ಬಿಜೆಪಿಯು ಆದಷ್ಟು ಬೇಗ ಸಾವರ್ಕರ್‌ರನ್ನು ರಾಷ್ಟ್ರಪಿತ ಎಂದು ಘೋಷಿಸಲಿದೆ: ಓವೈಸಿ
PC: Scroll.in

’ಬಿಜೆಪಿಯು ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ಶೀಘ್ರದಲ್ಲೇ ರಾಷ್ಟ್ರಪಿತ ಎಂದು ಘೋಷಿಸಲಿದೆ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ. “ಮಹಾತ್ಮಾ ಗಾಂಧಿಯವರ ಕೋರಿಕೆಯ ಮೇರೆಗೆ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾದಾನ ಪತ್ರಗಳನ್ನು ಬರೆದಿದ್ದಾರೆ” ಎಂಬ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ

“ಹಿಂದುತ್ವದ ಪ್ರತಿಪಾದನೆಯ ಆದ್ಯ ಪ್ರವರ್ತಕರಲ್ಲಿ ಒಬ್ಬರಾದ ವಿ.ಡಿ.ಸಾವರ್ಕರ್‌‌ ಅವರು ಅಂಡಮಾನ್‌ ಜೈಲಿನಿಂದ ಹೊರಬರಲು ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆಯುವಂತೆ ಮಹಾತ್ಮ ಗಾಂಧೀಜಿಯವರು ಸಲಹೆ ನೀಡಿದ್ದರು. ಆದರೆ ಸಾವರ್ಕರ್‌ ಅವರನ್ನು ವಿರೋಧಿಸುವ ಸಿದ್ಧಾಂತಿಗಳು ಸಾವರ್ಕರ್‌ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ನೀಡಿದ ಕೊಡುಗೆಯನ್ನು ನಿಂದಿಸಿದ್ದು, ಅದನ್ನು ಇನ್ನು ಮುಂದೆ ಸಹಿಸುವುದಿಲ್ಲ” ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ANI ಯೊಂದಿಗೆ ಮಾತನಾಡಿರುವ ಅಸಾದುದ್ದೀನ್ ಓವೈಸಿ “ಬಿಜೆಪಿಯವರು ವಿಕೃತ ಇತಿಹಾಸವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇದು ಮುಂದುವರಿದರೆ, ಮಹಾತ್ಮ ಗಾಂಧಿಯನ್ನು ರಾಷ್ಟ್ರಪಿತ ಸ್ಥಾನದಿಂದ ತೆಗೆದುಹಾಕಿ, ಮಹಾತ್ಮಾ ಗಾಂಧಿಯವರ ಹತ್ಯೆಯ ಆರೋಪಿಯಾಗಿದ್ದ ಸಾವರ್ಕರ್‌ರನ್ನು ರಾಷ್ಟ್ರಪಿತ ಎಂದು ಘೋಷಿಸಲಿದ್ದಾರೆ. ಜೊತೆಗೆ ಅವರನ್ನು ನ್ಯಾಯಮೂರ್ತಿ ಜೀವನ್ ಲಾಲ್ ಕಪೂರ್‌ ಅವರ ವಿಚಾರಣೆಗೆ ಸಹಭಾಗಿ ಎಂದು ಘೋಷಿಸುತ್ತಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: BJP ಇನ್ನೂ ಯಾಕೆ ಸಾವರ್ಕರ್‌‌ಗೆ ಭಾರತ ರತ್ನ ನೀಡಿಲ್ಲ: ಶಿವಸೇನೆ ಪ್ರಶ್ನೆ

ಉದಯ್‌ ಮಹೂರ್‌ಕರ್‌‌ ಮತ್ತು ಚಿರಾಯು ಪಂಡಿತ್‌ ಅವರು ಬರೆದಿರುವ “ದಿ ಮ್ಯಾನ್‌ ವೂ ಕುಡ್‌ ಹ್ಯಾವ್‌ ಪ್ರಿವೆಂಟೆಂಡ್‌ ಪಾರ್ಟಿಷನ್‌‌” ಎಂಬ ಸಾವರ್ಕರ್‌ ಕುರಿತ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್, ಮಹಾತ್ಮ ಗಾಂಧಿಯವರ ಕೋರಿಕೆಯ ಮೇರೆಗೆ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾದಾನ ಪತ್ರಗಳನ್ನು ಬರೆದಿದ್ದಾರೆ ಎಂದು ಹೇಳಿದ್ದಾರೆ.

