ಕಳೆದೊಂದು ವಾರದಿಂದ ಅತ್ಯಂತ ತಾಳ್ಮೆಯ ಪ್ರದರ್ಶನ ಮಾಡಿದ್ದ ಬಿಜೆಪಿಯ ನಾಯಕ ಬಿ.ಎಸ್ ಯಡಿಯೂರಪ್ಪ ಈಗ ಗೆಲುವಿನ ನಗೆ ಬೀರಿದ್ದಾರೆ. ಕುಮಾರಸ್ವಾಮಿಯವರ ವಿಶ್ವಾಸಮತಕ್ಕೆ ಸೋಲಾಗುತ್ತಿದ್ದಂತೆ ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿದ ಬಿ.ಎಸ್ ವೈ ನಾಳೆಯಿಂದ ಅಭಿವೃದ್ದಿ ಪರ್ವ, ಬರಕ್ಕೆ ಮೊದಲ ಆದ್ಯತೆಯೆಂದು ನುಡಿದಿದ್ದಾರೆ. ನಾಳೆ ದೆಹಲಿಗೆ ತೆರಳಲಿರುವ ಬಿ.ಎಸ್.ವೈ ಪ್ರಧಾನಿ ಮೋದಿಯವರನ್ನು ಭೇಟಿಯಾಗಲಿದ್ದಾರೆ.
ಸದನದಲ್ಲಿ ಕಾಂಗ್ರೆಸ್ ಜೆಡಿಎಸ್ ಎಷ್ಟೆ ಕೆಣಕಿದರೂ, ಪ್ರಚೋದಿಸಿದರೂ ಕೇವಲ ವಿಶ್ವಾಸ ಮತ ಪ್ರಕ್ರಿಯೆ ಶುರು ಮಾಡಿ ಎಂದು ಪದೇ ಪದೇ ಮನವಿ ಮಾಡುತ್ತಿದ್ದ ಬಿ.ಎಸ್ ಯಡಿಯೂರಪ್ಪ ಇಂದು “14 ತಿಂಗಳ ಕುಮಾರಸ್ವಾಮಿಯವರ ಆಡಳಿತ ಕೊನೆಗೊಂಡಿದೆ, ಇದು ಪ್ರಜಾಪ್ರಭುತ್ವ ಸಂದ ಜಯ” ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದ್ದು ನಾಳೆ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು. ಆದರೆ ಶಾಸಕಾಂಗ ಪಕ್ಷದ ಸಭೆಯಲ್ಲಿರುವ ಯಡಿಯೂರಪ್ಪನವರು ನಾಳೆ ದೆಹಲಿಗೆ ತೆರಳಲಿದ್ದು ಪ್ರಧಾನಿ ಮೋದಿಯವರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ನೂತನ ಮುಖ್ಯಮಂತ್ರಿಯಾಗುವ ಹುಮ್ಮಸ್ಸಿನಲ್ಲಿರುವ ಯಡಿಯೂರಪ್ಪನವರು ಲಘುಬಗೆಯಿಂದ ಎಲ್ಲಾ ಕೆಲಸಗಳನ್ನು ಮುಗಿಸುತ್ತಿದ್ದಾರೆ.