Homeಮುಖಪುಟಕಾನೂನು ಉಲ್ಲಂಘಿಸುತ್ತಿರುವ ನಮೋ ಟಿವಿ: ಲೈಸೆನ್ಸ್ ಇಲ್ಲದೇ ಉಪಗ್ರಹ ಬಳಕೆ!

ಕಾನೂನು ಉಲ್ಲಂಘಿಸುತ್ತಿರುವ ನಮೋ ಟಿವಿ: ಲೈಸೆನ್ಸ್ ಇಲ್ಲದೇ ಉಪಗ್ರಹ ಬಳಕೆ!

- Advertisement -
- Advertisement -

ಸಾಕಷ್ಟು ವಿವಾದ ಸೃಷ್ಟಿಸಿದ ಪ್ರಧಾನಿಯ ಪ್ರಪಗಂಡಾ ಚಾನೆಲ್ ನಮೋ ಟಿವಿ ಯಾವುದೇ ಲೈಸೆನ್ಸ್ ಪಡೆಯದೇ ತನ್ನ ಸಿಗ್ನಲ್ ಅಪ್‍ಲಿಂಕ್ ಮತ್ತು ಡೌನ್‍ಲಿಂಕ್‍ಗೆ ಎನ್‍ಎಸ್‍ಎಸ್-6 ಉಪಗ್ರಹವನ್ನು ಬಳಸುತ್ತಿದೆ. ವ್ಯಕ್ತಿಯೋರ್ವನ ಅಜೆಂಡಾಗಳನ್ನು, ಹಿಕ್ಮತ್ತುಗಳನ್ನು ಪ್ರಸಾರ ಮಾಡಲು ಈ ನೆಲದ ಕಾನೂನನ್ನು ಧಿಕ್ಕರಿಸಿರುವುದು ದೇಶದ್ರೋಹವೇ ಅಲ್ಲವೇ?

ಪ್ರಧಾನಿ ಮತ್ತು ಬಿಜೆಪಿಯ ಚುನಾವಣಾ ಪ್ರಚಾರ ಮಾಡಲೆಂದೇ ಅತ್ಯಂತ ಅನುಮಾನಾಸ್ಪದ ರೀತಿಯಲ್ಲಿ ಆರಂಭಗೊಂಡ ನಮೋ ಚಾನೆಲ್, ಪ್ರಸಾರದ ನಿಯಮಗಳನ್ನು ಪಾಲಿಸಿದೆಯೇ ಮತ್ತು ಇದೆಲ್ಲ ಚುಮಾವಣಾ ನೀತಿ ಸಂಹಿತೆಯ ಉಲ್ಲಂಘನೆ ಅಲ್ಲವೇ ಎಂಬ ಪ್ರಶ್ನೆಗಳನ್ನು ಎತ್ತಿವೆ. ಆದರೆ ಮಾಹಿತಿ ಮತ್ತು ಪ್ರಸಾರ ಇಲಾಖೆ ಮತ್ತು ಚುನಾವಣಾ ಆಯೋಗ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಮತ್ತು ಬರುವುದೂ ಇಲ್ಲ.
ವಾರ್ತಾ ಮತ್ತು ಪ್ರಸಾರ ಇಲಾಖೆ ಈಗಾಗಲೇ, ನಮೋ ಟಿವಿ ‘ವಿಶೇಷ ಸೇವೆಯ ಜಾಹಿರಾತು ಚಾನೆಲ್’ ಎಂದು ಘೋಷಿಸಿ, ಇದಕ್ಕೆಲ್ಲ ಲೈಸೆನ್ಸ್ ಅಗತ್ಯವಿಲ್ಲ ಎಂಬ ನಿಯಮವನ್ನು ಮುಂದೆ ಮಾಡಿದೆ. ಆದರೆ ಶುರುವಾದ ದಿನ ನ್ಯೂಸ್ ಚಾನೆಲ್ ಎಂದೇ ನಮೋ ಟಿವಿ ಹೇಳಿಕೊಂಡಿತ್ತು.

ಭಾರತದ ಕಾನೂನಿನ ಪ್ರಕಾರ, ಯಾವುದೇ ಚಾನೆಲ್ ಉಪಗ್ರಹಗಳಿಂದ ಅಪ್‍ಲಿಂಕ್ ಮತ್ತು ಡೌನ್‍ಲಿಂಕ್ ಮಾಡಲು ಪ್ರಸಾರ ಇಲಾಖೆಯ ಅನುಮತಿ ಪಡೆಯಬೇಕು. ಕಂಪನಿಯ ಹಿನ್ನೆಲೆ ಮತ್ತು ಭದ್ರತಾ ವಿಷಯಗಳ ಪರಿಶೀಲನೆ ನಂತರವಷ್ಟೇ ಈ ಲೈಸೆನ್ಸ್ ನೀಡಲಾಗುತ್ತದೆ. ಆದರೆ ಇಂತಹ ಯಾವ ಲೈಸನ್ಸ್ ಹೊಂದಿರದ ನಮೋ ಟಿವಿ ಎನ್‍ಎಸ್‍ಎಸ್-6 ಉಪಗ್ರಹದಿಂದ ಅಪ್‍ಲಿಂಕ್ ಮತ್ತು ಡೌನ್‍ಲಿಂಕ್ ಮಾಡುತ್ತಿದೆ.

