Homeಮುಖಪುಟಸಂವಿಧಾನ ಕರಡನ್ನು ರಚಿಸಿದ್ದು ಬ್ರಾಹ್ಮಣರೇ ಹೊರತು ಅಂಬೇಡ್ಕರ್‌ ಅಲ್ಲ: ಗುಜರಾತ್‌ ಸ್ಪೀಕರ್‌ ವಿವಾದಾತ್ಮಕ ಹೇಳಿಕೆ

ಸಂವಿಧಾನ ಕರಡನ್ನು ರಚಿಸಿದ್ದು ಬ್ರಾಹ್ಮಣರೇ ಹೊರತು ಅಂಬೇಡ್ಕರ್‌ ಅಲ್ಲ: ಗುಜರಾತ್‌ ಸ್ಪೀಕರ್‌ ವಿವಾದಾತ್ಮಕ ಹೇಳಿಕೆ

60 ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಸಂವಿಧಾನದ ಮೊದಲ ಕರಡನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನೀಡಿದ್ದು ಬ್ರಾಹ್ಮಣನಾದ ಬಿ.ಎನ್‌ ರಾವ್‌..

- Advertisement -
- Advertisement -

ಗುಜರಾತ್ ವಿಧಾನಸಭೆಯ ಸ್ಪೀಕರ್ ರಾಜೇಂದ್ರ ತ್ರಿವೇದಿ, ಬ್ರಾಹ್ಮಣರಿಗೆ ‘ವಿಭಿನ್ನ ಡಿಎನ್‌ಎ’ ಇದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತದ ಹೆಚ್ಚಿನ ನೊಬೆಲ್ ವಿಜೇತರು ಬ್ರಾಹ್ಮಣರು ಎಂದು ಹೇಳಿದ್ದು “ಎಲ್ಲರಿಗೂ ಆಶೀರ್ವಾದ ನೀಡುವುದು, ಇಡೀ ಪ್ರಪಂಚದ ಕಲ್ಯಾಣಕ್ಕಾಗಿ ಪ್ರಾರ್ಥಿಸುವುದು ಬ್ರಾಹ್ಮಣರ ಜನ್ಮಸಿದ್ಧ ಹಕ್ಕು” ಎಂದು ಹೇಳಿದರು.

ಗಾಂಧಿನಗರದಲ್ಲಿ ನಡೆಯುತ್ತಿರುವ ಮೂರು ದಿನಗಳ “ಬ್ರಾಹ್ಮಣ ಉದ್ಯಮ ಶೃಂಗಸಭೆ”ಯ ಎರಡನೇ ಆವೃತ್ತಿಯನ್ನುದ್ದೇಶಿಸಿ ಮಾತನಾಡಿದ ಅವರು, “ನಾವು ಬ್ರಾಹ್ಮಣರಾಗಿ ಹುಟ್ಟಿದ್ದೇವೆ ಮತ್ತು ನಮ್ಮಲ್ಲಿ ಬ್ರಾಹ್ಮಣರ ಡಿಎನ್‌ಎ ಇದೆ… ಆದರೆ ನಾವು ಯಾರಿಗೂ ವಿರುದ್ಧವಾಗಿಲ್ಲ ಹಾಗಾಗಿ ನಮ್ಮೊಂದಿಗೆ ಹಗೆತನವನ್ನು ಸಾಧಿಸಬಾರದು ಎಂದು ಎಲ್ಲರಿಗೂ ವಿನಂತಿಸುತ್ತೇನೆ ಎಂದಿದ್ದಾರೆ”.

ಅಭಿಜಿತ್ ಬ್ಯಾನರ್ಜಿ ಸೇರಿದಂತೆ ದೇಶದ ಒಂಬತ್ತು ಮಂದಿ ನೊಬೆಲ್ ಪ್ರಶಸ್ತಿ ವಿಜೇತರಲ್ಲಿ, ಎಂಟು ಮಂದಿ ಬ್ರಾಹ್ಮಣರು ಎಂದು ಅವರು ಹೇಳಿದ್ದಾರೆ.

