Homeಮುಖಪುಟನಾವು ಮಕ್ಕಳು, ಮುಂದಿನ ಪ್ರಜೆಗಳು. ನಮಗೊಂದಿಷ್ಟು ಭೂಮಿ ಉಳಿಸಿ

ನಾವು ಮಕ್ಕಳು, ಮುಂದಿನ ಪ್ರಜೆಗಳು. ನಮಗೊಂದಿಷ್ಟು ಭೂಮಿ ಉಳಿಸಿ

- Advertisement -
- Advertisement -
ನಮ್ಮ ನಾಳೆಗಳಿಗೆ ನೀವು ಪ್ಲಾಸ್ಟಿಕ್ ಕೊಳೆಯನ್ನು ನೀಡಬೇಡಿ. ನಾಳೆಗಳು ನಮ್ಮದು. ನಮ್ಮ ನಾಳೆಗೆ ಸುಂದರ ಪರಿಸರವನ್ನು ಉಳಿಸಿಕೊಡಲು ಕೈಜೋಡಿಸಿ. ಅದಕ್ಕಾಗಿ ನಿಮ್ಮ ಕಸವನ್ನು ನೀವು ವಾಪಾಸು ಪಡೆಯಿರಿ. ಪಡೆದು ಅದನ್ನು ಪುನರ್ಬಳಕೆ ಮಾಡಿ. ಹೊಸ ಪ್ಲಾಸ್ಟಿಕ್ ಉತ್ಪಾದನೆಯನ್ನು ನಿಲ್ಲಿಸುವ ಯೋಜನೆಯನ್ನು ರೂಪಿಸಿಕೊಳ್ಳಿ, ಎಂದು ದೇಶದಲ್ಲಿ ಮಕ್ಕಳ ತಿಂಡಿಗಳನ್ನು ಉತ್ಪಾದಿಸುವ ಇಪ್ಪತ್ತಕ್ಕೂ ಹೆಚ್ಚು ಪ್ರಖ್ಯಾತ ಕಂಪೆನಿಗಳಿಗೆ ಪತ್ರಕಳಿಸಿ ಆಗ್ರಹಿಸುವ ವಿನೂತನ ಅಭಿಯಾನವನ್ನು ಹೆಗ್ಗಡಹಳ್ಳಿಯ ಮಕ್ಕಳು ಆರಂಭಿಸಲಿದ್ದಾರೆ.
ಪಠ್ಯೇತರ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಮುಂದಿರುವ ಹೆಗ್ಗಡಹಳ್ಳಿ ಶಾಲೆಯ ಮಕ್ಕಳು ಕೇವಲ ಜಾಣರಷ್ಟೇ ಅಲ್ಲ ಸಮಾಜಕ್ಕ ತುಡಿಯುವ ಸೂಕ್ಷ್ಮಜೀವಿಗಳು ಹೌದು. ಶಾಲೆಯಲ್ಲಿ ಅತ್ಯುತ್ತಮವಾಗಿ ಓದುವುದಲ್ಲದೇ ಸದಾ ಒಂದಿಲ್ಲೊಂದು ವಿಭಿನ್ನ ಚಟುವಟಿಕೆ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಪ್ರತಿ ವರ್ಷವೂ ಪ್ರತಿಭಾ ಕಾರಂಜಿ ಹೆಸರಿನಲ್ಲಿ ನಡೆಯುವ ಅಂತರ್‍ಶಾಲಾ ಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಈ ಶಾಲೆಗೆ ಕಡ್ಡಾಯವಾಗಿ ಬಹುಮಾನಗಳ ಸುರಿಮಳೆಯಾಗುತ್ತದೆ. ರಾಜ್ಯ ಮಟ್ಟದವರೆಗೂ ವಿದ್ಯಾರ್ಥಿಗಳು ಹೋಗಿ ಬಹುಮಾನ ಗೆದ್ದು ತಂದಿದ್ದಾರೆ.
