Homeಅಂಕಣಗಳುಸಕಲೇಶಪುರಕ್ಕೆ ಬ್ರಿಟಿಷ್ ಪ್ಲಾಂಟರ್‌ಗಳ ಕೊಡುಗೆಗಳಿವು: ಪ್ರಸಾದ್ ರಕ್ಷಿದಿ

ಸಕಲೇಶಪುರಕ್ಕೆ ಬ್ರಿಟಿಷ್ ಪ್ಲಾಂಟರ್‌ಗಳ ಕೊಡುಗೆಗಳಿವು: ಪ್ರಸಾದ್ ರಕ್ಷಿದಿ

- Advertisement -
- Advertisement -

ಕಳೆದು ಹೋದ ದಿನಗಳು -15

ಕಾಫಿ ನಾಡಿನಲ್ಲಿ ಹೆಚ್ಚಿನ ಎಲ್ಲಾ ಪ್ಲಾಂಟೇಷನ್‌ಗಳೂ ಬ್ರಿಟಿಷರಿಂದ ಪ್ರಾರಂಭವಾದವುಗಳು. ಎಲ್ಲಾ ಜನರಲ್ಲಿ ಇರುವಂತೆ ಅವರಲ್ಲಿಯೂ ಕೆಟ್ಟವರೂ ಇದ್ದರು, ಒಳ್ಳೆಯವರೂ ಇದ್ದರು. ಆದರೆ ಅವರೆಲ್ಲರಲ್ಲಿ ಒಂದು ಸಾಮಾನ್ಯವಾದ ಗುಣವಿತ್ತು. ಕೆಟ್ಟದ್ದಾಗಲೀ ಒಳ್ಳೆಯದಾಗಲೀ, ಹೆಚ್ಚಿನವರು ಶಿಸ್ತಿನವರು ಮತ್ತು ದೂರ ದೃಷ್ಟಿಯುಳ್ಳವರು. ಅವರು ಕಾಫಿ ತೋಟಗಳನ್ನು ಮಾಡಿದ್ದು ಅದು ರೊಬಸ್ಟವಿರಲಿ, ಅರೇಬಿಕಾ ಇರಲಿ ಅದು ಯಾವ ಪ್ರದೇಶಕ್ಕೆ ಮತ್ತು ಹವಾಗುಣಕ್ಕೆ ಯಾವುದು ಸೂಕ್ತವೋ ಅಲ್ಲಲ್ಲಿಗೆ ಅದನ್ನು ಬಳಸಿದರು. ತೋಟಮಾಡುವಾಗ ಅತ್ಯುತ್ತಮ ನೆಲವನ್ನು ಹುಡಕಿ ಅಲ್ಲಿಯೇ ಮಾಡಿದರು. ತೋಟದ ಬಂಗಲೆಗಳಿರಲಿ, ಇತರ ಯಾವುದೇ ಕಟ್ಟಡಗಳಿರಲಿ ಹೆಚ್ಚಾಗಿ ಎತ್ತರದ ಸ್ಥಳಗಳಲ್ಲಿ ಭವ್ಯವಾಗಿ ಕಟ್ಟಿದರು. ಅಷ್ಟೇ ಸಾಹಸಿಗಳೂ ಕೂಡಾ. ಸ್ಥಳೀಯರ ಜೊತೆ ಶಿಕಾರಿಗೆ ಹೋಗುತ್ತಿದ್ದವರ ಕತೆಗಳು ಹಲವಾರು ಅಂದಿನ ಹಿರಿಯರಲ್ಲಿ ಬಾಯಿಪಾಠವಾಗಿರುತ್ತಿದ್ದವು.

