ಅಸ್ಸಾಂ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗೌಹಾಟಿಯಲ್ಲಿ ನಡೆದ ಬೃಹತ್ ರ್‍ಯಾಲಿಯಲ್ಲಿ ಮಾತನಾಡಿದ ಹಿಮಂತ ಬಿಸ್ವ ಶರ್ಮಾ, ’ಪ್ರಧಾನಿ ಅಮಿತ್ ಶಾರವರೆ ಮತ್ತು ಗೃಹ ಮಂತ್ರಿ ನರೇಂದ್ರ ಮೋದಿಯವರೆ’ ಎಂದು ಸಂಬೋಧಿಸಿ ಚರ್ಚೆಗೆ ಗ್ರಾಸವಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಲ್ಲದೆ, ಹಿಮಂತ ಶರ್ಮಾ ಬೇಕಂತಲೇ ಅಮಿತ್ ಶಾರವರನ್ನು ಪ್ರಧಾನಿ ಎಂದು ಕರೆದಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ.
2024ರ ಚುನಾವಣೆಗೆ ಗೃಹ ಸಚಿವ ಅಮಿತ್ ಶಾರವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲಾಗುತ್ತಿದೆ ಎಂಬ ಉಹಾಪೋಹಗಳ ನಡುವೆ ಅವರ ನಿಕಟವರ್ತಿಯಾದ ಅಸ್ಸಾಂ ಸಿಎಂ ಹಿಮಂತ ಶರ್ಮಾ ಈ ರೀತಿಯ ಹೇಳಿಕೆ ನೀಡಿದ್ದು ಅದಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು.
When @sarbanandsonwal Ji was the CM, MP @pallablochandas on several occasions referred to cabinet minister @himantabiswa ji as the CM in public!
Has #BJP decided its next @PMOIndia replacing @narendramodi Ji?
Or a campaign has been launched to promote @AmitShah ji as the PM? pic.twitter.com/BgqgbbajXC— Assam Congress (@INCAssam) May 10, 2022
ಈ ಚರ್ಚೆ ಆರಂಭವಾಗುತ್ತಲೇ ಎಚ್ಚೆತ್ತುಕೊಂಡಿರುವ ಪ್ರಧಾನಿ ಮೋದಿ ಆ ಕುರಿತು ಪ್ರತಿಕ್ರಿಯಿಸಿದ್ದಾರೆ. ಹಿಮಂತ ಶರ್ಮಾ ಹೇಳಿಕೆ ನೀಡಿದ ಎರಡು ದಿನದ ನಂತರ ಗುಜರಾತ್‌ನಲ್ಲಿ ನಡೆದ ವರ್ಚುವಲ್ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ “ಮೂರನೇ ಅವಧಿಗೆ ಪ್ರಧಾನಿಯಾಗಲು ತಯಾರಿಯಾಗಿದ್ದು, ಶೇ.100 ರಷ್ಟು ಕೆಲಸಗಳನ್ನು ಮಾಡಲು 2024ರ ಚುನಾವಣೆಯಲ್ಲಿಯೂ ತಾನು ಪ್ರಧಾನಿ ಅಭ್ಯರ್ಥಿಯಾಗಿರುತ್ತೇನೆ” ಎಂಬ ಸಂದೇಶ ರವಾನಿಸಿದ್ದಾರೆ.
