Homeಕರ್ನಾಟಕಬಾಗಲಕೋಟೆ: ಲಿಂಗಾಯತ ಯುವತಿಯನ್ನು ಪ್ರೀತಿಸಿದ ಕುರುಬ ಯುವಕನಿಗೆ ಬೂಟು ನೆಕ್ಕಿಸಿದ ಪೊಲೀಸರು, ಜಾತಿವಾದಿಗಳು!

ಬಾಗಲಕೋಟೆ: ಲಿಂಗಾಯತ ಯುವತಿಯನ್ನು ಪ್ರೀತಿಸಿದ ಕುರುಬ ಯುವಕನಿಗೆ ಬೂಟು ನೆಕ್ಕಿಸಿದ ಪೊಲೀಸರು, ಜಾತಿವಾದಿಗಳು!

ಯುವಕನ ಕುಟುಂಬಕ್ಕೆ ಭೀಕರವಾಗಿ ಥಳಿಸಲಾಗಿದೆ. ಆ ಹುಡುಗಿಯನ್ನು ಬಿಡದಿದ್ದರೆ ನಿಮ್ಮನ್ನು ಕೊಲೆ ಮಾಡುತ್ತಾರೆಂದು ಪೊಲೀಸರೇ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -
- Advertisement -

ಲಿಂಗಾಯತ ಯುವತಿಯನ್ನು ಪ್ರೀತಿಸಿ ಮದುವೆಯಾದ ಕುರುಬ ಸಮುದಾಯದ ಯುವಕನಿಗೆ ಹಾಗೂ ಆತನ ಕುಟುಂಬಕ್ಕೆ ಪೊಲೀಸರು, ಜಾತಿವಾದಿಗಳು ಚಿತ್ರಹಿಂಸೆ ನೀಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರು ಹಾಗೂ ಜಾತಿವಾದಿಗಳು ಸೇರಿಕೊಂಡು ಪೊಲೀಸ್ ಠಾಣೆಯಲ್ಲೇ ಸಂತ್ರಸ್ತ ಯುವಕನ ಕುಟುಂಬಕ್ಕೆ ಭೀಕರವಾಗಿ ಥಳಿಸಲಾಗಿದೆ, ಯುವಕನಿಗೆ ಬೂಟು ನೆಕ್ಕಿಸಲಾಗಿದೆ ಎಂಬ ಆರೋಪ ಬಂದಿದೆ.

ಬಾಗಲಕೋಟೆ ಜಿಲ್ಲೆ ಗದ್ದನಕೇರಿ ಗ್ರಾಮದ ಕುರುಬ ಸಮುದಾಯದ ಯುವಕ ಭೀರಪ್ಪ ಹಾಗೂ ಅದೇ ಗ್ರಾಮದ ಲಿಂಗಾಯತ ಸಮುದಾಯದ ಯುವತಿಯು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರ ಪ್ರೀತಿಗೆ ಮೊದಲಿನಿಂದಲೂ ಯುವತಿಯ ಕುಟುಂಬದ ವಿರೋಧವಿತ್ತು ಎನ್ನಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಮೈಸೂರಿಗೆ ಬಂದು ಮದುವೆಯಾಗಿದ್ದ ಜೋಡಿಯನ್ನು ನಯವಾಗಿ ಬಾಗಲಕೋಟೆಗೆ ಕರೆಸಿಕೊಂಡ ಪೊಲೀಸರು, ಭೀಕರವಾಗಿ ಥಳಿಸಿದ್ದಾರೆ. ಠಾಣೆಯಲ್ಲಿ ಕೂಡಿಹಾಕಿ, ಜಾತಿವಾದಿಗಳೊಂದಿಗೆ ಸೇರಿ ಸಾಯುವಂತೆ ಹೊಡೆದಿದ್ದಾರೆ. ಬಾಯಲ್ಲಿ ಬೂಟು ಇಟ್ಟು ಹಿಂಸೆ ನೀಡಿದ್ದಾರೆ. ಇನ್ನೊಮ್ಮೆ ಹುಡುಗಿಯನ್ನು ನೋಡಿದರೆ ಸಾಯಿಸುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ” ಎಂದು ಯುವಕ ತಿಳಿಸಿದ್ದಾರೆ.