ಭಾರತದ ಸಂವಿಧಾನ ಪಿತಾಮಹ ಬಿ.ಆರ್. ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿ “ಬ್ರಾಹ್ಮಣರರನ್ನು ದಲಿತ ಐಕಾನ್ “ಮುನ್ನಡೆಸಲಿ” ಎಂದು ಅಂಬೇಡ್ಕರ್‌ ಹೇಳಿದ್ದರು. ಆದರೆ ಬ್ರಾಹ್ಮಣರು ಯಾವಾಗಲೂ ಹಿಂದೆ ನಿಂತು ಇತರರನ್ನು ಉತ್ತೇಜಿಸುತ್ತಾರೆ ಎಂದು ಇತಿಹಾಸ ಹೇಳುತ್ತದೆ. ಬಾಬಾ ಸಾಹೇಬರನ್ನು ಮುನ್ನಡೆಸಿದ ವ್ಯಕ್ತಿ ಡಾ ಬಿ.ಎನ್. ರಾವ್‌ ಆಗಿದ್ದಾರೆ. 1949 ರ ನವೆಂಬರ್ 25 ರಂದು ಅಂಬೇಡ್ಕರ್ ಅವರೇ ಇದನ್ನು ಹೇಳಿದ್ದಾರೆ. ಸಂವಿಧಾನವನ್ನು ರಚಿಸಿದ ಶ್ರೇಯಸ್ಸನ್ನು ನನಗೆ ನೀಡಲಾಗುತ್ತಿದೆ ಆದರೆ ನಿಜವಾದ ಕ್ರೆಡಿಟ್ ಬಿ ಎನ್ ರೌಗೆ ಸಲ್ಲಬೇಕು ಎಂದು ಅಂಬೇಡ್ಕರ್‌ ಹೇಳಿದ್ದರು” ಎಂದು ಸ್ಪೀಕರ್‌ ಹೇಳಿದ್ದಾರೆ.

“ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಅಂತರರಾಷ್ಟ್ರೀಯ ನ್ಯಾಯಾಲಯದ ಮೊದಲ ಭಾರತೀಯ ನ್ಯಾಯಾಧೀಶರು ಯಾರು ಎಂದು ನಿಮಗೆ ತಿಳಿದಿದೆಯೇ? 60 ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಸಂವಿಧಾನದ ಮೊದಲ ಕರಡನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನೀಡಿದ್ದು ಅವರೇ ಎಂದು ನಿಮಗೆ ತಿಳಿದಿದೆಯೇ? ನಾವೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಗೌರವದಿಂದ ತೆಗೆದುಕೊಳ್ಳುತ್ತೇವೆ ಆದರೆ ಸಂವಿಧಾನದ ಮೊದಲ ಕರಡನ್ನು ರಚಿಸಿದ ವ್ಯಕ್ತಿ ಡಾ.ಬಿ.ಎನ್. ರಾವ್‌” ಎಂದು ತ್ರೀವೇದಿ ಹೇಳಿದ್ದಾರೆ.

ಜನಾಂಗೀಯ ನಿಂದನೆಯನ್ನು ಬಳಸಿದ ತ್ರಿವೇದಿ, “ಸ್ನೇಹಿತರೇ, ನೀವು ಆಫ್ರಿಕಾಕ್ಕೆ ಹೋದರೆ, ಅಲ್ಲಿನ ಜನರ ಬಣ್ಣ ಮತ್ತು ನೋಟವನ್ನು ತಪ್ಪದೇ ನೋಡಿ. ನೀವು ಚೀನಾದ ಜನರನ್ನು ನೋಡಿರಬೇಕು, ಅವರ ಕಣ್ಣುಗಳು ತೆರೆದಿದೆಯೆ ಅಥವಾ ಮುಚ್ಚಲ್ಪಟ್ಟಿದೆಯೆ ಎಂದು ಸಹ ನಿಮಗೆ ಗೊತ್ತಾಗುವುದಿಲ್ಲ. ಜಪಾನಿಯರ ವಿಷಯವೂ ಇದೇ ಆಗಿದೆ. ಆದರೆ, ನೀವು ನಮ್ಮ ಹಿಂದೂಸ್ತಾನ್‌ಗೆ ಹಿಂತಿರುಗಿ ಪಂಜಾಬ್, ಹರಿಯಾಣ ಇತ್ಯಾದಿಗಳಿಗೆ ಹೋದಾಗ, ನೀವು ಚೆನ್ನಾಗಿರುವ ಸಧೃಢ ಜನರನ್ನು ನೋಡುತ್ತೀರಿ. ಪರ್ವತಗಳಲ್ಲಿ ನೀವು ಹಸುಗಳನ್ನು ನೋಡಿರಬೇಕು, ಅವು ಸಣ್ಣದಾಗಿರುತ್ತದೆ. ಆದರೆ ಸಮತಟ್ಟಾದ ಪ್ರದೇಶದಲ್ಲಿನ ಹಸುಗಳನ್ನು ನೋಡಿ ದಷ್ಟಪುಟ್ಟವಾಗಿರುತ್ತವೆ. ಜಗತ್ತಿನಲ್ಲಿ ರಾಜ್ಯವಾರು ಮತ್ತು ದೇಶವಾರು ವ್ಯತ್ಯಾಸಗಳಿವೆ. ಈ ವೈವಿಧ್ಯತೆಗೆ ಹವಾಮಾನ ಮತ್ತು ಎಲ್ಲರ ಡಿಎನ್‌ಎ ಕಾರಣ.” ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ದೆಹಲಿಯ ಬೆಂಕಿಯ ಸಂದರ್ಭದಲ್ಲಿ 11 ಜನರನ್ನು ರಕ್ಷಿಸಿದ ಫೈರ್‌ಮ್ಯಾನ್ ರಾಜೇಶ್ ಶುಕ್ಲಾ ಅವರು ನಮ್ಮ ಸಮುದಾಯದ ಅನುಕರಣೀಯ ಸದಸ್ಯ ಎಂದು ಸ್ಪೀಕರ್ ಉಲ್ಲೇಖಿಸಿದ್ದಾರೆ.