ಪ್ರತಿ ತಿಂಗಳು ಮಕ್ಕಳು ‘ಅರಳೀಮರ’ ಹೆಸರಿನಲ್ಲಿ ಮಾಸಿಕ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ಈಗಾಗಲೇ 15 ಬಣ್ಣ ಬಣ್ಣದ ಕೈಬರದ ಮಕ್ಕಳ ಸಂಚಿಕೆಗಳು ಹಲವರ ಕೈಸೇರಿ ಮೆಚ್ಚಿಗೆ ಗಳಿಸಿವೆ. ಚಿತ್ರಗಳು, ಕಥೆ ಕವನಗಳ ಮೂಲಕ ಮಕ್ಕಳು ತಮ್ಮ ಅಭಿವ್ಯಕ್ತಿಯನ್ನು ಸಸಕ್ತವಾಗಿ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷವೂ ನಾಲ್ಕೈದು ಅತ್ಯುತ್ತಮ ನಾಟಕಗಳನ್ನು ಕಲಿತು ಮಕ್ಕಳು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಹಲವು ನಾಟಕೋತ್ಸವಗಳಲ್ಲಿ ಭಾಗವಹಿಸಿ ತಮ್ಮ ನಾಟಕದ ಹುಚ್ಚನ್ನು ಜನರಿಗೂ ದಾಟಿಸಿದ್ದಾರೆ.
ಈ ರೀತಿ ಈ ಶಾಲೆಯ ಮಕ್ಕಳ ಬಗ್ಗೆ ಪುಟಗಟ್ಟಲೇ ಬರೆಯುತ್ತಲೇ ಹೋಗಬಹುದು. ಮಕ್ಕಳು ಇಷ್ಟೆಲ್ಲಾ ಗಮನಾರ್ಹವಾದ ಸಾಧನೆ ಮಾಡಲು ಕಾರಣವೆನೆಂದರೆ ಅವರೊಳಗಿನ ಪ್ರತಿಭೆಯ ಅಭಿವ್ಯಕ್ತಿಗೆ ವಾಹಕವಾಗಿ ಕೆಲಸ ಮಾಡುತ್ತಿರುವ ಅವರ ಉತ್ಸಾಹಿ ಮೇಷ್ಟ್ರು ಸಂತೋಷ್ ಗುಡ್ಡಿಯಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಗುಡ್ಡಿಯಂಗಡಿ ಗ್ರಾಮದ ಇವರು ಸಾಮಾಜಿಕ ಚಳವಳಿಗಳಲ್ಲಿ ತೊಡಗಿಕೊಂಡ ಪರಿಣಾಮ ಅಗಾಧ ಅನುಭವಗಳನ್ನು ಪಡೆದವರು. ನಂತರ ರಂಗಡಿಪ್ಲೋಮೊ ಕೋರ್ಸ್ ಮುಗಿಸಿ ನಾಟಕ ಕಲಿಸುತ್ತಿದ್ದರು. ಸರ್ಕಾರ ಒಮ್ಮೆ ಹೈಸ್ಕೂಲ್‍ಗಳಿಗೆ 46 ನಾಟಕದ ಮೇಷ್ಟ್ರುಗಳನ್ನು ಆಯ್ಕೆ ಮಾಡಿಕೊಂಡಾಗ ಇವರು ಸಹ ಆಯ್ಕೆಯಾದರು.
