾಡಲು ಪ್ರಯತ್ನಿಸಿದ ಅಣ್ಣಾ ಮಲೈ ಅವರನ್ನು ತಮಿಳುನಾಡಿನ ಜನರು ಟ್ವಿಟರ್‌ನಲ್ಲಿ ಮೀಮ್ಸ್‌ ಮಾಡಿ ವ್ಯಂಗ್ಯವಾಡುತ್ತಿದ್ದಾರೆ. ‘ಗೋಟ್‌‌ ಆನ್‌ ದಿ ಬೋಟ್’,(ದೋಣಿಯಲ್ಲಿ ಆಡು) ಕೋಮಾಲಿ ಅಣ್ಣಾಮಲೈ (ಕೋಡಂಗಿ ಅಣ್ಣಾಮಲೈ) ಎಂದು ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷನಾಗಿ ‘ಅಣ್ಣಾಮಲೈ’ ನೇಮಕ

ಡಿಎಂಕೆ ರಾಜ್ಯ ಐಟಿ ವಿಂಗ್ ನಾಯಕರಾದ ಇಸೈ ಅವರು, ಲೈಫ್ ಆಫ್ ಪೈ ಎಂಬ ಕಾದಂಬರಿಯ ಕವರ್‌ ಫೋಟೋದಲ್ಲಿ ಇರುವ ಮನುಷ್ಯನ ತಲೆಗೆ ಅಣ್ಣಾಮಲೈ ಅವರ ಚಿತ್ರ ಎಡಿಟ್ ಮಾಡಿ ‘ಲೈಫ್‌ ಆಫ್ ಪೊಯಿ’(ಸುಳ್ಳಿನ ಜೀವನ) ಎಂದು ವ್ಯಂಗ್ಯವಾಗಿದ್ದಾರೆ.

ಇಷ್ಟೇ ಅಲ್ಲದೆ ಹಲವಾರು ಮೀಮ್ಸ್‌ಗಳನ್ನು ಜನ ಶೇರ್‌ ಮಾಡುತ್ತಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇದನ್ನೂ ಓದಿ: ಲಖೀಂಪುರ್ ರೈತ ಹತ್ಯೆ; ಅಧಿಕಾರದ ಪರವಾಗಿ ನಿಂತ ಮಾಧ್ಯಮಗಳ ದುರುಳತನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅಣ್ಣಾ ಮಲೈ ಅವರ ಕೆಲಸದ ಬಗ್ಗೆ ಸರಿಯಾಗಿ ಅರಿಯದೆ ,ಮಾತಾಡೋ ಸೋಕಾಲ್ಡ್ ಎಡಬಿಡಂಗಿ ಕೆಲ ಪತ್ರಿಕೆಗಳ ಬಗ್ಗೆ ಜನ ತಲೆ ಕೆಡಿಸಿ ಕೊಳ್ಳಲ್ಲಾ ಬಿಡಿ , ಅದೂ ಚೈನಿ ಪಾಲನೆಯಲ್ಲಿ ನಡೆಯುವ ಕೆಲ ಮಾಧ್ಯಮಗಳು ಯಾವಾಗಲು ಹೀಗೆ ಮಾತಾಡೋದು ಅಂತ ಜನರಿಗೆ ತಿಳಿದಿದೆ.

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...