Homeಮುಖಪುಟಬಿಹಾರ: ಚಂಪಾರಣ್ಯ ಸತ್ಯಾಗ್ರಹ ಸ್ಥಳದಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ

ಬಿಹಾರ: ಚಂಪಾರಣ್ಯ ಸತ್ಯಾಗ್ರಹ ಸ್ಥಳದಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ

- Advertisement -
- Advertisement -

ಮಹಾತ್ಮ ಗಾಂಧಿ ಅವರು 1917 ರಲ್ಲಿ ಚಂಪಾರಣ್ಯ ಸತ್ಯಾಗ್ರಹ ಆರಂಭಿಸಿದ ಸ್ಥಳದ ಬಳಿ ಸ್ಥಾಪಿಸಲಾಗಿದ್ದ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಕಂಡು ಬಂದಿದೆ. ಇದು ಸ್ಥಳದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಬಿಹಾರದ ಆಡಳಿತ ಮಂಡಳಿ ಮಂಗಳವಾರ ತಿಳಿಸಿದೆ.

“ಭಾನುವಾರ ರಾತ್ರಿ ಮೋತಿಹಾರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚರಖಾ ಪಾರ್ಕ್‌ನಲ್ಲಿರುವ ಪ್ರತಿಮೆಯನ್ನು ಹಾನಿಗೊಳಿಸಿ, ನೆಲಕ್ಕೆ ಬೀಳಿಸಲಾಗಿದೆ. ಪೊಲೀಸರು ತಮ್ಮ ತನಿಖೆಯನ್ನು ನಡೆಸುತ್ತಿದ್ದಾರೆ ಮತ್ತು ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವವರು ಕಾನೂನು ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ” ಎಂದು ಪೂರ್ವ ಚಂಪಾರಣ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿರ್ಷತ್ ಕಪಿಲ್ ಅಶೋಕ್ ಹೇಳಿದ್ದಾರೆ.

ಘಟನೆ ನಡೆದ ಭಾನುವಾರ ರಾತ್ರಿ ಈ ಪ್ರದೇಶದಲ್ಲಿ ಧಾರ್ಮಿಕ ಘೋಷಣೆಗಳು ಕೇಳಿಬಂದವು ಎಂದು ಆರೋಪಿಸಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಮಂದಿ ಈ ಫೋಟೋಗಳು, ವಿಡಿಯೋಗಳನ್ನು ಹಂಚಿಕೊಂಡು ಬಲಪಂಥೀಯ ಗುಂಪುಗಳು ಈ ನೀಚ ಕಾರ್ಯ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Hijab Live | ಹಿಜಾಬ್‌ ಲೈವ್‌‌ | ರಾಜ್ಯ ಸರ್ಕಾರ ಮಂಧ್ಯಂತರ ಆದೇಶವನ್ನು ದುರುಪಯೋಗಪಡಿಸುತ್ತಿದೆ: ವಕೀಲರ ದೂರು

ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಡಿಎಂ ಮತ್ತು ಎಸ್ಪಿ ಸ್ಥಳಕ್ಕೆ ಆಗಮಿಸಿ ವಿಗ್ರಹವನ್ನು ಸಂಗ್ರಹಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ.

“ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ತನ್ನ ಈ ಉದ್ಯಾನವನದ ನಿರ್ವಹಣಾ ಕಾರ್ಯವನ್ನು ನಡೆಸುತ್ತಿದೆ. ನಾವು ಅವರಿಗೆ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡಲು ಸಲಹೆ ನೀಡುತ್ತೇವೆ. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯನ್ನು ಸಹ ಖಚಿತಪಡಿಸಿಕೊಳ್ಳಲಾಗುವುದು. ಪ್ರತಿಮೆಯ ಮರು ಪ್ರತಿಷ್ಠಾಪನೆಯನ್ನು ಜಿಲ್ಲಾಡಳಿತ ಮಾಡಲಿದೆ” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿರ್ಷತ್ ಕಪಿಲ್ ಅಶೋಕ್ ಹೇಳಿದ್ದಾರೆ.

ಚಂಪಾರಣ್ಯ ಸತ್ಯಾಗ್ರಹವು 1917 ರಲ್ಲಿ ಬ್ರಿಟಿಷ್ ಭಾರತದಲ್ಲಿ ಮಹಾತ್ಮ ಗಾಂಧಿಯವರು ಪ್ರಾರಂಭಿಸಿದ ಮೊದಲ ಸತ್ಯಾಗ್ರಹ ಚಳವಳಿಯಾಗಿದೆ.


ಇದನ್ನೂ ಓದಿ: ಜಾರ್ಖಂಡ್‌: ಅರಣ್ಯ ಉಳಿಸಲು ’ಜಂಗಲ್ ಬಚಾವೋ’ ತಂಡ ರಚಿಸಿ ಬಿದಿರು ಕೋಲು ಹಿಡಿದ ದಿಟ್ಟ ಮಹಿಳೆಯರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮಹಾತ್ಮ ಗಾಂಧಿ ಈ ದೇಶಕ್ಕೆ ಬೇಡ ಎಂದಾದರೆ, ಅದು ಈ ದೇಶದ ದುರಂತಕ್ಕೆ ನಾಂದಿ ಹಾಡಿದಂತೆ.

LEAVE A REPLY

Please enter your comment!
Please enter your name here

- Advertisment -

Must Read