ಇದನ್ನೂ ಓದಿರಿ: ಯುಪಿ: ಲಖಿಂಪುರಖೇರಿಯ ಅಪ್ರಾಪ್ತ ದಲಿತ ಸಹೋದರಿಯರ ಅತ್ಯಾಚಾರ, ಹತ್ಯೆ – 6 ಮಂದಿ ಬಂಧನ

ಯುವಕನಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ವಾಪಸ್‌ ಕಳುಹಿಸಿದ್ದಾರೆ. ಇಷ್ಟಾದ ಮೇಲೆ ಕೊಲೆ ಮಾಡಿಯೇ ತೀರುತ್ತೇವೆ ಎಂದು ಹುಡುಗಿಯ ಕಡೆಯವರು ಮುಂದಾಗಿದ್ದಾರೆಂದು ತಿಳಿದುಬಂದಿದೆ. ಅಜ್ಞಾತ ಸ್ಥಳಕ್ಕೆ ಸೇರಿಕೊಂಡಿರುವ ಯುವಕ ಭೀರಪ್ಪ ಮಾಧ್ಯಮದೊಂದಿಗೆ ತಮ್ಮ ನೋವನ್ನು ಹಂಚಿಕೊಂಡಿರುವುದು ಹೀಗೆ:

“ನನ್ನನ್ನು ಪ್ರೀತಿಸಿದ ಕಾರಣಕ್ಕೆ ಹುಡುಗಿಯನ್ನು ಹೊಡೆಯುತ್ತಿದ್ದರು. ಬೇರೊಬ್ಬರೊಂದಿಗೆ ಮದುವೆ ಮಾಡಲು ಯೋಚಿಸಿದ್ದರು. ಆಕೆ ಸೂಸೈಡ್ ಮಾಡಿಕೊಳ್ಳಲು ಮುಂದಾಗಿದ್ದಳು. ನನಗೆ ಬೇರೆ ದಾರಿ ಇಲ್ಲದೆ ಮೈಸೂರಿಗೆ ಕರೆದುಕೊಂಡೆ ಹೋದೆ. ಎಂಜಿನಿಯರ್‌ ಆಗಿರುವ ನನ್ನ ಮಾವನ ಸಹಾಯದಿಂದ ಮದುವೆಯಾದೆ.”

“ನನ್ನದು ಕುರುಬ ಜಾತಿ. ಆಕೆಯದ್ದು ಲಿಂಗಾಯತ ಜಾತಿ. ರಿಜಿಸ್ಟ್ರಾರ್‌ ಮ್ಯಾರೇಜ್‌ ಆದೆವು. ನಾವು ವಾಪಸ್ ಹೋಗಲು ತಡ ಮಾಡಿದೆವು. ಆದರೆ ನನ್ನ ಸಂಬಂಧಿಕರನ್ನು ಬಾಗಲಕೋಟೆ ಗ್ರಾಮಾಂತರ ಠಾಣೆಗೆ ಕರೆತಂದು ಕೂಡಿಹಾಕಿದ್ದರು. ಜೀವ ಬೆದರಿಕೆ ನೀಡುತ್ತಿದ್ದರು. ವಕೀಲರ ಸಹಾಯದಿಂದ ಗ್ರಾಮಾಂತರ ಠಾಣೆಗೆ ಬಂದಾಗ ನನ್ನನ್ನು ಹೊಡೆದರು. ಬೂಟು ಕಾಲಲ್ಲಿ ಒದ್ದರು..”

“ಸ್ಟೇಷನ್‌ಗೆ ಸಂಬಂಧವಿಲ್ಲದವರೆಲ್ಲ ಥಳಿಸಿದರು. ನನ್ನ ಮಾವಂದಿರರಿಗೆ ಚಿತ್ರ ಹಿಂಸೆ ಕೊಟ್ಟರು. ಕಾಲು ತೊಡೆಯಲ್ಲಿರುವ ಕೂದಲನ್ನು ಕೈಯಲ್ಲೇ ಕಿತ್ತರು. ನನ್ನ ಮಾವ ಮೈಸೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದಾರೆ. ಆ ಹುಡುಗಿಯನ್ನು ಮನೆಗೆ ಕಳುಹಿಸದಿದ್ದರೆ ನಿಮ್ಮ ಕೆಲಸಕ್ಕೆ ಕುತ್ತು ಬರುತ್ತದೆ ಎಂದು ಬೆದರಿಸಿದರು…”