ಅಲ್ಲಿಂದ ಅವರು ತಾನು ಕಲಿತ ವಿದ್ಯೆ ಮತ್ತು ಸಾಮಾಜಿಕ ಚಳವಳಿ ಕೊಟ್ಟಿದ್ದ ಅನುಭವಗಳನ್ನು ಮಕ್ಕಳಿಗೆ ಧಾರೆ ಎರೆಯಲು ಆರಂಭಿಸಿದರು. ಮೊದಲು ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ ಶಾಲೆಯಲ್ಲಿದ್ದಾಗ ಅಲ್ಲಿನ ಮಕ್ಕಳೊಡನೆ ಬೆರೆಸು ಕಲಿಸುತ್ತಾ, ತಾನು ಕಲಿಸುತ್ತಾ ಮಕ್ಕಳನ್ನು ಇನ್ನೊಂದು ಪ್ರಪಂಚಕ್ಕೆ ಕರೆದುಕೊಂಡು ಹೋದರು. ಆ ಸಂದರ್ಭದಲ್ಲಿ ‘ಹೆಮ್ಮರ’ ಹೆಸರಿನ ಮಕ್ಕಳ ಮಾಸಿಕ ಪತ್ರಿಕೆಯನ್ನು ಆರಂಭಿಸಿ ಮಕ್ಕಳು ಬರೆಯಲು ಪ್ರೋತ್ಸಾಹ ನೀಡಿದರು. ಮಕ್ಕಳ ಬರಹಕ್ಕೆ ತಮ್ಮ ಕೈಬರಹ ಮತ್ತು ಚೆಂದದ ಚಿತ್ರ ಸೇರಿಸಿ ಎಲ್ಲರ ಗಮನ ಸೆಳಯುವಂತೆ ಮಾಡಿದರು. ನಾಟಕಗಳನ್ನು ಕಲಿಸಿ ರಂಗಭೂಮಿಯ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದರು.
ಆಟ-ಪಾಠ ನಾಟಕದ ಜೊತೆಗೆ ತಾನಿರುವ ಸಮಾಜ – ಪರಿಸರವನ್ನು ಮಕ್ಕಳು ಅಧ್ಯಯನ ಮಾಡಬೇಕು, ಅದರೊಡನೆ ತಾದ್ಯಾತ್ಮ ಸಾಧಿಸಿ ಅದಕ್ಕೆ ಪ್ರತಿಕ್ರಿಯಿಸಬೇಕೆನ್ನುವುದು ಅವರ ಆಶಯ. ಅವರ ಕನಸನ್ನು ಮಕ್ಕಳು ಬಹುಬೇಗ ನನಸು ಮಾಡಿದರು. ತಾವು ಮಾಡುವ ಪ್ರತಿ ಕೆಲಸದಲ್ಲಿ ಹೊಸತು ಸೃಜನಶೀಲತೆಯನ್ನು ಮಕ್ಕಳು ಕಲಿತರು. ಸಮಾಜಕ್ಕೆ ಪೂರಕವಾಗಿ ಪ್ರತಿಸ್ಪಂದಿಸಿದರು. ಈ ಕುರಿತು ಹಲವಾರು ಲೇಖನಗಳು ಪತ್ರಿಕೆಗಳಲ್ಲಿ ಬಂದವು.

ಅಲ್ಲಿಂದ ಹೆಗ್ಗಡಹಳ್ಳಿ ಶಾಲೆಗೆ ವರ್ಗಾವಣೆಯಾದ ಸಂತೋಷ ಗುಡ್ಡಿಯಂಗಡಿಯವರು ಇಲ್ಲಿಯೂ ತಮ್ಮ ಕಾಯಕವನ್ನು ಮುಂದುವರೆಸಿದರು. ಇಲ್ಲಿಯ ಮಕ್ಕಳು ಸಹ ಅಷ್ಟೇ ಉತ್ಸಾಹದಿಂದ ಪ್ರತಿಕ್ರಿಯಿಸಿದರು. ಮಕ್ಕಳು ಎಲ್ಲಾ ಹೊಸತನದ ಪ್ರಯೋಗಗಳಿಗೆ ಸಿದ್ದರಾಗಿರುತ್ತಾರೆ, ಪ್ರತಿ ಮಕ್ಕಳಲ್ಲಿಯೂ ಒಂದಲ್ಲೊಂದು ಪ್ರತಿಭೆ ಅಡಗಿರುತ್ತದೆ, ಅದನ್ನು ಹೊರತೆಗೆಯಲು ಸಣ್ಣ ಸಹಾಯ ಬೇಕಾಗುತ್ತದೆ. ಅಂತಹ ಸಹಾಯ ಪೋಷಕರಿಂದಲೋ, ಅಥವಾ ಶಿಕ್ಷಕರಿಂದಲೋ ಸಿಕ್ಕಿದರೆ ಆ ಮಕ್ಕಳು ಮಹತ್ವದ್ದನ್ನು ಸಾಧಿಸುತ್ತಾರೆ ಎಂಬುದಕ್ಕೆ ಹೆಮ್ಮರಗಾಲ ಮತ್ತು ಹೆಗ್ಗಡಹಳ್ಳಿ ಮಕ್ಕಳೇ ಸಾಕ್ಷಿ.