ಕೊಡಗಿನಲ್ಲಿ ಎಡ್ವರ್ಡ್ ಚಾರ್ಲ್ಸ್ ವೈಟ್, ಸಿ.ಎಲ್.ಜೆ ಹಂಫ್ರಿಸ್, ಐವರ್ ಬುಲ್, ಜೆ.ಹೆಚ್. ಸ್ಪ್ರಾಟ್, ಜೆ.ಹೆಚ್.ಎಸ್ ಮೋರ್ಗನ್,  ಇ.ಆರ್. ವಾಕರ್ ಮುಂತಾದ ಬ್ರಿಟಿಷ್ ಪ್ಲಾಂಟರುಗಳಿದ್ದರೆ, ಮಂಜ್ರಾಬಾದ್ ವಲಯದಲ್ಲಿ ಕ್ರಾಫರ್ಡ್ ಸಹೋದರರು, ಆರ್.ಜಿ ಫಾಸ್ಟರ್. ಆಟ್ಟರ್, ಆರ್.ಹೆಚ್ ಎಲಿಯಟ್. ಇ.ಹೆಚ್.ಯಂಗ್, ಅಟ್ಲೀ, ಮಿಡ್ಲ್ ಟನ್ ಅವರುಗಳಿದ್ದರು.

ಬ್ರಿಟಿಷ್ ಪ್ಲಾಂಟರುಗಳ ಬಗ್ಗೆಯೇ ಒಂದು ಮಹಾನ್ ಗ್ರಂಥ ರಚಿಸುವಷ್ಟು ಕತೆಗಳು, ದಂತಕಥೆಗಳೂ ಮಲೆನಾಡಿನ ತುಂಬ ಹರಿದಾಡುತ್ತಿದ್ದವು. ಅದರಲ್ಲಿ ನಾನಾ ಬಗೆಯ ಕಥೆಗಳಿವೆ.

ಕರ್ನಲ್ ಕ್ರಾಫರ್ಡ್ಒಬ್ಬ ಬ್ರಿಟಿಷ್ ಪ್ಲಾಂಟರ್, ಸೋಮವಾರಪೇಟೆಯ ಬಳಿಯವನು. ಯಾರಾದರೂ ಬೇರೆ ಕೃಷಿಕರ ದನಗಳು ಈತನ ತೋಟಕ್ಕೆ ಬಂದರೆ ಅದನ್ನು ಕಟ್ಟಿ ಹಾಕುತ್ತಿದ್ದ. ಅದನ್ನು ಹುಡುಕಿಕೊಂಡು ಅದರ ಮಾಲಿಕ ಬಂದರೆ ಆತನನ್ನು ಹಿಡಿಸಿ ಕೊಟ್ಟಿಗೆಯಲ್ಲಿ ಅವನ ದನದ ಪಕ್ಕದಲ್ಲೇ ಕಟ್ಟಿ ಅವನ ಮುಂದೆ ಹುಲ್ಲು ನೀರು ಇಡುತ್ತಿದ್ದನಂತೆ. ಸಂಜೆಯವರೆಗೂ ಹಾಗೇ ಕಟ್ಟಿಹಾಕಿ ನಂತರ ಅವನನ್ನೂ ದನವನ್ನೂ ಬಿಟ್ಟು ಕಳುಹಿಸುತ್ತಿದ್ದನಂತೆ!

ರಕ್ಷಿದಿ ಎಸ್ಟೇಟಿನ ಅಟ್ಳಿ ಸಾಹೇಬರದು ಇನ್ನೊಂದು ಕಥೆ. ಮಿಲಿಟರಿ ಅಧಿಕಾರಿಯಾಗಿದ್ದ ಅಟ್ಲಿ ನಂತರ ರಕ್ಷಿದಿಯಲ್ಲಿ ಕಾಫಿ ತೋಟವನ್ನು ಮಾಡಿದರು. ರಕ್ಷಿದಿ ಊರಿನ ಪಕ್ಕದಲ್ಲೇ ಇದ್ದ ಇವರ ತೋಟ ಕ್ಯಾಮನಹಳ್ಳಿ ಕಂದಾಯ ಗ್ರಾಮಕ್ಕೇ ಸೇರಿತ್ತು. ಈ ಅಟ್ಳೀ ಸಾಹೇಬರಿಗೂ ಕ್ಯಾಮನಹಳ್ಳಿ ಗ್ರಾಮಸ್ಥರಿಗೂ ಒಂದು ಶಿಕಾರಿಯ ಕಾರಣಕ್ಕೆ ಜಗಳ ಹುಟ್ಟಿಕೊಂಡಿತು. ಗ್ರಾಮಸ್ಥರು, “ನಾವು ಊರವರು, ನಮ್ಮ ಗ್ರಾಮದ ವಿಷಯದಲ್ಲಿ ನಮ್ಮ ತೀರ್ಮಾನವೇ ಅಂತಿಮ” ಎಂದರಂತೆ. ಇದರಿಂದ ಸಿಟ್ಟಿಗೆದ್ದ ಅಟ್ಲೀ ಸಾಹೇಬರು, ಒಂಬೈನೂರು ಎಕರೆಗಳಷ್ಟಿದ್ದ ತನ್ನ ರಕ್ಷಿದಿ ಎಸ್ಟೇಟನ್ನು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಪ್ರತ್ಯೇಕ ಕಂದಾಯ ಗ್ರಾಮವಾಗಿ ಪರಿವರ್ತನೆ ಮಾಡಿಕೊಂಡರಂತೆ. ಹಾಗೆ ಅದು ರಕ್ಷಿದಿ ಕಂದಾಯ ಗ್ರಾಮವಾಗಿ ಕ್ಯಾಮನಹಳ್ಳಿಯಿಂದ ಬೇರೆಯಾಯಿತು. ಆದರೆ ಗೇರು ಹಣ್ಣಿನ ಬೀಜದಂತೆ ರಕ್ಷಿದಿ ಊರು ರಕ್ಷಿದಿ ಕಂದಾಯ ಗ್ರಾಮದಿಂದ ಹೊರಗೇ ಉಳಿಯಿತು!

