Homeಅಂಕಣಗಳುಯಜ್ಞ ನಿರ್ವಿಜ್ಞ ಟೆಂಗ್.. ಟೆಂಗ್... ಟೆಂಗ್.....!!

ಯಜ್ಞ ನಿರ್ವಿಜ್ಞ ಟೆಂಗ್.. ಟೆಂಗ್… ಟೆಂಗ್…..!!

- Advertisement -
- Advertisement -

ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ಅಟ್ಯಾಕ್ ಹನ್ಮಂತ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಲಬೆರಕೆ ಸರ್ಕಾರವು ಎಲ್ಲಾ ಬಗೆಯಲ್ಲೂ ಕರ್ನಾಟಕ ರಾಜ್ಯವನ್ನು ಮೌಡ್ಯಗಳ ಕೊಂಪೆಯನ್ನಾಗಿ ಮಾಡೇ ಮಾಡುತ್ತೇವೆಂದು ಗುಪ್ತ ಪ್ರತಿಜ್ಞೆ ಮಾಡಿರುವ ಸಂಗತಿ ಇದೀಗ ಹೊರಬಿದ್ದಿದೆ. ಸಿಎಂ ಕುಮಾರಣ್ಣನವರು ರಾಜ್ಯದ ಸರ್ವ ಗುಡಿಗುಂಡಾರಗಳಿಗೂ ದೌಡಾಯಿಸಿ, ಉರುಳುಸೇವೆ ಮಾಡಿ ಬಂದ ನಂತರ, ಡೆಪ್ಯೂಟಿ ಸಿಎಂ ಪರಂ ಸಾಹೇಬ್ರು ತಮ್ಮ ವಿಧಾನಸೌಧದದ ಚೇಂಬರಿನೊಳಗೇ ವಾಸ್ತುಪ್ರಕಾರ ಬೆಂಕಿ ಹಾಕಿ, ಹೋಮ ನೆರವೇರಿಸಿ ತೀರ್ಥ ಕುಡಿದು ನೆತ್ತಿಗೆ ಸವರಿಕೊಂಡಿರುವುದನ್ನು ತಿಳಿದು, ಕರ್ನಾಟಕ ರಾಜ್ಯ ಇನ್ನು ಎಂತೆಂಥ ಮೌಡ್ಯಗಳಿಗೆ ತಲೆ ಕೊಡಬೇಕಾಗುತ್ತದೋ ಎಂದು ತಲೆಯಲ್ಲಿ ಮಿದುಳಿರುವ ಮಂದಿ ಆತಂಕಕ್ಕೆ ಒಳಗಾಗಿದ್ದಾರೆಂದು ವರದಿಯಾಗಿದೆ. ತಮ್ಮ ಕಛೇರಿಯ ಸೋಫಾ ಮೇಲೆ ಯಜ್ಞಕುಂಡವಿಟ್ಟು ‘ಪೊರ್ಕಿ ಹುಚ್ಚ ವೆಂಕಟ್’ ಚಿತ್ರದ ಸೂಪರ್‍ಹಿಟ್ ಹಾಡು ಹಾಡುತ್ತ ನರ್ತಿಸುತ್ತಿದ್ದ ಪರಂ ಸಾಹೇಬರ ಪಂಚೆಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟುಹೋದರೂ, ಅದರ ಪರಿವೆಯಿಲ್ಲದೆ ಟೆಂಗ್ ಟೆಂಗ್ ಟೆಂಗ್ ಎಂದು ಕುಣಿದಾಡುತ್ತ ಪರಂ ಯಜ್ಞವನ್ನು ಪೂರ್ಣಗೊಳಿಸಿದರು ಎಂದು ತಿಳಿದು ಬಂದಿದೆ.

