Homeಕರ್ನಾಟಕಮಂಡ್ಯ ಭಾಗದಲ್ಲಿ ಗಲಾಟೆಯ ಮೂಲಕವೇ ಬಿಜೆಪಿ ಅಸ್ತಿತ್ವಕ್ಕೆ ಬರಲು ಯತ್ನಿಸುತ್ತಿದೆ: ಸಚಿವ ಹೆಚ್‌.ಸಿ ಮಹದೇವಪ್ಪ

ಮಂಡ್ಯ ಭಾಗದಲ್ಲಿ ಗಲಾಟೆಯ ಮೂಲಕವೇ ಬಿಜೆಪಿ ಅಸ್ತಿತ್ವಕ್ಕೆ ಬರಲು ಯತ್ನಿಸುತ್ತಿದೆ: ಸಚಿವ ಹೆಚ್‌.ಸಿ ಮಹದೇವಪ್ಪ

- Advertisement -
- Advertisement -

ಮಂಡ್ಯ ಭಾಗದಲ್ಲಿ ಗಲಾಟೆಯ ಮೂಲಕವೇ ಬಿಜೆಪಿ ಅಸ್ತಿತ್ವಕ್ಕೆ ಬರಲು ಯತ್ನಿಸುತ್ತಿದ್ದು, ತನ್ನ ಮೈತ್ರಿಕೂಟದ ಜೆಡಿಎಸ್ ಪಕ್ಷಕ್ಕೆ ನೆಪ ಮಾತ್ರಕ್ಕೆ ಇರುವ ಜಾತ್ಯಾತೀತ ಎಂಬ ರೆಕ್ಕೆಗಳನ್ನೂ ಸಹ ಒಂದೊಂದಾಗಿ ಕಿತ್ತು ಹಾಕುವ ಕೆಲಸ ಮಾಡುತ್ತಿದೆ. ಬಹುಶಃ ಮುಂದೆ ಬಿಜೆಪಿಯೊಂದಿಗೆ ವಿಲೀನಗೊಳ್ಳಲು ಸಜ್ಜಾದಂತೆ ಇರುವ ಜೆಡಿಎಸ್ ನವರಿಗೂ ಅದೇ ಬೇಕಾದಂತೆ ಕಾಣುತ್ತಿದ್ದು, ಇವರ ಬಗ್ಗೆ ಜನ ಸಾಮಾನ್ಯರು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ಮತ್ತು ಸಮಾಜದಲ್ಲಿ ಇರಲೇಬೇಕಾದ ಸಂವಿಧಾನಿಕ ಐಕ್ಯತೆಯ ಮಹತ್ವವನ್ನು ಅರಿಯಬೇಕು ಎಂದು ಸಚಿವ ಹೆಚ್‌.ಸಿ ಮಹದೇವಪ್ಪ ಹೇಳಿದ್ದಾರೆ.

ಮದ್ದೂರಿನ ಉದ್ವಿಗ್ನತೆಯ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಸಚಿವರು, “2016ರಿಂದ 2018ರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ನಡೆಸಲು ಹೂಡಿದ ತಂತ್ರ ಮತ್ತು ಕುತಂತ್ರದ ಹೆಸರೇ ಇದು ‘ಹಿಂದೂ ವಿರೋಧಿ ಸರ್ಕಾರ ಎಂಬುದು”.

“ಈ ಕುತಂತ್ರ ಆರಂಭಗೊಂಡ ದಿನದಿಂದ ಹಲವು ಅಮಾಯಕರ ಸಾವುಗಳು ಸಂಭವಿಸಿದವು. ಶಿರಸಿಯ ಪರೇಶ್ ಮೇಸ್ತಾ ಎಂಬ ಯುವಕನಿಂದ ಆರಂಭಗೊಂಡು ಶರತ್ ಮಡಿವಾಳ ಎಂಬ ಯುವಕನವರೆಗೆ ಜರುಗಿದ ಸಾವುಗಳು ಮತ್ತು ಅವುಗಳ ವಿಷಯದಲ್ಲಿ ಬಿಜೆಪಿಯು ಮಾಡಿದ ಶವ ರಾಜಕೀಯವು ಇಂದಿಗೂ ನಮ್ಮ ಕಣ್ಣ ಮುಂದಿದೆ” ಎಂದಿದ್ದಾರೆ.

“ಪರೇಶ್ ಮೇಸ್ತಾ ವಿಷಯದಲ್ಲಿ ಸಿಬಿಐ ತನಿಖೆಯು ಜರುಗಿ ಕಡೆಗೆ ಅದು ಕೊಲೆಯಲ್ಲ, ಸಹಜ ಸಾವು ಎಂದು ವರದಿ ಬಂದಿತು. ಇನ್ನು ಚುನಾವಣೆ ಸಂದರ್ಭದಲ್ಲಿ ಸತ್ತವರ ಮನೆಯನ್ನು ಬಳಸಿ ರಾಜಕೀಯ ಮಾಡಿದ ಬಿಜೆಪಿಗರು ನಂತರ ಅತ್ತ ಸುಳಿಯಲೂ ಇಲ್ಲ. ಇದನ್ನು ನಾನಲ್ಲ ಬದಲಿಗೆ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರೇ ಹಿಂದೆ ಹೇಳಿದ್ದಾರೆ” ಎಂದು ತಿಳಿಸಿದ್ದಾರೆ.