ಇದಕ್ಕೆ ವ್ಯತಿರಿಕ್ತವಾಗಿ ಜನಪರನೂ ಜನಾನುರಾಗಿಯೂ ಆಗಿದ್ದಾತ ಕರ್ನಲ್ ಕ್ರಾಫರ್ಡ್. ಇವರಿಗೆ ಸಕಲೇಶಪುರದಲ್ಲಿ ತೋಟವಿತ್ತು. ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆ ಇವರ ಕೊಡುಗೆ. ಆ ಕಾಲದಲ್ಲೇ ಇದಕ್ಕೆ ಆತ ಮಾಡಿದ ಖರ್ಚು ಒಂದು ಲಕ್ಷದ ಹದಿನೇಳು ಸಾವಿರ ರೂಪಾಯಿ. ಭವ್ಯವಾದ ಕಟ್ಟಡ ಸಕಲೇಶಪುರ ನಗರದ ಮದ್ಯಭಾಗದಲ್ಲಿ ಎತ್ತರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ಇದೆ. ಈ ಕಟ್ಟಡದ ಮುಂಭಾಗದಲ್ಲಿ ಇದರ ಸೌಂದರ್ಯವನ್ನು ಕೆಡಿಸುವ ಯಾವುದೇ ಕಟ್ಟಡವನ್ನು ಕಟ್ಟಬಾರದೆಂದು ಅಂದೇ ಸರ್ಕಾರದ ಜೊತೆ ಕರಾರು ಮಾಡಿಕೊಂಡು ಕಟ್ಟಿದ್ದು ಕ್ರಾಫರ್ಡ್‌ನ ಸೌಂದರ್ಯ ಪ್ರಜ್ಞೆಗೂ ದೂರ ದೃಷ್ಟಿಗೂ ಸಾಕ್ಷಿ. ಈ ಆಸ್ಪತ್ರೆಯ ಉದ್ಘಾಟನೆ ಮೈಸೂರು ಮಹಾರಾಜರೇ ಬಂದಿದ್ದರು.