****

ಮಣ್ಣಿನ ಮಕ್ಕಳು, ಮೊಮ್ಮಕ್ಕಳು, ಮತ್ತು ಮರಿಮಕ್ಕಳ ಪಕ್ಷವಾದ ಕೇಡಿಎಸ್ ಪಕ್ಷದ ಪಿಲ್ಲರ್‍ಗಳಾದ ದೊಡ್ಡಗೌಡರ ಮಕ್ಕಳಿಗೆ ಇತ್ತೀಚೆಗೆ ಮಣ್ಣಿನ ಮೇಲೆ ಜಿಗುಪ್ಸೆ ಹುಟ್ಟಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ. ಮಸಾಲಾ ಮಿಕ್ಸ್ ಸರ್ಕಾರದ ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ತಮ್ಮ ಟ್ರೇಡ್‍ಮಾರ್ಕ್ ‘ಮಣ್ಣನ್ನು’ ಪ್ರತಿನಿಧಿಸುವ ಕೃಷಿ ಇಲಾಖೆ, ಪಶು ಸಂಗೋಪನ ಇಲಾಖೆ, ನೀರಾವರಿ ಇಲಾಖೆ, ತೋಟಗಾರಿಕಾ ಇಲಾಖೆ – ಇವೆಲ್ಲದಕ್ಕೂ ಎಳ್ಳುನೀರು ಬಿಟ್ಟಿರುವ ದೊಡ್ಡಗೌಡರ ಮೊದ್ದುಮಣಿ ಮೇವಣ್ಣ ತನಗೆ ಇಂಧನ ಮತ್ತು ಪಿಡಬ್ಲ್ಯುಡಿ ಇಲಾಖೆಯಂಥಹ ಹುಲ್ಲುಗಾವಲುಗಳೇ ಬೇಕು, ಕೊಟ್ರೆ ಇವನ್ನ ಕೊಡಿ, ಇಲ್ಲಾಂದ್ರೆ ಮಂತ್ರಿಸಿದ 8 ನಿಂಬೆಹಣ್ಣನ್ನು ಸಿಪ್ಪೆ ಸಮೇತ ನುಂಗಿ, ನಾಲಿಗೆ ಈಚೆ ಹಾಕ್ಕೊಂಡು ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ದೊಡ್ಡಗೌಡರನ್ನು ಬೆದರಿಸಿದ್ದಾರೆ ಎಂಬ ಖಚಿತಸುದ್ದಿ ಆಘಾತವಾಣಿಗೆ ಸದ್ಯ ಲಭ್ಯವಾಗಿಲ್ಲ.