“ಇದೀಗ ನಾಡಿನ ಐಕ್ಯತೆಗಾಗಿ ಮಾಡಬೇಕಿದ್ದ ದಸರಾ ಮತ್ತು ಗಣೇಶ ಹಬ್ಬವನ್ನೂ ಕೂಡಾ ಧರ್ಮದ ಕಲಹಕ್ಕೆ ಬಳಸಿಕೊಳ್ಳುವ ಕೆಲಸವನ್ನು ಮಾಡಲು ಆರಂಭಿಸಿರುವ ಬಿಜೆಪಿಗರು, ಚುನಾವಣಾ ಅಧಿಕಾರವನ್ನು ಪಡೆಯಲು ಜನಪರ ಪ್ರಣಾಳಿಕೆಗಳನ್ನು ಮುಂದೆ ತಾರದೇ ಕೇವಲ ಹಿಂದೂ – ಮುಸ್ಲಿಂ ಜಗಳವನ್ನು ಮುನ್ನಲೆಗೆ ತರುತ್ತಿರುವುದನ್ನು ನೋಡಿದರೆ ಇವರಿಗೆ ಯಾವುದೇ ಸಾಮಾಜಿಕ ಮತ್ತು ರಾಜಕೀಯ ಜವಾಬ್ದಾರಿ ಇಲ್ಲ ಎಂಬ ಸಂಗತಿಯು ಸ್ಪಷ್ಟವಾಗಿ ಅರಿವಾಗುತ್ತಿದೆ” ಎಂದು ಟೀಕಿಸಿದ್ದಾರೆ.

“ಕೊರೋನಾ ಸಂದರ್ಭದಲ್ಲಿ ಸಾಮಾನ್ಯ ಜನರು ಅನುಭವಿಸಿದ ಬವಣೆಯ ಬಗ್ಗೆ ಎಲ್ಲರಿಗೂ ಗೊತ್ತು.‌ ಕನಿಷ್ಠ ಪಕ್ಷ ಮನೆಯಿಂದ ಹೊರಗೆ ಬಾರದ ಸ್ಥಿತಿ, ದುಡಿಯಲು ಆಗದ ಸ್ಥಿತಿ ಮತ್ತು ಮನುಷ್ಯರನ್ನು ಪರಸ್ಪರ ಮುಟ್ಟಿಸಿಕೊಳ್ಳಲೂ ಆತಂಕದ ಸ್ಥಿತಿಯ ನಡುವೆ ಬಿಜೆಪಿಗರ ಕೊರೋನಾ ಭ್ರಷ್ಟಾಚಾರಕ್ಕೆ ಸಿಲುಕಿ ಜನ ತತ್ತರಿಸಿದ್ದರು. ದುಡಿಯುವ ಜನರ ಪ್ರಾಥಮಿಕ ಬದುಕು ಇಷ್ಟೊಂದು ತೊಂದರೆಗೆ ಒಳಗಾಗಿದ್ದರಿಂದಲೇ ನಮ್ಮ ಸರ್ಕಾರವು ಅವರಿಗೆ ಗ್ಯಾರಂಟಿ ರೂಪದಲ್ಲಿ ಅವರ ಬದುಕಿಗೆ ಕನಿಷ್ಠ ಆದಾಯವನ್ನು ನಿಗದಿ ಪಡಿಸಿತು. ಈ ಸಮಸ್ಯೆಯು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನದೇ ಎಲ್ಲ ಪಕ್ಷದ ಜನರಿಗೂ ಸಮಾನವಾಗಿತ್ತು. ಆದರೆ, ಈಗ ನೋಡಿದರೆ ಇದ್ಯಾವುದರ ಪರಿವೆಯೇ ಇಲ್ಲದೇ ಇವರು ಈ ರೀತಿ ಕಲಹ ಎಬ್ಬಿಸುವುದನ್ನು ನೋಡಿದರೆ ಇವರು ಕಾಲ ಕಲಿಸುವ ಪಾಠದಿಂದ ಏನು ಕಲಿತರೆಂದು ಗೊಂದಲವಾಗುತ್ತದೆ” ಎಂದಿದ್ದಾರೆ.