ಕರ್ನಲ್ ಕ್ರಾಫರ್ಡ್

ಶಿಕ್ಷಣ, ವೈದ್ಯಕೀಯ ಸೌಲಭ್ಯ, ಭೂಮಾಪನ, ಇತ್ಯಾದಿ ಹಲವಾರು ಕಾರ್ಯಗಳು ಇವರ ಕೊಡುಗೆ. ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯ ಸದಸ್ಯನಾಗಿ, ರಾಜಸಭಾ ಭೂಷಣ ಎಂಬ ಗೌರವಕ್ಕೆ ಪಾತ್ರನಾಗಿದ್ದ. ಸಕಲೇಶಪುರದ ಮಹಿಳಾ ಸಮಾಜದ ಕ್ರಾಫರ್ಡ್ ವಿಂಗ್, ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್ ಮುಂತಾದ ಅನೇಕ ರಚನೆಗಳು ಕೂಡಾ ಇವರ ಕೊಡುಗೆ. ಸಕಲೇಶಪುರ ಮಂಜ್ರಾಬಾದ್ ಕ್ಲಬ್‌ನ ಅಧ್ಯಕ್ಷನಾಗಿ, ದಕ್ಷಿಣಭಾರತದ ಪ್ಲಾಂಟೇಷನ್ ಬೆಳೆಗಾರರ ಒಕ್ಕೂಟದ (UPASI)  ಉಪಾಧ್ಯಕ್ಷನೂ ಆಗಿದ್ದ ಕ್ರಾಫರ್ಡ್‌ಗೆ ಮಲೆನಾಡಿನ ಬಗ್ಗೆ ಅಪಾರ ಪ್ರೀತಿ. ಇಲ್ಲಿನ ದಟ್ಟ ಕಾನನದ ಪರಿಚಯ ಚೆನ್ನಾಗಿದ್ದ ಕ್ರಾಫರ್ಢ್ ಇದರ ಉಳಿವಿನ ಬಗ್ಗೆಯೂ ತುಂಬು ಕಾಳಜಿ ಇತ್ತು. ಇಲ್ಲಿನ ಬೆಟ್ಟಗಳಲ್ಲಿ ಕುದುರೆಯನ್ನೇರಿ ತಿರುಗುತ್ತಿದ್ದ. ಅವೆಲ್ಲ ಈಗ ಕ್ರಾಫರ್ಡ್ ದಾರಿಗಳೆಂದು ಕರೆಯಲ್ಪಡುತ್ತಿವೆ.

ಸಕಲೇಶಪುರದ ಕ್ರಾಫರ್ಡ್ ‌ಆಸ್ಪತ್ರೆ ಆ ಕಾಲದಲ್ಲೇ ಶಿಕಾರಿಯನ್ನು ಕಾನೂನಿನ ಮೂಲಕ ನಿಷೇಧಿಸಲು ಪ್ರಯತ್ನ ಪಟ್ಟು ಹಲವರ ವಿರೋಧದಿಂದ ಅದು ಸಾದ್ಯವಾಗದೆ ಕೊನೆಗೆ ಹೆಣ್ಣು ಜಿಂಕೆಯನ್ನು ಕೊಲ್ಲಬಾರದು ಎಂದು ಕಾನೂನು ಹೊರಡಿಸಲಷ್ಟೇ ಶಕ್ತನಾದ.

ಬಾಳೆಹೊನ್ನೂರಿನಲ್ಲಿರುವ ಕಾಫಿ ಸಂಶೋಧನಾ ಕೇಂದ್ರಕ್ಕೂ ಪ್ರಾರಂಭದಲ್ಲಿ ಸ್ಥಳದಾನ ಮಾಡಿದವರು ಕೂಡಾ ಇವರೇ.

“ಇಂಡಿಯಾದ ಮಲೆನಾಡು ಬಹು ಸುಂದರವಾದುದು. ಇಲ್ಲಿಯ ಜನ  ಸೌಜನ್ಯಶೀಲರು, ಗೌರವವಂತರು, ನಮ್ಮನ್ನೆಂದೂ ವಿದೇಶೀಯರೆಂದು ನೋಡಲಿಲ್ಲ. ಮೋಸ ಮಾಡಲಿಲ್ಲ, ಜಗಳ ತೆಗೆಯಲಿಲ್ಲ” ಎಂದು ಅವರು ತಮ್ಮ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ”.

ತನ್ನ ತೋಟದ ಕೆಲಸಗಾರರ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದ ಕ್ರಾಫರ್ಡ್, ಜನರಿಗೆ ಕುಡಿಯಲು ಶುದ್ಧ ನೀರು, ಒಳ್ಳೆಯ ವಸತಿ ಮತ್ತು ಕಾಲ ಕಾಲಕ್ಕೆ ವೈದ್ಯಕೀಯ ಸೌಲಭ್ಯ ನೀಡಲು ಪ್ರಾಮುಖ್ಯತೆ ನೀಡುತ್ತಿದ್ದರು. ಇವೆಲ್ಲ ಕಾರಣಗಳಿಂದ ಕರ್ನಾಟಕದ ಕಾಫಿ ವಲಯದಲ್ಲಿ ಕ್ರಾಫರ್ಡ್‌ರ ಬಗ್ಗೆ ಜನರಲ್ಲಿ ಇಂದಿಗೂ ಅಪಾರ ಗೌರವ ಇದೆ.

