HomeಅಂಕಣಗಳುKarnataka against SIRರಾಜ್ಯದಾದ್ಯಂತ ಫಾರಂ-7ರ ಮೂಲಕ ವೋಟ್ ಡಿಲೀಟ್ ಮಾಡಿಸುತ್ತಿರುವ ಬಿಜೆಪಿಗರು : ಮಾಹಿತಿ ನೀಡಲು ಸಿಎಂ ಡಿ.ಕೆ...

ರಾಜ್ಯದಾದ್ಯಂತ ಫಾರಂ-7ರ ಮೂಲಕ ವೋಟ್ ಡಿಲೀಟ್ ಮಾಡಿಸುತ್ತಿರುವ ಬಿಜೆಪಿಗರು : ಮಾಹಿತಿ ನೀಡಲು ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

- Advertisement -
- Advertisement -

ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಫಾರಂ ನಂಬರ್ -7 ಸಲ್ಲಿಸುವ ಮೂಲಕ ಅಲ್ಪಸಂಖ್ಯಾತರು, ದಲಿತರು ಮತ್ತು ಬಡವರ ಮತಗಳನ್ನು ಡಿಲೀಟ್ ಮಾಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.

ಬುಧವಾರ (ಸೆ.30) ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಬಿಜೆಪಿ ಹೈಕಮಾಂಡ್ ಮತ್ತು ಸ್ಥಳೀಯ ನಾಯಕರ ನಿರ್ದೇಶನದ ಮೇರೆಗೆ ಫಾರಂ-7 ಸಲ್ಲಿಸಿ ಮತಗಳನ್ನು ಡಿಲೀಟ್ ಮಾಡಿಸುವ ಕುತಂತ್ರ ರಾಜ್ಯದಾದ್ಯಂತ ನಡೆಯುತ್ತಿದೆ ಎಂದು ಸಿಎಂ ಹೇಳಿದ್ದಾರೆ.

“ಇಡೀ ದೇಶ ಎಸ್‌ಐಆರ್ ಪ್ರಕ್ರಿಯೆಯನ್ನು ನೋಡಿ ತಲ್ಲಣಗೊಂಡಿದೆ. ನಾನು ನಿಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ, ಒಬ್ಬ ಪ್ರಜಾಸೇವಕನಾಗಿ ನಿಮ್ಮೆಲ್ಲರ ಮತವನ್ನು ಕಾಪಾಡುವ ಪ್ರಯತ್ನ ಮಾಡುತ್ತಿದ್ದೇನೆ. ಆದರೂ, ಈ ವಿಚಾರದಲ್ಲಿ ವಿಫಲನಾಗಿದ್ದೇನೆ. ಇದನ್ನು ನಾನು ಒಪ್ಪಿಕೊಳ್ಳಲೇಬೇಕಾಗಿದೆ” ಎಂದು ಸಿಎಂ ಹೇಳಿಕೊಂಡಿದ್ದಾರೆ.

“ಎಸ್‌ಐಆರ್‌ನಿಂದ ಸುಮಾರು ಒಂದು ಕೋಟಿಗೂ ಹೆಚ್ಚು ಮತಗಳು ಕಡಿಮೆಯಾಗಿರುವುದು ನೀವೆಲ್ಲ ಗಮನಿಸಿರಬಹುದು. 50 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ಕೊಡಲಾಗ್ತಿದೆ. ಹಕ್ಕು-ಆಕ್ಷೇಪಣೆ ಸಲ್ಲಿಕೆ ಅವಧಿಯಲ್ಲಿ ಕೆಲವು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು, ಬಿಜೆಪಿ ಹೈಕಮಾಂಡ್‌ ಹಾಗೂ ಸ್ಥಳೀಯ ನಾಯಕರ ನಿರ್ದೇಶನದ ಮೇರೆಗೆ ಅಲ್ಪಸಂಖ್ಯಾತರು, ಬಡವರು, ದಲಿತರ ಮತಗಳನ್ನು ತೆಗೆದು ಹಾಕಲು ಫಾರಂ ನಂಬರ್-7 ಸಲ್ಲಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

“ಮೋಸದಿಂದ ಫಾರಂ-7 ಸಲ್ಲಿಸಿರುವ ಬಗ್ಗೆ ನಮ್ಮ ಅನೇಕ ನಾಯಕರು ದಾಖಲೆಗಳನ್ನು ಕೊಟ್ಟಿದ್ದಾರೆ. ಈ ವಿಚಾರವಾಗಿ ಒಂದು ಸಮಗ್ರವಾದ ತನಿಖೆ ಮತ್ತು ಕಾನೂನು ಚೌಕಟ್ಟಿನಲ್ಲಿ ಕ್ರಿಮಿನಲ್ ತನಿಖೆ ಅಗತ್ಯವಿದೆ” ಎಂದು ಸಿಎಂ ಹೇಳಿದ್ದಾರೆ.

