Homeಮುಖಪುಟಪ್ರಧಾನಿಯಿಂದ ದೀಪ ಹಚ್ಚುವಂತೆ ಕರೆ‍ : ಗಮನಸೆಳೆದ 5 ಪ್ರತಿಕ್ರಿಯೆಗಳು

ಪ್ರಧಾನಿಯಿಂದ ದೀಪ ಹಚ್ಚುವಂತೆ ಕರೆ‍ : ಗಮನಸೆಳೆದ 5 ಪ್ರತಿಕ್ರಿಯೆಗಳು

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿಯವರು “ಕೊರೊನಾ ವೈರಸ್ ವಿರುದ್ದ ರಾಷ್ಟ್ರದ ಸಾಮೂಹಿಕ ಮನೋಭಾವವನ್ನು ಪ್ರದರ್ಶಿಸಲು ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಬಾಲ್ಕನಿಗಳಲ್ಲಿ ದೀಪ ಹಚ್ಚುವಂತೆ” ದೇಶದ ಜನತೆಯಲ್ಲಿ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಕೊರೊನ ವೈರಸ್ ಸ್ಫೋಟದ ನಂತರ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ತನ್ನ ಮೂರನೇ ಭಾಷಣ ಇದಾಗಿದ್ದು, ಏಪ್ರಿಲ್ 5 ರ ಭಾನುವಾರದಂದು ರಾತ್ರಿ 9 ಗಂಟೆಗೆ ಒಂಬತ್ತು ನಿಮಿಷಗಳ ಕಾಲ ತಮ್ಮ ಮನೆಗಳ ದೀಪಗಳನ್ನು ಸ್ವಿಚ್ ಆಫ್ ಮಾಡಿ, ದೀಪಗಳು, ಮೇಣದ ಬತ್ತಿಗಳು, ಮೊಬೈಲ್ ಬ್ಯಾಟರಿ ದೀಪಗಳನ್ನು ಬೆಳಗಿಸಬೇಕೆಂದು ಮನವಿ ಮಾಡಿದ್ದಾರೆ.

ಪ್ರಧಾನ ಮಂತ್ರಿಯ ಈ ಕರೆ‌ಗೆ ಟ್ವಿಟ್ಟರ್‌ನಲ್ಲಿ ಬೆಂಬಲ ಹಾಗೂ ತೀವ್ರ ಟೀಕೆಗಳ ಸುರಿಮಳೆಯನ್ನೇ ಉಂಟುಮಾಡಿದೆ. ಕೊರೊನ ವೈರಸ್‌ ವಿರುದ್ಧ ಹೋರಾಡಲು ಟೆಸ್ಟಿಂಗ್‌ ಕಿಟ್‌ಗಳು, ವೈದ್ಯಕೀಯ ಸಲಕರಣೆಗಳು, ಸುಸಜ್ಜಿತ ಆಸ್ಪತ್ರೆಗಳ ಮೇಲೆ ಗಮನ ನೀಡುವುದನ್ನು ಬಿಟ್ಟು ಕೇವಲ ಹೇಳಿಕೆ-ಟಾಸ್ಕ್‌ಗಳನ್ನು ನೀಡುವಲ್ಲಿ ನಿರತರಾಗಿದ್ದಾರೆ ಎಂಬ ದೊಡ್ಡ ಆರೋಪ ಕೇಳಿಬಂದಿದೆ.

ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು “ಪ್ರಧಾನ ಶೋ ಮ್ಯಾನ್‌ನ ಭಾಷಣ ಕೇಳಿದೆ,  ಜನರ ನೋವು, ಹೊರೆ ಮತ್ತು ಆರ್ಥಿಕ ಆತಂಕಗಳನ್ನು ಕಡಿಮೆ ಮಾಡಲು ಏನನ್ನೂ ಮಾಡಲಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಪತ್ರಕರ್ತ ಸ್ವಾತಿ ಚತುರ್ವೇದಿ ಅವರು ’’ದೀಪಗಳ ಮೇಲೆ ಈ ಸ್ವಿಚ್ ಏನನ್ನು ಸಾಧಿಸಲಿದೆ? ನಮಗೆ ಹೆಚ್ಚಿನ ಪರೀಕ್ಷೆಗಳು, ಮುಖವಾಡಗಳು, ಆಸ್ಪತ್ರೆಗಳು ಮತ್ತು ರಕ್ಷಣಾ ಸಾಧನಗಳು ಬೇಕಾಗುತ್ತವೆ” ಎಂದು ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಅವರು “ಕೊರೊನವನ್ನು ಒಟ್ಟಿಗೆ ಸೋಲಿಸೋಣ, ತಾಯಿ ಭಾರತಿ ಗೆಲ್ಲಲಿ. ಏಪ್ರಿಲ್ 5 ರ ಭಾನುವಾರದಂದು ನೆನಪಿಡಿ, ನಿಮ್ಮ ಬಾಲ್ಕನಿಯಲ್ಲಿ ಅಥವಾ ಬಾಗಿಲಿನ ಹೊರಗೆ 9 ನಿಮಿಷಗಳ ಕಾಲ ನಿಮ್ಮ ಕೈಯಲ್ಲಿ ಒಂದು ಬೆಳಕನ್ನು ಇರಿಸಿ ಮತ್ತು ಈ ಹೋರಾಟದಲ್ಲಿ ನಾವೆಲ್ಲರೂ ಒಟ್ಟಾಗಿರುವುದನ್ನು ನೆನಪಿಸಿ” ಎಂದು ಹೇಳಿದ್ದಾರೆ.

ಮೀಮ್ಸ್‌ಗಳಂತೂ ಕೆಲವೇ ಗಂಟೆಗಳಲ್ಲಿ ವೈರಲ್‌ ಆಗಿವೆ. ಕೆಲವೊಂದು ಇಲ್ಲಿವೆ

 

ಪತ್ರಕರ್ತ ಅತುಲ್ ಚೌರಾಸಿಯಾ ಕೂಡ ಪ್ರಧಾನಿ ವೈದ್ಯಕೀಯ ಸೌಲಭ್ಯ ಮತ್ತು ಭವಿಷ್ಯದ ವೈದ್ಯಕೀಯ ಯೋಜನೆಯ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲ. “ಆದರೆ ಅವರು ಮತ್ತೊಂದು ನಾಟಕಕ್ಕಾಗಿ ಮನವಿ ಮಾಡುತ್ತಾರೆ” ಎಂದು ಹೇಳಿದ್ದಾರೆ.

ಇತಿಹಾಸಕಾರ ರಾಮಚಂದ್ರ ಗುಹಾ ಅವರು ಪ್ರಧಾನ ಮಂತ್ರಿಯ ಭಾಷಣವನ್ನು ‘ದುರಂತದ ಸಮಯದಲ್ಲಿ ಒಂದು ಪ್ರಹಸನ’ ಎಂದು ಬಣ್ಣಿಸಿದರು.

 

ಮೈಸೂರು ಸಂಸದರಾದ ಪ್ರತಾಪ್ ಸಿಂಹ ಅವರು ಪ್ರಧಾನಿಯ ಕರೆಯನ್ನು ಬೆಂಬಲಿಸಿ, “ಪ್ರಧಾನಿ ಮೋದೀಜಿಯವರ ಕರೆಯ ಹಿನ್ನೆಲೆಯಲ್ಲಿ ನಾಳೆ ಮೈಸೂರು ನಗರ ಅಧ್ಯಕ್ಷರಾದ ಶ್ರೀವತ್ಸ ಅವರ ನೇತೃತ್ವದಲ್ಲಿ ದೀಪ ಮತ್ತು ಕ್ಯಾಂಡಲುಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುವುದು” ಎಂದು ಟ್ವೀಟ್ ಮಾಡಿದ್ದಾರೆ.

ಸಂಘ ಪರಿವಾರದ ಸಾಮಾಜಿಕ ಮಾಧ್ಯಮ ತಪ್ಪು ಮಾಹಿತಿ ಅಭಿಯಾನದಲ್ಲಿ ತೊಡಗಿವೆ. 9 ನಿಮಿಷಗಳ ಬೆಳಕು ವೈರಸ್ ಅನ್ನು ಹೇಗೆ ಕೊಲ್ಲುತ್ತದೆ ಎಂಬುದರ ಕುರಿತು ನಾವು ಎಷ್ಟು ಬೇಗ ವಾಟ್ಸಾಪ್ ಫಾರ್ವರ್ಡ್‌ಗಳನ್ನು ಪಡೆಯುತ್ತೇವೆ ಎಂದು ಪತ್ರಕರ್ತ ರೋಹನ್ ವೆಂಕಟ್ ಆಶ್ಚರ್ಯಪಟ್ಟರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

0
ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ...