Homeಕರ್ನಾಟಕಮಹಿಷ ದಸರಾ ಮುಗಿಯುವವರಗೆ ಪ್ರತಾಪ್ ಸಿಂಹರನ್ನ ಬಂಧಿಸಿ: ಮಾಜಿ ಮೇಯರ್ ಪುರುಷೋತ್ತಮ ಆಗ್ರಹ

ಮಹಿಷ ದಸರಾ ಮುಗಿಯುವವರಗೆ ಪ್ರತಾಪ್ ಸಿಂಹರನ್ನ ಬಂಧಿಸಿ: ಮಾಜಿ ಮೇಯರ್ ಪುರುಷೋತ್ತಮ ಆಗ್ರಹ

- Advertisement -
- Advertisement -

ಅಕ್ಟೋಬರ್ 13ರಂದು ಮಹಿಷ ದಸರಾ ಆಚರಣೆ ಮಾಡುತ್ತಿದ್ದೇವೆ. ಹಾಗಾಗಿ ಮಹಿಷ ದಸರಾ ಮುಗಿಯುವವರಗೆ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿ ಎಂದು ಮಾಜಿ ಮೇಯರ್ ಪುರುಷೋತ್ತಮ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ನಮ್ಮ ಸಮಿತಿ ವತಿಯಿಂದ ಅವರನ್ನು ಬಂಧಿಸಬೇಕೆಂದು ಆಗ್ರಹಿಸುತ್ತೇವೆ. ಇವರು ಸಂಘರ್ಷಕ್ಕೂ ಸಿದ್ದ ಎಂಬ ಪದ ಬಳಸಿದ್ದಾರೆ. ಅವರನ್ನು ಯಾರು ಸಂಘರ್ಷಕ್ಕೆ ಕರೆದಿದ್ದಾರೆ ಅವರೊಟ್ಟಿಗೆ ಸಂಘರ್ಷ ಮಾಡಲಿ. ಅವರ ಹೇಳಿಕೆ ನೋಡುತ್ತ ಕುಳಿತಿರುವ ಪೋಲಿಸರು ಮತ್ತು ಜಿಲ್ಲಾಡಳಿತ ಈಗಾಗಲೇ ಅವರನ್ನು ಬಂಧಿಸಬೇಕಿತ್ತು” ಎಂದು ಕಿಡಿಕಾರಿದ್ದಾರೆ.

”ಸಂಸದ ಪ್ರತಾಪ್ ಸಿಂಹ ತಮ್ಮ ರಾಜಕೀಯಕ್ಕಾಗಿ ಚಾಮುಂಡಿ ಚಲೋ ಕರೆ ನೀಡಿದ್ದಾರೆ. ನಾವು ಚಾಮುಂಡಿ ವಿರೋಧಿಗಳಲ್ಲ. ಪ್ರತಾಪಸಿಂಹ ಅವರಂತರಹ ಸಂಸದರನ್ನು ನಾನು ಕಂಡಿಲ್ಲ. ವೈಯಕ್ತಿಕ ದ್ವೇಷಕ್ಕಿಳಿಯುವುದು ನಮ್ಮ ಮನಸ್ಥಿತಿಯಲ್ಲ. ಹೀಗಾಗಿ ನಾವು ಯಾವ ಸಂಘರ್ಷಕ್ಕೂ ಇಳಿಯದೇ ಕಾರ್ಯಕ್ರಮ ಮಾಡುತ್ತೇವೆ” ಎಂದು ಹೇಳಿದ್ದಾರೆ.

”ನಾವು ಬೇರೊಬ್ಬರ ಭಾವನೆಗೆ ಧಕ್ಕೆ ತರುವ ಪ್ರಯತ್ನ ಮಾಡುವುದಿಲ್ಲ. ಅವರ ಪಾಡಿಗೆ ಅವರು ಪ್ರತಿಭಟನೆ ಮಾಡಿದರೆ ಮಾಡಿಕೊಳ್ಳಲಿ, ನಾವು ನಮ್ಮ ಪಾಡಿಗೆ ಕಾರ್ಯಕ್ರಮ ಮಾಡುತ್ತೇವೆ” ಎಂದು ತಿಳಿಸಿದರು.

ಈ ವೇಳೆ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ”ಮಹಿಷ ದಸರಾವನ್ನು ಬಿ.ಟಿ.ಲಲಿತಾ ನಾಯಕ್ ಉದ್ಘಾಟನೆ ಮಾಡುತ್ತಾರೆ. ಬೆಳಗ್ಗೆ 8.30ಕ್ಕೆ ಚಾಮುಂಡಿಬೆಟ್ಟದ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಗುವುದು. ಅಂದು ಅಶೋಕಪುರಂ ಉದ್ಯಾನವನದಿಂದ ಬೈಕ್​ ​ರ‍್ಯಾಲಿ ಹೊರಡಲಿದೆ. ಬೆಳಗ್ಗೆ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ವಾಪಸಾಗುತ್ತೇವೆ. ಅಂದು ಬೆಳಗ್ಗೆ 11 ಗಂಟೆಗೆ ಟೌನ್​ಹಾಲ್​ನಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

ಇದನ್ನೂ ಓದಿ: ‘ಬಸ್ಸಿಗೆ ಬೆಂಕಿ ಹಾಕುತ್ತೇನೆ, ವಿಧಾನಸೌಧಕ್ಕೆ ಕಲ್ಲು ಎಸೆಯುತ್ತೇನೆʼ ಎಂದ ಪುನೀತ್ ಕೆರೆಹಳ್ಳಿ ವಿರುದ್ಧ ಕಾಂಗ್ರೆಸ್ ದೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...