“ರಾಜ್ಯದ ಮುಖ್ಯಮಂತ್ರಿಯಾಗಿ ನಿಮ್ಮೆಲ್ಲರ ಮತಗಳನ್ನು ಕಾಪಾಡುವುದು ನನ್ನ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಿಎಲ್‌ಎ-1 ಮತ್ತು ಬಿಎಲ್‌ಎ-2ಗಳು ಬಿಎಲ್‌ಒಗಳಿಗೆ ಫಾರಂ-7 ಸಲ್ಲಿಸಿ ವೋಟ್ ಡಿಲೀಟ್ ಮಾಡಿಸುತ್ತಿರುವ ಮಾಹಿತಿಗಳನ್ನು ಕೂಡಲೇ ನನ್ನ ಕಚೇರಿಗೆ ತಲುಪಿಸಿ ಎಂದು ಸಿಎಂ ಸೂಚಿಸಿದ್ದಾರೆ.

“ನಾನು ನಾಳೆ (ಅ.1) ಖುದ್ದಾಗಿ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ಚರ್ಚಿಸುತ್ತೇನೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಅನೇಕ ಸಂಗತಿಗಳೊಂದಿಗೆ ಈ ವಿಚಾರವನ್ನು ಬಯಲಿಗೆಳೆಯಲು ನಾನು ಸಿದ್ದನಾಗಿದ್ದೇನೆ” ಎಂದು ತಿಳಿಸಿದ್ದಾರೆ.

“ನಿಮ್ಮೆಲ್ಲರ ಮತಗಳನ್ನು ತೆಗೆದುಹಾಕಲು ಬಿಜೆಪಿ ಕಾರ್ಯಕರ್ತರು, ಅನೇಕ ಚುನಾವಣೆಗಳಲ್ಲಿ ಸೋತವರು ಈ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಹಾಲಿ ಶಾಸಕರ ಕ್ಷೇತ್ರಗಳಲ್ಲೇ ಮತಗಳನ್ನು ಡಿಲೀಟ್ ಮಾಡುವ ಕಾರ್ಯ ಆಗುತ್ತಿದೆ. ಈಶ್ವರ್ ಖಂಡ್ರೆ ಅವರ ಭಾಲ್ಕಿ ವಿಧಾನಸಭಾ ಕ್ಷೇತ್ರ, ನಯನ ಮೋಟಮ್ಮ ಅವರ ಕ್ಷೇತ್ರ, ಮಾಜಿ ಶಾಸಕ ಸೋಮಶೇಖರ್ ಕ್ಷೇತ್ರ, ತನ್ವೀರ್ ಸೇಠ್, ರಾಜು ಸೇಠ್ ಅವರ ಕ್ಷೇತ್ರಗಳಲ್ಲಿ ವೋಡ್ ಡಿಲೀಟ್ ಮಾಡಿಸಲಾಗುತ್ತಿದೆ” ಎಂದು ಸಿಎಂ ವಿವರಿಸಿದ್ದಾರೆ.

“ಇಡೀ ರಾಜ್ಯದಲ್ಲಿ ಇದೊಂದು ದೊಡ್ಡ ಕುತಂತ್ರ ನಡೆಯುತ್ತಿದೆ. ಹಾಗಾಗಿ, ಎಲ್ಲಾ ಕಾಂಗ್ರೆಸ್ ಬಿಎಲ್‌ಎಗಳು ಕೂಡಲೇ ಜಾಗೃತರಾಗಿ ಎಲ್ಲೆಲ್ಲಿ ಫಾರಂ-7 ಸಲ್ಲಿಕೆಯಾಗಿದೆ ಎಂಬುವುದರ ಮಾಹಿತಿ ಕೊಡಿ” ಎಂದು ಮನವಿ ಮಾಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘TCS ಮೇಲೆ ಒತ್ತಡ ಹೇರಲಾಗಿತ್ತೇ?’ : ಆನ್‌ಲೈನ್ ಫಾರಂ-6ರ ಬದಲಾವಣೆಗಳ ಕುರಿತು ಚುನಾವಣಾ ಆಯೋಗವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ

ಹೊಸ ಮತದಾರರ ನೋಂದಣಿಗೆ ಬಳಸಲಾಗುವ ಆನ್‌ಲೈನ್ ಫಾರಂ ನಂಬರ್-6ರಲ್ಲಿ ಮಾಡಲಾದ ವಿವಾದಾತ್ಮಕ ಬದಲಾವಣೆಗಳ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ (ಅ.1) ಭಾರತೀಯ ಚುನಾವಣಾ ಆಯೋಗದಿಂದ ಉತ್ತರವನ್ನು...