ಮಕ್ಕಳೊಂದಿಗೆ ಸಂತೋಷ್ ಗುಡ್ಡಿಯಂಗಡಿ
ಈಗ ಹಗ್ಗಡಹಳ್ಳಿ ಶಾಲೆಯ ಮಕ್ಕಳು ಕಳೆದ ಐದು ದಿನಗಳಿಂದ ಬಣ್ಣದ ಮೇಳವನ್ನು ಆರಂಭಿಸಿದ್ದಾರೆ. ಪರಿಸರ ರಕ್ಷಣೆಯ ಕುರಿತು ಆ ಊರಿನ ದೊಡ್ಡವರಿಗೆ ನಾಟಕ, ಹಾಡು, ಚಿತ್ರಕಲೆ, ಪ್ರಚಾರಾಂದೋಲನದ ಮೂಲಕ ಪಾಠ ಹೇಳುತ್ತಿದ್ದಾರೆ. ಇಡೀ ಶಾಲೆಯ ಶಿಕ್ಷಕವೃಂದ ಮಕ್ಕಳ ಬೆನ್ನಿಗೆ ನಿಂತಿದೆ. ಸಂತೋಷ್ ಗುಡ್ಡಿಯಂಗಡಿಯವರು ಇದೆಲ್ಲದ ಚಾಲಕಶಕ್ತಿಯಾಗಿದ್ದಾರೆ. ನಾಗೇಶ್ ಹೆಗ್ಡೆ ತರಹದ ಜನಪರ ವಿಜ್ಞಾನಿಗಳ ಬೆಂಬಲ ಈ ಮಕ್ಕಳಿಗಿದೆ. ನಮ್ಮ ಕಾರ್ಯಕ್ಕೆ ಪ್ರೇರಣೆ ಸ್ವೀಡನ್ ದೇಶದ ಹದಿನಾರರ ಬಾಲಕಿ, ಹವಾಮಾನ ಬದಲಾವಣೆಯ ವಿರುದ್ಧ ಮಕ್ಕಳನ್ನು ಸಂಘಟಿಸುತ್ತಿರುವ GRETA THUNBERG. ಅವಳ fridayforfuture ಆಂದೋಲನವನ್ನ ನಾವು #ನಾಳೆಗಳು ನಮ್ಮದು #futureisours ಎಂದು ಅಭಿಯಾನದಲ್ಲಿ ತೊಡಗಿದ್ದೇವೆ ಎನ್ನುತ್ತಾರೆ ಹೆಗ್ಗಡಹಳ್ಳಿಯ ಮಕ್ಕಳು. ಒಬ್ಬ ನಾಟಕ ಮೇಷ್ಟ್ರು ಇಷ್ಟೆಲ್ಲಾ ಮಕ್ಕಳಿಗೆ ಸ್ಫೂರ್ತಿಯಾಗಬಹುದಾದರೆ ಎಲ್ಲಾ ಶಾಲೆಗಳಲ್ಲಿಯೂ ರಂಗಭೂಮಿ ಶಿಕ್ಷಕರಿದ್ದರೆ ಎಷ್ಟು ಚೆನ್ನ ಅಲ್ವ?
