Homeಮುಖಪುಟಅಸ್ಸಾಂ: ಬುರ್ಖಾ ಧರಿಸಿಲ್ಲ ಎಂದು ಆಕ್ಷೇಪ: ಜೀನ್ಸ್ ಧರಿಸಿದ್ದ ಯುವತಿಯನ್ನು ಅಂಗಡಿಯಿಂದ ಹೊರದಬ್ಬಿದ ಮಾಲೀಕ

ಅಸ್ಸಾಂ: ಬುರ್ಖಾ ಧರಿಸಿಲ್ಲ ಎಂದು ಆಕ್ಷೇಪ: ಜೀನ್ಸ್ ಧರಿಸಿದ್ದ ಯುವತಿಯನ್ನು ಅಂಗಡಿಯಿಂದ ಹೊರದಬ್ಬಿದ ಮಾಲೀಕ

- Advertisement -
- Advertisement -

ಬುರ್ಖಾ ಧರಿಸಿಲ್ಲ ಎಂದು ಅಂಗಡಿ ಮಾಲೀಕರೊಬ್ಬರು ಆಕ್ಷೇಪ ವ್ಯಕ್ತಿ ಪಡಿಸಿ, ಜೀನ್ಸ್ ಧರಿಸಿದ್ದ ಕಾರಣಕ್ಕೆ  ಯುವತಿಗೆ ಅವಮಾನ ಮಾಡಿ ಅಂಗಡಿಯಿಂದ ಹೊರ ಹಾಕಿ ಅನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆ ಅಸ್ಸಾಂನ ಬಿಸ್ವನಾಥ್ ಜಿಲ್ಲೆಯಲ್ಲಿ ನಡೆದಿದೆ.

ಯುವತಿಯನ್ನು ಅವಮಾನ ಮಾಡಿದಕ್ಕೆ ಪ್ರತಿಭಟನೆ ನಡೆಸಲು ಹೋದ ಯುವತಿಯ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ಆರೋಪಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಗುವಾಹಟಿಯಿಂದ ಸುಮಾರು 230 ಕಿಮೀ ದೂರದಲ್ಲಿರುವ ಬಿಸ್ವನಾಥ್ ಚರಿಯಾಲಿಯಲ್ಲಿರುವ ಮೊಬೈಲ್ ಫೋನ್ ಅಂಗಡಿಯಲ್ಲಿ ಯುವತಿ ಇಯರ್‌ಫೋನ್ ಖರೀದಿಸಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ ಎಂದಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ಜೀನ್ಸ್ ಧರಿಸಿದ್ದಕ್ಕೆ ಬಾಲಕಿಯನ್ನು ಕೊಂದ ಅಜ್ಜ ಮತ್ತು ಚಿಕ್ಕಪ್ಪಂದಿರು

ಮೊಬೈಲ್ ಅಂಗಡಿಯ ಮಾಲೀಕ ನೂರುಲ್ ಅಮೀನ್ ಯುವತಿಗೆ ಇಯರ್‌ಪೋನ್‌ ನೀಡಲು ನಿರಾಕರಿಸಿದ್ದಲ್ಲದೆ, ಬುರ್ಖಾ ಬದಲಿಗೆ ಜೀನ್ಸ್ ಧರಿಸಿದ್ದಕ್ಕಾಗಿ ಹುಡುಗಿಯನ್ನು ಅವಮಾನಿಸಿದ್ದಾರೆ. ನಂತರ ಆಕೆಯನ್ನು ಅಂಗಡಿಯಿಂದ ಹೊರಗೆ ತಳ್ಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

“ಬುರ್ಖಾ ಬದಲಿಗೆ ಜೀನ್ಸ್ ಧರಿಸಿದ್ದಕ್ಕಾಗಿ ನನ್ನ ಮಗಳ ಜೊತೆಗೆ ಅನುಚಿತವಾಗಿ ವರ್ತಿಸಿ ನೂರುಲ್ ಅಂಗಡಿಯಿಂದ ಹೊರಹಾಕಲಾಗಿದೆ. ಈ ಜನರು ಅಸ್ಸಾಂನಲ್ಲಿ ತಾಲಿಬಾನ್ ವ್ಯವಸ್ಥೆಯನ್ನು ತರಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಹುಡುಗಿಯರನ್ನು ಬುರ್ಖಾ ಮತ್ತು ಹಿಜಾಬ್ ಧರಿಸಲು ಒತ್ತಾಯಿಸುತ್ತಿದ್ದಾರೆ” ಎಂದು ಯುವತಿಯ ತಂದೆ ಹೇಳಿದ್ದಾರೆ.

“ನಾವು ಅಸ್ಸಾಂನಲ್ಲಿ ಹುಟ್ಟಿ ಬೆಳೆದಿದ್ದೇವೆ ಮತ್ತು ಅಸ್ಸಾಮಿ ಸಂಸ್ಕೃತಿಯನ್ನು ಅನುಸರಿಸುತ್ತಿದ್ದೇವೆ. ನನ್ನ ಮಗಳು BCA (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್) ಓದುತ್ತಿದ್ದಾಳೆ. ಆಕೆ ಸರ್ಕಾರಿ ಶಾಲೆಯಲ್ಲಿ ಅಸ್ಸಾಮಿ ಸಂಸ್ಕೃತಿಯಲ್ಲಿ ಓದಿದ್ದಾಳೆ. ಆದರೆ, ಈಗ ಈ ಜನರು ಬುರ್ಖಾ ಮತ್ತು ಹಿಜಾಬ್ ಧರಿಸಿ ತಾಲಿಬಾನ್ ಶೈಲಿಯನ್ನು ಅನುಸರಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.

“ಅಕ್ಟೋಬರ್ 25 ರಂದು ಘಟನೆ ನಡೆದಿದ್ದು, ಪ್ರಮುಖ ಆರೋಪಿಗಳಾದ ನೂರುಲ್ ಅಮೀನ್, ಸುಫಿಕುಲ್ ಇಸ್ಲಾಂ ಮತ್ತು ರಫೀಕುಲ್ ಇಸ್ಲಾಂ ಅವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದೇವೆ. ಯುವತಿಯ ಕುಟುಂಬ ಸದಸ್ಯರು ಬಿಸ್ವನಾಥ್ ಚರಿಯಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ದೂರಿನ ಮೇರೆಗೆ ನಾವು ಅವರನ್ನು ಬಂಧಿಸಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಜೇನ್ ಸಿಂಗ್ ತಿಳಿಸಿದ್ದಾರೆ.


ಇದನ್ನೂ ಓದಿ: ಅಮೆರಿಕನ್‌ ಜೀನ್ಸ್ ಬಗ್ಗೆ ಕಂಗನಾ ಟ್ವೀಟ್: ಹಳೆಯ ಫೋಟೋಗಳನ್ನು ಶೇರ್ ಮಾಡಿ ಕಾಲೆಳೆದ ನೆಟ್ಟಿಗರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ರೀತಿಯ ತಾಲಿಬಾನ್ ಮನಸ್ಥಿತಿಗಳನ್ನು ಮೊಳಕೆಯಲ್ಲೇ ಚಿವುಟಬೇಕು. ಇನ್ನೊಬ್ಬರ ಮೇಲೆ ಬುರ್ಖಾ ಹೇರಲು ಇವರಿಗೆ ಅಧಿಕಾರ ಕೊಟ್ಟವರಾರು ???

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ...

0
ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು...