Homeಕರ್ನಾಟಕಬೆಂಗಳೂರು: 12 ಗಂಟೆಗಳಲ್ಲಿ 52 ಮಿ.ಮೀ ಮಳೆ, ಮನೆ-ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿದ ನೀರು

ಬೆಂಗಳೂರು: 12 ಗಂಟೆಗಳಲ್ಲಿ 52 ಮಿ.ಮೀ ಮಳೆ, ಮನೆ-ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿದ ನೀರು

- Advertisement -
- Advertisement -

ಭಾನುವಾರ ತಡರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ಸುರಿದ 52 ಮಿ.ಮೀ ಮಳೆಯು ಬೆಂಗಳೂರಿನ ಕೆಲವೆಡೆ ಜನಜೀವನ ಅಸ್ತವ್ಯಸ್ಥವಾಗಿಸಿದೆ.

ಕಳೆದ ಬಾರಿಯಂತೆ ಮಹದೇವಪುರ ವಲಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಯಲಹಂಕ, ಬೊಮ್ಮನಹಳ್ಳಿ ಸೇರಿದಂತೆ ಇತರ ಭಾಗಗಳಲ್ಲಿಯೂ ಅನೇಕ ತಗ್ಗು ಪ್ರದೇಶಗಳಲ್ಲಿ ಅನಾನುಕೂಲವಾಗಿವೆ.

ಸೋಮವಾರ ಬೆಳಗಿನ ಜಾವ ಮಳೆಯಲ್ಲೇ ವಾಹನ ಸವಾರರು ತಮ್ಮ ಕಚೇರಿ ಹಾಗೂ ದಿನನಿತ್ಯದ ಕೆಲಸದ ಸ್ಥಳಗಳಿಗೆ ತೆರಳಿದರು. ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಯಿತು. ಶಾಲಾ ವಾಹನಗಳು ಜಲಾವೃತಗೊಂಡ ರಸ್ತೆಗಳಲ್ಲಿ ಸಿಲುಕಿಕೊಂಡಿವೆ ಮತ್ತು ಐಟಿ ವಲಯದ ವರ್ತೂರು, ಬೆಳ್ಳಂದೂರಿನಲ್ಲಿ ಮುಖ್ಯರಸ್ತೆ ಜಲಾವೃತಗೊಂಡಿದ್ದರಿಂದ ಕಚೇರಿಗೆ ತೆರಳುವವರು ಟ್ರಾಫಿಕ್ ಎದುರಿಸಿದರು.

ಹೆಬ್ಬಾಳ ಮೇಲ್ಸೇತುವೆ ಹಾಗೂ ಎಸ್ಟೀಮ್ ಮಾಲ್ ಕಡೆಯಿಂದ ಮೇಖ್ರಿ ವೃತ್ತದತ್ತ ಸಾಗುವ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ವೀರಸಂದ್ರ ಬಳಿ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ರಸ್ತೆಯಿಂದ ಹೊರಡುವ ವಾಹನಗಳು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದು, ಈ ರಸ್ತೆಯಲ್ಲಿ ಸಂಚರಿಸುವ ಜನರು ಬೇರೆ ದಾರಿ ಆಶ್ರಯಿಸಿದರು.

ಬಿಬಿಎಂಪಿ ವ್ಯಾಪ್ತಿಯ ಹಲವೆಡೆ ಮಳೆ ನೀರು ನಿಂತಿದ್ದರಿಂದ ಸಮಸ್ಯೆ ಉಂಟಾಗಿದೆ. ಹಲವೆಡೆ ಸಮಸ್ಯೆಯೂ ಆಗಿತ್ತು. ಹೆಬ್ಬಾಳ, ಮೇಖ್ರಿ ವೃತ್ತ, ನಾಗವಾರದಲ್ಲಿ ಮಳೆ ನೀರು ಚರಂಡಿಯಲ್ಲಿ ಹರಿಯುವಂತೆ ಪೊಲೀಸರು ಕಸ ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ ಕೊಡೇಹಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 61.5 ಮಿ.ಮೀ ಮಳೆಯಾಗಿದೆ. ಅದೇ ರೀತಿ ವಿವಿ ಪುರದಲ್ಲಿ 57.5, ವಿದ್ಯಾಪೀಠದಲ್ಲಿ 56, ನಾಯಂಡಹಳ್ಳಿಯಲ್ಲಿ 55, ಹಗದೂರಿನಲ್ಲಿ 54, ರಾಜರಾಜೇಶ್ವರಿ ನಗರದಲ್ಲಿ 53 ಮಿ.ಮೀ ಮಳೆಯಾಗಿದೆ.

ಎಚ್ ಎಸ್ ಆರ್ ಲೇಔಟ್ ನ ವಿ.ನಾಗೇನಹಳ್ಳಿ 50.5ಮಿ.ಮೀ, ರಾಜರಾಜೇಶ್ವರಿನಗರ (2)50.5ಮಿ.ಮೀ, ಪುಲಕೇಶಿನಗರ 49.5ಮಿ.ಮೀ, ಯಲಹಂಕ 49ಮಿ.ಮೀ, ಅರಕೆರೆ 48.5ಮಿ.ಮೀ, ದೊಡ್ಡನೆಕ್ಕುಂದಿ 45ಮಿ.ಮೀ, 44ಮಿ.ಮೀ ಮಳೆ ದಾಖಲಾಗಿದೆ.

ಇದನ್ನೂ ಓದಿ; ಮೈಸೂರು ಪಾದಯಾತ್ರೆ ಮುಗಿದ ಬೆನ್ನಲ್ಲೇ ಬಿಜೆಪಿ ಅತೃಪ್ತರಿಂದ ಪ್ರತ್ಯೇಕ ಸಭೆ; ಬಿಎಸ್‌ವೈ ವಿರೋಧಿ ಬಣ ಸಕ್ರಿಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...