****

ಹೆಂಡ ಕುಡಿದ ಮಂಗಗಳ ಕೈಗೆ ತಲೆಕೊಟ್ಟು ಕರಾವಳಿಯಾದ್ಯಂತ ಹಾಫ್‍ಮೆಂಟ್ಲುಗಳಾದ ಶ್ರಮಿಕವರ್ಗದ ಹುಡುಗರು, ದನಸಾಗಾಟ ಗೋಭಕ್ತಿ ಹೆಸರಿನಲ್ಲಿ ಕಂಡ ಕಂಡವರನ್ನು ಹಿಡಿದು ಬಡಿಯುವುದು, ಇವರ ಜೊತೆ ಪೈಪೋಟಿಗಿಳಿದ ದೊಗಳೆಚೆಡ್ಡಿ ಪೊಲೀಸರು ಈ ಹಾಫ್‍ಮೆಂಟ್ಲು ಹುಡುಗರ ಜೊತೆ ಸೇರಿ ಅಮಾಯಕರ ಮೇಲೆ ಹಲ್ಲೆ ನಡೆಸುವುದು, ಲಾಕಪ್ಪಿಗೆ ತಂದು ರುಬ್ಬುವ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಹೇಶವ ಕೃಪದ ಮೆಚ್ಚುಗೆಗೆ ಪಾತ್ರರಾಗಿದ್ದಾರೆಂದು ವರದಿಯಾಗಿದೆ. ತಮ್ಮ ಸಾಧನೆಯ ಬಗ್ಗೆ ಹೇಶವ ಕೃಪಾದ ಮೆಚ್ಚುಗೆ ಕೇಳಿ ಉತ್ತೇಜಿತರಾಗಿರುವ ಕರಾವಳಿ ಪೊಲೀಸರು ಭಜಲಂಗಿ, ಶ್ರೀರ್ಯಾಮ್ ಸೇನೆ ಹುಡುಗರನ್ನೂ ನಾಚಿಸುವಂತೆ ಬಡ ಮುಸ್ಲಿಮರನ್ನು ಹೊಡೆದು ಬಡಿದು ಕೊಲ್ಲಲು ಶುರು ಹಚ್ಚಿಕೊಂಡಿದ್ದಾರೆ. ಪೊಲೀಸ್ ಜೀಪುಗಳನ್ನೇ ಶವ ಸಾಗಿಸುವ ವಾಹನಗಳನ್ನಾಗಿ ಮಾಡಿ ಆ-ರೀಸೆಸ್ ಸಂಘದಿಂದ ‘ವೀರಕೇಸರಿ’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಈ ನಡುವೆ ಕಾನೂನು ಪುಸ್ತಕದ ಕನಿಷ್ಟ ಅರಿವಿರುವ ಪೊಲೀಸ್ ವರಿಷ್ಟಾಧಿಕಾರಿ ನಿಂಬರ್ಗಿ, ಹುಸೇನಬ್ಬ ಎಂಬ ಅಮಾಯಕ ವೃದ್ಧನನ್ನು ಕೊಂದ ತಮ್ಮ ಕೈ ಕೆಳಗಿನ ಈ ‘ವೀರಕೇಸರಿ’ ಪೊಲೀಸರನ್ನು ಒದ್ದು ಅರೆಸ್ಟ್ ಮಾಡಿ ಜೈಲಿಗೆಸೆದಿದ್ದಾರೆ. ಹೀಗೆ ಡೆಡ್‍ಬಾಡಿ ಮ್ಯಾಟರ್ ಹೊರಬರುತ್ತಿದ್ದಂತೆ ಡೆಡ್‍ಬಾಡಿ ತಜ್ಞೆ ಸೋಪಕ್ಕ ಎಂಟ್ರಿ ಕೊಟ್ಟಿದ್ದಾರೆ. ನಿಂಬರ್ಗಿ ಕಚೇರಿಯಲ್ಲಿ ಹಲ್ಲುಗಿಂಜಿ ಪೋಸು ಕೊಟ್ಟು ಹೊರಬದು ಮಾಧ್ಯಮದೆದುರು ‘ತಮ್ಮ ಭಜಲಂಗಿ ಲಫಂಗರು ಭಾಳಾ ಸಾಬಸ್ಥರು, ಅವರ ಬಾಯೊಳಗೆ ಬಲಗಾಲಿಟ್ರೂ ಅವರಿಗೆ ಕಚ್ಚೋಕೆ ಬರೋದಿಲ್ಲ, ಅವ್ರನ್ನ ಕೂಡಲೇ ಬೇಷರತ್ ಬಿಡುಗಡೆ ಮಾಡಬೇಕು’ ಎಂದು ತಲೆತಲೆ ಚಚ್ಚಿಕೊಂಡು ಗೋಳಾಡುತ್ತಿದ್ದಾರೆಂಬ ಸುದ್ದಿ ಬಂದಿದೆ.

****

ಇಲ್ಲಿಯವರೆಗೂ ದೇಶದಲ್ಲಿರೋ ಪಕ್ಷಗಳ ಶಾಸಕರನ್ನು ಕೇಜಿಲೆಕ್ಕದಲ್ಲಿ ಖರೀದಿ ಮಾಡುತ್ತ ಹಾಯಾಗಿ ಓಡಾಡಿಕೊಂಡಿದ್ದ ಗುಜರಾತ್ ಕೇಡಿ ಹಮೀದ್‍ಶಾ ಪ್ಲಾನುಗಳೆಲ್ಲ ವಾಪಸ್ ತಿರುಗಿ ಬಂದು ತನ್ನ ಬೋಳುತಲೆಯ ಮೇಲೇ ದಬ್ಬಾಕಿಕೊಂಡ ಮೇಲೆ, ಅವರಿಗೆ ರಾಜಕೀಯ ಭಯ ಶುರು ವಾಗಿದೆಯಂತೆ. ಕರ್ನಾಟಕದಲ್ಲಿ ಎಡಬಿಡಂಗಿ ಯಾಗಿರುವ ಹಮೀದ್‍ಶಾ ಸದ್ಯಕ್ಕೆ ತನ್ನ ಶತ್ರುಗಳ ಕಾಲ್ಬೆರಳಲ್ಲಿ ನೆಟಿಕೆ ತೆಗೆದು ಮಸಾಜು ಮಾಡಿ ತಮ್ಮ ಕಡೆಗೆ ಸೆಳೆಯುವ ಪ್ರಯತ್ನದಲ್ಲಿದ್ದಾರೆಂದು ತಿಳಿದುಬಂದಿದೆ. 4 ವರ್ಷ ಸತತವಾಗಿ ದೇಶದ ಜನರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಾ, ಪ್ರಾಬ್ಲಂಗಳು ಬಂದ್ರೆ ಸಾಕು, ವಿದೇಶಕ್ಕೆ ಓಡಿ ಹೋಗುವುದನ್ನೇ ಒಂದು ಚಾಳಿ ಮಾಡಿಕೊಂಡಿದ್ದ ನಾಲಾಯಕ್ ಪಕೋಡೇಂದ್ರನ ಆಟಾಟೋಪಗಳಿಗೆ ಪಕ್ಷದ ಮಾನ ಮರ್ಯಾದೆ ಹಡಾಲೆದ್ದು ಹೋದ ಮೇಲೆ ಈ ಬೋಳುತಲೆ ಕ್ರಿಮಿನಲ್ ಮತ್ತು ಪಕೋಡೇಂದ್ರನ ಕಣ್ಕಟ್ ಕಸುಬಿನ ಅಂಗಡಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ದಬ್ಬಾಕಿಕೊಳ್ಳುವುದು ನಿಶ್ಚಯ ಎಂಬ ವರದಿಗಳು ಎಲ್ಲೆಡೆಯಿಂದ ಬರುತ್ತಿವೆ.

