HomeUncategorizedಏ.19 ರಂದು ಅರುಣಾಚಲ-ಸಿಕ್ಕಿಂ; ಮೇ 13ರಂದು ಆಂಧ್ರ-ಒಡಿಶಾದಲ್ಲಿ ವಿಧಾನಸಭೆ ಚುನಾವಣೆ

ಏ.19 ರಂದು ಅರುಣಾಚಲ-ಸಿಕ್ಕಿಂ; ಮೇ 13ರಂದು ಆಂಧ್ರ-ಒಡಿಶಾದಲ್ಲಿ ವಿಧಾನಸಭೆ ಚುನಾವಣೆ

- Advertisement -
- Advertisement -

ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಏಪ್ರಿಲ್ 19 ರಂದು ಮತ್ತು ಆಂಧ್ರ ಪ್ರದೇಶ ಮತ್ತು ಒಡಿಶಾದಲ್ಲಿ ಮೇ 13 ರಂದು ವಿಧಾನಸಭೆ ಚುನಾವಣೆಗಳು ನಡೆಯಲಿದ್ದು, ಜೂನ್ 4 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಶನಿವಾರ ಪ್ರಕಟಿಸಿದೆ.

ನಾಲ್ಕು ರಾಜ್ಯಗಳ ಚುನಾವಣೆಯು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಲೋಕಸಭಾ ಚುನಾವಣೆಯೊಂದಿಗೆ ನಡೆಯಲಿದೆ. ಲೋಕಸಭೆ ಚುನಾವಣೆಯ ಮೊದಲ ಹಂತ ಏಪ್ರಿಲ್ 19 ರಂದು ಮತ್ತು ಏಳನೇ ಮತ್ತು ಕೊನೆಯದು ಜೂನ್ 1 ರಂದು ನಡೆಯಲಿದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) 2019 ರಲ್ಲಿ ಅರುಣಾಚಲ ಪ್ರದೇಶದಲ್ಲಿ 60 ಸ್ಥಾನಗಳಲ್ಲಿ 41 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಉಳಿಸಿಕೊಂಡಿದೆ. ಜನತಾ ದಳ (ಯುನೈಟೆಡ್) ಏಳು, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಐದು, ಕಾಂಗ್ರೆಸ್ ನಾಲ್ಕು ಮತ್ತು ಅರುಣಾಚಲ ಪ್ರದೇಶದ ಪೀಪಲ್ಸ್ ಪಾರ್ಟಿ ಒಂದು ಸ್ಥಾನವನ್ನು ಪಡೆದುಕೊಂಡಿದೆ. ಬುಧವಾರ ಬಿಜೆಪಿ ಅರುಣಾಚಲದ ಎಲ್ಲಾ 60 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಸಿಕ್ಕಿಂ ರಾಜ್ಯದಲ್ಲಿ, ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) 2019 ರಲ್ಲಿ 32 ಸ್ಥಾನಗಳಲ್ಲಿ 17 ಅನ್ನು ಗೆದ್ದುಕೊಂಡು ಸರ್ಕಾರವನ್ನು ರಚಿಸಿತು. ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್‌) 15 ಸ್ಥಾನಗಳನ್ನು ಗೆದ್ದಿದೆ.

ಒಡಿಶಾದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಮೈತ್ರಿ ಕುರಿತು ಗೊಂದಲ ಮುಂದುವರಿದಿರುವಾಗಲೇ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮೈತ್ರಿ ಕುರಿತು ಬಿಜೆಡಿ ನಾಯಕರ ಎರಡನೇ ಸಭೆಯನ್ನು ಗುರುವಾರ ನಡೆಸಿದರು. ಆದರೆ, ಮೈತ್ರಿ ಅಂತಿಮಗೊಳಿಸುವ ಬಗ್ಗೆ ಯಾವುದೇ ಮಾತುಗಳಿಲ್ಲ.

ಬುಧವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯ ಬಿಜೆಪಿ ಮುಖ್ಯಸ್ಥ ಮನಮೋಹನ್ ಸಮಾಲ್ ಅವರು ಗುರುವಾರ ಎಕ್ಸ್‌ನಲ್ಲಿ ಪಕ್ಷವು ಒಡಿಶಾದಲ್ಲಿ ಏಕಾಂಗಿಯಾಗಿ ಹೋರಾಡುತ್ತದೆ ಎಂದು ಹೇಳಿದರು.

2019 ರಲ್ಲಿ, ಪಟ್ನಾಯಕ್ ಐದನೇ ಅವಧಿಗೆ ಒಡಿಶಾದ ಉನ್ನತ ಹುದ್ದೆಯನ್ನು ಉಳಿಸಿಕೊಂಡರು. ಏಕೆಂದರೆ, ಬಿಜೆಡಿ 147 ವಿಧಾನಸಭಾ ಸ್ಥಾನಗಳಲ್ಲಿ 115 ಸ್ಥಾನಗಳನ್ನು ಗೆದ್ದಿತು. ಅವರು ಪವನ್ ಚಾಮ್ಲಿಂಗ್ (ಸಿಕ್ಕಿಂ) ಮತ್ತು ಜ್ಯೋತಿ ಬಸು (ಪಶ್ಚಿಮ ಬಂಗಾಳ) ದಾಖಲೆಯನ್ನು ಸರಿಗಟ್ಟಿದ್ದಾರೆ.

ಆಂಧ್ರಪ್ರದೇಶದಲ್ಲಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (YSRCP) 2019 ರಲ್ಲಿ 151 ವಿಧಾನಸಭಾ ಸ್ಥಾನಗಳನ್ನು ಗೆದ್ದು 49.5% ಮತಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿತು.

23 ವಿಧಾನಸಭಾ ಸ್ಥಾನಗಳನ್ನು ಗೆದ್ದಿರುವ ತೆಲುಗು ದೇಶಂ ಪಕ್ಷ (ಟಿಡಿಪಿ) 2024 ರ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲಿದೆ. ಆರು ವರ್ಷಗಳ ನಂತರ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ) ಮರಳಿತು.

ಇದನ್ನೂ ಓದಿ; ‘ಮಿಥ್ ವರ್ಸಸ್ ರಿಯಾಲಿಟಿ..’; ಸುಳ್ಳು ಸುದ್ದಿಗಳ ಪತ್ತೆಗೆ ಚುನಾವಣಾ ಆಯೋಗದಿಂದ ಹೊಸ ಯೋಜನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...