Homeಮುಖಪುಟಬಸವ ಜಯಂತಿ: ಕನ್ನಡದಲ್ಲಿ ಟ್ವೀಟ್ ಮಾಡಿ ಗಮನ ಸೆಳೆದ ಮೋದಿ, ರಾಹುಲ್, ಕೇಜ್ರಿವಾಲ್

ಬಸವ ಜಯಂತಿ: ಕನ್ನಡದಲ್ಲಿ ಟ್ವೀಟ್ ಮಾಡಿ ಗಮನ ಸೆಳೆದ ಮೋದಿ, ರಾಹುಲ್, ಕೇಜ್ರಿವಾಲ್

- Advertisement -
- Advertisement -

ಸಮಾನಯತೆಯ ಹರಿಕಾರ, ಮಹಾನ್ ಮಾನವತಾವಾದಿ ಬಸವಣ್ಣನವರ ಜಯಂತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕನ್ನಡದಲ್ಲಿ ಶುಭಾಶಯ ಕೋರುವ ಮೂಲಕ ಗಮನ ಸೆಳೆದಿದ್ದಾರೆ.

“ಬಸವ ಜಯಂತಿಯ ಈ ಶುಭ ಸಂದರ್ಭದಲ್ಲಿ ಜಗದ್ಗುರು ಬಸವೇಶ್ವರರಿಗೆ ಗೌರವ ನಮನಗಳು. ಬಸವಣ್ಣನವರ ಚಿಂತನೆ, ಬೋಧನೆ ಹಾಗು ತತ್ವಾದರ್ಶಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಶಕ್ತಿ ತುಂಬುತ್ತಿದೆ” ಎಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ಬಸವಣ್ಣನವರ ಕುರಿತು 2020ರಲ್ಲಿ ಮಾಡಿದ ಭಾಷಣದ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿ, “ಸರ್ವರಿಗೂ ಕಾಯಕಯೋಗಿ ಬಸವಣ್ಣನವರ ಜಯಂತಿಯ ಶುಭಾಶಯಗಳು. 12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ವಿಶ್ವಗುರು, ಮಹಾ ಮಾನವತಾವಾದಿ ಅಣ್ಣ ಬಸವಣ್ಣನವರ ಬದುಕು, ತತ್ವ, ವಚನ ಸಂದೇಶ ನಮ್ಮೆಲ್ಲರ ಜೀವನಕ್ಕೆ ಪ್ರೇರಣೆ ಆಗಲಿ” ಎಂದಿದ್ದಾರೆ.

ಅದೇ ರೀತಿಯಾಗಿ ದೆಹಲಿ ಮುಖ್ಯಮಂತ್ರಿ ಮತ್ತು ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಕೂಡ ಕನ್ನಡದಲ್ಲಿ ಬಸವ ಜಯಂತಿಯ ಶುಭಾಶಯ ತಿಳಿಸಿದ್ದಾರೆ. “ಸಮಾನತೆಯ ಬೀಜ ಬಿತ್ತಿದ, ಶೋಷಣೆ, ಮೂಢನಂಬಿಕೆಗಳ ವಿರುದ್ಧ ಹೋರಾಡಿದ ವಿಶ್ವ ಗುರು ಬಸವಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲಾ ಮುನ್ನಡೆಯೋಣ. ಸರ್ವರಿಗೂ ಬಸವ ಜಯಂತಿಯ ಶುಭಾಶಯಗಳು” ಎಂದು ಬರೆದಿದ್ದಾರೆ.

ಇಂದು ಕರ್ನಾಟಕ ಮಾತ್ರವಲ್ಲದೆ ಪಕ್ಕದ ತೆಲಂಗಾಣ ರಾಜ್ಯದಲ್ಲಿಯೂ ಸಹ ಬಸವ ಜಯಂತಿ ಆಚರಣೆ ನಡೆದಿದೆ. ಇಂದು ರಾಜ್ಯದೆಲ್ಲೆಡೆ ಮಹಾತ್ಮ ಬಸವೇಶ್ವರ ಜಯಂತಿ ಆಚರಿಸುವಂತೆ ತೆಲಂಗಾಣ ಸರ್ಕಾರ ಕೆಲ ದಿನಗಳ ಹಿಂದೆ ಆದೇಶ ಹೊರಡಿಸಿತ್ತು. ಇನ್ನು ಮುಂದೆ ಅಕ್ಷಯ ತೃತೀಯದಂದು ಪ್ರತಿ ವರ್ಷ ತೆಲಂಗಾಣ ರಾಜ್ಯಾದ್ಯಂತ ಬಸವ ಜಯಂತಿ ನಡೆಯಲಿದೆ ಎಂದು ತೆಲಂಗಾಣ ಸರ್ಕಾರ ಘೋಷಿಸಿದೆ.

ಇದನ್ನೂ ಓದಿ: ಬಸವ ಜಯಂತಿ; ಇವ ನಮ್ಮವ ಇವ ನಮ್ಮವನೆಂದೆನ್ನುತ್ತಿಲ್ಲ ಯಾಕೆ?

ಇತ್ತೀಚಿನ ದಿನಗಳಲ್ಲಿ ದಾರ್ಶನಿಕ ಬಸವಣ್ಣನವರನ್ನು ನೆನಪಿಸಿಕೊಳ್ಳುವ ಕ್ರಿಯೆ ಕರ್ನಾಟಕ ಮಾತ್ರವಲ್ಲದೆ ದಕ್ಷಿಣದ ಇತರ ರಾಜ್ಯಗಳಲ್ಲಿಯೂ ಜರುಗುತ್ತಿದೆ. ಕಳೆದ ವರ್ಷ ಬಸವ ಜಯಂತಿಯ ದಿನ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರವರು ಕನ್ನಡದಲ್ಲಿ ಬಸವಣ್ಣನವರ ವಚನವನ್ನು ಟ್ವೀಟ್‌ ಮಾಡುವ ಮೂಲಕ ಸಾವಿರಾರು ಕನ್ನಡ ಅಭಿಮಾನಿಗಳ ಮನಗೆದ್ದಿದ್ದರು.

ಬಸವ ಜಯಂತಿ ಶುಭಾಷಯಗಳು ಎಂಬ ವಾಕ್ಯಗಳಿಂದ ಆರಂಭವಾಗಿದ್ದ ಅವರ ಟ್ವೀಟ್‌ “ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಮಹಾನ್‌ ಬಸವಣ್ಣನವರು ಮಾರ್ಗದರ್ಶಕರಾಗಲಿ. ನಾವು ವಿಭಜಿತವಾಗಿದ್ದರೆ ಈ ಸಾಂಕ್ರಾಮಿಕದ ವಿರುದ್ಧ ಜಯಿಸಲು ಸಾಧ್ಯವಿಲ್ಲ. ಗೆಲ್ಲಲ್ಲು ಅದು ನಮ್ಮ ಒಗ್ಗಟ್ಟನ್ನು ಕೇಳುತ್ತದೆ” ಎಂದು ಪಿಣರಾಯಿ ವಿಜಯನ್‌ ತಿಳಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...