Homeಮುಖಪುಟಬಂಗಾಳದಲ್ಲಿ ಹಿಂದುತ್ವದ ಉದಯ : ಮಮತಾ ಪಕ್ಷಕ್ಕೆ ಮರಣಗಂಟೆ

ಬಂಗಾಳದಲ್ಲಿ ಹಿಂದುತ್ವದ ಉದಯ : ಮಮತಾ ಪಕ್ಷಕ್ಕೆ ಮರಣಗಂಟೆ

ಬಂಗಾಳದಲ್ಲಿ ಬಿಜೆಪಿಯ ಕೇಸರಿ ಭಯೋತ್ಪಾದನೆಯ ಉದಯವು, ಎಡ ಪಕ್ಷಗಳ ಪುನರುತ್ಥಾನಕ್ಕೆ ನೆರವಾಗಬಹುದು... ಆದರೆ ಅದು ಮಮತಾ ನೇತೃತ್ವದ ಟಿಎಂಸಿಯ ಅಧ:ಪತನಕ್ಕೆ ಒಂದು ಮುನ್ನುಡಿಯಾಗಿದೆ.

- Advertisement -
- Advertisement -

| ಅರನಿ ಬಸು | ಸಂಶೋಧನಾ ವಿದ್ಯಾರ್ಥಿ

ಚರಿತ್ರೆಯನ್ನು ಸಂಯೋಜನಗೊಳಿಸುವ ಘಟನೆಗಳು ಇರುತ್ತವೆ. ಬಂಗಾಳದಲ್ಲಿ ಮೇ 23, 2019 ಅಂಥದ್ದೊಂದು. ಬಂಗಾಳದಲ್ಲಿ ಹಿಂದುತ್ವ ಬ್ರಿಗೇಡ್ ದೊಡ್ಡಮಟ್ಟದಲ್ಲಿ ಒಳಹೊಕ್ಕ ಮೇಲೆ, ಬರಲಿರುವ ದಿನಗಳಲ್ಲಿ ಇಲ್ಲಿನ ಸಮಾಜೋ-ಆರ್ಥಿಕ ವಿನ್ಯಾಸವೇ ತ್ವರಿತಗತಿಯಲ್ಲಿ ‘ಬಲ’ಕ್ಕೆ ಶಿಫ್ಟ್ ಆಗಬಹುದು. ಇದೇ ಹೊತ್ತಿಗೆ ಬಿಜೆಪಿಯ ಈ ಕ್ಷಿಪ್ರ ಉದಯವು, ಮಮತಾ ಬ್ಯಾನರ್ಜಿ ಮತ್ತವರ ಪಕ್ಷಕ್ಕೆ ಮರಣಗಂಟೆ ಆಗಲೂಬಹುದು.

ಬಿಜೆಪಿ ಹೀಗೆ ಬಂಗಾಳದಲ್ಲಿ ಗಟ್ಟಿಯಾಗಿ ಮತ್ತು ಅಗ್ರಸಿವ್ ಆಗಿ ನುಗ್ಗುತ್ತದೆ ಎಂದು ನಮ್ಮಲ್ಲಿ ಎಷ್ಟು ಜನ ಕಲ್ಪಿಸಿಕೊಂಡಿದ್ದೆವು? ಇಲ್ಲಿವರೆಗೆ ಬಂಗಾಳ ಮತ್ತು ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳು ಹಿಂದುತ್ವದ ಅಲೆಗೆ ವಿಚಲಿತರಾಗಿರಲಿಲ್ಲ. ಆದರೆ ಈಗ ಕೇಸರಿ ಅಲೆ ಬಂಗಾಳ ಹೊಕ್ಕಾಗಿದೆ, ಇದು ನಮಗೆ ಆತ್ಮವಿಮರ್ಶೆಯ ಕಾಲ. ಸದ್ಯಕ್ಕೆ ಇಲ್ಲಿ ಮೂರು ಪ್ರಶ್ನೆಗಳಿವೆ: 1) ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ 18 ಸೀಟು ಗಳಿಸಲು ಸಾಧ್ಯವಾದದ್ದು ಹೇಗೆ? 2) ಮಮತಾ ಬ್ಯಾನರ್ಜಿಗೆ ಕೈಕೊಟ್ಟಿದ್ದೇನು?. 3) ಬಂಗಾಳದಲ್ಲಿ ಮೊದಲ ಬಾರಿಗೆ ಸಿಪಿಎಂಗೆ ಒಂದೂ ಸೀಟು ಸಿಗಲಿಲ್ಲವೇಕೆ?