ಸಂತೋಷ್ ಗುಡ್ಡಿಯಂಗಡಿಯವರ ಮುಖಪುಟಕ್ಕೆ ಹೋಗಿ ನೋಡಿ, ಓದಿ ಅವರನ್ನು ಬೆಂಬಲಿಸುವುದು, ಆ ಕೆಲಸಗಳನ್ನು ನಮ್ಮ ಊರಿನಲ್ಲಿಯೂ ಮಾಡಲು ಮುಂದಾಗುವುದು ನಾವು ಅವರಿಗೆ ಸಲ್ಲಿಸುವ ಗೌರವವಾಗುತ್ತದೆ. ಆ ನಿಟ್ಟಿನಲ್ಲಿ ನೀವೆಲ್ಲರೂ ಮುಂದಾಗುತ್ತೀರಿ ಎಂಬುದು ಪತ್ರಿಕೆಯ ಆಶಯ. ಹೆಗ್ಗಡಹಳ್ಳಿ ಶಾಲಾ ಮಕ್ಕಳಿಗೆ, ಅವರ ಶಿಕ್ಷಕರಿಗೆ ನಾನು ಗೌರಿ ಪತ್ರಿಕೆ ಬಳಗದಿಂದ ಶುಭಾಶಯಗಳು.
ಈಗ ಮುಂದಿನದು ಆ ಮಕ್ಕಳು ಹೊರತಂದಿರುವ ಬಣ್ಣದ ಪತ್ರವನ್ನು ಯಥಾವತ್ತು ಪ್ರಕಟಿಸುತ್ತಿದ್ದೇವೆ. ನೀವೆಲ್ಲರೂ ತಪ್ಪದೇ ಓದಬೇಕೆಂದು ಮನವಿ.
ನಮ್ಮದು ಹೆಗ್ಗಡಹಳ್ಳಿ ಎಂಬ ಪುಟ್ಟ ಊರು. ಇದು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿಯಲ್ಲಿದೆ. ನಮ್ಮ ಊರಿನಲ್ಲಿ ಹತ್ತಿಪ್ಪತ್ತು ಚಿಕ್ಕ ಚಿಕ್ಕ ಅಂಗಡಿಗಳಿವೆ. ಎಲ್ಲಾ ಅಂಗಡಿಯಲ್ಲಿಯೂ ನೀವು ಉತ್ಪಾದಿಸುವ ತಿಂಡಿ ಸಿಗುತ್ತದೆ. ನಾವೂ ತಿನ್ನುತ್ತೇವೆ.
ನಮ್ಮ ಊರನ್ನ ನಾವು ಗಮನವಿಟ್ಟು ನೋಡಿದಾಗ, ಊರಿನ ಬೀದಿ, ಮೋರಿಗಳಲ್ಲೆಲ್ಲಾ ಪ್ಲಾಸ್ಟಿಕ್ ಕಸದ್ದೇ ರಾಶಿ. ನಾವೇ ತಿಂದು ಬಿಸಾಕಿದ ನಿಮ್ಮ ಕಂಪೆನಿಯ ಪ್ಯಾಕೇಟುಗಳು ಎಲ್ಲಿ ನೋಡಿದರೂ ಕಾಣಸಿಗುತ್ತಿವೆ. ನಮಗೆ ಕೆಲವೊಂದು ಪ್ರಶ್ನೆಗಳಿವೆ.
• ನೀವು ಭಾರತದ ಮಕ್ಕಳಿಗಾಗಿ ದಿನವೊಂದಕ್ಕೆ ಇಂತಹ ಎಷ್ಟು ಪ್ಯಾಕೇಟುಗಳನ್ನು ಉತ್ಪಾದಿಸುತ್ತೀರಿ?
• ಪ್ಯಾಕೇಟುಗಳ ತಯಾರಿಕೆಗೆ ಪ್ಲಾಸ್ಟಿಕ್ ಪುನರ್ಬಳಕೆ ಮಾಡುತ್ತೀರಾ?