“ಸಾವರ್ಕರ್ ವಿರುದ್ಧ ಸಾಕಷ್ಟು ಸುಳ್ಳುಗಳನ್ನು ಹರಡಲಾಗಿದೆ. ಅವರು ಬ್ರಿಟಿಷ್ ಸರ್ಕಾರದ ಮುಂದೆ ಹಲವು ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದರು ಎಂದು ಪದೇ ಪದೇ ಹೇಳಲಾಗುತ್ತಿದೆ. ಸತ್ಯವೆಂದರೆ ಸಾವರ್ಕರ್‌ ಅವರು ತನ್ನ ಬಿಡುಗಡೆಗಾಗಿ ಈ ಅರ್ಜಿಗಳನ್ನು ಸಲ್ಲಿಸಿಲ್ಲ. ಸಾಮಾನ್ಯವಾಗಿ ಕೈದಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ಹಕ್ಕಿದೆ. ಸಾವರ್ಕರ್‌ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಮಹಾತ್ಮ ಗಾಂಧಿ ಹೇಳಿದ್ದರು. ಗಾಂಧಿಯವರ ಸಲಹೆಯ ಮೇರೆಗೆ ಅವರು ಕ್ಷಮಾದಾನ ಅರ್ಜಿ ಸಲ್ಲಿಸಿದರು. ಸಾವರ್ಕರ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಮಹಾತ್ಮಾ ಗಾಂಧಿಯವರು ಮನವಿ ಮಾಡಿದರು. ನಾವು ಸ್ವಾತಂತ್ರ್ಯಕ್ಕಾಗಿ ಚಳವಳಿಯನ್ನು ಶಾಂತಿಯುತವಾಗಿ ನಡೆಸುತ್ತಿದ್ದೇವೆ ಎಂದು ಗಾಂಧೀಜಿ ಹೇಳಿದ್ದರು, ಸಾವರ್ಕರ್‌ ನಂಬಿಕೆಯೂ ಇದೇ ಆಗಿತ್ತು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜನಾಥ್‌ ಸಿಂಗ್‌ ಅವರು ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂಬ ಟೀಕೆಗಳು ಸಾಮಾಜಿಕ ಜಾಲತಣಗಳಲ್ಲಿ ವ್ಯಕ್ತವಾಗಿವೆ.

ಹಿರಿಯ ನ್ಯಾಯವಾಧಿ ಪ್ರಶಾಂತ್ ಭೂಷನ್‌ ಟ್ಟೀಟ್‌ ಮಾಡಿದ್ದು, “ತನ್ನನ್ನು ಶೂಟ್ ಮಾಡುವಂತೆ ಗೋಡ್ಸೆಯನ್ನು ಗಾಂಧೀಜಿ ಕೇಳಿದರು, ರಾಜ್‌ನಾಥ್‌ ಸಿಂಗ್‌ ಜೀ” ಎಂದಿದ್ದಾರೆ.


ಇದನ್ನೂ ಓದಿ: ಲಖಿಂಪುರ್ ಹತ್ಯಾಕಾಂಡದ ಹುತಾತ್ಮ ರೈತರಿಗೆ ಅಂತಿಮ ನಮನ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭಾಗಿ

1 COMMENT

  1. ಓವೈಸಿ ಬೆಳೆದಿರೋದೇ ದೇಶ ವಿರೋಧಿ ಚಟುವಟಿಕೆಗಳ ಕುಮ್ಮಕ್ಕಿನಿಂದ ,ಇವನ ಅಸಲಿ ಮುಖವೇ ಪಾಕಿಸ್ತಾನ್ ನ ಪರ ಹೀಗಿರುವಾಗ ಈ ಮುಠ್ಠಾಳರು ಹೇಳಿದ ಹಾಗೆ ಗೂಡ್ಸೇ ಸಹ ಹಿಂಧೂ ರಾಷ್ಟ್ರ ಭಕ್ತರು ,ಹಾಗಿರುವಾಗ ಅವರು ಸಹ ರಾಷ್ಟ್ರ ಪಿತರೇ ಎಂದು ಹಿಂದೂಗಳ ಹೃದಯದಲ್ಲಿ ನೆಲೆಸಿದ್ದಾರೆ .ಅದರಲ್ಲಿ ದೇಶ ಒಡೆದಿರುವ ಮುಠ್ಠಾಳರ ಬಾಯಲ್ಲಿ ಹೇಳುವ ಅಗತ್ಯ ಇಲ್ಲವೇ ಇಲ್ಲ .

LEAVE A REPLY

Please enter your comment!
Please enter your name here