ಉಜ್ಜಯಿನಿ ಶಾಹಿ ಮಸೀದಿ ಧ್ವಂಸ ಮೂರನೇ ದಿನಕ್ಕೆ: 14 ಮುಸ್ಲಿಮರ ಬಂಧನ, 30ಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣ

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯ ಐತಿಹಾಸಿಕ ಶಾಹಿ ಮಸೀದಿ ಧ್ವಂಸ ಪ್ರಕರಣ ಮೂರನೇ ದಿನಕ್ಕೂ ಮುಂದುವರಿದಿದ್ದು, ಮಸೀದಿಯ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಮತ್ತು ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಸೋಮವಾರ ಮಸೀದಿಯ ನೇತಾಡುವ ಚಪ್ಪಡಿಯ ಒಂದು...

ಹೈದರಾಬಾದ್ ವಿವಿ ಚುನಾವಣೆ: ABVPಗೆ ಮುಖಭಂಗ, ಅಧ್ಯಕ್ಷೆಯಾಗಿ SFIನ ದಿಲ್ಶಾದಾ ರೈಹಾನ್ ಭರ್ಜರಿ ಜಯ

ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಯಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ (HCU) ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಬಲಪಂಥೀಯ ವಿದ್ಯಾರ್ಥಿ ಸಂಘಟನೆ ಎಬಿವಿಪಿಗೆ ಭಾರಿ ಹಿನ್ನಡೆಯಾಗಿದೆ. ಎಡಪಂಥೀಯ ಹಾಗೂ ದಲಿತ-ಬಹುಜನ ವಿದ್ಯಾರ್ಥಿ ಸಂಘಟನೆಗಳನ್ನೊಳಗೊಂಡ ಐಸಾ-ಎಎಸ್‌ಎ-ಡಿಎಸ್‌ಯು-ಎಸ್‌ಎಫ್‌ಐ-ಟಿಎಸ್‌ಎಫ್...

ಗ್ಯಾನೇಶ್ ಕುಮಾರ್ ನಿವಾಸದ ಬಳಿ ಪ್ರತಿಭಟನೆ: 6 ಕಾಂಗ್ರೆಸ್ ನಾಯಕರ ಬಂಧನ, 20 ಕಾರ್ಯಕರ್ತರ ವಿರುದ್ಧ ಕೊಲೆ ಯತ್ನದ ಆರೋಪ

ಆಗ್ರಾ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಆಗ್ರಾದಲ್ಲಿರುವ ಪೋಷಕರ ಪೈತೃಕ ನಿವಾಸದ ಹೊರಗೆ ನಡೆದ ಕಾಂಗ್ರೆಸ್ ಪ್ರತಿಭಟನೆ ಇದೀಗ ಗಂಭೀರ ಕಾನೂನು ಸಂಘರ್ಷಕ್ಕೆ ತಿರುಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ...

₹92,000 ಕೋಟಿ ವೆಚ್ಚದ ಗ್ರೇಟ್ ನಿಕೋಬಾರ್ ಯೋಜನೆ: ಕಲ್ಕತ್ತಾ ಹೈಕೋರ್ಟ್ ವಿಚಾರಣೆಗೆ ತಡೆ ಕೋರಿದ ಕೇಂದ್ರ ಸರ್ಕಾರ!

ಅಂದಾಜು ₹92,000 ಕೋಟಿ ವೆಚ್ಚದ ವಿವಾದಾತ್ಮಕ 'ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ'ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕಾನೂನಾತ್ಮಕವಾಗಿ ಅತ್ಯಂತ ಅಚ್ಚರಿಯ ಉಲ್ಟಾ ನಿಲುವು ತಳೆದಿದೆ. ಈ ಯೋಜನೆಯಲ್ಲಿ ಅರಣ್ಯ ಹಕ್ಕುಗಳ ಕಾಯಿದೆ...

