Homeಮುಖಪುಟ’ದೇಶ ವಿರೋಧಿ ಬಿಜೆಪಿ ಅರ್ನಾಬ್’- ಟ್ವಿಟ್ಟರ್‌‌ನಲ್ಲಿ ಹ್ಯಾಶ್‌‌ಟ್ಯಾಗ್‌ ಟ್ರೆಂಡ್

’ದೇಶ ವಿರೋಧಿ ಬಿಜೆಪಿ ಅರ್ನಾಬ್’- ಟ್ವಿಟ್ಟರ್‌‌ನಲ್ಲಿ ಹ್ಯಾಶ್‌‌ಟ್ಯಾಗ್‌ ಟ್ರೆಂಡ್

- Advertisement -
- Advertisement -

2019 ರ ಫೆಬ್ರವರಿ 14 ರಂದು ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ 40 ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಈ ಘಟನೆಯನ್ನು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಸಂಭ್ರಮಪಟ್ಟಿದ್ದಾರೆಂದು ಇತ್ತೀಚೆಗೆ ಅವರ ವಾಟ್ಸಪ್ ಚಾಟ್‌ಗಳು ಬಹಿರಂಗ ಪಡಿಸಿದೆ. ಈ ಹಿನ್ನಲೆಯಲ್ಲಿ ಅದನ್ನು ವಿರೋಧಿಸಿ ಹಾಗೂ ಅವರನ್ನು ಬಂಧಿಸುವಂತೆ ಆಗ್ರಹಿಸಿ #AntiNationalBJPArnab (ದೇಶವಿರೋಧಿ ಬಿಜೆಪಿ ಅರ್ನಾಬ್), #AntiNationalArnab(ದೇಶವಿರೋಧಿ ಅರ್ನಾಬ್) ಹ್ಯಾಶ್‌ಟ್ಯಾಗ್‌ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.

ದೆಹಲಿ ಕಾಂಗ್ರೆಸ್, “ಬಾಲಕೋಟ್ ಸ್ಟ್ರೈಕ್‌ ಅನ್ನು ಮೂರು ದಿನ ಹಿಂದೆಯೆ ಅರ್ನಬ್‌ಗೆ ತಿಳಿದಿತ್ತು. ಸೇನೆಯ ರಹಸ್ಯ ಅರ್ನಾಬ್‌ಗೆ ಹೇಗೆ ತಿಳಿಯಿತು. ಇದು ಬಹಳ ದೊಡ್ಡ ರಕ್ಷಣಾ ವೈಫಲ್ಯ, ಇದು ತನಿಖೆಯಾಗಲೆ ಬೇಕು” ಎಂದು ಟ್ವೀಟ್ ಮಾಡಿದೆ. ಅರ್ನಾಬ್ ತನ್ನ ವಾಟ್ಸಪ್‌ ಚಾಟ್‌ಗಳಲ್ಲಿ ಬಾಲಕೋಟ್ ದಾಳಿಯ ಬಗ್ಗೆ ಮೂರು ದಿನದ ಮುಂಚೆಯೆ ಹೇಳಿದ್ದು, ಇದರಿಂದಾಗಿ ಬಿಜೆಪಿಯು ಜಾಸ್ತಿ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸೂಚಿಸಿದ್ದರು.

ಇದನ್ನೂ ಓದಿ: ಪುಲ್ವಾಮ ದಾಳಿಯನ್ನು ಸಂಭ್ರಮಿಸಿದ್ದ ಅರ್ನಾಬ್: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಮಾನವ ಹಕ್ಕು ಹೋರಾಟಗಾರ ತಿರುಮುರುಗನ್ ಗಾಂಧಿ, “ಅರ್ನಾಬ್ ಯಾರು, ಪುಲ್ವಾಮಾ ಯಾಕೆ ಸಂಭವಿಸಿತು, ಬಾಲಕೋಟ್‌ ಅನ್ನು ಹೇಗೆ ಯೋಜಿಸಿದ್ದಾರೆ, ಸಾಮಾಜಿಕ ಕಾರ್ಯಕರ್ತರನ್ನು ಯಾರು ಬೆದರಿಸುತ್ತಾರೆ, ರಾಷ್ಟ್ರೀಯತೆಯ ಹಿಂದೆ ಏನಿದೆ, ಬಿಜೆಪಿ ಸತ್ಯಗಳನ್ನು ಹೇಗೆ ತಿರುಚುತ್ತದೆ, ನಿಜವಾದ ರಾಷ್ಟ್ರ ವಿರೋಧಿ ಯಾರು ಎಂದು ರಾಷ್ಟ್ರಕ್ಕೆ ಈಗ ತಿಳಿಯಿತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಂಗನಾ ಕುರಿತು ಅಶ್ಲೀಲವಾಗಿ ಪ್ರತಿಕ್ರಿಯಿಸಿದ್ದ ಅರ್ನಾಬ್: ರಿಪಬ್ಲಿಕ್ ಟಿಆರ್‌ಪಿ ದಾಹಕ್ಕೆ ಕಂಗನಾ ಬಲಿಪಶು?