• ನಿಮ್ಮ ಫ್ಯಾಕ್ಟರಿಯಿಂದ ನಮ್ಮ ಊರಿಗೆ ತಿಂಡಿ ಕಳಿಸಿ ಮಾರಾಟ ಮಾಡುವ ಬದ್ಧತೆಯುಳ್ಳ ನಿಮಗೆ, ನೀವೇ ಉತ್ಪಾದಿಸಿದ ಪ್ಲಾಸ್ಟಿಕ್ ಕೊಳೆಯನ್ನು ಮರಳಿ ಪಡೆದು ಪುನರ್ಬಳಕೆ ಮಾಡಬೇಕೆಂಬ ಸಣ್ಣ ಕಾಳಜಿಯೂ ಇಲ್ಲವಲ್ಲ ಯಾಕೆ?
• ನಿಮಗೆ ದುಡ್ಡು ಕೊಟ್ಟು ತಿಂಡಿಯ ಜೊತೆಗೆ, ನಮ್ಮ ನಾಳೆಗಳಿಗೆ ಮಾರಕವಾದ ಪ್ಲಾಸ್ಟಿಕ್ ಕೊಳೆಯನ್ನು ಕೊಂಡುಕೊಳ್ಳಬೇಕೆ?
• ಮಕ್ಕಳಿಗಾಗಿ ರುಚಿರುಚಿಯಾದ ತಿಂಡಿಯನ್ನು ಉತ್ಪಾದಿಸುವ ನಿಮಗೆ, ಮಕ್ಕಳ ನಾಳೆಗಳು ಸುಂದರವಾಗಿರಬೇಕೆಂದು ಎಂದಾದರೂ ಅನಿಸಿದೆಯೇ?
ಹಾಗೆ ಅನಿಸಿದರೆ, ನಿಮ್ಮ ಪ್ಲಾಸ್ಟಿಕ್ ಕೊಳೆಗೆ ನೀವು ಉತ್ತರದಾಯಿಯಾಗಲೇಬೇಕು. ನಾವು ಹೆಗ್ಗಡಹಳ್ಳಿಯ ಮಕ್ಕಳು ನಿಮ್ಮ ಬಳಿ ಹೇಳುವ ಪಿಸುಮಾತಿದು:
• ನಾಳೆಗಳು ನಮ್ಮದು
• ನಿಮ್ಮ ತಿಂಡಿ ಸಾಕು, ಪ್ಲಾಸ್ಟಿಕ್ ಕೊಳೆ ಬೇಡ.
• ನಮಗೆ ಆರೋಗ್ಯಕರವಾದ ನಾಳೆಗಳನ್ನು ಉಳಿಸಿಕೊಡಿ
• ನೀವು ತಿಂಡಿ ಸುತ್ತಿ ಕಳಿಸಿದ ಪ್ಯಾಕೇಟನ್ನು ನೀವು ವಾಪಾಸು ಪಡೆಯಲೇಬೇಕು. ಇಡೀ ದೇಶಕ್ಕೆ ನೀವು ಈಗಾಗಲೇ ಹಲವು ಟನ್ ಪ್ಲಾಸ್ಟಿಕ್‍ನ್ನು ನೀಡಿರಬಹುದು. ಇನ್ನು ಮುಂದೆಯಾದರೂ ನಿಮ್ಮ ಪ್ಯಾಕೇಟುಗಳನ್ನು ವಾಪಾಸು ಪಡೆದು ಅದನ್ನೇ ಮರುಬಳಕೆ ಮಾಡಿ. ಹೊಸ ಉತ್ಪಾದನೆಯನ್ನು ನಿಲ್ಲಿಸಿ. ನಮ್ಮ ಆರೋಗ್ಯಕರ ನಾಳೆಗಾಗಿ ಕೈಜೋಡಿಸಿ.
ಮಕ್ಕಳ ಮೇಲೆ ಪ್ರೀತಿಯಿಂದ ತಿಂಡಿ ಕೊಡಿಸುತ್ತೀರಲ್ಲ;
ಆ ಮಕ್ಕಳು ಬದುಕಲು ಯೋಗ್ಯವಾದ ಪರಿಸರವನ್ನೂ ಉಳಿಸಿಕೊಡಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...