LyngSat ನೀಡಿದ ಮಾಹಿತಿ

ಜಗತ್ತಿನ ಸಂವಹನ ಮತ್ತು ಸಂಪರ್ಕ ತಜ್ಞರು ಮಾಹಿತಿಗಾಗಿ LyngSat ವೆಬ್‍ಸೈಟ್ ಫಾಲೋ ಮಾಡುತ್ತಾರೆ. ವಿಶ್ವದ ಉಪಗ್ರಹ ಆಧರಿತ ಪ್ರಸಾರ ಸೇವೆಗಳ ನಿಖರ ಮಾಹಿತಿಯನ್ನು ಈ ತಾಣ ಒಳಗೊಂಡಿದೆ. ಇದರ ಪ್ರಕಾರ, ನಮೋ ಟಿವೆ ಎನ್‍ಎಸ್‍ಎಸ್-6 ಉಪಗ್ರಹ ಸೇವೆ ಬಳಸಿಕೊಳ್ಳುತ್ತಿಯೀ ಉಪಗ್ರಹವು ಲುಕ್ಸೆಂಬರ್ಗ್ ಮೂಲದ ಎಸಿಎಸ್ ವರ್ಲ್ಡ್ ಸ್ಕೈಸ್ ಸಂಸ್ಥೆಗೆ ಸೇರಿದೆ. LyngSat ನಡೆಸುವ ಕ್ರಿಸ್ಟಿನ್ ಲಿಂಗಮಾರ್ಕ್ ಇದನ್ನು ‘ದಿ ವೈರ್’ ಪೋರ್ಟಲ್‍ಗೆ ಸ್ಪಷ್ಟಪಡಿಸಿದ್ದಾರೆ. ವೆಬ್‍ಸೈಟಿನಲ್ಲಿ ನಮೋ ಟಿವಿ ಲಿಸ್ಟ್ ಆಗಿರುವ ಸ್ಕ್ರೀನ್‍ಶಾಟ್ ಅನ್ನು ನೋಡಿ.

LyngSat ಮಾದರಿಯ ಸೇವೆ ಒದಗಿಸುವ ‘ಫ್ಲೈಸ್ಯಾಟ್; ವೆಬ್‍ಸೈಟ್ ಕೂಡ ನಮೋ ಟಿವಿ ಎನ್‍ಎಸ್‍ಎಸ್-6 ಉಪಗ್ರಹವನ್ನು ಬಳಸುತ್ತಿರುವುದನ್ನು ದೃಡಪಡಿಸಿದೆ.
ಸತ್ಯ ಹೀಗಿದ್ದರೂ, ಪ್ರಸಾರ ಇಲಾಖೆ ‘ವಿಶೇಷ ಸೇವೆ’ಯನ್ನಷ್ಟೇ ನೀಡುವ ನಮೋ ಟಿವೆಗೆ ಲೈಸೆನ್ಸ್ ಅಗತ್ಯವಿಲ್ಲ ಎಂದು ಜನರನ್ನು ದಾರಿ ತಪ್ಪಿಸುತ್ತಿದೆ. ಪ್ರಸಾರದ ಲೈಸೆನ್ಸ್ ಪಡೆಯದೇ ನಮೋ ಟಿವಿ ಉಪಗ್ರಹ ಬಳಸಿ ಅಪ್‍ಲಿಂಕ್ ಮತ್ತು ಡೌನ್‍ಲಿಂಕ್ ಮಾಡುತ್ತಿದ್ದು, ನಿಯಮಾವಳಿಯ ಸ್ಪಷ್ಟ ಉಲ್ಲಂಘನೆ ಮಾಡುತ್ತಿದೆ.

ಇಲ್ಲಿ ಒಂದು ಪ್ರಶ್ನೆ ಎಂದರೆ, ನಾವೇ ನಮೋ ಟಿವಿ ಮಾಲಿಕರು ಎಂದು ಹೇಳಲು ಯಾರೂ ಮುಂದೆ ಬರುತ್ತಿಲ್ಲ! ಪ್ರಸಾರ ಇಲಾಖೆ ತಡಯಾಜ್ಞೆ ಒಡ್ಡಿರುವುದು ಸದ್ಯಕ್ಕೆ ಸಮಾಧಾನದ ಸಂಗತಿ. ಅಧಿಕಾರದ ದುರುಪಯೋಗವನ್ನು ಅದರ ಅತಿ ತಳಮಟ್ಟಕ್ಕೆ ಒಯ್ದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗುತ್ತಿದ್ದಾರೆ.
(ಆಧಾರ: ದಿ ವೈರ್)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿಬಿಐ, ಜಾರಿ ನಿರ್ದೇಶನಾಲಯವನ್ನು ಮುಚ್ಚಬೇಕು: ಇಂಡಿಯಾ ಮೈತ್ರಿ ಕೂಟದ ಮುಂದೆ ಅಖಿಲೇಶ್ ಯಾದವ್ ಪ್ರಸ್ತಾಪ

0
ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಂತಹ ಇಲಾಖೆಗಳು ಅಗತ್ಯವಿಲ್ಲ, ಅವುಗಳನ್ನು ಮುಚ್ಚಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದು, ಈ ಬಗ್ಗೆ ಇಂಡಿಯಾ ಮೈತ್ರಿಕೂಟದ ನಾಯಕರ ಮುಂದೆ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಸಿಬಿಐ ಮತ್ತು...