ಕ್ರಾಫರ್ಡ್‌ನ ವಂಶಸ್ಥರು ಊಟಿಯಲ್ಲಿ ನೆಲೆಸಿದ್ದು ವರ್ಷಕ್ಕೊಮ್ಮೆ ಸಕಲೇಶಪುರದ ಆಸ್ಪತ್ರೆಗೆ ಭೇಟಿ ನೀಡುತ್ತಾರೆ.

ಕ್ರಾಫರ್ಡ್ ಆಸ್ಪತ್ರೆಯಲ್ಲಿ ಒಂದು ವಾರ್ಡನ್ನು ಗಣಪಯ್ಯನವರು ಕಟ್ಟಿಸಿಕೊಟ್ಟರು. ಹಾಗೂ ಒಳಾಂಗಣದಲ್ಲಿ ಉದ್ಯಾನವನ್ನು ನಿರ್ಮಿಸಿ ಮದ್ಯದಲ್ಲಿ ಒಂದು ಚಿಲುಮೆಯನ್ನು ನಿರ್ಮಾಣ ಮಾಡಿಸಿದ್ದರು.

ಉದ್ಯಾನದ ನಡುವೆ ಗಣಪಯ್ಯನವರ ಹೆಸರು ಕಿತ್ತು ಹೋಗಿರುವುದು

ಇನ್ನೊಂದು ವಾರ್ಡನ್ನು ಸಕಲೇಶಪುರದಲ್ಲಿ ಶಾಪ್ ಸಿದ್ದೇಗೌಡ ಕಟ್ಟಿಸಿದ. ಪ್ರಾಥಮಿಕ ಶಾಲೆ, ಶಾಪ್ ಬಸಪ್ಪ ಪಶು ಆಸ್ಪತ್ರೆ ಮುಂತಾದವುಗಳನ್ನು ಅನೇಕ ಜನಪರ ಕೆಲಸಗಳನ್ನು ಮಾಡಿರುವ ಶಾಪ್ ಸಿದ್ದೇಗೌಡರ ಕುಟುಂಬ ವರ್ಗದವರು ಕಟ್ಟಿಸಿದ್ದರು. ಈಗ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಆಗಲೀ ಉದ್ಯಾನದಲ್ಲಾಗಲೀ ದಾನಿಗಳ ಹೆಸರೇ ನಾಪತ್ತೆಯಾಗಿದೆ. ಕಟ್ಟಡದ ಮೇಲೆ ಕ್ರಾಫರ್ಡ್‌ರ ಹೆಸರು ಹೇಗೋ ಉಳಿದುಕೊಂಡಿದೆ.

ಸಕಲೇಶಪುರದ ಇನ್ನೊಬ್ಬ ಪ್ಲಾಂಟರ್ “ಇ.ಹೆಚ್. ಯಂಗ್ಸ್” ಎಂಬವರು ಕಟ್ಟಿಸಿದ ಸರ್ಕಾರಿ ಪ್ರೌಢಶಾಲೆಯಿದೆ. ಅದು ಸಕಲೇಶಪುರದ ಮಂಜ್ರಾಬಾದ್ ಕ್ಲಬ್ಬಿನ ಪಶ್ಚಿಮಕ್ಕೆ, ಹತ್ತಿರದಲ್ಲೇ ಹೆದ್ದಾರಿಯ ಪಕ್ಕದಲ್ಲಿಯೇ ಇದೆ. ಅದೊಂದು ಸುಂದರ ಕಟ್ಟಡ. ಅದರ ಮುಂಭಾಗದಲ್ಲಿ ಯಂಗ್ಸ್ ಹೆಸರು ಕೆತ್ತಲ್ಪಟ್ಟಿತ್ತು. ಆತನ ಹೆಸರನ್ನು ಒಮ್ಮೆ  ಕಟ್ಟಡದಿಂದ ತೆಗೆದು ಹಾಕಿದ್ದರು. ಜನರ ವಿರೋಧದ ನಂತರ ಅದನ್ನು ಮತ್ತೆ ಬರೆಸಲಾಯಿತು.

