Homeಮುಖಪುಟಸೇತುವೆ ಕುಸಿತ ಹಿನ್ನೆಲೆ; ಪ್ರಧಾನಿಯ ಗುಜರಾತ್‌ ಭೇಟಿ ವೇಳೆ #Go_Back_Modi ಟ್ರೆಂಡ್

ಸೇತುವೆ ಕುಸಿತ ಹಿನ್ನೆಲೆ; ಪ್ರಧಾನಿಯ ಗುಜರಾತ್‌ ಭೇಟಿ ವೇಳೆ #Go_Back_Modi ಟ್ರೆಂಡ್

- Advertisement -
- Advertisement -

ಗುರಾತಿನ ಮೋರ್ಬಿ ಸೇತುವೆ ಕುಸಿದು 141 ಜನರು ಮೃತಪಟ್ಟ ದುರಂತದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ #Go_Back_Modi ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದ್ದು, ಇದನ್ನು ವಿರೋಧಿಸಿ ಪ್ರಧಾನಿ ಬೆಂಬಲಿಗರು #GujaratWithModiJi ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.

ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಬೆ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿ ರ್‍ಯಾಲಿ ನಡೆಸಲು ಯೋಜಿಸಿಕೊಂಡಿದ್ದರು. ಈ ವೇಳೆಗೆ ಸೇತುವೆ ಕುಸಿದು ಬಿದ್ದಿದ್ದು, ಇದರ ನಂತರ ತಮ್ಮ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದು, ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

#Go_Back_Modi ಹ್ಯಾಶ್‌ಟ್ಯಾಗ್‌ನೊಂದಿಗಿನ ಹಲವಾರು ಟ್ವೀಟ್‌ಗಳು ಆಗಿದ್ದು ಪ್ರಧಾನಿಯನ್ನು ಟೀಕಿಸಿವೆ.

ಗುಜರಾತಿನ ಮಾಜಿ ಮುಖ್ಯಮಂತ್ರಿ ಶಂಕರ್‌ಸಿಂಗ್ ವಘೇಲಾ ಅವರು,“ಪ್ರಧಾನಿ ಭೇಟಿಗೂ ಮುನ್ನ ಮೊರ್ಬಿ ಸಿವಿಲ್ ಆಸ್ಪತ್ರೆಯ ಪೇಂಟಿಂಗ್ ಆರಂಭವಾಗಿದೆ! ಇದಕ್ಕೆ ಯಾರು ಆದೇಶಿಸಿದರೋ ಅವರಿಗೆ ನಾಚಿಕೆಯಾಗಬೇಕು. ಸ್ವಚ್ಛತೆ ಕಾಪಾಡಬೇಕು ಎಂದಾಗ ಅದನ್ನು ಉಳಿಸಿಕೊಳ್ಳಲಾಗಲಿಲ್ಲ, ಇಷ್ಟು ಜರನು ಸಾವಿಗೀಡಾಗಿ ದೇಶ ಅಳುತ್ತಿರುವಾಗ ಬಣ್ಣ ಹಚ್ಚುತ್ತಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗಡಿಯಾರ ತಯಾರಕ ಕಂಪೆನಿಗೆ ಮೋರ್ಬಿ ಸೇತುವೆಯ ನಿರ್ವಹಣೆ ಗುತ್ತಿಗೆ ನೀಡಿದ್ದ ಸರ್ಕಾರ!

ರಾಜೇಶ್ ಎಂಬ ಟ್ವಿಟರ್‌ ಬಳಕೆದಾರದು,“27 ವರ್ಷಗಳ ಕಾಲ ಬಿಜೆಪಿ ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿವೆ” ಎಂದು ಟ್ವೀಟ್ ಮಾಡಿದ್ದು, ಚಿತ್ರದಲ್ಲಿ ಮೋದಿ ಭೇಟಿ ನೀಡಲಿರುವ ಆಸ್ಪತ್ರೆ ರಿಪೇರಿ ಮಾಡುತ್ತಿರುವ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.

ಪೋಂಡಿ ಅಶೋಕ್‌‌ ಅವರು,“ದಯವಿಟ್ಟು ಹಿಂತಿರುಗಿ ಹೋಗಿ ಮೋದಿ” ಎಂದು ಟ್ವೀಟ್ ಮಾಡಿದ್ದು, “ಗುಜರಾತ್ ಮೋಡೆಲ್” ಎಂದು ಬರೆದಿರುವ ಸೇತುವೆಯೊಂದು ಮುರಿದು ಬೀಳುವ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ಗುಜರಾತ್‌: ‘ಮೊರ್ಬಿ ಸೇತುವೆ ನವೀಕರಣದ ವೇಳೆ ಹಳೆಯ ತಂತಿ ಬದಲಿಸಿರಲಿಲ್ಲ’

ಮೋನು ವೆರ್ಮಾ ಅವರು, ಭಾರತಕ್ಕೆ ಪ್ರಧಾನಮಂತ್ರಿ ಬೇಕು ಹೊರತು ಜೋಕರ್‌ ಅಲ್ಲ ಎಂದು ಟ್ವೀಟ್‌ ಮಾಡಿದ್ದು, ಪ್ರಧಾನಿ ಮೋದಿ ಅವರ ಚಿತ್ರವೊಂದನ್ನು ಪೋಸ್ಟ್‌ ಮಾಡಿದ್ದಾರೆ.

ಇದರ ನಡುವೆ #GujaratWithModiJi ಎಂಬ ಹ್ಯಾಶ್ ಟ್ಯಾಗ್‌ ಕೂಡಾ ಟ್ರೆಂಡ್ ಆಗಿದೆ.

