ಬಿಜೆಪಿ ಸಚಿವನ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ: ರಾಜೀನಾಮೆಗೆ ಹೆಚ್ಚಿದ ಒತ್ತಡ

ಶಾಸಕನೊಬ್ಬ ಸ್ಯಾನಿಟೈಸರ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಾಟಕೀಯ ಘಟನೆ ಒಡಿಶಾ ವಿಧಾನಸಭೆಯಲ್ಲಿ ಶುಕ್ರವಾರ ನಡೆದಿದೆ. ಬಿಜೆಪಿ ಶಾಸಕ ಸುಬಾಶ್ ಪಾನಿಗ್ರಾಹಿ ವಿಧಾನಸಭಾ ಅಧಿವೇಶನದ ಸಮಯದಲ್ಲೆ ಈ ಕೃತ್ಯವನ್ನು ಎಸಗಿದ್ದಾರೆ.

ರಾಜ್ಯದಲ್ಲಿ ಭತ್ತ ಸಂಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಪಕ್ಷದ ಅಧೀಕೃತ ಟಿಕೆಟ್ ಘೋಷಣೆಗೂ ಮುನ್ನ ನಾಮಪತ್ರ ಸಲ್ಲಿಸಿದ ತಮಿಳುನಾಡು ಬಿಜೆಪಿ ಉಪಾಧ್ಯಕ್ಷ!

“ಡೆಬ್ಬಡ್ ಪ್ರದೇಶದಲ್ಲಿ ಭತ್ತ ಸಂಗ್ರಹಣೆ ನಡೆಯುತ್ತಿಲ್ಲ. 2 ಲಕ್ಷ ಕ್ವಿಂಟಲ್ ಭತ್ತ ಮಾರಾಟವಾಗದೆ ಬಿದ್ದಿದೆ. ಈ ವಿಷಯದ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಸ್ಯಾನಿಟೈಸರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆ” ಎಂದು ಪಾನಿಗ್ರಾಹಿ ಅಧಿವೇಶನದ ನಂತರ ತಿಳಿಸಿದ್ದಾರೆ.

ಒಡಿಶಾ ವಿಧಾನಸಭೆಯ ಬಜೆಟ್ ಅಧಿವೇಶನ ಫೆಬ್ರವರಿ 18 ರಂದು ಪ್ರಾರಂಭವಾಗಿತ್ತು. ರಾಜ್ಯದಲ್ಲಿ ಫೆಬ್ರವರಿ 22 ರಂದು ಬಜೆಟ್ ಮಂಡಿಸಲಾಗಿತ್ತು. ಅಧಿವೇಶನವು ಏಪ್ರಿಲ್ 9 ರವರೆಗೆ ಎರಡು ಹಂತಗಳಲ್ಲಿ ಮುಂದುವರಿಯುತ್ತದೆ. ನಡೆಯುತ್ತಿರುವ ಅಧಿವೇಶನ ಮಾರ್ಚ್ 11 ರಿಂದ ಮಾರ್ಚ್ 31 ರವರೆಗೆ ನಡೆಯುತ್ತದೆ.

ಇದನ್ನೂ ಓದಿ: ಅತ್ಯಾಚಾರದಿಂದ ಗರ್ಭಿಣಿಯಾದ ಸಂತ್ರಸ್ತೆಗೆ ಕಾನೂನು ಹಕ್ಕುಗಳ ಬಗ್ಗೆ ತಿಳಿಸಬೇಕು- ಸುಪ್ರೀಂ

ರೈತರಿಗೆ ಸಬ್ಸಿಡಿ ಎಂಬುದು ಸುಳ್ಳು. ಬದಲಿಗೆ ರೈತರೇ ಸರ್ಕಾರಕ್ಕೆ ಸಬ್ಸಿಡಿ ನೀಡುತ್ತಿದ್ದಾರೆ; ವಿಡಿಯೋ ನೋಡಿ

LEAVE A REPLY

Please enter your comment!
Please enter your name here