Homeಚಳವಳಿಬೆಳಗಾವಿಯಲ್ಲಿ ಗೋ ಬ್ಯಾಕ್ ಅಮಿತ್ ಶಾ ಪ್ರತಿಭಟನೆ: ಕೃಷಿ ಕಾಯ್ದೆ ವಿರೋಧಿಸಿದ ರೈತರ ಬಂಧನ

ಬೆಳಗಾವಿಯಲ್ಲಿ ಗೋ ಬ್ಯಾಕ್ ಅಮಿತ್ ಶಾ ಪ್ರತಿಭಟನೆ: ಕೃಷಿ ಕಾಯ್ದೆ ವಿರೋಧಿಸಿದ ರೈತರ ಬಂಧನ

ರೈತರು ರಾಣಿಚೆನ್ನಮ್ಮ ವೃತ್ತದಲ್ಲಿ ಉರುಳುಸೇವೆ ಮಾಡುವ ಮೂಲಕ ಕೃಷಿ ಕಾಯ್ದೆಗಳ ವಿರುದ್ಧ ದನಿಯೆತ್ತಿ, ಗೋ ಬ್ಯಾಕ್ ಅಮಿತ್ ಶಾ, ಅಮಿತ್ ಶಾ ಹಠಾವೋ, ದೇಶ್ ಬಚಾವೋ ಎಂಬ ಘೋಷಣೆ ಕೂಗಿದ್ದಾರೆ.

- Advertisement -
- Advertisement -

ಕೇಂದ್ರ ಗೃಹ ಸಚಿವ ಬೆಳಗಾವಿ ಭೇಟಿ ಹಿನ್ನೆಲೆಯಲ್ಲಿ ಬೆಳಗಾವಿಯ ರಾಣಿಚೆನ್ನಮ್ಮ ವೃತ್ತದಲ್ಲಿ ನೂರಾರು ರೈತರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಗೋ ಬ್ಯಾಕ್ ಅಮಿತ್ ಶಾ ಘೋಷಣೆ ಕೂಗಿ ಅರಬೆತ್ತಲೆ ಹೋರಾಟ ನಡಿಸಿದ ಹಲವು ರೈತರನ್ನು ಪೊಲೀಸರು ಬಂಧಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು, ಈ ಕುರಿತು ಅಮಿತ್ ಶಾ ನಮ್ಮೊಂದಿಗೆ ಬಹಿರಂಗ ಚರ್ಚೆ ನಡೆಸಬೇಕು, ಇಲ್ಲದಿದ್ದರೆ ಕಾರ್ಯಕ್ರಮ ನಡೆಯಲು ಅವಕಾಶ ನೀಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು. ಪ್ರತಿಭಟನಾ ನಿರತ ರೈತರನ್ನು ಪೊಲೀಸರು ಬಲಪ್ರಯೋಗದ ಮೂಲಕ ಬಂಧಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಪ್ರತಿಭಟನೆಗೂ ಮೊದಲು ರೈತರು ರಾಣಿಚೆನ್ನಮ್ಮ ವೃತ್ತದಲ್ಲಿ ಉರುಳುಸೇವೆ ಮಾಡುವ ಮೂಲಕ ಕೃಷಿ ಕಾಯ್ದೆಗಳ ವಿರುದ್ಧ ದನಿಯೆತ್ತಿ, ಗೋ ಬ್ಯಾಕ್ ಅಮಿತ್ ಶಾ, ಅಮಿತ್ ಶಾ ಹಠಾವೋ, ದೇಶ್ ಬಚಾವೋ ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯು ಬೆಳಗಾವಿಯಲ್ಲಿ ಇಂದು ಜನಸೇವಕ ಸಮಾರೋಪ ಸಮಾವೇಶ ಹಮ್ಮಿಕೊಂಡಿದೆ.  ಅದಕ್ಕೂ ಮುನ್ನವೇ ರೈತರು ಬಿಜೆಪಿ ವಿರುದ್ಧ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ.


ಇದನ್ನೂ ಓದಿ: ಗಂಗೂಲಿಯ ಹೃದಯಾಘಾತಕ್ಕೆ ಮರುಗುವ ಮೋದಿಗೆ 60 ಹುತಾತ್ಮ ರೈತರು ಕಾಣುತ್ತಿಲ್ಲ: ಯೋಗೇಂದ್ರ ಯಾದವ್ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂವಿಧಾನ-ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟ ಇಂದಿನಿಂದ ಆರಂಭ: ಮಲ್ಲಿಕಾರ್ಜುನ ಖರ್ಗೆ

0
2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದಿನಿಂದ ಆರಂಭಗೊಂಡಿದ್ದು, ಮತದಾರರು ಎಚ್ಚರಿಕೆಯಿಂದ ಮತದಾನ ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ. "ಆರ್ಥಿಕ ಸಬಲೀಕರಣ ಮತ್ತು ಸಮಾನ ಅವಕಾಶಗಳ ಹೊಸ...