ಈ ವಿಷಯ ಪ್ರಸ್ತಾಪಿಸಿದ ಅವರು, “ಒಮ್ಮೆ ನಾನು ಗೌರವಿಸುವ ವಿರೋಧ ಪಕ್ಷದ ಹಿರಿಯ ಮುಖಂಡರೊಬ್ಬರು ನನ್ನನ್ನು ಭೇಟಿಯಾಗಿದ್ದರು. ಕೆಲ ವಿಷಯಗಳನ್ನು ಮಾತನಾಡಿದ ನಂತರ, ಮೋದಿಜಿ ನಿಮಗೆ ಇನ್ನೇನು ಬೇಕು, ಈ ದೇಶ ನಿಮ್ಮನ್ನು ಎರಡು ಬಾರಿಗೆ ಪ್ರಧಾನಿಯನ್ನಾಗಿ ಮಾಡಿದೆ ಎಂದರು. ಎರಡು ಬಾರಿ ಪ್ರಧಾನಿಯಾಗುವುದು ದೊಡ್ಡ ಸಾಧನೆ ಎಂದು ಅವರು ಭಾವಿಸಿದ್ದರು. ಆದರೆ ಈ ಮೋದಿಯವರ ಮನಸ್ಸಿನಲ್ಲಿ ಬೇರೆ ಇದೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಗುಜರಾತ್ ಮಣ್ಣಿನಲ್ಲಿ ಹುಟ್ಟಿಬಂದ ನಾನು ವಿಶ್ರಾಂತಿ ಪಡೆಯಬಹುದಾದಷ್ಟನ್ನು ಇನ್ನು ಸಾಧಿಸಿಲ್ಲ. ಎಲ್ಲಾ ಸರಿ ಇದೆ ಎಂದು ನಾನು ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ. ನನ್ನ ಕನಸುಗಳು ಮುಗಿದಿಲ್ಲ, 100% ಕೆಲಸ ಮಾಡಬೇಕಿದೆ” ಎಂದು ಮೋದಿ ಹೇಳಿದ್ದಾರೆ.
ಮೋದಿಯವರ ಆರೋಗ್ಯ ಸರಿ ಇಲ್ಲ, ಅವರಿಗೆ ರಕ್ಷಣಾ ಬೆದರಿಕೆ ಇದೆ ಎಂಬ ಊಹಾಪೋಹಗಳನ್ನು ಒಬ್ಬರು ನನ್ನ ಬಳಿ ಹೇಳಿದರು. ಆಗ ನಾನು ಹೇಳಿದೆ, “ನನಗೆ ಕೋಟ್ಯಾಂತರ ತಾಯಂದಿರ ಮತ್ತು ಸಹೋದರಿಯರ ಆರ್ಶೀವಾದವಿದೆ. ಆ ರಕ್ಷಾ ಕವಚವಿರುವುದರಿಂದ ಯಾರೂ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ” ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ; ಕಾಂಗ್ರೆಸ್ ಚಿಂತನ್ ಶಿಬಿರ: ಒಂದು ಕುಟುಂಕ್ಕೆ ಒಂದು ಟಿಕೆಟ್, ನಾಯಕತ್ವಕ್ಕೆ ವಯಸ್ಸಿನ ಮಿತಿ, ನಿವೃತ್ತಿ ಬಗ್ಗೆ ಚರ್ಚೆ ಸಾಧ್ಯತೆ
ಸದ್ಯ ಬಿಜೆಪಿ 75 ವರ್ಷ ದಾಟಿದವರು ಅಧಿಕಾರದ ಸ್ಥಾನಗಳಲ್ಲಿ ಇರಬಾರದು ಎಂಬ ನಿಯಮ ಘೋಷಿಸಿದೆ. ಹಾಗೆ ನೋಡಿದರೆ 2024ರ ಚುನಾವಣೆ ಹೊತ್ತಿಗೆ ನರೇಂದ್ರ ಮೋದಿಯವರಿಗೆ 74 ವರ್ಷ ತುಂಬಿರುತ್ತದೆ. ಅವರು ಪ್ರಧಾನಿಯಾದರೆ 79 ವರ್ಷದವರೆಗೂ ಅಧಿಕಾರದಲ್ಲಿ ಇದ್ದ ಹಾಗೆ ಆಗುತ್ತದೆ. ಅದು ಬಿಜೆಪಿಯ ನಿಯಮವನ್ನು ಉಲ್ಲಂಘಿಸಿದಂತೆ ಆಗುವುದಿಲ್ಲವೇ ಎಂಬ ಪ್ರಶ್ನೆಗಳು ಸಹ ಎದ್ದಿವೆ.
Country will go to gutters.