“ಈ ಹಿಂದೆ ಆಕೆ ಎರಡು ಸಲ ಸೂಸೈಡ್ ಮಾಡಿಕೊಳ್ಳಲು ಹೋಗಿದ್ದಳು. ನನ್ನ ಬಿಟ್ಟು ಆಕೆ ಇರಲ್ಲ. ನಾನು ಆಕೆಯನ್ನು ಬಿಟ್ಟು ಇರಲ್ಲ. ಆಕೆಗೇನಾದರೂ ತೊಂದರೆಯಾದರೆ ನನ್ನನ್ನು ಬಂಧಿಸುತ್ತಾರೆ. ನನ್ನ ಮಾವನನ್ನು ಅರೆಸ್ಟ್ ವಾರೆಂಟ್ ಇಲ್ಲದೆಯೂ ಬಂಧಿಸಿ ಭೀಕರವಾಗಿ ಗಾಯಗೊಳಿಸಿದರು.”

“ಸ್ಟೇಷನ್‌ನಲ್ಲಿ ನಾಲ್ಕೈದು ದಿನ ಕೂಡಿಹಾಕಿದ್ದರು. ಲಿಪ್‌ಸ್ಟಿಕ್‌ ಕೊಡಿಸಲು ಸಹ ಯೋಗ್ಯತೆ ಇಲ್ಲದವನು ಶ್ರೀಮಂತ ಹುಡುಗಿಯನ್ನು ಮದುವೆಯಾಗಿದ್ದಾನೆ. ಆಕೆ ಎಂಬಿಬಿಎಸ್‌ ಮಾಡಲು ಒಂದು ಕೋಟಿ ಇಪ್ಪತ್ತು ಲಕ್ಷ ದುಡ್ಡು ಕಟ್ಟಿದ್ದೇವೆ. ಅದನ್ನು ಇಟ್ಟು ಹೊರಗಡೆ ಹೋಗಿ ಎಂದರು. ಹೀಗೆ ಹೇಳುವಾಗ ಇನ್ನು ನೀಟ್ ಫಲಿತಾಂಶವೇ ಬಂದಿರಲಿಲ್ಲ. ಹೀಗಿರುವಾಗ ಇವರು ಹೇಗೆ ಕೊಟ್ಟಿದ್ದರು?”

“ಸ್ಟೇಷನ್‌ಅನ್ನೇ ಅವರು ಮನೆ ಮಾಡಿಕೊಂಡಿದ್ದರು. ನಿನ್ನನ್ನು ಇವರೆಲ್ಲ ಸೇರಿ ಮರ್ಡರ್‌ ಮಾಡುತ್ತಾರೆ ಎಂದು ಪೊಲೀಸರೇ ಹೆದರಿಸಿದರು. ಸ್ಟೇಷನ್‌ ಹೊರಗಡೆ ಕಾಲಿಟ್ಟರೆ ನಿನ್ನ ಕೊಲ್ಲುತ್ತೇವೆ ಎಂದು ಐವತ್ತರಿಂ ಅರವತ್ತು ಜನ ನಿಂತಿದ್ದರು. ಹೊರಗಡೆ ಬಿಟ್ಟರೆ ಸಾಕು, ಎಲ್ಲರೂ ಸೇರಿ ನಿನ್ನನ್ನು ಕಡಿದು ಹಾಕುತ್ತಾರೆ. ಕೊಲೆ ಮಾಡುತ್ತಾರೆ ಎಂದು ಪೊಲೀಸರೇ ಗದರಿಸಿದರು…”

