Homeಮುಖಪುಟಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದೇ ದಿನದಲ್ಲಿ ಅರೆಸ್ಟ್‌‌ ವಾರೆಂಟ್‌‌!

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದೇ ದಿನದಲ್ಲಿ ಅರೆಸ್ಟ್‌‌ ವಾರೆಂಟ್‌‌!

- Advertisement -
- Advertisement -

ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರವನ್ನು ತೊರೆದು ಬಿಜೆಪಿಯಿಂದ ಹೊರ ನಡೆಯುವುದಾಗಿ ಹೇಳಿದ್ದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು, 2014 ರಲ್ಲಿ ಮಾಡಿದ್ದ ದ್ವೇಷದ ಭಾಷಣದ ಮೇಲೆ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದೇ ದಿನಕ್ಕೆ ಸುಲ್ತಾನ್‌ಪುರದಲ್ಲಿ ಅವರ ಬಂಧನಕ್ಕೆ ವಾರಂಟ್ ಹೊರಡಿಸಲಾಗಿದೆ.

ಈ ಪ್ರಕರಣದಲ್ಲಿ ಇಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸ್ವಾಮಿ ಪ್ರಸಾದ್‌ ಅವರನ್ನು ಕೇಳಲಾಗಿತ್ತು, ಆದರೆ ಅವರು ಹಾಜರಾಗಿರಲಿಲ್ಲ. ಇದೀಗ ಪ್ರಕರಣದಲ್ಲಿ ಜನವರಿ 24 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಅವರನ್ನು ಈಗ ಕೇಳಲಾಗಿದೆ. ಪ್ರಕರಣದ ದಾಖಲಾಗಿದ್ದಾಗ ಅವರು ಮಾಯಾವತಿ ನಾಯಕತ್ವದ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ದಲ್ಲಿ ಇದ್ದರು.

ಇದನ್ನೂ ಓದಿ:ನಟಿಯ ಬಗ್ಗೆ ಅಸಂಬದ್ದ ಸುದ್ದಿ ಪ್ರಕಟಿಸಿ ‘ವಿಕೃತಿ’ ಮೆರೆದ ವಿಜಯವಾಣಿ.ನೆಟ್‌

ಮದುವೆಯ ಸಂದರ್ಭದಲ್ಲಿ ಗೌರಿ ಅಥವಾ ಗಣೇಶನನ್ನು ಪೂಜಿಸಬಾರದು. ಇದು ದಲಿತರು ಮತ್ತು ಹಿಂದುಳಿದ ಜಾತಿಗಳನ್ನು ದಾರಿತಪ್ಪಿಸಲು ಮತ್ತು ಗುಲಾಮರನ್ನಾಗಿ ಮಾಡಲು ಮೇಲ್ಜಾತಿಗಳ ಪಿತೂರಿಯಾಗಿದೆ ಎಂದು ಸ್ವಾಮಿ ಪ್ರಸಾದ್‌ ಅವರು ಸಭೆಯೊಂದರಲ್ಲಿ ಹೇಳಿದ್ದರು.

2016 ರಲ್ಲಿ ಅಲಹಾಬಾದ್ ಹೈಕೋರ್ಟ್ ಅವರ ಬಂಧನಕ್ಕೆ ಹೊರಡಿಸಿದ್ದ ವಾರಂಟ್ ಅನ್ನು ತಡೆಹಿಡಿದಿತ್ತು. ಅಂದಿನಿಂದ ಈ ಪ್ರಕರಣದಲ್ಲಿ ಹಲವು ವಿಚಾರಣೆಗಳು ನಡೆದಿವೆ.

ಜನವರಿ 6 ರಂದು ಸುಲ್ತಾನ್‌ಪುರ ನ್ಯಾಯಾಲಯ ಜನವರಿ 12 ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿತ್ತು. ಅವರು ಇಂದು ಹಾಜರಾಗದೇ ಇದ್ದುದಕ್ಕೆ ಇಂದು ನ್ಯಾಯಾಲಯವು ಅವರ ವಾರೆಂಟ್‌ ಅನ್ನು ನವೀಕರಿಸಿದೆ.

ಇದನ್ನೂ ಓದಿ:ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಪ್ರತ್ಯೇಕ ಜೈಲು ಆವರಣ ನಿರ್ಮಿಸಿ: ರಾಜ್ಯಗಳಿಗೆ ಒಕ್ಕೂಟ ಸರ್ಕಾರ

ಹಿಂದುಳಿದ ಜಾತಿಯ ಪ್ರಬಲ ನಾಯಕರಾದ ಸ್ವಾಮಿ ಪ್ರಸಾದ್‌ ಅವರು ಉತ್ತರ ಪ್ರದೇಶವು ಚುನಾವಣೆಗೆ ಸಜ್ಜಾಗುತ್ತಿರುವ ಹೊತ್ತಿಗೆ ಸರ್ಕಾರದಿಂದ ಹೊರನಡೆದು ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದ್ದಾರೆ. ತಮ್ಮೊಂದಿಗೆ ಇನ್ನಷ್ಟು ಸಚಿವರು ಮತ್ತು ಶಾಸಕರನ್ನು ಕರೆದುಕೊಂಡು ಹೋಗುವುದಾಗಿ ಬೆದರಿಕೆ ಕೂಡಾ ಹಾಕಿದ್ದಾರೆ; ಇವರ ನಂತರ ಈಗಾಗಲೇ ಐವರು ರಾಜೀನಾಮೆ ನೀಡಿದ್ದಾರೆ.

ನನ್ನ ನಡೆಯು ಬಿಜೆಪಿಯಲ್ಲಿ ಭೂಕಂಪ ಉಂಟುಮಾಡಿದೆ ಎಂದು ಹೇಳಿರುವ ಅವರು, “ನಾನು ಸಚಿವ ಸ್ಥಾನವನ್ನು ಮಾತ್ರ ತ್ಯಜಿಸಿದ್ದೇನೆ. ಶೀಘ್ರದಲ್ಲೇ ಬಿಜೆಪಿಯನ್ನು ತೊರೆಯುತ್ತೇನೆ. ಸದ್ಯಕ್ಕೆ ನಾನು ಸಮಾಜವಾದಿ ಪಕ್ಷಕ್ಕೆ ಸೇರುತ್ತಿಲ್ಲ” ಎಂದು ಸ್ವಾಮಿ ಪ್ರಸಾದ್‌‌ ಹೇಳಿದ್ದು, ಶುಕ್ರವಾದಂದು ಈ ಬಗ್ಗೆ ಬಹಿರಂಗ ಪಡಿಸುವುದಾಗಿ ಹೇಳಿದ್ದಾರೆ.

‘‘ನಾನು ಬಿಜೆಪಿಯನ್ನು ತಿರಸ್ಕರಿಸಿದ್ದೇನೆ… ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’’ ಎಂದು ಅವರು ಘೋಷಿಸಿದ್ದಾರೆ.

ಸ್ವಾಮಿ ಪ್ರಸಾದ್‌ ಅವರು ಎರಡು ತಿಂಗಳ ಹಿಂದೆ ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಆದಿತ್ಯನಾಥ್ ಅವರ ಕಾರ್ಯಶೈಲಿಯ ಬಗ್ಗೆ ದೂರು ನೀಡಿದ್ದರು ಎಂದು ವರದಿಯಾಗಿದೆ. ಆದರೆ ಕೇಂದ್ರ ನಾಯಕತ್ವವು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ:ಹರಿದ್ವಾರ ದ್ವೇಷ ಭಾಷಣ: ಉತ್ತರಾಖಂಡ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...