2019ರ ಫಲಿತಾಂಶಗಳು ಎರಡು ಅಂಶಗಳನ್ನು ಹೊರಹಾಕಿವೆ: ಜನರಿಗೆ ಮಮತಾ ನೇತೃತ್ವದ ಸರ್ಕಾರದ ಬಗ್ಗೆ ಅತೃಪ್ತಿಯಿತ್ತು… ಮತ್ತು ಎರಡನೇದಾಗಿ ಬಂಗಾಳದ ಜನತೆಗೆ ಕೇಸರಿ ಪಡೆಯನ್ನು ಅಪ್ಪಿಕೊಳ್ಳಲು ಯಾವ ಮುಜುಗುರವೂ ಇಲ್ಲ. ಎರಡೇ ಆಯ್ಕೆಗಳ ನಡುವೆ ಸಿಕ್ಕಿಕೊಂಡಾಗ ಸಿಪಿಎಂ ಸಹಜ ಆಯ್ಕೆ. ಆದರೆ ಅದರ ಸಂಘಟನೆಯ ಸತತ ವಿಘಟನೆಯ ಕಾರಣದಿಂದ ಅದು ಸಾಧ್ಯವಿಲ್ಲದ ಆಯ್ಕೆ.

ನಾವೀಗ ಕೊನೆ ಪ್ರಶ್ನೆಯತ್ತ ಗಮನ ಹರಿಸೋಣ. ಒಂದು ಕಾಲಕ್ಕೆ ಇಲ್ಲಿ ಗಟ್ಟಿ ತಳಹದಿ ಹೊಂದಿದ್ದ ಸಿಪಿಎಂಗೆ ಈಗ ನಾಯಕತ್ವದ ಕೊರತೆ, ಯುವಜನರ ಸಂಘಟನೆಯ ಕೊರತೆ ಮತ್ತು ತಳಮಟ್ಟದ ಸಂಪರ್ಕದ ಕೊರತೆ ಕಾಡುತ್ತಿವೆ. ಇಲ್ಲಿ ಲಕ್ಷಾಂತರ ಜನ ತಮ್ಮನ್ನು ಗುರುತಿಸಿಕೊಳ್ಳಬಯಸುವ ಯುವ ನಾಯಕರ ಕೊರತೆ ಸಿಪಿಎಂನಲ್ಲಿ ತುಂಬಾ ಇದೆ. ಈ ಸಲ ಸ್ವಾತಂತ್ರ್ಯಾ ನಂತರ ಅತಿ ಹೆಚ್ಚಿನ ಮತದಾನ (ಶೆ. 67.11) ಆಗಿದೆ. ಈ ದೃಷ್ಟಿಯಲ್ಲಿ ಈ ಲಕ್ಷಾಂತರ ಜನ ಯಾರಿಗೆ ಮತ ಹಾಕಿದರು? ಬಂಗಾಳದಲ್ಲಿ ಎಡಪಕ್ಷಗಳಿಗೆ ಹಾಕಿರುವ ಸಾಧ್ಯತೆಗಳೇ ಇಲ್ಲ. ಯುವ ನಾಯಕರ ಕೊರತೆ ಮತ್ತು ಒಂದು ಸ್ಪಷ್ಟ ಅಜೆಂಡಾದ ಕೊರತೆಯ ಕಾರಣಕ್ಕೆ. ಅದು ದುರಾದೃಷ್ಟ ಅನಿಸಿದರೂ ಬಂಗಾಳದಲ್ಲಿ ಸಿಪಿಎಂ ಒಂದೂ ಸೀಟೂ ಗೆಲ್ಲಲಿಲ್ಲ ಎನ್ನುವುದು ಅತಾರ್ಕಿಕವಂತೂ ಅಲ್ಲ.

ಎರಡನೇ ಪ್ರಶ್ನೆಗೆ ಬರುವುದಾದರೆ, ಯಾವುದೇ ಯೋಜನೆಗಳ ಜಾರಿಯ ಬಗ್ಗೆ ಕಾಳಜಿ ವಹಿಸದೇ ವೋಟ್‍ವ್ಯಾಂಕ್ ರಾಜಕಾರಣವನ್ನು ದೂರದಿಂದ (ಸುರಂಗ ದೃಷ್ಟಿ) ಅರ್ಥೈಸಿಕೊಂಡಿದ್ದೇ ಮಮತಾರಿಗೆ ಮುಳುವಾಯಿತು. ಪಶ್ಚಿಮ ಬಂಗಾಳದಲ್ಲಿ ಒಂದು ಬಲವಾದ ಅಲ್ಪಸಂಖ್ಯಾತ ಸಮುದಾಯವಿದೆ. ಬಾಬ್ರಿ ಮಸೀದಿ ಉರುಳಿದಾಗ ಈ ರಾಜ್ಯದಲ್ಲಿ ಯಾವುದೇ ಕೋಮು ಕಂಪನ ಸಂಭವಿಸಿರಲಿಲ್ಲ. ಆದರೆ ಈ 8-9 ವರ್ಷಗಳಲ್ಲಿ ಟಿಎಂಸಿ ಮಾಡಿದ ಓಲೈಸುವಿಕೆ ರಾಜಕೀಯ ಮತದಾರರಿಗೆ ಇಷ್ಟವಾಗಿಲ್ಲ ಅನಿಸುತ್ತದೆ. ಉದ್ಯೋಗ ಸೃಷಿಯಲ್ಲಿ ವಿಫಲತೆ, ರಾಜ್ಯದ ಒಳಭಾಗಗಳಲ್ಲಿ ದೌರ್ಜನ್ಯ ಮತ್ತು ಹಿಂಸೆಯ ಯತ್ನಗಳಿಂದಾಗಿ ಬೇಸರಗೊಂಡ ಹಿಂದೂಗಳು ಈ ಸಲ ಕೋಮುವಾದಿ ಹಿನ್ನೆಲೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ.