“ಗುಜರಾತ್ ಹಿಂದೆ ನಮೋ ಜೊತೆಗಿತ್ತು…ಗುಜರಾತ್ ನಮೋ ಜೊತೆಗಿದೆ… ಗುಜರಾತ್ ಯಾವತ್ತಿಗೂ ನರೇಂದ್ರ ಮೋದಿ ಅವರ ಜೊತೆಗಿರುತ್ತದೆ” ಎಂದು ಟ್ವಿಟರ್‌‌ ಬಳಕೆದಾರರೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ: ಮೊರ್ಬಿ ತೂಗುಸೇತುವೆ ದುರಂತ: ಶವ ರಾಜಕೀಯ ಮಾಡಬಾರದೆಂದ ರಾಹುಲ್ ಗಾಂಧಿ

ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು ಆಡಳಿತಾರೂಢ ಬಿಜೆಪಿ ಗಾಯಾಳುಗಳ ಆರೈಕೆಗಿಂತ ಮೋದಿಯವರ ಭೇಟಿಗೆ ಆದ್ಯತೆ ನೀಡಿದೆ ಎಂದು ಆರೋಪಿಸಿದೆ.

ಇದನ್ನೂ ಓದಿ: ಗುಜರಾತ್ ತೂಗುಸೇತುವೆ ದುರಂತ: 2016ರಲ್ಲಿ ಬಂಗಾಳದ ಸೇತುವೆ ಕುಸಿದಿದ್ದಾಗ ಮೋದಿ ಮಾಡಿದ್ದ ಭಾಷಣ ವೈರಲ್

ಈ ನಡುವೆ ಅಘಾತಕಾರಿ ಸುದ್ದಿಯೊಂದು ಬಹಿರಂಗವಾಗಿದ್ದು, CFL ಬಲ್ಬ್‌ಗಳು, ಗೋಡೆ ಗಡಿಯಾರಗಳು ಮತ್ತು ಇ-ಬೈಕ್‌ಗಳಲ್ಲಿ ಪರಿಣತಿ ಹೊಂದಿರುವ ಒರೆವಾ ಗ್ರೂಪ್‌ಗೆ 100 ವರ್ಷ ಹಳೆಯ ಸೇತುವೆಯ ನಿರ್ವಹಣೆಯ ಗುತ್ತಿಗೆಯನ್ನು ಮೋರ್ಬಿ ಪುರಸಭೆಯಿಂದ ನೀಡಿದೆ ಎಂದು ತಿಳಿದು ಬಂದಿದೆ.

ಈ ವರ್ಷದ ಮಾರ್ಚ್‌ನಲ್ಲಿ ಮೋರ್ಬಿ ಪುರಸಭೆಯಿಂದ ಒರೆವಾ ಗ್ರೂಪ್‌ಗೆ ನಿರ್ವಹಣೆ ಮತ್ತು ನಿರ್ವಹಣೆಯ ಗುತ್ತಿಗೆಯನ್ನು ನೀಡಲಾಗಿದೆ. ಈ ನಡುವೆ ಸೇತುವೆಯ ಫಿಟ್ನೆಸ್‌ನ ಪ್ರಮಾಣ ಪತ್ರ ನೀಡದೆ ಸೇತುವೆಯನ್ನು ತೆರೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಮಧ್ಯೆ ಗುಜರಾತ್ ಪೊಲೀಸರು ಟಿಕೆಟ್‌ ಕೌಂಟರ್‌ನಲ್ಲಿದ್ದ ಇಬ್ಬರು ಗುಮಾಸ್ತರು ಸೇರಿದಂತೆ ಒರೆವಾ ಗ್ರೂಪಿನ ಒಂಬತ್ತು ಜನರನ್ನು ಬಂಧಿಸಿದೆ. ಒರೆವಾ ಗ್ರೂಪಿನ ಇಬ್ಬರು ಮ್ಯಾನೇಜರ್‌ಗಳು, ಇಬ್ಬರು ಗುತ್ತಿಗೆದಾರರು, ಮೂವರು ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ಟಿಕೆಟ್ ಕೌಂಟರ್‌ನ ಗುಮಾಸ್ತರು ಈ ಬಂಧಿತರಲ್ಲಿ ಇದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. It is shameful to arrest counter booking Clarks and security guards who are casual employees of the company. They are not responsible for bridge collapse. The board of directors like Managing Director or chairman should have been arrested if they are capable policemen.

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಬಿಸಿಲಿನ ತಾಪಕ್ಕೆ ಪ್ರಜ್ಞೆ ತಪ್ಪಿದ ಶಾಲಾ ವಿದ್ಯಾರ್ಥಿಗಳು; ಆಸ್ಪತ್ರೆಗೆ ದಾಖಲು

0
ಪ್ರಸ್ತುತ ಉತ್ತರ ಭಾರತದಲ್ಲಿ ಉರಿಯುತ್ತಿರುವ ತೀವ್ರತರವಾದ ಶಾಖದ ಅಲೆಯಿಂದಾಗಿ ಬಿಹಾರದ ಶೇಖ್‌ಪುರದ ಹಲವಾರು ಶಾಲಾ ವಿದ್ಯಾರ್ಥಿಗಳು ಪ್ರಜ್ಞೆ ತಪ್ಪಿದ್ದು, ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳೀಯವಾಗಿ ಮಂಗಳವಾರ ಗರಿಷ್ಠ ತಾಪಮಾನ 42.9 ಡಿಗ್ರಿ ಸೆಲ್ಸಿಯಸ್...