ಬ್ರಾಹ್ಮಣ ನೇತೃತ್ವದ ಕಂಪನಿಗಳನ್ನು ಉತ್ತೇಜಿಸಲು “ವ್ಯಾಪಾರ ಶೃಂಗಸಭೆ” ಯೋಜಿಸಲಾಗಿದೆ. ವ್ಯಾಪಾರೋದ್ಯಮಗಳು ಮತ್ತು ಯೋಜನೆಗಳ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸಲು ಸಮಾವೇಶದಲ್ಲಿ 150 ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ಸ್ಥಾಪಿಸಲಾಗಿದೆ. ಈ ಸಂದರ್ಭದಲ್ಲಿ ಭಾಗವಹಿಸಿದವರಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮತ್ತು ಅನೇಕ ಪ್ರಮುಖ ಬಿಜೆಪಿ ನಾಯಕರು ಇದ್ದರು.

ಗುಜರಾತ್ ಅಸೆಂಬ್ಲಿ ಸ್ಪೀಕರ್ ತ್ರೀವೇದಿಯವರ ಹೇಳಿಕೆಗಳು 2019ರ ಸೆಪ್ಟೆಂಬರ್‌ನಲ್ಲಿ ಕೋಟಾದಲ್ಲಿ ನಡೆದ ಬ್ರಾಹ್ಮಣ ಸಮಾವೇಶದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಮಾತುಗಳಿಗೆ ಬಲವಾದ ಹೋಲಿಕೆಯನ್ನು ಹೊಂದಿವೆ.

ಕೋಟಾದ ಅಖಿಲ ಬ್ರಾಹ್ಮಣ ಮಹಾಸಭೆಯಲ್ಲಿ ಮಾತನಾಡಿದ ಓಂ ಬಿರ್ಲಾ, “ಬ್ರಾಹ್ಮಣ ಸಮುದಾಯವು ಯಾವಾಗಲೂ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಹೊಂದಿದೆ. ಅವರು ಇತರ ಎಲ್ಲ ಸಮುದಾಯಗಳಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡಿದ್ದಾರೆ ಮತ್ತು ಸಮುದಾಯವು ಈ ರಾಷ್ಟ್ರದಲ್ಲಿ ಯಾವಾಗಲೂ ಮಾರ್ಗದರ್ಶಕ ಪಾತ್ರವನ್ನು ವಹಿಸಿದೆ. ಸಮಾಜದಲ್ಲಿ ಅವರು ಹೊಂದಿರುವ ವಿಶೇಷ ಸ್ಥಾನವೆಂದರೆ ಅವರ ತ್ಯಾಗ ಮತ್ತು ಸಂಯಮ. ಸಮಾಜದಲ್ಲಿ ಶಿಕ್ಷಣ ಮತ್ತು ಮೌಲ್ಯಗಳನ್ನು ಹರಡುವಲ್ಲಿ ಬ್ರಾಹ್ಮಣರು ಯಾವಾಗಲೂ ಪಾತ್ರವಹಿಸಿದ್ದಾರೆ.” ಎಂದಿದ್ದರು.

