Homeಮುಖಪುಟಮುಂಬರುವ ಚುನಾವಣೆ ಹಿನ್ನಲೆ: ಅಧಿಕಾರಿಂದ ಇಳಿಸಲ್ಪಟ್ಟ ಮುಖ್ಯಮಂತ್ರಿ & ಕೇಂದ್ರ ಮಂತ್ರಿಗಳಿಗೆ ಹೊಸ ಸ್ಥಾನ...

ಮುಂಬರುವ ಚುನಾವಣೆ ಹಿನ್ನಲೆ: ಅಧಿಕಾರಿಂದ ಇಳಿಸಲ್ಪಟ್ಟ ಮುಖ್ಯಮಂತ್ರಿ & ಕೇಂದ್ರ ಮಂತ್ರಿಗಳಿಗೆ ಹೊಸ ಸ್ಥಾನ ನೀಡಿದ ಬಿಜೆಪಿ

- Advertisement -
- Advertisement -

ವಿಧಾನಸಭೆ ಚುನಾವಣೆಗಳು ಮತ್ತು 2024 ರ ಲೋಕಸಭಾ ಚುನಾವಣೆಗಳನ್ನು ಕೇಂದ್ರೀಕರಿಸಿ, ಈ ಹಿಂದೆ ಅಧಿಕಾರಿಂದ ಇಳಿಸಲ್ಪಟ್ಟ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಮಂತ್ರಿಗಳಿಗೆ ಪಕ್ಷದ ಹೊಸ ಸ್ಥಾನಗಳನ್ನು ಬಿಜೆಪಿ ಶುಕ್ರವಾರ ಘೋಷಿಸಿದೆ.

ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ, ತ್ರಿಪುರಾ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್, ಮಾಜಿ ಒಕ್ಕೂಟ ಸಚಿವರಾದ ಪ್ರಕಾಶ್ ಜಾವಡೇಕರ್ ಮತ್ತು ಮಹೇಶ್ ಶರ್ಮಾ ಅವರಿಗೆ ರಾಜ್ಯಗಳ ಉಸ್ತುವಾರಿಯನ್ನು ನೀಡಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಿಜಯ್ ರೂಪಾನಿ ಅವರಿಗೆ ಪಂಜಾಬ್ ಮತ್ತು ಬಿಪ್ಲಬ್ ದೇಬ್‌ಗೆ ಹರಿಯಾಣದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ಪ್ರಕಾಶ್ ಜಾವಡೇಕರ್ ಅವರಿಗೆ ಕೇರಳದ ಉಸ್ತುವಾರಿಯನ್ನು ನೀಡಲಾಗಿದೆ. ಈ ಹಿಂದೆ ಹರಿಯಾಣದ ಉಸ್ತುವಾರಿ ವಹಿಸಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರಿಗೆ ಬಿಹಾರ ಜವಾಬ್ದಾರಿ ನೀಡಲಿದೆ.

ಇದನ್ನೂ ಓದಿ: ನಾವು ಪುಟಿದೆದ್ದು ಬರುತ್ತೇವೆ, ಭಾರತ್ ಜೋಡೋ ಯಾತ್ರೆ ಬಿಜೆಪಿಯನ್ನು ಅಲ್ಲಾಡಿಸಿದೆ: ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಎಂದು ಪರಿಗಣಿಸಲಾದ ಹಿರಿಯ ನಾಯಕ ಓಂ ಮಾಥುರ್ ಅವರಿಗೆ ಮುಂದಿನ ವರ್ಷ ಚುನಾವಣೆ ನಡೆಯಲಿರುವ ಛತ್ತೀಸ್‌ಗಢದ ಉಸ್ತುವಾರಿಯನ್ನು ನೀಡಲಾಗಿದೆ. ಮಾಥುರ್‌ ಅವರಿಗೆ ಇತ್ತೀಚೆಗಷ್ಟೆ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಸೇರಿಸಿಕೊಳ್ಳಲಾಗಿತ್ತು.

ರಾಜ್ಯದಲ್ಲಿ ಪ್ರಮುಖ ಹುದ್ದೆಯನ್ನು ಕಳೆದುಕೊಂಡ ಬಿಹಾರದ ಮಾಜಿ ಸಚಿವ ಮಂಗಲ್ ಪಾಂಡೆ ಅವರಿಗೆ ಪಶ್ಚಿಮ ಬಂಗಾಳದ ಉಸ್ತುವಾರಿ ನೀಡಲಾಗಿದೆ. ಅಲ್ಲಿ ಅವರು ಒಡಿಶಾ ಮತ್ತು ತೆಲಂಗಾಣ ಜೊತೆಗೆ ಬಂಗಾಳದ ಉಸ್ತುವಾರಿಯನ್ನು ಪಡೆದಿರುವ ಸುನಿಲ್ ಬನ್ಸಾಲ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ.

ರಾಜಸ್ಥಾನದಲ್ಲಿ ಅರುಣ್ ಸಿಂಗ್ ಮತ್ತು ಮಧ್ಯಪ್ರದೇಶದಲ್ಲಿ ಮುರಳೀಧರ್ ರಾವ್ ಅವರಿಗೆ ಉಸ್ತುವಾರಿಗಳನ್ನು ಉಳಿಸಿಕೊಳ್ಳಲಾಗಿದೆ. ಲಕ್ಷ್ಮೀಕಾಂತ್ ವಾಜಪೇಯಿ ಅವರು ಜಾರ್ಖಂಡ್ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. ತ್ರಿಪುರವನ್ನು ಮಹೇಶ್ ಶರ್ಮಾ ನೋಡಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮುಳುಗುತ್ತಿರುವಾಗ ‘ಬೆಣ್ಣೆ ದೋಸೆ ಮಾರಿದ’ ಬಿಜೆಪಿ ಸಂಸದ ತೇಜಸ್ವಿ ಸೂರ್ಯ!

ಬಿಜೆಪಿಯ ಪ್ರಮುಖ ವಕ್ತಾರ ಸಂಬಿತ್ ಪಾತ್ರ ಅವರು ಈಶಾನ್ಯ ರಾಜ್ಯಗಳ ಸಂಯೋಜಕರಾಗಲಿದ್ದು, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿತುರಾಜ್ ಸಿನ್ಹಾ ಜಂಟಿ ಸಂಯೋಜಕರಾಗಿ ನೇಮಕವಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...