****

ತಮ್ಮ ಪಾಡಿಗೆ ತಾವು ‘ಮಂದಿರ್ ವಹೀ ಬನಾಯೇಂಗೆ, ಸಂಡಾಸ್ ಯಹೀ ಬನಾಯೇಂಗೆ’ ಎಂದು ಕೀರಲುಧ್ವನಿಯಲ್ಲಿ ಕಿರುಚಾಡುತ್ತ ತಿರುಗುತ್ತಿದ್ದ ಸನ್ಮಾನ್ಯ ‘ತೇಜಾವರ ಸ್ವಾಮಿ’ಗಳ ತಲೆಯೊಳಗೆ ಇದ್ದಕ್ಕಿದ್ದಂತೆ 100 ಕ್ಯಾಂಡಲ್ ಬಲ್ಪೊಂದು ಠಣಾರನೆ ಫಳಫಳಿಸಿದೆ ಎಂದು ಗೊತ್ತಾಗಿದೆ. ಈ ಪಕೋಡೇಂದ್ರ ಒಬ್ಬ ನಾಲಾಯಕ್, ಸುಳ್ಳುಪುರುಕ.. ಇವನಿಂದ ಮೂರುಪೈಸೆಯ ಉಪಯೋಗ ಆಗಿಲ್ಲ, ಕಪ್ಪುಹಣವನ್ನ ಗಂಟುಕಟ್ಟಿಕೊಂಡು ತಲೆಮೇಲೆ ಹೊತ್ಕೊಂಡ್ ತರ್ತೀನಿ ಅಂದಿದ್ದ ಈತ, ಸ್ವಿಸ್ ಬ್ಯಾಂಕಿಂದ ಒಂದು ಸೊಳ್ಳೆಯನ್ನೂ ಹಿಡಿದು ತಂದಿಲ್ಲ. ಗಂಗಾನದಿ ಸ್ವಚ್ಛ ಮಾಡ್ತೀನಿ ಅಂದೋನು ದೇಶದೇಶಗಳ ಪ್ಲೇನು ಹತ್ತಿ ಅಪಾಪೋಲಿ ಥರ ಓಡಾಡ್ಕೊಂಡವ್ನೆ ಎಂದು ತಮ್ಮ ಅಸಮಾಧಾನ ಹೊರಗೆಡವಿದ್ದಾರೆ. ತೇಜಾವರ ಶ್ರೀಗಳ ಈ ಅಬ್ಬರ-ಬೊಬ್ಬರವನ್ನು ಕೇಳುತ್ತಿದ್ದಂತೆ ತೊಡೆಸಂದಿಗೆ ಓತಿಕ್ಯಾತ ಹೊಕ್ಕಂತಾದ ಈಶು ಅಂಕಲ್.. ‘ಪಾಪ ಶ್ರೀಗಳಿಗೆ ವಯಸ್ಸಾಗಿ, ಅರುಳು-ಮರುಳು ಆಡಿದಂಗೆ ಆಡ್ತಾವ್ರೆ.. ಅವ್ರನ್ನ ನಾನೇ ಕೈ ಹಿಡಿದು ದರದರ ಎಳ್ಕೊಂಡು ಹೋಗಿ ಹೆಣ ಮುಳುಗಿಸೋ ಗಂಗಾನದಿಯೊಳಗೆ 3 ಸಲ ಮುಳುಗಿಸಿ ವಾಪಸ್ ಕರ್ಕೊಂಡ್ ಬರ್ತೀನಿ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರ್ರಿಯಿಸಿರೋ ತೇಜಾವರ ಶ್ರೀಗಳು.. ಈ ಈಶು ನನ್ ಮೇಲೆ ಯಾವ್ದೋ ಹಳೇ ಸೇಡನ್ನ ತೀರಿಸಿಕೊಳ್ಳೋಕೆ ಪ್ಲಾನ್ ಮಾಡಿದ್ದಾನೆ.. ನಾನು ಯಾವ ಕಾರಣಕ್ಕೂ ಅವನ ಜೊತೆ ಹೋಗೋದಿಲ್ಲ ಎಂದು ಹೇಳಿದ ಸುದ್ದಿ ಇನ್ನೂ ವರದಿಯಾಗಿಲ್ಲ.