ಗುಜರಾತಿನ ದಲಿತ ನಾಯಕ ಮತ್ತು ಜಾತಿ ವಿರೋಧಿ ಕಾರ್ಯಕರ್ತ ಜಿಗ್ನೇಶ್‌ ಮೇವಾನಿ “ಬಿರ್ಲಾ ಅವರ ಹೇಳಿಕೆಗಳು ಶೋಷಕ ಜಾತಿ ವ್ಯವಸ್ಥೆಯ ಅನುಮೋದನೆ ಮಾತ್ರವಲ್ಲದೆ ಸಂಭ್ರಮಾಚರಣೆ ಸಹ ಆಗಿವೆ” ಎಂದು ಖಂಖಡಿಸಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಹ ಪ್ರತಿಪಕ್ಷಗಳ “ಒಲೈಸುವಿಕೆ” ಮತ್ತು “ಮತ ಬ್ಯಾಂಕ್” ರಾಜಕೀಯವನ್ನು ಖಂಡಿಸಿದ್ದಾರೆ. ಆದರೆ ಅವರು ಜಾತಿ ವ್ಯವಸ್ಥೆಯ ವಿರುದ್ಧ ಪ್ರತಿಕ್ರಿಯಿಸುವುದನ್ನು ಸ್ಪಷ್ಟವಾಗಿ ತ್ಯಜಿಸಿದ್ದಾರೆ. ಬ್ರಾಹ್ಮಣ ಶ್ರೇಷ್ಠತೆಯ ಬಗ್ಗೆ ತ್ರಿವೇದಿ ಅವರ ಹೇಳಿಕೆಗೆ ಇಲ್ಲಿಯವರೆಗೆ ಬಿಜೆಪಿಯ ಉನ್ನತ ನಾಯಕರ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ದಿ ವೈರ್‌ ವರದಿ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಮತ್ತೆ ಮತ್ತೆ ಭೀಮಾ ಕೊರೆಂಗಾವ್ ಯುದ್ಧ ಭೂಮಿಗೆ ಸಮೀಪಕ್ಕೆ ಕಾರಣವಾಗುತ್ತದೆ
    ಕಾರಣ ನರೇಂದ್ರ ಮೋದಿಯ ಕ್ಯಾಬಿನೆಟ್ ಅಲ್ಲಿ ಪೂರ್ತಿ ಅವಿದ್ಯಾವಂತರು ದರೋಡೆಕೋರರು ಸಂಪುಟ ದರ್ಜೆಯಲ್ಲಿ ರೇಪಿಸ್ಟ್ ಅರು ನರೇಂದ್ರ ಮೋದಿಯ ಸಂಪುಟ ಸಹೋದ್ಯೋಗಿಗಳು ಆಗಿದ್ದಾರೆ ಕ್ರಿಮಿನಲ್ ಹಿಂಸಾಚಾರ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದಾರೆ ಅಷ್ಟೇ ವರೆತು ಬೇರೆಯಾವ ಜಿಡಿಪಿ ಉದ್ಯೋಗ ವ್ಯವಸ್ಥೆ ಹಾಳಾಗುತ್ತಿರುವ ಬಗ್ಗೆ ಸ್ವಲ್ಪನಾದರೂ ಕಾಳಜಿ ಇಲ್ಲದ ನಾಯಿಗಳ ತರ ಬಳಕೆ ಆಗುತ್ತಿವೆ ನರೇಂದ್ರ ಮೋದಿ ಸಂಪುಟಕ್ಕೆ ನಾಚಿಕೆಯಾಗಬೇಕು ಜೈ ಭೀಮ್ ಜೈ ಭಾರತ್

  2. Once again emergency came in India …….next once again there will be
    Koregaon war …. How many years
    We can tolerete ……they exploited
    More than 2500 years , they still wanted to exploit …….In India fire is
    started , now saffron flame is going
    on, definitely there will be BLUE flame ,it takes time but ….. REMEMBER………. BLUE flame is more dangerous than saffron………….

LEAVE A REPLY

Please enter your comment!
Please enter your name here

- Advertisment -

Must Read

ಮತದಾನದ ವಿವರ ತಡವಾಗಿ ಪ್ರಕಟ, ನೋಂದಾಯಿತ ಮತದಾರರ ಮಾಹಿತಿ ಮಾಯ: ಚು. ಆಯೋಗಕ್ಕೆ ಗಂಭೀರ...

0
ಲೋಕಸಭೆ ಚುನಾವಣೆಯ ಮೊದಲ ಮತ್ತು ಎರಡನೇ ಹಂತದ ಮತದಾನದ ಅಂತಿಮ ಅಂಕಿ ಅಂಶಗಳನ್ನು ಬಹಳ ತಡವಾಗಿ ಬಿಡುಗಡೆಗೊಳಿಸಿರುವುದು ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ನೋಂದಾಯಿತ ಮತದಾರರ ಮಾಹಿತಿ ಕಾಣೆಯಾಗಿರುವುದು ಅನುಮಾನಗಳನ್ನು ಹುಟ್ಟು ಹಾಕಿದೆ. ಇದು...