Homeಮುಖಪುಟಅಬಕಾರಿ ನೀತಿ ಪ್ರಕರಣ: ಸಮನ್ಸ್ ಹಿಂಪಡೆಯುವಂತೆ EDಗೆ ಕೇಜ್ರಿವಾಲ್ ಪತ್ರ

ಅಬಕಾರಿ ನೀತಿ ಪ್ರಕರಣ: ಸಮನ್ಸ್ ಹಿಂಪಡೆಯುವಂತೆ EDಗೆ ಕೇಜ್ರಿವಾಲ್ ಪತ್ರ

- Advertisement -
- Advertisement -

ಅಬಕಾರಿ ನೀತಿ ಪ್ರಕರಣದಲ್ಲಿ ತಮಗೆ ನೀಡಿರುವ ಸಮನ್ಸ್ ಹಿಂಪಡೆಯುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಪತ್ರ ಬರೆದಿದ್ದಾರೆ. ಕೇಜ್ರಿವಾಲ್ ಅವರು ದೆಹಲಿಯ ಇಡಿ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲಿದ್ದಾರೆ.

”ಈ ಇಡಿ ನೋಟಿಸ್ ಅಕ್ರಮ ಮತ್ತು ರಾಜಕೀಯ ಪ್ರೇರಿತವಾಗಿದೆ. ಬಿಜೆಪಿಯ ಆಜ್ಞೆಯ ಮೇರೆಗೆ ನೋಟಿಸ್ ಕಳುಹಿಸಲಾಗಿದೆ. ತಕ್ಷಣ ನೋಟಿಸ್ ಹಿಂಪಡೆಯಿರಿ ಎಂದು ಕೇಜ್ರಿವಾಲ್ ಪತ್ರದಲ್ಲಿ ತಿಳಿಸಿದ್ದಾರೆ.

ರಾಜಕೀಯ ಪ್ರೇರಿತ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಲು ಕೇಂದ್ರವು ಪ್ಲ್ಯಾನ್ ಮಾಡಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.

ಈ ಬಗ್ಗೆ ದೆಹಲಿ ಸಚಿವ ಸೌರಭ್ ಭಾರದ್ವಾಜ್  ಮಾತನಾಡಿದ್ದು, ”ಇಡಿ ಕಾನೂನು ಸುವ್ಯವಸ್ಥೆಯನ್ನು ಲೆಕ್ಕಿಸದೆ ವರ್ತಿಸುತ್ತಿದೆ ಏಕೆಂದರೆ ನ್ಯಾಯಾಲಯದ ಮೇಲ್ವಿಚಾರಣೆಯಿಲ್ಲದೆ ತನಗೆ ಬೇಕಾದವರನ್ನು ವಿಚಾರಣೆಗೆ ಕರೆಸುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

”ವಸಾಹತುಶಾಹಿ ಕಾಲದಲ್ಲಿಯೂ ಸಹ, ಜನರನ್ನು ಹುಡುಕಲು ಪೊಲೀಸರಿಗೆ ವಾರಂಟ್ ಅಗತ್ಯವಿತ್ತು ಏಕೆಂದರೆ ನ್ಯಾಯಾಲಯದ ವಾರಂಟ್ ಇಲ್ಲದೆ ಜನರ ಮೇಲೆ ದಾಳಿ ಮಾಡಲು ಪೊಲೀಸರಿಗೆ ಅವಕಾಶ ನೀಡಿದರೆ ಅದು ದಾದಾಗಿರಿ (ಬೆದರಿಕೆ) ಆಗುತ್ತದೆ ಎಂದು ಅರ್ಥೈಸಲಾಗಿತ್ತು. ಆದರೆ ಇಂದು, ಇಡಿ ವಾರಂಟ್‌ಗಳನ್ನು ಬಳಸುವುದಿಲ್ಲ. ಯಾರ ಮನೆ ಮೇಲೆ ದಾಳಿ ಮಾಡಬೇಕೆಂದು ಅದರ ಅಧಿಕಾರಿಗಳು ನಿರ್ಧರಿಸುತ್ತಾರೆ” ಎಂದು ಭಾರದ್ವಾಜ್ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

”ಭ್ರಷ್ಟಾಚಾರ ಆರೋಪದಲ್ಲಿ ಹೆಸರು ಬಂದಿರುವ ಬಿಜೆಪಿ ನಾಯಕರ ಮನೆಗಳ ಮೇಲೆ ಇಡಿ ದಾಳಿ ನಡೆಸುವುದು ಯಾವಾಗ? ಹಲವು ವರದಿಗಳು ಹೊರಬಿದ್ದಿವೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ: ಸಿಎಂ ಕೇಜ್ರಿವಾಲ್‌ಗೆ ಇಡಿ ಸಮನ್ಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...