“ಇನ್ನು ಸಾಮಾಜಿಕವಾಗಿ ನೋಡುವಾಗಲೂ ಹಿಂದುಳಿದ ವರ್ಗಗಳ ಕೈಲಿ ಇರುವ ಅಧಿಕಾರಕ್ಕೆ ಪಡುವ ಅಸೂಯೆಯೂ ಕೂಡಾ ಇಂತಹ ಗಲಭೆಗಳಿಗೆ ಮುಖ್ಯ ಕಾರಣ ಎಂದು ನನಗೆ ಅನಿಸುತ್ತದೆ. ಅದಕ್ಕಾಗಿಯೇ ಇವರು ಮುಸ್ಲಿಂ ಮತ್ತು ಕ್ರೈಸ್ತರ ಯಾವ ವಿಷಯವನ್ನೂ ಕೂಡಾ ರಾಜಕೀಯ ಮಾಡದೇ ಬಿಡಲು ಸಿದ್ಧರಿಲ್ಲ. ದೇಶಕ್ಕೆ ಬೂಕರ್ ಪ್ರಶಸ್ತಿಯನ್ನು ಕೊಡಿಸಿದ ವ್ಯಕ್ತಿಯ ವಿಷಯದಲ್ಲೂ ಕನಿಷ್ಠ ಪ್ರೀತಿ ಗೌರವ ಇಟ್ಟುಕೊಳ್ಳದ ಕನ್ನಡದ ಲೇಖಕಿಯ ವಿಷಯದಲ್ಲೂ ರಾಜಕೀಯ ಮಾಡುತ್ತಾರೆಂದರೆ ಇವರಿಗೆ ಇನ್ನೇನು ಹೇಳಬೇಕೆಂದು ತಿಳಿಯದಾಗಿದೆ”ಎಂದು ಹೇಳಿದ್ದಾರೆ.

“ಅತ್ತ ಸರ್ಕಾರ ಬಂದಾಗಿನಿಂದಲೂ ‘ಭಾರತೀಯ ಜನಗಳಾದ ನಾವು’ ಎಂಬ ಭಾವನೆಯನ್ನು ಮೂಡಿಸಲು, ಸಂವಿಧಾನದ ಪೀಠಿಕೆಯನ್ನು ಓದಿಸುವುದು, ಎಲ್ಲರನ್ನೂ ಒಳಗೊಂಡ ಹಾಗೆ ಮಾನವ ಸರಪಳಿಯನ್ನು ರಚಿಸುವ ಕೆಲಸದ ಜೊತೆಗೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಮಾಡುವ ಪ್ರಯತ್ನವನ್ನು ಮಾಡಲಾಗಿದೆ.ಹೀಗಿದ್ದರೂ, ಕೂಡಾ ಇವರು ಭಾವೈಕ್ಯತೆಯನ್ನು ಮೂಲೆಗೆ ಎಸೆದು ಮತ್ತೆ ಮತ್ತೆ ಐಕ್ಯತೆಗಾಗಿಯೇ ಆಚರಿಸಲ್ಪಡುವ ಗಣೇಶ ಹಬ್ಬವನ್ನೂ ಕೂಡಾ ಜನಾಂಗೀಯ ಮತ್ತು ಧಾರ್ಮಿಕ ದ್ವೇಷಕ್ಕಾಗಿ ಬಳಸುವುದು ಬಹು ಅಪಾಯಕಾರಿ ಸಂಗತಿ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

“ಚುನಾವಣೆಗಾಗಿಯೇ ನಡೆಸಲಾಗುವ ಗಲಭೆಗಳಲ್ಲಿ ಎಲ್ಲಿಯೂ ಸಹ ದುಡಿದು ತಿನ್ನುವ ಜನರು ಇಲ್ಲ. ಅವರಿಗೆ ಈ ಸಂಗತಿಯಲ್ಲಿ ಕನಿಷ್ಠ ಆಸಕ್ತಿಯೂ ಇಲ್ಲ ಎಂಬುದನ್ನು ಬಿಜೆಪಿಗರು ಅರ್ಥ ಮಾಡಿಕೊಳ್ಳಬೇಕು. ಇಲ್ಲ ಜನರ ಬದುಕು ನಮಗೆ ಅನವಶ್ಯಕ, ಗಲಭೆ ಎಬ್ಬಿಸುವುದೇ ನಮ್ಮ ಜೀವನದ ಏಕೈಕ ಗುರಿ ಎಂದು ಬಿಜೆಪಿಗರು ಭಾವಿಸಿದರೆ ಅದನ್ನು ನಿಯಂತ್ರಿಸುವುದು ಸರ್ಕಾರಕ್ಕೆ ಕಷ್ಟವೇನಲ್ಲ ಎಂಬುದು ಎಲ್ಲರಿಗೂ ಗೊತ್ತು” ಎಂದು ಹೆಚ್‌.ಸಿ ಮಹದೇವಪ್ಪ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಮದ್ದೂರು ಕಲ್ಲು ತೂರಾಟ ಪ್ರಕರಣ: 21 ಜನರ ಬಂಧನ, ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...