ಕೇವಲ ಭಯೋತ್ಪಾದಕರಷ್ಟೇ ಸೈನಿಕರ ಸಾವನ್ನು ಸಂಭ್ರಮಿಸುತ್ತಾರೆ ಎಂದು ವಿನಯ್ ಕುಮಾರ್‌ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಶ್ರಿವತ್ಸ, “ದೇಶವಿರೋಧಿ ಅರ್ನಾಬ್, ಕೊಳಕು ನಾವಿಕಾ, ಪ್ರಯೋಜನಕ್ಕೆ ಬಾರದ ಪ್ರಕಾಶ್ ಜಾವ್ಡೇಕರ್, ಮೂರ್ಖ ರಜತ್‌ ಶರ್ಮ ಅವರನ್ನು, ಸೈನಿಕ ರಹಸ್ಯವನ್ನು ತಡೆಯುವುದಕ್ಕಾಗಿ ಸುಪ್ರೀಂಕೋಟ್ ಸಮಿತಿಯನ್ನು ಮುಖ್ಯನ್ಯಾಯಮೂರ್ತಿ ಬೋಬ್ಡೆಯವರು ತಕ್ಷಣ ನೇಮಿಸಬೇಕು” ಎಂದು ವ್ಯಂಗ್ಯವಾಡಿದ್ದಾರೆ.‌‌

ಇದನ್ನೂ ಓದಿ: ಕಂಗನಾ ಕುರಿತು ಅಶ್ಲೀಲವಾಗಿ ಪ್ರತಿಕ್ರಿಯಿಸಿದ್ದ ಅರ್ನಾಬ್: ರಿಪಬ್ಲಿಕ್ ಟಿಆರ್‌ಪಿ ದಾಹಕ್ಕೆ ಕಂಗನಾ ಬಲಿಪಶು?

ಉಪನ್ಯಾಸಕ ಜಗದೀಶ್ ಎಸ್ ಪಾಟಿಲ್, “ಬಿಜೆಪಿ ಕೈಯಲ್ಲಿ ಹೇಗೆ ಒತ್ತೆಯಾಳಾಗಿದ್ದೀರಿ ಎಂದು ವಾಟ್ಸಾಪ್ ಚಾಟ್‌ಗಳು ರಾಷ್ಟ್ರಕ್ಕೆ ತೋರಿಸಿದೆ. ರೈತರಿಗೆ ಉಪನ್ಯಾಸ ನೀಡುವುದನ್ನು ನಿಲ್ಲಿಸಿ”

ಜ್ಞಾನಿ ತಾವರೆಕೆರೆ ಅವರು, “ಕ್ರೊನಾಲಜಿ ನೋಡಿ, ಪುಲ್ವಾಮಾ ದಾಳಿ ಸಂಭವಿಸುತ್ತದೆ. ಆ ದಾಳಿಯ ನಂತರ ಹೆಚ್ಚಿನ ಸ್ಥಾನ ಗೆಲ್ಲುವುದಾಗಿ ಬಿಜೆಪಿ ನಾಯಕ ಯಡಿಯೂರಪ್ಪ ಹೇಳಿಕೊಂಡಿದ್ದಾರೆ. ಎನ್ಐಎ ಡೇವಿಂದರ್ ಸಿಂಗ್ ಅವರನ್ನು ಹಿಡಿಯಿತು ಮತ್ತು ಅವನು “ಇಲ್ಲಿ ಏನೋ ದೊಡ್ಡದು ನಡೆಯಲಿದೆ” ಎಂದು ಹೇಳುತ್ತಾನೆ. ಸೇನೆಯನ್ನು ಪ್ರಚಾರ ಮಾಡಿ ಬಿಜೆಪಿ ಚುನಾವಣೆಯಲ್ಲಿ ಜಯಗಳಿಸಿತು. ನಾವು ಸಿಕ್ಕಾಪಟ್ಟೆ ಗೆಲ್ಲಲಿದ್ದೇವೆ ಎಂದು ಅರ್ನಾಬ್ ಹೇಳುತ್ತಾನೆ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಅರ್ನಾಬ್‌ ಜೊತೆಗಿನ ವಾಟ್ಸಾಪ್ ಚಾಟ್ ಲೀಕ್ ಬೆನ್ನಲ್ಲೆ ಬಾರ್ಕ್‌ ಮಾಜಿ ಸಿಇಒ ದಾಸ್‌ಗುಪ್ತ ಐಸಿಯುಗೆ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...