****

ಮಾತಿಗೆ ಮೂರು ಸಲ ಸೈನಿಕರನ್ನು ಎಳೆತಂದು ದೇಶಭಕ್ತಿ ಅಂದ್ರೆ ಸೈನಿಕರನ್ನು ತೋರಿಸಿ ಪ್ರಶ್ನೆಗಳಿಂದ ತಲೆ ತಪ್ಪಿಸಿಕೊಂಡು ಓಡಿಹೋಗುತ್ತಿದ್ದ ಕಮಲ ಪಕ್ಷದದವರು ಈಗ ಭಯಂಕರ ಕೆಸರಿನ ಹೊಂಡಕ್ಕೆ ತಲೆಯಿಟ್ಟು ಸಿಗೆÉಬಿದ್ದಿದ್ದಾರೆ. ಸೈನಿಕರ ಹೆಣವಿಡುವ ಪೆಟ್ಟಿಗೆಯಲ್ಲೂ ಹಣ ತಿಂದÀ ಈ ಎಂಜಲು ಹೇತ್ಲಾಂಡಿಗಳು ಸೈನಿಕರ ಯೂನಿಫಾರ್ಮಿಗೂ ಹಣ ಕೊಡದೆ ಕೈ ಎತ್ತಿರುವುದು ಬಯಲಾಗಿದೆ. ತನ್ನ ಕಿಸಲಗೇಡಿ ಮುಸುಡಿಯನ್ನು ಪತ್ರಿಕೆಗಳಲ್ಲಿ ಪ್ರಿಂಟು ಹಾಕಿಸಿಕೊಳ್ಳಲು ನಾಲ್ಕೂವರೆ ಸಾವಿರ ಕೋಟಿ ಜನರ ದುಡ್ಡನ್ನು ಬಳಸಿದ ಪಕೋಡೇಂದ್ರನಿಗೆ ಸೈನಿಕರ ಯೂನಿಫಾರ್ಮಿಗೆ ಕೊಡುವಷ್ಟೂ ಹಣವಿಲ್ಲವೇ ಎಂದು ಜನರು ಜರ್ದಾಬೀಡ ಜಗಿದು ಉಗಿಯುತ್ತಿದ್ದಾರೆ. ಇಷ್ಟಾದರೂ ನಾಚಿಕೆಯಿಲ್ಲದ ಪಕೋಡೇಂದ್ರನು ಬೀಡಾ ಬಿದ್ದ ಮುಖವನ್ನು ಒರೆಸಿಕೊಂಡು ಮೀಸೆ ಮೇಲೆ ಮಾತ್ರ ಬಿದ್ದಿಲ್ಲ ಎಂದು ತನ್ನ 56 ಇಂಚಿನ ಪೃಷ್ಠವನ್ನು ತಟ್ಟಿಕೊಳ್ಳುತ್ತಿದ್ದಾನೆಂದು ರಾಜಧಾನಿಯಿಂದ ವರದಿಯಾಗಿದೆ.

ಇಲ್ಲಿಗೆ ಅಟ್ಯಾಕ್ ಹನ್ಮಂತ ಪ್ರಸ್ತುತಪಡಿಸುವ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮುಂದಿನವಾರ ಮತ್ತೆ ಸಿಗೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...