SIR | ಫಾರಂ-8ರ ಬದಲು ಫಾರಂ-6 ಸಲ್ಲಿಸುವಂತೆ ಒತ್ತಡ : ಒಂದೇ ಕುಟುಂಬದ 6 ಜನರ ವೋಟ್ ಡಿಲೀಟ್; ಚುನಾವಣಾ ಆಯೋಗಕ್ಕೆ ಬಾಂಬೆ ಹೈಕೋರ್ಟ್ ತಪರಾಕಿ

ಗೋವಾದ ಸಾಂತಾ ಕ್ರೂಝ್ ಮತಕ್ಷೇತ್ರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಸಂದರ್ಭದಲ್ಲಿ, ಒಂದು ಕುಟುಂಬದ ಆರು ಸದಸ್ಯರು ತಮ್ಮ ವಿಳಾಸ ಬದಲಾವಣೆಯನ್ನು ತಿಳಿಸಲು 'ಫಾರ್ಮ್ 8' ಸಲ್ಲಿಸಿದ್ದರೂ ಸಹ, ಮತದಾರರ ಪಟ್ಟಿಯಿಂದ...

ಚುನಾವಣಾ ಆಯೋಗದ ವಿರುದ್ಧ ವ್ಯಂಗ್ಯಚಿತ್ರ: ಸತೀಶ್ ಆಚಾರ್ಯ Instagram ಖಾತೆಗೆ ಭಾರತದಲ್ಲಿ ನಿರ್ಬಂಧ; ಮಂಜುಲ್‌ಗೂ ತಡೆ

ನವದೆಹಲಿ: ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದ ರಾಜಕೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ Instagram ಖಾತೆಗೆ ಭಾರತದಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಇದೇ ವೇಳೆ ಮತ್ತೊಬ್ಬ...

ಎಸ್‌ಐಆರ್ ಹಾಗೂ ಚುನಾವಣಾ ಆಯೋಗದ ಅಕ್ರಮ ಖಂಡಿಸಿ ‘ಇಂಡಿಯಾ’ ಮೈತ್ರಿಕೂಟದ ರಾಷ್ಟ್ರವ್ಯಾಪಿ ಅಭಿಯಾನ: ಪ್ರಜಾಪ್ರಭುತ್ವ ರಕ್ಷಣೆಗೆ ವಿಪಕ್ಷಗಳಿಂದ 6 ಪ್ರಮುಖ ಬೇಡಿಕೆಗಳು!

ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಅಕ್ರಮಗಳು, 'ಫಾರ್ಮ್ 6' ನಮೂನೆಯಲ್ಲಿ ಸಾಫ್ಟ್‌ವೇರ್ ಮೂಲಕ ತಂದಿದ್ದ ಅಡೆತಡೆಗಳು ಹಾಗೂ ಮತದಾರರ ಪಟ್ಟಿಯಿಂದ ಅರ್ಹರ ಹೆಸರು ರದ್ದುಗೊಳಿಸಿರುವ ಕ್ರಮಗಳನ್ನು ಖಂಡಿಸಿ 'ಇಂಡಿಯಾ'...

ಮ್ಯಾನ್ಮಾರ್‌ನಲ್ಲಿ ಜನನಿಬಿಡ ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ: 50ಕ್ಕೂ ಹೆಚ್ಚು ಸಾವು; ಗಡೀಪಾರು ನಿಲ್ಲಿಸಲು ಮಲೇಷ್ಯಾಕ್ಕೆ ವಿಶ್ವಸಂಸ್ಥೆ ಕರೆ

ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಜನನಿಬಿಡ ಮಾರುಕಟ್ಟೆಯ ಮೇಲೆ ನಡೆದ ಮಿಲಿಟರಿ ವೈಮಾನಿಕ ದಾಳಿಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಲ್ಕರ್ ಟರ್ಕ್ ತೀವ್ರವಾಗಿ ಖಂಡಿಸಿದ್ದಾರೆ. ಕ್ಯುಕ್ತಾವ್ ಪಟ್ಟಣದಲ್ಲಿ ನಡೆದ ಈ ದಾಳಿಯಲ್ಲಿ ಮಹಿಳೆಯರು...

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಶಿಕ್ಷಣ ಕ್ಷೇತ್ರದಲ್ಲಿ RSS ಕಾರ್ಯಸೂಚಿಗಳನ್ನು ತಡೆಯುವಂತೆ ಖರ್ಗೆ-ರಾಹುಲ್ ಸೂಚನೆ

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಶಿಕ್ಷಣ ಕ್ಷೇತ್ರದಲ್ಲಿ ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರದ ವಿಭಜಕ ಮತ್ತು ಕೋಮು ಕಾರ್ಯಸೂಚಿಯನ್ನು ಜಾರಿಗೆ ತರುವುದನ್ನು ತಕ್ಷಣವೇ ತಡೆಯಬೇಕು ಹಾಗೂ ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ, ಜಾತ್ಯತೀತ ಶಿಕ್ಷಣ ನೀತಿಗಳನ್ನು...