ಇದನ್ನೂ ಓದಿರಿ: ದಲಿತ ಮಕ್ಕಳ ಮೇಲೆ ಮುಂದುವರಿದ ದೌರ್ಜನ್ಯ: ಪ್ರಕರಣ 1, 2, 3, 4

“ಮದುವೆಯಾಗಿದ್ದಕ್ಕೆ ದಾಖಲೆ ಇದೆ. ಆಕೆ ಮನೆ ಬಿಟ್ಟು ಹೊರಗೆ ಬಂದಾಗ ಮಿಸ್ಸಿಂಗ್‌ ಕೇಸ್‌ ದಾಖಲಾಗಿತ್ತು. ಆದರೆ ಈಗ ನನ್ನ ಮೇಲೆ ಕಿಡ್ನಾಪ್‌ ಕೇಸ್‌ ಹಾಕಿದ್ದಾರೆ. ನನ್ನ ಮನೆಯ ಹನ್ನೊಂದು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಾವು ದೂರು ಕೊಟ್ಟರೂ ಪೊಲೀಸರು ತೆಗೆದುಕೊಳ್ಳುವುದಿಲ್ಲ. ಸ್ಟೇಷನ್ನೇ ಅವರದಾಗಿದೆ. ನಮಗೆ ಯಾರೂ ಇಲ್ಲ. ನಮ್ಮನ್ನು ಮರ್ಡರ್‌ ಮಾಡಿಸಲಿದ್ದಾರೆ. ಇದಕ್ಕಿಂತ ನಾವೇ ಸೂಸೈಡ್‌ ಮಾಡಿಕೊಳ್ಳುವುದು ವಾಸಿ. ದಯವಿಟ್ಟು ನೀವಾದರೂ ಹೆಲ್ಪ್‌ ಮಾಡಿ…”

-ಎನ್ನುತ್ತಾ ಕಣ್ಣೀರು ಹಾಕುತ್ತಾರೆ ಭೀರಪ್ಪ.

ಹುಡುಗಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂಬುದು ಕಪೋಲ ಕಲ್ಪಿತವೆನ್ನುವುದಕ್ಕೆ ಅವಕಾಶವಿದೆ. ತಾನು ಪ್ರೀತಿಸಿದ ಯುವಕನೊಂದಿಗೆ ಹೊರಬಂದ ಯುವತಿ, ವಿಡಿಯೊ ಕೂಡ ಬಿಡುಗಡೆ ಮಾಡಿದ್ದಾಳೆ. “ನಾನು ಸ್ವ-ಇಚ್ಛೆಯಿಂದ ಇಲ್ಲಿಗೆ ಬಂದಿದ್ದೇನೆ. ಬೇರೆಯವರನ್ನು ಮದುವೆಯಾಗು ಎಂದು ಮನೆಯಲ್ಲಿ ತುಂಬಾ ಟಾರ್ಚರ್‌ ಕೊಡುತ್ತಿದ್ದರು. ನಾನು ಇಷ್ಟಪಟ್ಟ ಹುಡುಗನನ್ನು ಮದುವೆಯಾಗಬೇಕೆಂದು ಇಲ್ಲಿಗೆ ಬಂದಿದ್ದೇನೆ. ಭೀರಪ್ಪನನ್ನು ಇಷ್ಟಪಡುತ್ತಿದ್ದೇನೆ” ಎಂದಿದ್ದಾರೆ.

ಯುವತಿಯ ಪತ್ರ

ತನ್ನ ಪ್ರೀತಿಯ ಬಗ್ಗೆ ಹಾಗೂ ತನ್ನ ಮನೆಯಿಂದ ಎದುರಿಸುತ್ತಿರುವ ಕಿರುಕುಳದ ಬಗ್ಗೆ ಯುವತಿ ಪೊಲೀಸರಿಗೆ ದೂರನ್ನು ಕಳುಹಿಸಿದ್ದರು. ಸ್ವ-ಇಚ್ಛೆಯಿಂದ ಮದುವೆಯಾಗಿರುವುದಾಗಿ ತಿಳಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕರ್ನಾಟಕ ಸರಕಾರದ ವಿರೋಧ ಪಕ್ಷ ನಾಯಕ ಗೌರವಾನ್ವಿತ ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಈ ವಿಷಯ ತಲುಪಲಿ

  2. ರಾಜ್ಯದಲ್ಲಿ ಈಗ ಜಾತೀಯತೆ ಮುಗಿಲು ಮುಟ್ಟುತ್ತಿದೆ. ಬಸವಣ್ಣನವರ ಅನುಯಾಯಿಗಳು ಬಸವ ತತ್ವವನ್ನು ಸಮಾದಿ ಮಾಡುತ್ತಿದ್ದಾರೆ. ಇನ್ನು ಪೊಲೀಸರು, “ನಾವಿರುವುದೇ ಪ್ರಬಲರ ರಕ್ಷಣೆಗೆ” ಎಂಬಂತೆ ವರ್ತಿಸುತ್ತಿದ್ದಾರೆ. ದೀನದಲಿತರನ್ನು ರಕ್ಷಣೆ ಮಾಡಬೇಕಾದ ಪೊಲೀಸರು ಅವರನ್ನೇ ಬಕ್ಷಣೆ ಮಾಡುತ್ತಿದ್ದಾರೆ. ಇದು ಕ್ರೂರ, ಅನ್ಯಾಯ.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...