ಇದರ ಜೊತೆಗೆ ಬಿಜೆಪಿಯ ಸಂಘಟನಾ ಶಕ್ತಿ ಟಿಎಂಸಿ ಮತ್ತು ಸಿಪಿಎಂಗಿಂತ ಪ್ರಬಲವಾಗಿತ್ತು. ಹಿಂದುತ್ವ ಎಂಬ ‘ಮೇವನ್ನು’ ಹಿಡಿದು ಬಂದ ಅವರು, ಮತದಾರರ ನಾಡಿಮಿಡಿತವನ್ನು ಸರಿಯಾಗಿಯೇ ಗ್ರಹಿಸಿದರು, ಸರಿಯಾದ ಸಂದರ್ಭಕ್ಕೆ ಅವರನ್ನು ಹಿಡಿದುಕೊಂಡು ಪರಿಸ್ಥಿಯ ಲಾಭ ಪಡೆದುಕೊಂಡರು. ಈ ಐದು ವರ್ಷ ತಾವು ಎಂತಹ ಆಡಳಿತ ಕೊಟ್ಟೆವು ಎಂಬುದನನ್ನೇನೂ ಹೇಳಲಿಲ್ಲ, ಬದಲಿಗೆ ಏಕೀಕೃತ ಭಾರತದ ವಿಷಯವನ್ನು ‘ಮಾರಿದರು’. ಈಗ ಮತ್ತೆ ಮೊದಲ ಪ್ರಶ್ನೆ, ಅಂದರೆ ಬಿಜೆಪಿಗೆ 18 ಸೀಟು ಸಿಕ್ಕಿದ್ದು ಹೇಗೆ ಎಂಬುದಕ್ಕೆ ಬರೋಣ. ಅದಕ್ಕೆ ಕಾರಣ: ಟಿಎಂಸಿಯ ವಿಫಲಗೊಂಡ ಓಲೈಸುವಿಕೆಯ ನೀತಿ-ಕಾರ್ಯಕ್ರಮಗಳು ಮತ್ತು ಸಿಪಿಎಂ ಸಾರ್ವಜನಿಕ ಜೀವನದೊಂದಿಗೇ ಅದೃಶ್ಯವಾದದ್ದು.

ಮುಂದಿನ ದಾರಿಯ ಬಗ್ಗೆ ಯೋಚಿಸಿದಾಗ, ಬಂಗಾಳದಲ್ಲಿ ಬಿಜೆಪಿಯ ಕೇಸರಿ ಭಯೋತ್ಪಾದನೆಯ ಉದಯವು, ಎಡ ಪಕ್ಷಗಳ ಪುನರುತ್ಥಾನಕ್ಕೆ ನೆರವಾಗಬಹುದು… ಆದರೆ ಅದು ಮಮತಾ ನೇತೃತ್ವದ ಟಿಎಂಸಿಯ ಅಧ:ಪತನಕ್ಕೆ ಒಂದು ಮುನ್ನುಡಿಯಾಗಿದೆ. ಒಮ್ಮೆ ಬಿಜೆಪಿ ಬಂಗಾಳದಲ್ಲಿ ತನ್ನ ಕೋಮು ಭಯೋತ್ಪಾದನೆಯನ್ನು ಶುರು ಮಾಡಿದರೆ, ಆಡಳಿತದ ಬಗ್ಗೆ ಅದರ ನಿಷ್ಠೆ ಎಂಥದ್ದು ಎಂಬುದು ಜನತೆಗೆ ಅರ್ಥವಾಗಲಿದೆ. ಆಗವರು, ಸಾರ್ವಜನಿಕವಾಗಿ ಅಂತಹ ವೇಷವಿಲ್ಲದಿದ್ದರೂ ಅಂತರಾಳದಲ್ಲಿ ಕೋಮುವಾದಿಯೇ ಆಗಿರುವ ಟಿಎಂಸಿಯ ಆಶ್ರಯದ ಮೊರೆ ಹೋಗಲಾರರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...