ಉದ್ಯಾನದ ನಡುವೆ ಗಣಪಯ್ಯನವರ ಹೆಸರು ಕಿತ್ತು ಹೋಗಿರುವುದುಇನ್ನೊಬ್ಬ ಜನಾನುರಾಗಿ ಹಾಗೂ ಅದ್ಭುತ ವ್ಯಕ್ತಿ ಬ್ರಿಟಿಷ್ ಅಧಿಕಾರಿ ರ್ಯಾಡ್ ಕ್ಲಿಫ್. ಇವರು ದಕ್ಷಿಣ ಭಾರತದ ಬೆಳೆಗಾರರ ಒಕ್ಕೂಟದ (UPASI) ಕಾರ್ಯದರ್ಶಿಯಾಗಿ ಒಳ್ಳೆಯ ಕೆಲಸವನ್ನು ಮಾಡಿ ಹೆಸರು ಗಳಿಸಿದವರು. ಇವರು ಕೂಡಾ ಸಕಲೇಶಪುರದ ನಿವಾಸಿ. ಹಾಸನ ಮಂಗಳೂರು ಹೆದ್ದಾರಿಯಲ್ಲಿ ಸಕಲೇಶಪುರದಿಂದ  7.ಕಿ.ಮೀ ದೂರದ ಹೊಸ್ಸೂರ್ ಎಸ್ಟೇಟ್ ಬಳಿ ಹೆದ್ದಾರಿ ಪಕ್ಕದಲ್ಲೇ ಪ್ರವಾಸಿಗರು ರ್ಯಾಡ್ ಕ್ಲಿಫ್ ಬಂಗಲೆಯನ್ನು ಕಾಣಬಹುದು.

ಕಾರ್ಮಿಕರ ಹಿತ ರಕ್ಷಣೆ ಮತ್ತು ಸುಧಾರಣೆಯಲ್ಲಿ ರ್ಯಾಡ್ ಕ್ಲಿಫ್‌ರ ಕೊಡುಗೆ ದೊಡ್ಡದು.

ರ್ಯಾಡ್ ಕ್ಲಿಪ್, ಕಾಫಿತೋಟಗಳಲ್ಲಿ ಕೆಲಸಗಾರರ ಕೂಲಿ ದಿನವೊಂದಕ್ಕೆ ಒಂದೂವರೆ ಆಣೆ ಇದ್ದಾಗ, ಅಂದರೆ 60 ವರ್ಷಗಳ ಹಿಂದೆ  “2000 ಇಸವಿಯ ವೇಳೆಗೆ ಒಬ್ಬನ ದಿನಗೂಲಿ ನೂರು ರುಪಾಯಿ ಆಗಲಿದೆ ಎಂದರು!” ಆಗ ನೂರು ರೂಪಾಯಿಗೆ ಹತ್ತು ಎಕರೆ ಜಮೀನು ಸಿಗುತ್ತಿತ್ತು. ಜನರು ರ್ಯಾಡ್ ಕ್ಲಿಫ್‌ನಿಗೆ ತಲೆ ಕೆಟ್ಟಿದೆ ಎಂದರು.

ಆದರೆ ಆತ ಹೇಳಿದ ವಾಯಿದೆಗಿಂತ ಒಂದು ವರ್ಷ ಮೊದಲೇ 1999ರಲ್ಲಿ ದಿನಗೂಲಿ ನೂರು ರೂ ಆಯಿತು!

ರ್ಯಾಡ್ ಕ್ಲಿಫ್ ಹಲವು ವರ್ಷಗಳ ಮುಂದಿನದನ್ನು ತರ್ಕಬದ್ಧವಾಗಿ ಕಾಣಬಲ್ಲವನಾಗಿದ್ದರು.

  • ಪ್ರಸಾದ್ ರಕ್ಷಿದಿ
ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ನಮ್ಮ ಕೃಷಿಯಿಂದಾಗಿ ಕೋಟಿಗಟ್ಟಲೆ ಟನ್ ಮಣ್ಣು ಅರಬ್ಬೀ ಸಮುದ್ರ ಸೇರ್ತಾ ಇದೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...